ಕನ್ನಡ ಸುದ್ದಿ  /  Lifestyle  /  Tips To Clear Blocked Kitchen Sink

Tips to clear Blocked Sink: ಕಟ್ಟಿಕೊಂಡ ಸಿಂಕ್‌ನಿಂದ ಕಿರಿಕಿರಿಯಾಗ್ತಿದ್ಯಾ...ಇಲ್ಲಿದೆ ನೋಡಿ ಸುಲಭ ಪರಿಹಾರಗಳು

ಕೆಲವರು ಕಸ ತೆಗೆಯಲು ರಾಸಾಯನಿಕಗಳು ಮತ್ತು ಆಮ್ಲಗಳನ್ನು ಬಳಸುತ್ತಾರೆ. ಈ ರಾಸಾಯನಿಕಗಳನ್ನು ಬಳಸಿದರೆ ಅಡುಗೆ ಮನೆಯ ನೆಲ, ಪೈಪ್‌ ಕೂಡಾ ಹಾಳಾಗುತ್ತದೆ, ನಮ್ಮ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಸರಳ ಪರಿಹಾರಗಳೊಂದಿಗೆ, ನಾವು ನಮ್ಮ ಅಡುಗೆಮನೆಯಲ್ಲಿ ದೊರೆಯುವ ವಸ್ತುಗಳ ಮೂಲಕವೇ ಈ ಸಮಸ್ಯೆಯನ್ನು ನಿವಾರಿಸಬಹುದು

ಕಟ್ಟಿಕೊಂಡ ಸಿಂಕ್‌ ಕ್ಲೀನ್‌ ಮಾಡಲು ಟಿಪ್ಸ್
ಕಟ್ಟಿಕೊಂಡ ಸಿಂಕ್‌ ಕ್ಲೀನ್‌ ಮಾಡಲು ಟಿಪ್ಸ್ (PC: pixabay.com)

ಬಹುತೇಕರ ಮನೆಯ ಕಿಚನ್‌ನಲ್ಲಿ ಪಾತ್ರೆ ತೊಳೆಯಲು ಸಿಂಕ್‌ ಇರುತ್ತದೆ. ಆದರೆ ಕೆಲವೊಮ್ಮೆ ಅಜಾಗರೂಕತೆಯಿಂದಲೋ, ಆಕಸ್ಮಿಕವಾಗಿಯೋ ಧೂಳು, ಕಸ, ಕಡ್ಡಿ ಬೇಡದ ಸಾಮಗ್ರಿಗಳು ಪೈಪ್‌ನಲ್ಲಿ ಸಿಲುಕಿ ನೀರು ಹರಿಯದೆ ಸಿಂಕ್‌ ಬ್ಲಾಕ್‌ ಆಗುತ್ತದೆ. ಇದು ಬಹಳ ಕಿರಿಕಿರಿ.

ಇನ್ನೂ ಕೆಲವರು ಊಟದಲ್ಲಿ ಸಿಗುವ ಕರಿಬೇವು, ಹಸಿಮೆಣಸಿನಕಾಯಿ, ಟೊಮ್ಯಾಟೋ ಹೀಗೆ ತಿನ್ನಲು ಇಷ್ಟವಿರದ ಸಾಮಗ್ರಿಗಳನ್ನು ನೇರವಾಗಿ ಸಿಂಕಿಗೆ ಎಸೆಯುತ್ತಾರೆ. ಅಥವಾ ಡಸ್ಟ್‌ಬಿನ್‌ಗೆ ಹಾಕದೆ ತಟ್ಟೆಯಲ್ಲೇ ಬಿಡುತ್ತಾರೆ. ಹೀಗೆ ಮಾಡಿದರೆ ಇವೆಲ್ಲವೂ ಪೈಪ್‌ನಲ್ಲಿ ಬ್ಲಾಕ್ ಆಗಿ ನೀರು ಹರಿಯಲು ಕಷ್ಟವಾಗುತ್ತದೆ. ಸಿಂಕ್‌ನಲ್ಲಿ ಕಸ ಕಟ್ಟಿಕೊಂಡು ನೀರು ಹರಿಯದೆ ಅದರಿಂದಾಗುವ ಕಿರಿಕಿರಿ ತುಂಬಾ ಬೇಸರ ತರಿಸುತ್ತವೆ. ಆ ನೀರನ್ನು ಹೊರ ಹಾಕಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಕೆಲವರು ಕಸ ತೆಗೆಯಲು ರಾಸಾಯನಿಕಗಳು ಮತ್ತು ಆಮ್ಲಗಳನ್ನು ಬಳಸುತ್ತಾರೆ. ಈ ರಾಸಾಯನಿಕಗಳನ್ನು ಬಳಸಿದರೆ ಅಡುಗೆ ಮನೆಯ ನೆಲ, ಪೈಪ್‌ ಕೂಡಾ ಹಾಳಾಗುತ್ತದೆ, ನಮ್ಮ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಸರಳ ಪರಿಹಾರಗಳೊಂದಿಗೆ, ನಾವು ನಮ್ಮ ಅಡುಗೆಮನೆಯಲ್ಲಿ ದೊರೆಯುವ ವಸ್ತುಗಳ ಮೂಲಕವೇ ಈ ಸಮಸ್ಯೆಯನ್ನು ನಿವಾರಿಸಬಹುದು

ವಿನಿಗರ್‌ ಮತ್ತು ಅಡುಗೆ ಸೋಡಾ

ಸಿಂಕ್‌ ಕಟ್ಟಿಕೊಂಡಾಗ ಅಲ್ಲಿ ಸ್ವಲ್ಪ ಬಿಸಿ ನೀರನ್ನು ಸುರಿಯಿರಿ. ಸ್ವಲ್ಪ ವಿನಿಗರ್‌ಗೆ 3/4 ಕಪ್ ಅಡುಗೆ ಸೋಡಾವನ್ನು ಸೇರಿಸಿ ಮತ್ತು ಮುಚ್ಚಿಹೋಗಿರುವ ಪೈಪ್‌ಗೆ ಸುರಿಯಿರಿ. ಹೀಗೆ ಮಾಡಿದರೆ ಪೈಪ್‌ನಲ್ಲಿ ಸಿಲುಕಿದ ಕಸ ಕೆಳಗಿಳಿದು ನೀರು ಸುಲಭವಾಗಿ ಹರಿಯುತ್ತದೆ. ಕೂಡಲೇ ಹರಿಯದಿದ್ದರೆ ಸ್ವಲ್ಪ ಹೊತ್ತು ಹಾಗೇ ಬಿಟ್ಟು ನೀವು ಬೇರೆ ಕೆಲಸ ಮಾಡಿಕೊಳ್ಳಿ, ಅಷ್ಟರಲ್ಲಿ ಎಲ್ಲವೂ ಕ್ಲಿಯರ್‌ ಆಗಿರುತ್ತದೆ.

ಬಿಸಿ ನೀರು ಸುರಿಯಿರಿ

ಒಂದು ವೇಳೆ ತಕ್ಷಣ ನಿಮಗೆ ವಿನಿಗರ್‌ ಅಥವಾ ಅಡುಗೆ ಸೋಡಾ ದೊರೆಯದಿದ್ದಲ್ಲಿ, ಸಿಂಕ್‌ಗೆ ಬಿಸಿ ನೀರು ಹಾಕಿ, ಆದರೆ ಒಮ್ಮೆಲೇ ಸುರಿಯದೆ ನಿಧಾನವಾಗಿ ಹಾಕಿ. ಹೀಗೆ ಮಾಡುವುದರಿಂದ ಪೈಪ್‌ನಲ್ಲಿ ಸೇರಿದ ವೇಸ್ಟ್‌ ರಿಲೀಸ್‌ ಆಗುತ್ತದೆ.

ಕಾಸ್ಟಿಕ್ ಸೋಡಾ

ಕಾಲು ಬಕೆಟ್ ನೀರಿಗೆ ಮೂರು ಕಪ್ ಕಾಸ್ಟಿಕ್ ಸೋಡಾವನ್ನು ಸೇರಿಸಿ. ಇದನ್ನು ಒಂದು ಕಡ್ಡಿಯಿಂದ ಮಿಕ್ಸ್‌ ಮಾಡಿ. ಬ್ಲಾಕ್‌ ಆಗಿರುವ ಸಿಂಗ್‌ಗೆ ತಕ್ಷಣವೇ ಈ ನೀರನ್ನು ಸುರಿಯಿರಿ. ಇಪ್ಪತ್ತು ನಿಮಿಷಗಳ ಕಾಲ ಅದನ್ನು ಬಿಡಿ. ನಂತರ ಸ್ವಲ್ಪ ಬಿಸಿ ನೀರು ಸುರಿದರೆ ಸಿಂಕ್‌ ಕ್ಲಿಯರ್‌ ಆಗುತ್ತದೆ.

ಉಪ್ಪು ಮತ್ತು ಅಡುಗೆ ಸೋಡಾ

ಉಪ್ಪು ಮತ್ತು ಅಡುಗೆ ಸೋಡಾ ಕೂಡಾ ಕಟ್ಟಿಕೊಂಡ ಸಿಂಕ್‌ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅರ್ಧ ಕಪ್ ಅಡುಗೆ ಸೋಡಾವನ್ನು ಅರ್ಧ ಕಪ್ ಉಪ್ಪಿನೊಂದಿಗೆ ಮಿಶ್ರಣ ಮಾಡಿ. ಸಿಂಕ್‌ಗೆ ಸುರಿದು ರಾತ್ರಿಯಿಡೀ ಬಿಡಿ, ಬೆಳಗ್ಗೆ ಬಿಸಿ ನೀರನ್ನು ಇದರ ಮೇಲೆ ಹಾಕಿ. ಹೀಗೆ ಮಾಡುವುದರಿಂದ ಬ್ಲಾಕ್‌ ಆದ ಪೈಪ್‌ ಸಂಪೂರ್ಣ ಸ್ವಚ್ಛವಾಗುತ್ತದೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ