ಕನ್ನಡ ಸುದ್ದಿ  /  Nation And-world  /  Anxiety, Depression And Burnout Rampant In Indian Nurses During Covid-19: Study

Indian nurses: ಕೊರೊನಾ ಕಾಲದಲ್ಲಿ ಭಾರತದ ನರ್ಸ್‌ಗಳ ಸ್ಥಿತಿ ಹೇಗಿತ್ತು? ಮನಃಶಾಸ್ತ್ರೀಯ ಅಧ್ಯಯನ ಪ್ರಕಟ

ಇಂಡಿಯನ್‌ ಜರ್ನಲ್‌ ಆಫ್‌ ಸೈಕಿಯಾಟ್ರಿಕ್‌ ನರ್ಸಿಂಗ್‌ನಲ್ಲಿ ಅಧ್ಯಯನ ಪ್ರಬಂಧವೊಂದು ಪ್ರಕಟವಾಗಿದ್ದು, ಅದರಲ್ಲಿ ಕೊರೊನಾ ಕಾಲದಲ್ಲಿ ಭಾರತದ ದಾದಿಯರು/ನರ್ಸ್‌ಗಳ ಮಾನಸಿಕ ಸ್ಥಿತಿ ಹೇಗಿತ್ತು ಎಂದು ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. -

Indian nurses: ಕೊರೊನಾ ಕಾಲದಲ್ಲಿ ಭಾರತದ ನರ್ಸ್‌ಗಳ ಸ್ಥಿತಿ ಹೇಗಿತ್ತು? ಮನಃಶಾಸ್ತ್ರೀಯ ಅಧ್ಯಯನ ಪ್ರಕಟ
Indian nurses: ಕೊರೊನಾ ಕಾಲದಲ್ಲಿ ಭಾರತದ ನರ್ಸ್‌ಗಳ ಸ್ಥಿತಿ ಹೇಗಿತ್ತು? ಮನಃಶಾಸ್ತ್ರೀಯ ಅಧ್ಯಯನ ಪ್ರಕಟ (AFP)

ಕೊರೊನಾ ಕಾಲದಲ್ಲಿ ಬಹುತೇಕ ಎಲ್ಲಾ ಉದ್ಯೋಗಿಗಗಳಿಗೆ ಮನೆಯಿಂದಲೇ ಕೆಲಸ ಅವಕಾಶವಿತ್ತು. ಆದರೆ, ಆರೋಗ್ಯ ಸೇವೆಯಲ್ಲಿ ಕೆಲಸ ಮಾಡುವವರು ನಿತ್ಯ ಆಸ್ಪತ್ರೆಗೆ ಬರಬೇಕಿತ್ತು. ಈಗಷ್ಟೇ ಆರಾಮವಾಗಿದ್ದವರು ಅವರ ಕಣ್ಣೆದುರೇ ಹೆಣವಾಗುತ್ತಿದ್ದರು. ಜಗತ್ತೇ ಸಾವಿನ ಮನೆಯಾಗುವಂತೆ ಅವರಿಗೆ ಭಾಸವಾಗುತ್ತಿತ್ತು. ಮನೆಯಲ್ಲಿರುವ ತಮ್ಮ ಮಕ್ಕಳು, ಕುಟುಂಬದ ಸದಸ್ಯರ ಕಾಳಜಿ ಮರೆತು ಆಸ್ಪತ್ರೆಯಲ್ಲಿ ಜನರ ಸೇವೆ ಮಾಡುತ್ತಿದ್ದರು.

ಕೊರೊನಾ ಎಂಬ ಸಾಂಕ್ರಾಮಿಕ ಕಾಲದಲ್ಲಿ ಜನರ ಸೇವೆ ಮಾಡುತ್ತಿದ್ದ ನರ್ಸ್‌ಗಳು ತಮ್ಮ ಆರೋಗ್ಯವನ್ನೂ ನೋಡಿಕೊಳ್ಳಬೇಕಿತ್ತು. ದಿನವಿಡಿ ಉಸಿರುಕಟ್ಟಿಸುವಂತಹ ಕಿಟ್‌ ಧರಿಸಿ ಕಾರ್ಯನಿರ್ವಹಿಸಬೇಕಿತ್ತು. ವೈರಸ್‌ ದಾಳಿಗೆ ತಾವು ಒಳಗಾಗದಂತೆ ನೋಡಿಕೊಳ್ಳುತ್ತ ಜನರ ಸೇವೆ ಮಾಡಬೇಕಿತ್ತು. ಈ ಸಮಯದಲ್ಲಿ ಸಾವಿನಂಚಿನಲ್ಲಿರುವವರ ನರಳಾಟ, ಕುಟುಂಬದ ಗೋಳಾಟಕ್ಕೆ ಸಾಕ್ಷಿಯಾಗಬೇಕಿತ್ತು.

ಇಂಡಿಯನ್‌ ಜರ್ನಲ್‌ ಆಫ್‌ ಸೈಕಿಯಾಟ್ರಿಕ್‌ ನರ್ಸಿಂಗ್‌ನಲ್ಲಿ ಅಧ್ಯಯನ ಪ್ರಬಂಧವೊಂದು ಪ್ರಕಟವಾಗಿದ್ದು, ಅದರಲ್ಲಿ ಕೊರೊನಾ ಕಾಲದಲ್ಲಿ ಭಾರತದ ದಾದಿಯರು/ನರ್ಸ್‌ಗಳ ಮಾನಸಿಕ ಸ್ಥಿತಿ ಹೇಗಿತ್ತು ಎಂದು ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಜಿ ಬಾಲಮುರುಗನ್, ಜಿ ರಾಧಾಕೃಷ್ಣನ್ ಮತ್ತು ಎಂ ವಿಜಯರಾಣಿ ಅವರು ಈ ಅಧ್ಯಯನ ಮಾಡಿದ್ದಾರೆ.

ಮಾರಣಾಂತಿಕ ಕೊರೊನಾ ಸಮಯದಲ್ಲಿ ಜನರನ್ನು ರಕ್ಷಿಸುವ ಕಾರ್ಯ ಮಾಡಿದ ಈ ಮುಂಚೂಣಿ ಕಾರ್ಯಕರ್ತರ ಮಾನಸಿಕ ಆರೋಗ್ಯ ಸ್ಥಿತಿ ಕುರಿತು ಈ ಅಧ್ಯಯನ ವರದಿ ಬೆಳಕು ಚೆಲ್ಲಿದೆ. ಈ ಸಮಯದಲ್ಲಿ ಭಾರತದ ನರ್ಸ್‌ಗಳು ಭಯ, ಆತಂಕ, ಆಯಾಸ, ಒತ್ತಡ, ಖಿನ್ನತೆ, ನಿದ್ರಾ ಹೀನತೆ ಸೇರಿದಂತೆ ಹಲವು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ಅಧ್ಯಯನ ಬೆಳಕು ಚೆಲ್ಲಿದೆ.

ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ನರ್ಸ್‌ಗಳ ಸ್ಥಿತಿ ಇದೇ ರೀತಿ ಇತ್ತು ಎಂದು ಅಧ್ಯಯನ ವರದಿ ತಿಳಿಸಿದೆ. ಮಾನಸಿಕ ಆಯಾಸ, ಭಯ, ದುಃಖ, ಅಭದ್ರತೆ, ಅಸಹಾಯಕತೆ ಭಾವ ಸೇರಿದಂತೆ ಹಲವು ಮಾನಸಿಕ ತೊಂದರೆಗಳನ್ನು ನರ್ಸ್‌ಗಳು ಅನುಭವಿಸುತ್ತಿದ್ದರು ಎಂದು ಅಧ್ಯಯನ ತಿಳಿಸಿದೆ.

ವಿಶೇಷವಾಗಿ ಎರಡನೇ ಅಲೆಯ ಸಮಯದಲ್ಲಿ ಭಾರತದ ನರ್ಸ್‌ಗಳು ಅತೀವ ಮಾನಸಿಕ ತೊಂದರೆ ಅನುಭವಿಸಿದ್ದಾರೆ ಎಂದು ಈ ಅಧ್ಯಯನದ ಸಹ ಲೇಖಕರಾದ ರಾಧಾಕೃಷ್ಣನ್‌ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಕಾಲದಲ್ಲಿ ನರ್ಸ್‌ಗಳು, ವೈದ್ಯರು, ಕೊರೊನಾ ವಾರಿಯರ್‌ಗಳು ತಮ್ಮ ಬದುಕನ್ನು ಮುಡಿಪಾಗಿಟ್ಟು ಸೇವೆ ಸಲ್ಲಿಸಿದ್ದು, ಅವರ ಸಮರ್ಪಣಾ ಮನೋಭಾವಕ್ಕೆ ಸಾಟಿಯಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಮಾನಸಿಕ ಸ್ಥಿತಿಯು ಅತ್ಯಂತ ಒತ್ತಡದಿಂದ ಕೂಡಿತ್ತು. ನಿದ್ರೆಗಳು ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದರು. ಪ್ರತಿನಿತ್ಯ ಸಾವು ನೋವು ನೋಡುತ್ತ ಅವರ ಮನಸ್ಸು ದುಃಖದಿಂದ ಕೂಡಿತ್ತು. ಕಡಿಮೆ ಸಂಖ್ಯೆಯಲ್ಲಿ ಸಿಬ್ಬಂದಿಗಳು ಇರುವ ಕಾರಣ ಮತ್ತು ಅತಿಯಾದ ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುತ್ತಿದ್ದ ಕಾರಣ ಅವರು ಅತಿಯಾದ ಆಯಾಸ, ಒತ್ತಡಕ್ಕೆ ಒಳಗಾಗಿದ್ದರು ಎಂದು ಅಧ್ಯಯನ ಕಂಡುಕೊಂಡಿದೆ.

"ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ದಾದಿಯರು ರೋಗಿಗಳ ಬೆಂಬಲಕ್ಕೆ ನಿಂತರು. ಅವರು ಧರಿಸಿದ್ದ ಪಿಪಿಇ ಕಿಟ್‌ಗಳಿಂದ ಅವರಿಗಡ ಸರಿಯಾಗಿ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಆಸ್ಪತ್ರೆಯಿಂದ ಹೊರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲʼʼ ಎಂದು ಇಂಡಿಯನ್‌ ಸೊಸೈಟಿ ಆಫ್‌ ಸೈಕಿಯಾಟ್ರಿಕ್‌ ನರ್ಸ್‌ನ ಅಧ್ಯಕ್ಷರಾದ ಕೆ. ರೆಡ್ಡೆಮ್ಮ ಹೇಳಿದ್ದಾರೆ.

"ಕೊರೊನಾ ಸಮಯದಲ್ಲಿ ದಾದಿಯರು ನೀಡಿದ ಸೇವೆಯನ್ನು, ಬಲಿದಾನವನ್ನು ಗೌರವಿಸಲು ಏಪ್ರಿಲ್‌ 7ರಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುವುದರ ಜತೆ, ಸಮರ್ಪಣಾ ದಿನವಾಗಿಯೂ ಆಚರಿಸಲಾಗುವುದುʼʼ ಎಂದು ಅವರು ಗೋವಾದಲ್ಲಿ ನಡೆಯುತ್ತಿರುವ ವಾರ್ಷಿಕ ಸಮ್ಮೇಳನದಲ್ಲಿ ಘೋಷಿಸಿದ್ದಾರೆ.

IPL_Entry_Point