Brain Teaser: 1ಕ್ಕೆ 5 ಕೂಡಿಸಿದ್ರೆ 6 ಆದ್ರೆ, 5ಕ್ಕೆ 11 ಕೂಡಿಸಿದ್ರೆ ಎಷ್ಟು, ಲೆಕ್ಕದಲ್ಲಿ ಪಕ್ಕಾ ಇದ್ರೆ ಥಟ್ಟಂತ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 1ಕ್ಕೆ 5 ಕೂಡಿಸಿದ್ರೆ 6 ಆದ್ರೆ, 5ಕ್ಕೆ 11 ಕೂಡಿಸಿದ್ರೆ ಎಷ್ಟು, ಲೆಕ್ಕದಲ್ಲಿ ಪಕ್ಕಾ ಇದ್ರೆ ಥಟ್ಟಂತ ಉತ್ತರ ಹೇಳಿ

Brain Teaser: 1ಕ್ಕೆ 5 ಕೂಡಿಸಿದ್ರೆ 6 ಆದ್ರೆ, 5ಕ್ಕೆ 11 ಕೂಡಿಸಿದ್ರೆ ಎಷ್ಟು, ಲೆಕ್ಕದಲ್ಲಿ ಪಕ್ಕಾ ಇದ್ರೆ ಥಟ್ಟಂತ ಉತ್ತರ ಹೇಳಿ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್‌ ಆದ ಹೊಸ ಗಣಿತದ ಪಜಲ್‌ವೊಂದು ಇದೀಗ ಮೆದುಳಿಗೆ ಹುಳ ಬಿಡುವುದು ಖಂಡಿತ. ಇದು ಸುಲಭ ಗಣಿತವೇ ಆದ್ರೂ ಲಾಜಿಕಲ್‌ ಥಿಂಕಿಂಗ್‌ನಿಂದಷ್ಟೇ ಇದಕ್ಕೆ ಸರಿ ಉತ್ತರ ಕಂಡುಹಿಡಿಯಲು ಸಾಧ್ಯ. ಇದಕ್ಕೆ ಉತ್ತರ ಖಂಡಿತ 16 ಅಲ್ಲ.

1ಕ್ಕೆ 5 ಕೂಡಿಸಿದ್ರೆ 6 ಆದ್ರೆ, 5ಕ್ಕೆ 11 ಕೂಡಿಸಿದ್ರೆ ಎಷ್ಟು?
1ಕ್ಕೆ 5 ಕೂಡಿಸಿದ್ರೆ 6 ಆದ್ರೆ, 5ಕ್ಕೆ 11 ಕೂಡಿಸಿದ್ರೆ ಎಷ್ಟು?

ಗಣಿತ ಅಂದ್ರೆ ಕೆಲವರು ಮಾರು ದೂರ ಓಡುತ್ತಾರೆ. ಇನ್ನೂ ಕೆಲವರು ಗಣಿತದಲ್ಲಿ ಏಕ್ಸ್‌ಪರ್ಟ್‌ ಇರುತ್ತಾರೆ. ಅವರು ಪೆನ್ನು-ಪೇಪರ್‌ ಕ್ಯಾಲ್ಕುಲೆಟರ್‌ ಯಾವುದೇ ಇಲ್ಲದೇ ಗಣಿತದ ಸೂತ್ರಗಳಿಗೆ ಪಟ್‌ ಪಟ್‌ ಅಂತ ಉತ್ತರ ಹೇಳುವಷ್ಟು ಜಾಣ್ಮೆ ಹೊಂದಿರುತ್ತಾರೆ. ಕೆಲವೊಂದು ಗಣಿತದ ಸೂತ್ರಗಳು ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ ಉತ್ತರ ಹೇಳುವುದು ನಿಜಕ್ಕೂ ಕಷ್ಟ. ನೀವು ಉತ್ತರ ಕಂಡು ಹಿಡಿದರೂ ಆ ಉತ್ತರ ಸರಿಯಾಗಿ ಇರುವುದಿಲ್ಲ. ಆ ಕಾರಣಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂತಹ ಲೆಕ್ಕವನ್ನು ಹೆಚ್ಚು ನೀಡುತ್ತಾರೆ. ಲಾಜಿಕಲ್‌ ಥಿಂಕಿಂಗ್‌ನಿಂದಷ್ಟೇ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯ. ಇಲ್ಲೊಂದು ಅಂತಹದ್ದೇ ಗಣಿತದ ಸೂತ್ರವಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ಗಣಿತದ ಪಜಲ್‌ ಕೂಡಿಸುವ ಲೆಕ್ಕಾಚಾರ ಅನ್ನಿಸುವುದು ಸಹಜ. ಆದರೆ ನೀವು ಅಂದುಕೊಂಡಷ್ಟು ಸುಲಭವಾಗಿ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ.

@thepetnationn ಎಂಬ ಎಕ್ಸ್‌ ಬಳಕೆದಾರರು ಈ ಗಣಿತದ ಪಜಲ್‌ ಅನ್ನು ತಮ್ಮ ಪುಟದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಐಕ್ಯೂ ಟೆಸ್ಟ್‌ ಎಂದು ಶೀರ್ಷಿಕೆ ಬರೆದಿದ್ದು, 1+5=6, 2+6=14, 3+7=24, ಆದರೆ 5+11= ಎಷ್ಟು ಎಂದು ಪ್ರಶ್ನೆ ಕೇಳಲಾಗಿದೆ.

ಮಾರ್ಚ್‌ 28 ರಂದು ಈ ಗಣಿತ ಪಜಲ್‌ ಇರುವ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದ್ದು, ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್‌ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.

ʼ40,49 ಹಾಗೂ 60 ಈ ಎಲ್ಲವೂ ಸಂಭಾವ್ಯ ಉತ್ತರಗಳಾಗಿವೆʼ ಎಂದು ಎಕ್ಸ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಹಲವರು ಈ ಗಣಿತದ ಸೂತ್ರಕ್ಕೆ ಉತ್ತರ 40 ಎಂದು ಕಾಮೆಂಟ್‌ ಮಾಡಿದ್ದರೆ, ಇನ್ನೂ ಕೆಲವರು 60 ಎಂದು ಕಾಮೆಂಟ್‌ ಮಾಡಿದ್ದಾರೆ. ಹಾಗಾದ್ರೆ ಇದಕ್ಕೆ ಸರಿಯಾದ ಉತ್ತರ ಯಾವುದು, ನೀವು ಕಂಡುಕೊಂಡ ಉತ್ತರ ತಿಳಿಸಿ.

ಇದನ್ನೂ ಓದಿ

Brain Teaser: ಚಿತ್ರದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಈ ಸುಲಭ ಗಣಿತಕ್ಕೆ ಥಟ್ಟಂತ ಉತ್ತರ ಹೇಳಿ ಜಾಣತನ ತೋರಿ

ನೀವು ಗಣಿತಪ್ರೇಮಿಯೇ, ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಈ ಬಾಕ್ಸ್‌ನಲ್ಲಿ ಒಂದು ಸಂಖ್ಯೆ ಮಿಸ್‌ ಆಗಿದೆ. ಆ ನಂಬರ್‌ ಯಾವುದು ಎಂದು ಕಂಡುಹಿಡಿಯಿರಿ. ನಿಮಗೊಂದು ಹೊಸ ಸವಾಲು. ಪೆನ್ನು-ಪೇಪರ್‌, ಕ್ಯಾಲ್ಕುಲೇಟರ್‌ ಬಳಸುವಂತಿಲ್ಲ ನೆನಪಿರಲಿ.

Brain Teaser: 2ಕ್ಕೆ 2 ಕೂಡಿಸಿ, 4 ಗುಣಿಸಿ, 2 ರಿಂದ ಭಾಗಿಸಿ, 4 ಕಳೆದ್ರೆ ಎಷ್ಟಾಗುತ್ತೆ? ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಿ

ಪ್ರಾಥಮಿಕ ಶಾಲಾ ಹಂತದ ಈ ಸುಲಭ ಗಣಿತ ಪಜಲ್‌ ಪ್ರೇಮಿಗಳ ಮೆದುಳಿಗೆ ಹುಳ ಬಿಟ್ಟಿರುವುದು ಸುಳ್ಳಲ್ಲ. ಬ್ರೈನ್‌ ಟೀಸರ್‌ ಪ್ರಿಯರು ಇದೀಗ ನಾನಾ ಉತ್ತರ ನೀಡುವ ಮೂಲಕ ಸರಿಯಾದ ಉತ್ತರಕ್ಕಾಗಿ ಹುಡುಕುತ್ತಿದ್ದಾರೆ. ನೀವೊಮ್ಮೆ ಟ್ರೈ ಮಾಡಿ, ಸರಿ ಉತ್ತರ ತಿಳಿಸಿ.

Whats_app_banner