ಕನ್ನಡ ಸುದ್ದಿ  /  ಜೀವನಶೈಲಿ  /  Summer And Drinking Water: ನೀರು ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ; ಆರೋಗ್ಯದ ದೃಷ್ಟಿಯಿಂದಲೂ ಇದು ಅಪಾಯ

Summer and Drinking Water: ನೀರು ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ; ಆರೋಗ್ಯದ ದೃಷ್ಟಿಯಿಂದಲೂ ಇದು ಅಪಾಯ

Summer and Drinking Water: ನೀರು ಕುಡಿಯುವಾಗ ನಾವು ಅನುಸರಿಸುವ ಕೆಲವೊಂದು ತಪ್ಪುಗಳು ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳನ್ನು ಉಂಟು ಮಾಡಬಹುದು. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ಸಾಬೀತು ಪಡಿಸಿದರೂ ಕೂಡ, ನಾವು ಪುನಃ ಪುನಃ ಅದೇ ತಪ್ಪುಗಳನ್ನು ಮಾಡುತ್ತೇವೆ. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ.

ನೀರು ಕುಡಿಯವುದು
ನೀರು ಕುಡಿಯವುದು

ಬೇಸಿಗೆಯಲ್ಲಿ ದೇಹತಾಪ ನೀಗಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಬೇಕು ಎಂಬ ಮಾತನ್ನು ಎಲ್ಲಾ ಕಡೆಯಿಂದಲೂ ಕೇಳುತ್ತೇವೆ. ಬಿಸಿಲಿನ ತಾಪದಿಂದ ದೇಹವನ್ನು ರಕ್ಷಿಸಿಕೊಳ್ಳಲು ಹೆಚ್ಚು ಹೆಚ್ಚು ನೀರು ಕುಡಿಯವುದು ಅನಿವಾರ್ಯವೂ ಹೌದು. ಬಿಸಿಲಿನಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗುವುದರಿಂದ ಸಾಕಷ್ಟು ನೀರು ಕುಡಿಯವುದು ಅಗತ್ಯ.

ನೀರಿನಲ್ಲಿ ಜೀವಸತ್ವಗಳು, ಖನಿಜಗಳು, ಪ್ರೋಟೀನ್, ಕೊಬ್ಬುಗಳು, ಕಾರ್ಬೋಹೈಡ್ರೇಟ್‌ ಇರುವುದರಿಂದ ಇದು ಬಹಳ ಅವಶ್ಯ. ಆದರೆ ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯವುದು ಹಾಗೂ ಅಸಮರ್ಪಕ ವಿಧಾನದಲ್ಲಿ ನೀರು ಕುಡಿಯವುದರಿಂದ ಗಂಭೀರ ಥರದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.

ಹಾಗಾಗಿ ನೀರು ಕುಡಿಯುವಾಗ ಈ ಕೆಲವು ತಪ್ಪುಗಳನ್ನು ಎಂದಿಗೂ ಮಾಡದಿರಿ.

ವೇಗವಾಗಿ ನೀರು ಕುಡಿಯಬೇಡಿ

ಅತಿ ವೇಗವಾಗಿ ನೀರು ಕುಡಿಯುವುದು ಸರಿಯಲ್ಲ, ಇದರಿಂದ ತೊಂದರೆಗಳಾಗುವ ಸಾಧ್ಯತೆ ಇದೆ. ನರಗಳ ಸಮಸ್ಯೆಗೂ ಇದು ಕಾರಣವಾಗಬಹುದು. ಅಜೀರ್ಣದಂತಹ ಸಮಸ್ಯೆಯೂ ಹೆಚ್ಚಬಹುದು. ಆ ಕಾರಣಕ್ಕೆ ನಿಧಾನವಾಗಿ ನೀರು ಕುಡಿಯಬೇಕು. ನಿಂತು ನೀರು ಕುಡಿಯುವುದನ್ನು ತಪ್ಪಿಸಿ.

ಊಟದ ನಂತರ ನೀರು ಕುಡಿಯಿರಿ

ಆಯುರ್ವೇದದ ಪ್ರಕಾರ ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು. ಆಹಾರ ಸೇವನೆಯ ನಂತರ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ತಿನ್ನುವ ಮೊದಲು ನೀರು ಕುಡಿಯುವುದರಿಂದ ಬೊಜ್ಜು ಹೆಚ್ಚುವ ಸಾಧ್ಯತೆಯೂ ಇದೆ. ನೀರು ಮತ್ತು ಊಟದ ನಡುವೆ ಕನಿಷ್ಠ 45 ನಿಮಿಷಗಳ ಅಂತರವನ್ನು ನೀಡುವುದು ಹೆಚ್ಚು ಪ್ರಯೋಜನಕಾರಿ.

ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದನ್ನು ತಪ್ಪಿಸಿ

ದೀರ್ಘಕಾಲದವರೆಗೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದು ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಸ್ಟಿಲ್ ಅಥವಾ ತಾಮ್ರದ ಬಾಟಲಿಗಳು ಉತ್ತಮ.

ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಿರಿ

ಪ್ರತಿದಿನ ಎರಡರಿಂದ ಮೂರು ಲೀಟರ್ ನೀರು ಕುಡಿಯಿರಿ. ಕೆಲವರು ಎಂಟರಿಂದ ಹತ್ತು ಗ್ಲಾಸ್‌ಗಳನ್ನು ಶಿಫಾರಸು ಮಾಡುತ್ತಾರೆ. ಇವು ಸಾಮಾನ್ಯ ತಪ್ಪು ಕಲ್ಪನೆಗಳು. ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯುವುದು ಉತ್ತಮ.

ತಣ್ಣೀರು ಕುಡಿಯುವುದನ್ನು ತಪ್ಪಿಸಿ

ನಮ್ಮಲ್ಲಿ ಹೆಚ್ಚಿನವರು ಫ್ರಿಜ್‌ನಲ್ಲಿ ನೀರು ಇರಿಸಿ, ಆ ನೀರನ್ನು ಕುಡಿಯುತ್ತಾರೆ. ಆದರೆ ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ. ಆಯುರ್ವೇದದ ಪ್ರಕಾರ, ತಣ್ಣೀರು ಆಹಾರದ ಜೀರ್ಣಕ್ರಿಯೆಗೆ ತೊಂದರೆ ಉಂಟು ಮಾಡುತ್ತದೆ. ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ.

ಸಾಧ್ಯವಾದರೆ ಹೀಗೆ ಮಾಡಿ..

ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ನೀರಿನ ಕೊರತೆಯಿಂದ ದೇಹದಲ್ಲಿ ಹಲವು ಬಗೆಯ ರೋಗಗಳು ನಮ್ಮನ್ನು ಸುತ್ತುವರಿದಿರುತ್ತವೆ. ಆರೋಗ್ಯವಾಗಿರಲು ನಿಯಮಿತವಾಗಿ ನೀರನ್ನು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ದಿನವಿಡೀ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ. ನೀರಿನ ಸೇವನೆ ಕಡಿಮೆಯಾದರೆ ತಲೆನೋವು, ಮಲಬದ್ಧತೆ, ಒಣ ಚರ್ಮ, ಕೀಲು ನೋವು, ಅಜೀರ್ಣ, ಕಡಿಮೆ ರಕ್ತದೊತ್ತಡ, ಬೊಜ್ಜು, ಸ್ತನ ಕ್ಯಾನ್ಸರ್ ನಂತಹ ಕಾಯಿಲೆಗಳು ಕಾಣಿಸುವ ಸಾಧ್ಯತೆ ಹೆಚ್ಚು.

ಖಾಲಿ ಹೊಟ್ಟೆಯಲ್ಲಿ 2 ಕಪ್ ನೀರು ಕುಡಿಯುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ ಮತ್ತು ಅಕಾಲಿಕ ಸುಕ್ಕುಗಳನ್ನು ತಡೆಯುತ್ತದೆ. ಬೆಳಿಗ್ಗೆ ನೀರು ಕುಡಿಯುವುದರಿಂದ ನಮ್ಮ ಪ್ರಮುಖ ಅಂಗಗಳನ್ನು ರಕ್ಷಿಸುತ್ತದೆ. ಖಾಲಿ ಹೊಟ್ಟೆಯಲ್ಲಿ 2-3 ಗ್ಲಾಸ್ ನೀರು ಕುಡಿಯುವುದರಿಂದ ತೂಕ ಇಳಿಕೆಯೂ ಸಾಧ್ಯ. ನೀರು ಕುಡಿಯುವುದರಿಂದ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಬಹುದು.

ವಿಭಾಗ