Brain Teaser: ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ಈ ಸುಲಭ ಗಣಿತಕ್ಕೆ ಥಟ್ಟಂತ ಉತ್ತರ ಹೇಳಿ ಜಾಣತನ ತೋರಿ
ನೀವು ಗಣಿತಪ್ರೇಮಿಯೇ, ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಈ ಬಾಕ್ಸ್‌ನಲ್ಲಿ ಒಂದು ಸಂಖ್ಯೆ ಮಿಸ್ ಆಗಿದೆ. ಆ ನಂಬರ್ ಯಾವುದು ಎಂದು ಕಂಡುಹಿಡಿಯಿರಿ. ನಿಮಗೊಂದು ಹೊಸ ಸವಾಲು. ಪೆನ್ನು-ಪೇಪರ್, ಕ್ಯಾಲ್ಕುಲೇಟರ್ ಬಳಸುವಂತಿಲ್ಲ ನೆನಪಿರಲಿ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿರುವ ಬ್ರೈನ್ ಟೀಸರ್ ನೋಡೋಕೆ ಬಲು ಸುಲಭ ಅನ್ನಿಸುತ್ತೆ. ಆದ್ರೆ ಇದಕ್ಕೆ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸವಾಲು. ಸರಿ ಉತ್ತರ ಯಾವುದು ಎಂದು ಕಂಡುಹಿಡಿಯಲು ಸೋಷಿಯಲ್ ಮಿಡಿಯಾದಲ್ಲಿ ಚರ್ಚೆ ಆರಂಭವಾಗಿದೆ. ಇಲ್ಲೊಂದು ಬಾಕ್ಸ್ ಇದ್ದು, ಆ ಬಾಕ್ಸ್‌ನಲ್ಲಿ ಒಂದಿಷ್ಟು ನಂಬರ್‌ಗಳಿವೆ. ಆದರೆ ಕೊನೆಯ ನಂಬರ್ ಮಾತ್ರ ಮಿಸ್ ಆಗಿದೆ. ಮಿಸ್ ಆಗಿರುವ ಆ ನಂಬರ್ ಯಾವುದು, ನೀವು ಗಣಿತಪ್ರೇಮಿಯಾಗಿದ್ದರೆ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯುವುದು ನಿಜಕ್ಕೂ ನಿಮಗೆ ಸವಾಲು ಎನ್ನಿಸುವುದಿಲ್ಲ. ಆದರೆ ಇದಕ್ಕೆ ಪೆನ್ನು-ಪೇಪರ್ ಹಾಗೂ ಕ್ಯಾಲ್ಕುಲೆಟರ್ ಬಳಸದೇ ಉತ್ತರ ಕಂಡುಹಿಡಿಯಬೇಕು. ಈ ಪ್ರಶ್ನೆಗೆ ಉತ್ತರ ಹುಡುಕಲು ನಿಮ್ಮಿಂದ ಸಾಧ್ಯವೇ, ಟ್ರೈ ಮಾಡಿ.
@Rainmaker1973 ಎಂಬ ಎಕ್ಸ್ ಖಾತೆ ಹೊಂದಿರುವ ವ್ಯಕ್ತಿಯೊಬ್ಬರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ʼಇಂದಿನ ಸುಲಭ ಬ್ರೈನ್ ಟೀಸರ್‌ಗೆ ಉತ್ತಮ ಕಂಡುಹಿಡಿಯಲು ಸಾಧ್ಯವೇ? ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಇಲ್ಲಿರುವ ಚಿತ್ರದಲ್ಲಿ ಉದ್ದಕ್ಕೂ ಅಡ್ಡಕ್ಕೂ ನಂಬರ್‌ಗಳನ್ನು ಬರೆಯಲಾಗಿದೆ. ನೀವು ಮಿಸ್ ಆಗಿರುವ ನಂಬರ್ ಅನ್ನು ಹುಡುಕಬೇಕು. ನಿಮ್ಮಿಂದ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯ ಎಂದು ನಿಮಗೆ ಅನ್ನಿಸುವುದೇ? ಹಾಗಾದ್ರೆ ಟ್ರೈ ಮಾಡಿ.
ಮಾರ್ಚ್ 20ರಂದು ಎಕ್ಸ್‌ನಲ್ಲಿ ಈ ಬ್ರೈನ್ ಟೀಸರ್ ಅನ್ನು ಹಂಚಿಕೊಳ್ಳಲಾಗಿತ್ತು. ಈಗಾಗಲೇ 3.5 ಲಕ್ಷಕ್ಕೂ ಅಧಿಕ ಮಂದಿ ಈ ಪೋಸ್ಟ್ ನೋಡಿದ್ದಾರೆ. ಹಲವರು ಲೈಕ್ ಮಾಡಿದ್ದರೆ, ಇನ್ನೂ ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.
ಈ ಬ್ರೈನ್ ಟೀಸರ್‌ಗೆ ಬಂದ ಉತ್ತರಗಳು ಹೀಗಿವೆ
ʼಉತ್ತರ 40 ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆʼ. ಇನ್ನೊಬ್ಬರು ಉತ್ತರ 10 ಎಂದು ಕಾಮೆಂಟ್ ಮಾಡಿದ್ದಾರೆ.
ಹಲವರು ಈ ಪ್ರಶ್ನೆಗೆ ಉತ್ತರ 40 ಎಂದೇ ಕಾಮೆಂಟ್ ಮಾಡಿದ್ದಾರೆ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: 6÷2...?; ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿರುವ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಗಣಿತ ಸೂತ್ರದ ಬ್ರೈನ್ ಟೀಸರ್‌ವೊಂದು ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ಇಲ್ಲಿರುವ ಸಮೀಕರಣಕ್ಕೆ ನೀವು ಉತ್ತರ ಕಂಡುಹಿಡಿಯಬೇಕು, ಅಂದ್ ಹಾಗೆ ಪೆನ್ನು-ಪೇಪರ್, ಕ್ಯಾಲ್ಕುಲೇಟರ್ ಬಳಸುವಂತಿಲ್ಲ. ಬೋಡ್‌ಮಾಸ್ ನಿಯಮ ಗೊತ್ತಿದ್ರೆ ಖಂಡಿತ ಇದಕ್ಕೆ ಉತ್ತರ ಹುಡುಕೋದು ಬಲು ಸುಲಭ.
Brain Teaser: 2ಕ್ಕೆ 2 ಕೂಡಿಸಿ, 4 ಗುಣಿಸಿ, 2 ರಿಂದ ಭಾಗಿಸಿ, 4 ಕಳೆದ್ರೆ ಎಷ್ಟಾಗುತ್ತೆ? ಕ್ಯಾಲ್ಕುಲೆಟರ್ ಬಳಸದೇ ಉತ್ತರ ಹೇಳಿ
ಪ್ರಾಥಮಿಕ ಶಾಲಾ ಹಂತದ ಈ ಸುಲಭ ಗಣಿತ ಪಜಲ್ ಪ್ರೇಮಿಗಳ ಮೆದುಳಿಗೆ ಹುಳ ಬಿಟ್ಟಿರುವುದು ಸುಳ್ಳಲ್ಲ. ಬ್ರೈನ್ ಟೀಸರ್ ಪ್ರಿಯರು ಇದೀಗ ನಾನಾ ಉತ್ತರ ನೀಡುವ ಮೂಲಕ ಸರಿಯಾದ ಉತ್ತರಕ್ಕಾಗಿ ಹುಡುಕುತ್ತಿದ್ದಾರೆ. ನೀವೊಮ್ಮೆ ಟ್ರೈ ಮಾಡಿ, ಸರಿ ಉತ್ತರ ತಿಳಿಸಿ.