ಕನ್ನಡ ಸುದ್ದಿ  /  Nation And-world  /  Bharat 6g Pm Modi Unveils Bharat 6g Vision Document, Launches Next Gen Test Bed What Is Bharat 6g Vision Document And 6g Test Bed

Bharat 6G: ಏನಿದು ಭಾರತ್‌ 6ಜಿ ವಿಷನ್‌ ಡಾಕ್ಯುಮೆಂಟ್‌, 6ಜಿ ಟೆಸ್ಟ್‌ ಬೆಡ್‌; ಪ್ರಧಾನಿ ಮೋದಿ ಲೋಕಾರ್ಪಣೆ

Bharat 6G: "ಹೊಸ ವರ್ಷದ ಮೊದಲ ದಿನ, ಭಾರತದಲ್ಲಿ ಟೆಲಿಕಾಂ, ಐಸಿಟಿ ಮತ್ತು ಸಂಬಂಧಿತ ಆವಿಷ್ಕಾರಗಳಿಗೆ ಸಂಬಂಧಿಸಿದ ಗಮನಾರ್ಹ ಆರಂಭ ನೆರವೇರುತ್ತಿದೆ ಎಂಬುದು ನನಗೆ ಸಂತೋಷ ಉಂಟು ಮಾಡುವ ವಿಷಯವಾಗಿದೆ. 6G ಟೆಸ್ಟ್‌ಬೆಡ್ ಅನ್ನು ಸಹ ಪ್ರಾರಂಭಿಸಲಾಗಿದೆ" ಎಂದು ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದರು.

ಭಾರತ್ 6ಜಿ ವಿಷನ್ ಡಾಕ್ಯುಮೆಂಟ್ ಅನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ.
ಭಾರತ್ 6ಜಿ ವಿಷನ್ ಡಾಕ್ಯುಮೆಂಟ್ ಅನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ. (YouTube/ Narendra Modi)

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯುನೈಟೆಡ್‌ ನೇಷನ್ಸ್‌ ಇಂಟರ್‌ನ್ಯಾಷನಲ್‌ ಟೆಲಿಕಮ್ಯೂನಿಕೇಶನ್‌ ಯೂನಿಯನ್‌ ಏರಿಯಾ ಆಫೀಸ್‌ ಮತ್ತು ಇನ್ನೋವೇಶನ್‌ ಸೆಂಟರ್‌ ಅನ್ನು ಬುಧವಾರ ಉದ್ಘಾಟಿಸಿದರು. ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು, ಭಾರತ್‌ 6ಜಿ ವಿಷನ್‌ ಡಾಕ್ಯುಮೆಂಟ್‌ ಅನಾವರಣ ಮಾಡಿದರಲ್ಲದೆ, 6ಜಿ ಆರ್‌&ಡಿ ಟೆಸ್ಟ್‌ಬೆಡ್‌ ಅನ್ನು ಕೂಡ ಲೋಕಾರ್ಪಣೆಮಾಡಿದರು.

"ಹೊಸ ವರ್ಷದ ಮೊದಲ ದಿನ, ಭಾರತದಲ್ಲಿ ಟೆಲಿಕಾಂ, ಐಸಿಟಿ ಮತ್ತು ಸಂಬಂಧಿತ ಆವಿಷ್ಕಾರಗಳಿಗೆ ಸಂಬಂಧಿಸಿದ ಗಮನಾರ್ಹ ಆರಂಭ ನೆರವೇರುತ್ತಿದೆ ಎಂಬುದು ನನಗೆ ಸಂತೋಷ ಉಂಟು ಮಾಡುವ ವಿಷಯವಾಗಿದೆ. 6G ಟೆಸ್ಟ್‌ಬೆಡ್ ಅನ್ನು ಸಹ ಪ್ರಾರಂಭಿಸಲಾಗಿದೆ" ಎಂದು ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದರು.

ಭಾರತ್‌ 6ಜಿ ವಿಷನ್‌ ಡಾಕ್ಯುಮೆಂಟ್‌

ಭಾರತ ಸರ್ಕಾರದ ಭಾರತ್ 6ಜಿ ವಿಷನ್ ಡಾಕ್ಯುಮೆಂಟ್ ಅನ್ನು 6ಜಿ (TIG-6G) ನಲ್ಲಿನ ಟೆಕ್ನಾಲಜಿ ಇನ್ನೋವೇಶನ್ ಗ್ರೂಪ್ ಸಿದ್ಧಪಡಿಸಿದೆ. ಇದನ್ನು ಭಾರತದಲ್ಲಿ 6ಜಿ ಗಾಗಿ ಮಾರ್ಗಸೂಚಿ ಮತ್ತು ಕ್ರಿಯಾ ಯೋಜನೆಗಳನ್ನು ನಿರ್ಮಿಸಲು ನವೆಂಬರ್ 2021 ರಲ್ಲಿ ರಚಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಸಚಿವಾಲಯಗಳು/ಇಲಾಖೆಗಳ ಅಧಿಕಾರಿಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ತಜ್ಞರು, ಶೈಕ್ಷಣಿಕ ಸಂಸ್ಥೆಗಳು, ಪ್ರಮಾಣೀಕರಣ ಸಂಸ್ಥೆಗಳು, ಟೆಲಿಕಾಂ ಸೇವಾ ಪೂರೈಕೆದಾರರು ಮತ್ತು ವ್ಯಾಪಾರದ ಸದಸ್ಯರು ಪರಿಣತ ಬಳಗದ ಸದಸ್ಯರಾಗಿರುತ್ತಾರೆ.

6ಜಿ ಟೆಸ್ಟ್‌ಬೆಡ್‌ ಎಂದರೆ..

ಶೈಕ್ಷಣಿಕ ಸಂಸ್ಥೆಗಳು, ಉದ್ಯಮ, ಸ್ಟಾರ್ಟ್-ಅಪ್‌ಗಳು, ಎಂಎಸ್‌ಎಂಇಗಳು ಮತ್ತು ಉದ್ಯಮಗಳಿಗೆ ವೇದಿಕೆಯನ್ನು 6ಜಿ ಟೆಸ್ಟ್ ಬೆಡ್ ಒದಗಿಸುತ್ತದೆ. ಇತರವುಗಳಲ್ಲಿ, ವಿಕಸನಗೊಳ್ಳುತ್ತಿರುವ ಐಸಿಟಿ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಮತ್ತು ಪರಿಶೀಲಿಸಲು ಇದು ನೆರವಾಗುತ್ತದೆ.

ಕೇಂದ್ರ ಸರ್ಕಾರದ ಪ್ರಕಾರ, ಭಾರತ್ 6G ವಿಷನ್ ಡಾಕ್ಯುಮೆಂಟ್ ಮತ್ತು 6G ಟೆಸ್ಟ್ ಬೆಡ್, ಭಾರತದಲ್ಲಿ ನಾವೀನ್ಯತೆ, ಸಾಮರ್ಥ್ಯ ವೃದ್ಧಿ ಮತ್ತು ವೇಗದ ತಂತ್ರಜ್ಞಾನದ ಅಳವಡಿಕೆಗೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುತ್ತದೆ.

ಗಮನಿಸಬಹುದಾದ ಸುದ್ದಿಗಳು

ಯೂತ್‌ ಫಾರ್‌ ಇಂಡಿಯಾ ಫೆಲೋಷಿಪ್‌ಗೆ ಅರ್ಜಿ ಆಹ್ವಾನ

Youth for India Fellowship: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಫೌಂಡೇಶನ್‌ 11ನೇ ಆವೃತ್ತಿಯ ಯೂತ್‌ ಫಾರ್‌ ಇಂಡಿಯಾ ಫೆಲೋಷಿಪ್‌ಗೆ ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ತಾಣ (youthforindia.org)ಕ್ಕೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ನೇಣುಬಿಗಿದು ಮರಣದಂಡನೆ ವಿಧಿಸುವುದು ಮಾನವ ಘನತೆಗೆ ಸೇರಿದ್ದಲ್ಲ!; ಸುಪ್ರೀಂ ಕೋರ್ಟ್‌ ಹೇಳಿರುವುದೇನು?

Hanging Death penalty: ʻಮಾನವ ಘನತೆಗೆ ಹೆಚ್ಚು ಆದ್ಯತೆʼ ನೀಡುವಂತಹ, ಕಡಿಮೆ ನೋವು ಕೊಡುವಂತಹ ವಿಭಿನ್ನ ವೈಜ್ಞಾನಿಕ ಮರಣದಂಡನೆ ವಿಧಾನಗಳು ಇದೆ ಎಂದು ಹೇಳುವುದಾದರೆ, ನೇಣುಬಿಗಿದು ಮರಣದಂಡನೆ ವಿಧಿಸುವುದು ಅಸಾಂವಿಧಾನಿಕ ಎಂದು ಘೋಷಿಸಬಹುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point