ಕನ್ನಡ ಸುದ್ದಿ  /  Nation And-world  /  Business News Stock Market Closing Bell June 5 Sensex Ends 240 Higher Nifty Near 18600 Sharemarket News In Kannada Pcp

Closing Bell: ಸೆನ್ಸೆಕ್ಸ್‌ 240 ಅಂಕ ಜಿಗಿತ, 18,600 ತಲುಪಿದ ನಿಫ್ಟಿ, ವಾಹನ ಷೇರುಗಳಿಂದ ಹಸಿರಾದ ಷೇರುಪೇಟೆ

Stock Market Closing Bell June 5: ಸೆನ್ಸೆಕ್ಸ್‌ ಸೂಚ್ಯಂಕವು 240.36 ಅಂಕ ಜಿಗಿತ ಕಂಡು 62,787.47ಕ್ಕೆ ವಹಿವಾಟು ಮುಗಿಸಿದೆ. ಇದೇ ರೀತಿ ನಿಫ್ಟಿಯು 59.75 ಅಂಕ ಏರಿಕೆಕಂಡು 18,593.85 ವಹಿವಾಟು ಮುಗಿಸಿದೆ. ಒಟ್ಟಾರೆ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಸೋಮವಾರ ಹಸಿರು ಬಣ್ಣದಲ್ಲಿ ವಹಿವಾಟು ಮುಗಿಸಿವೆ.

Closing Bell: ಸೆನ್ಸೆಕ್ಸ್‌ 240 ಅಂಕ ಜಿಗಿತ, 18,600 ತಲುಪಿದ ನಿಫ್ಟಿ, ವಾಹನ ಷೇರುಗಳಿಂದ ಹಸಿರಾದ ಷೇರುಪೇಟೆ
Closing Bell: ಸೆನ್ಸೆಕ್ಸ್‌ 240 ಅಂಕ ಜಿಗಿತ, 18,600 ತಲುಪಿದ ನಿಫ್ಟಿ, ವಾಹನ ಷೇರುಗಳಿಂದ ಹಸಿರಾದ ಷೇರುಪೇಟೆ (ANI)

ಭಾರತೀಯ ಷೇರುಪೇಟೆಯು ಸೋಮವಾರ ಏರುಮುಖದೊಂದಿಗೆ ವಹಿವಾಟು ಮುಗಿಸಿದೆ. ವಿಶೇಷವಾಗಿ ವಾಹನ ಷೇರುಗಳು ಮತ್ತು ಬಂಡವಾಳ ಸರಕುಗಳಿಗೆ ಸಂಬಂಧಪಟ್ಟ ಷೇರುಗಳ ನೆರವಿನಿಂದ ಷೇರುಪೇಟೆಯಲ್ಲಿ ಏರಿಕೆ ದಾಖಲಾಗಿದೆ. ಮಂಗಳವಾರ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕವು 240 ಅಂಕ ಏರಿಕೆ ಕಂಡಿದೆ. ಇದೇ ರೀತಿ, ನಿಫ್ಟಿ ಸೂಚ್ಯಂಕವು 18,600ಕ್ಕೆ ವಹಿವಾಟು ಮುಗಿಸಿದೆ. ದೇಶೀಯ ಷೇರುಪೇಟೆಗೆ ಅಮೆರಿಕದ ಜಾಬ್‌ ಡೇಟಾಗಳು, ಫೆಡರಲ್‌ ರಿಸರ್ವ್‌ ಸರಕಾರವು ಬಡ್ಡಿದರ ಹೆಚ್ಚಳವನ್ನು ತಡೆಹಿಡಿಯಲಿದೆ ಎಂಬ ಸುದ್ದಿಗಳು ಇಂದು ಷೇರುಪೇಟೆಗೆ ಆಶಾದಾಯಕವಾಗಿ ಪರಿಣಮಿಸಿದೆ.

ಸೆನ್ಸೆಕ್ಸ್‌ ಸೂಚ್ಯಂಕವು 240.36 ಅಂಕ ಜಿಗಿತ ಕಂಡು 62,787.47ಕ್ಕೆ ವಹಿವಾಟು ಮುಗಿಸಿದೆ. ಇದೇ ರೀತಿ ನಿಫ್ಟಿಯು 59.75 ಅಂಕ ಏರಿಕೆಕಂಡು 18,593.85 ವಹಿವಾಟು ಮುಗಿಸಿದೆ. ಒಟ್ಟಾರೆ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಸೋಮವಾರ ಹಸಿರು ಬಣ್ಣದಲ್ಲಿ ವಹಿವಾಟು ಮುಗಿಸಿವೆ.

ನಿಫ್ಟಿಯ ಪ್ರಮುಖ ನಷ್ಟದಾರರು

50 ಷೇರುಗಳ ನಿಫ್ಟಿ ಸೂಚ್ಯಂಕದಲ್ಲಿ ದಿವಿ ಲ್ಯಾಬ್‌, ಏಷ್ಯಾನ್‌ ಪೇಂಟ್‌, ಟೆಕ್‌ಎಂ, ಹೀರೋ ಮೋಟಾರ್‌ಕಾರ್ಪ್‌ ಮತ್ತು ನೆಸ್ಲೆ ಇಂಡಿಯಾವು ಈ ದಿನದ ಟಾಪ್‌ ನಷ್ಟದಾರ ಕಂಪನಿಗಳಾಗಿವೆ. ಇವುಗಳಲ್ಲಿ ದಿವಿ ಲ್ಯಾಬ್‌ನ ಷೇರುಗಳು ಶೇಕಡ 1.3ರಷ್ಟು ಕುಸಿತಕಂಡಿವೆ.

ನಿಫ್ಟಿಯ ಪ್ರಮುಖ ಲಾಭದಾರರು

ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕದಲ್ಲಿ ಮಹೀಂದ್ರ ಆಂಡ್‌ ಮಹೀಂದ್ರ, ಆಕ್ಸಿಸ್‌ ಬ್ಯಾಂಕ್‌, ಟಾಟಾ ಮೋಟಾರ್ಸ್‌, ಎಲ್‌ಆಂಡ್‌ಟಿ, ಗ್ರಾಸಿಮ್‌ ಕಂಪನಿಗಳು ಹೆಚ್ಚಿನ ಲಾಭ ಪಡೆದಿವೆ. ಇವುಗಳಲ್ಲಿ ಮಹೀಂದ್ರ ಆಂಡ್‌ ಮಹೀಂದ್ರ ಷೇರುಗಳು ಶೇಕಡ 4ರಷ್ಟು ನಷ್ಟ ದಾಖಲಿಸಿವೆ.

ಕುಸಿತಕಂಡ ರೂಪಾಯಿ ಮೌಲ್ಯ

ಡಾಲರ್‌ ಎದುರು ರೂಪಾಯಿ ಮೌಲ್ಯವು ಇಂದು 29 ಪೈಸೆ ಇಳಿಕೆ ಕಂಡು 82.68 ತಲುಪಿದೆ. ಇಂಟರ್‌ಬ್ಯಾಂಕ್‌ ಫಾರೀನ್‌ ಎಕ್ಸ್‌ಚೇಂಜ್‌ನಲ್ಲಿ ಇಂದು ಬೆಳಗ್ಗೆ ಡಾಲರ್‌ ಎದುರು ರೂಪಾಯಿ ಕರೆನ್ಸಿ ಮೌಲ್ಯ 82.47 ರೂಪಾಯಿ ಇತ್ತು.

ಈ ವಾರ ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರು ಆರ್‌ಬಿಐನ ಹಣಕಾಸು ನೀತಿ ನಿರ್ಧಾರವನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಜೂನ್‌ 8ರಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ತನ್ನ ಪ್ರಮುಖ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆಯಿದೆ. ಈ ಕುರಿತ ಹೆಚ್ಚಿನ ವಿವರ ಇಂದಿನ ಓಪನಿಂಗ್‌ ಬೆಲ್‌ನಲ್ಲಿದೆ.

IPL_Entry_Point