ಕನ್ನಡ ಸುದ್ದಿ  /  Nation And-world  /  Banking News Sbi To Increase Annual Maintenance Charges By Rs75 On These Debit Cards From Apr1 Personal Finance News Uks

ಎಸ್‌ಬಿಐ ಗ್ರಾಹಕರ ಗಮನಕ್ಕೆ; ಏಪ್ರಿಲ್ 1 ರಿಂದ ಡೆಬಿಟ್ ಕಾರ್ಡ್‌ ನಿರ್ವಹಣಾ ಶುಲ್ಕ 75 ರೂ ಹೆಚ್ಚಳ, ಇನ್ನಷ್ಟು ಶುಲ್ಕ ಪರಿಷ್ಕರಣೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕ ಏಪ್ರಿಲ್ 1ರಿಂದ ಬದಲಾಗಲಿದೆ. 75 ರೂಪಾಯಿ ಹೆಚ್ಚಳವಾಗಲಿದ್ದು, ಇನ್ನೂ ಕೆಲವು ಸೇವೆಗಳ ಶುಲ್ಕ ಪರಿಷ್ಕರಣೆಯಾಗಿ ಜಾರಿಗೊಳ್ಳುತ್ತಿದೆ. ಇದರ ವಿವರ ಇಲ್ಲಿದೆ.

ಎಸ್‌ಬಿಐ ಗ್ರಾಹಕರ ಗಮನಕ್ಕೆ; ಏಪ್ರಿಲ್ 1 ರಿಂದ ಡೆಬಿಟ್ ಕಾರ್ಡ್‌ ನಿರ್ವಹಣಾ ಶುಲ್ಕ 75 ರೂ ಹೆಚ್ಚಳವಾಗಲಿದೆ. (ಸಾಂಕೇತಿಕ ಚಿತ್ರ)
ಎಸ್‌ಬಿಐ ಗ್ರಾಹಕರ ಗಮನಕ್ಕೆ; ಏಪ್ರಿಲ್ 1 ರಿಂದ ಡೆಬಿಟ್ ಕಾರ್ಡ್‌ ನಿರ್ವಹಣಾ ಶುಲ್ಕ 75 ರೂ ಹೆಚ್ಚಳವಾಗಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಕೆಲವು ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ವಾರ್ಷಿಕ ನಿರ್ವಹಣಾ ಶುಲ್ಕವನ್ನು 75 ರೂಪಾಯಿ ಹೆಚ್ಚಿಸುತ್ತಿರುವುದಾಗಿ ಘೋಷಿಸಿದೆ. ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಹೆಚ್ಚಳ ಇದೇ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಎಸ್‌ಬಿಐ ಡೆಬಿಟ್ ಕಾರ್ಡ್‌ಗಳ ಕ್ಲಾಸಿಕ್, ಸಿಲ್ವರ್, ಗ್ಲೋಬಲ್, ಕಾಂಟ್ಯಾಕ್ಟ್‌ಲೆಸ್ ಮತ್ತು ಇತರ ವರ್ಗಗಳ ಪರಿಷ್ಕೃತ ವಾರ್ಷಿಕ ನಿರ್ವಹಣಾ ಶುಲ್ಕಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಈಗಿರುವ ವಾರ್ಷಿಕ ನಿರ್ವಹಣಾ ಶುಲ್ಕವನ್ನು ಮುಂದಿನ ತಿಂಗಳಿನಿಂದ ಪರಿಷ್ಕರಿಸಲಾಗುವುದು. ಯುವ, ಗೋಲ್ಡ್, ಕಾಂಬೊ ಮತ್ತು ಪ್ಲಾಟಿನಂ ಡೆಬಿಟ್ ಕಾರ್ಡ್‌ಗಳಂತಹ ವಿವಿಧ ವರ್ಗಗಳ ಎಸ್‌ಬಿಐ ಡೆಬಿಟ್ ಕಾರ್ಡ್‌ಗಳಿಗೆ ವಾರ್ಷಿಕ ನಿರ್ವಹಣೆ ಶುಲ್ಕವನ್ನು 75 ರೂಪಾಯಿ ಹೆಚ್ಚಿಸಲಾಗಿದೆ ಎಂದು ಎಸ್‌ಬಿಐ ವೆಬ್‌ಸೈಟ್‌ನಲ್ಲಿರುವ ಮಾಹಿತಿ ವಿವರಿಸಿದೆ.

ವಾರ್ಷಿಕ ನಿರ್ವಹಣಾ ಶುಲ್ಕಗಳ ಜೊತೆಗೆ, SBI ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಇತರ ಶುಲ್ಕಗಳನ್ನು ವಿವರಿಸಿದೆ. ಕ್ಲಾಸಿಕ್, ಸಿಲ್ವರ್, ಗ್ಲೋಬಲ್ ಮತ್ತು ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್‌ಗಳಿಗೆ 300 ರೂಪಾಯಿ ತನಕ ಮತ್ತು ಪ್ಲಾಟಿನಂ ಡೆಬಿಟ್ ಕಾರ್ಡ್‌ಗಳಿಗೆ GST ವರೆಗೆ ಕಾರ್ಡ್‌ನ ಪ್ರಕಾರವನ್ನು ಅವಲಂಬಿಸಿ ವಿತರಣಾ ಶುಲ್ಕಗಳು ಬದಲಾಗುತ್ತವೆ ಎಂದು ಎಸ್‌ಬಿಐ ತಿಳಿಸಿದೆ.

ಎಸ್‌ಬಿಐ ಡೆಬಿಡ್‌ ಕಾರ್ಡ್‌ಗಳ ಪರಿಷ್ಕೃತ ಶುಲ್ಕ

ಎಸ್‌ಬಿಐ ಡೆಬಿಟ್ ಕಾರ್ಡ್‌ ಬಳಕೆದಾರರು ಪಾವತಿಸಬೇಕಾದ ಪರಿಷ್ಕೃತ ಶುಲ್ಕ

ಕ್ರಮ ಸಂಖ್ಯೆಎಸ್‌ಬಿಐ ಡೆಬಿಟ್‌ ಕಾರ್ಡ್ ಮಾದರಿಈಗ ಚಾಲ್ತಿಯಲ್ಲಿರುವ ಶುಲ್ಕ (ರೂಪಾಯಿ)ಏಪ್ರಿಲ್ 1ರಿಂದ ಅನ್ವಯವಾಗುವ ಶುಲ್ಕ (ರೂಪಾಯಿ)
01ಕ್ಲಾಸಿಕ್, ಸಿಲ್ವರ್, ಗ್ಲೋಬರ್, ಕಾಂಟ್ಯಾಕ್ಟ್‌ಲೆಸ್‌125 + ಜಿಎಸ್‌ಟಿ200+ ಜಿಎಸ್‌ಟಿ
02ಯುವ, ಗೋಲ್ಡ್, ಕಾಂಬೊ ಡೆಬಿಟ್ ಕಾರ್ಡ್, ಮೈ ಕಾರ್ಡ್‌175 + ಜಿಎಸ್‌ಟಿ250 + ಜಿಎಸ್‌ಟಿ
03ಪ್ಲಾಟಿನಂ ಡೆಬಿಟ್ ಕಾರ್ಡ್‌250+ ಜಿಎಸ್‌ಟಿ325 + ಜಿಎಸ್‌ಟಿ
04 ಪ್ರೈಡ್/ ಪ್ರೀಮಿಯಂಬಿಜಿನೆಸ್‌ ಡೆಬಿಟ್‌ ಕಾರ್ಡ್‌350 + ಜಿಎಸ್‌ಟಿ425 + ಜಿಎಸ್‌ಟಿ

ಇತರೆ ವಹಿವಾಟುಗಳ ಮೇಲೂ ಶುಲ್ಕ ಹೆಚ್ಚಳ

ಇದೇ ರೀತಿ, ಡೆಬಿಟ್ ಕಾರ್ಡ್ ಬದಲಾವಣೆಗೆ 300 ರೂಪಾಯಿ ಮತ್ತು ಜಿಎಸ್‌ಟಿ, ಪಿನ್‌ ಮತ್ತು ಪಿನ್‌ ನವೀಕರಣಕ್ಕೆ 50 ರೂಪಾಯಿ + ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಇದಲ್ಲದೆ, ಎಟಿಎಂನಲ್ಲಿ ಅಂತಾರಾಷ್ಟ್ರೀಯ ವಹಿವಾಟು ಮೂಲಕ ಬ್ಯಾಲೆನ್ಸ್‌ ಎನ್‌ಕ್ವೈರಿ ಮಾಡಿದರೆ 25 ರೂಪಾಯಿ ಮತ್ತು ಜಿಎಸ್‌ಟಿ ಪಾವತಿಸಬೇಕು. ಇದಲ್ಲದೆ, ಎಟಿಎಂ ಮೂಲಕ ಅಂತಾರಾಷ್ಟ್ರೀಯ ವಹಿವಾಟು ನಡೆಸಿದರೆ 100 ರೂಪಾಯಿ ಮತ್ತು ಶೇಕಡ 3.5 ತೆರಿಗೆ ಪಾವತಿಸಬೇಕಾಗುತ್ತದೆ. ಪಿಒಎಸ್‌ನಲ್ಲಿ ಇ ಕಾಮರ್ಸ್‌ ವಹಿವಾಟು ನಡೆಸಿದರೆ ಶೇಕಡ 3 ತೆರಿಗೆ ಪಾವತಿಸಬೇಕು. ಎಲ್ಲ ವಹಿವಾಟುಗಳ ಮೇಲೂ ಶೇಕಡ 18 ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಎಸ್‌ಬಿಐ ಹೇಳಿದೆ.

ಏತನ್ಮಧ್ಯೆ, ಎಸ್‌ಬಿಐ ಕಾರ್ಡ್ ತನ್ನ ನೀತಿಗಳನ್ನೂ ನವೀಕರಿಸಿದೆ. ಗೋಲ್ಡ್‌ ಮತ್ತು ಅದಕ್ಕೂ ಮೇಲಿನ ಎಸ್‌ಬಿಐ ಕಾರ್ಡ್‌ನೊಂದಿಗೆ ಬಾಡಿಗೆ ಪಾವತಿ ವಹಿವಾಟುಗಳ ರಿವಾರ್ಡ್ ಪಾಯಿಂಟ್‌ಗಳ ಸಂಗ್ರಹದ ಮೇಲೆ ಪರಿಷ್ಕೃತ ನೀತಿಗಳು ಪರಿಣಾಮ ಬೀರುತ್ತದೆ. ಏಪ್ರಿಲ್ 1 ರಿಂದ ಬಾಡಿಗೆ ಪಾವತಿಗಳ ಮೇಲಿನ ರಿವಾರ್ಡ್ ಪಾಯಿಂಟ್‌ಗಳ ಸಂಗ್ರಹವನ್ನು ಕೆಲವು ಕ್ರೆಡಿಟ್‌ ಕಾರ್ಡ್‌ಗಳಲ್ಲಿ ಸ್ಥಗಿತಗೊಳಿಸಲಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್ ತಿಳಿಸಿದೆ.

IPL_Entry_Point