ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Opening Bell: ಭಾರತದ ಷೇರುಪೇಟೆಯಲ್ಲಿ ಉತ್ತಮ ಆರಂಭ ನಿರೀಕ್ಷೆ, ಇಂದು ಗಮನದಲ್ಲಿಟ್ಟುಕೊಳ್ಳಬೇಕಾದ ಷೇರುಗಳ ವಿವರ ಇಲ್ಲಿದೆ

Opening Bell: ಭಾರತದ ಷೇರುಪೇಟೆಯಲ್ಲಿ ಉತ್ತಮ ಆರಂಭ ನಿರೀಕ್ಷೆ, ಇಂದು ಗಮನದಲ್ಲಿಟ್ಟುಕೊಳ್ಳಬೇಕಾದ ಷೇರುಗಳ ವಿವರ ಇಲ್ಲಿದೆ

Stock Market Opening Bell June 5: ಈ ವಾರ ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರು ಆರ್‌ಬಿಐನ ಹಣಕಾಸು ನೀತಿ ನಿರ್ಧಾರವನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಜೂನ್‌ 8ರಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ತನ್ನ ಪ್ರಮುಖ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆಯಿದೆ

Opening Bell: ಭಾರತದ ಷೇರುಪೇಟೆಯಲ್ಲಿ ಉತ್ತಮ ಆರಂಭ ನಿರೀಕ್ಷೆ, ಇಂದು ಗಮನದಲ್ಲಿಟ್ಟುಕೊಳ್ಳಬೇಕಾದ ಷೇರುಗಳ ವಿವರ ಇಲ್ಲಿದೆ
Opening Bell: ಭಾರತದ ಷೇರುಪೇಟೆಯಲ್ಲಿ ಉತ್ತಮ ಆರಂಭ ನಿರೀಕ್ಷೆ, ಇಂದು ಗಮನದಲ್ಲಿಟ್ಟುಕೊಳ್ಳಬೇಕಾದ ಷೇರುಗಳ ವಿವರ ಇಲ್ಲಿದೆ (MINT_PRINT)

ಬೆಂಗಳೂರು: ಈ ತಿಂಗಳಾಂತ್ಯದಲ್ಲಿ ಫೆಡರಲ್‌ ರಿಸರ್ವ್‌ ಸರಕಾರವು ಬಡ್ಡಿದರ ಹೆಚ್ಚಳ ನಿರ್ಧಾರವನ್ನು ಬಿಟ್ಟುಬಿಡಬಹುದು ಎಂಬ ನಿರೀಕ್ಷೆ, ಅಮೆರಿಕದ ನೇಮಕಾತಿ ಹೆಚ್ಚಳದ ಅಂಕಿಅಂಶಗಳು ಇತ್ಯಾದಿ ಕಾರಣಗಳಿಂದ ಭಾರತದ ಷೇರುಪೇಟೆಯಲ್ಲಿ ಇಂದು ಉತ್ತಮ ಆರಂಭವನ್ನು ನಿರೀಕ್ಷಿಸಲಾಗುತ್ತಿದೆ. ವಿಶಾಲವಾದ ಏಷ್ಯಾ ಷೇರುಪೇಟೆಯಲ್ಲಿ ಇಂದು ಉತ್ತಮ ಆರಂಭದ ಸೂಚನೆಗಳಿವೆ.

ಇಂದು ಬೆಳಗ್ಗೆ 7:34 ಗಂಟೆಗೆ (IST ಸಮಯ) ಸಿಂಗಾಪುರ ಷೇರುಪೇಟೆಯಲ್ಲಿ ಪಟ್ಟಿ ಮಾಡಲಾದ ಭಾರತದ ಎನ್‌ಎಸ್‌ಇ ಸ್ಟಾಕ್ ಫ್ಯೂಚರ್ಸ್ ಶೇಕಡ 0.46 ರಷ್ಟು ಏರಿಕೆ ಕಂಡು 18,714.50 ಕ್ಕೆ ತಲುಪಿದೆ.

ದೇಶದ ಷೇರುಪೇಟೆ ಸೂಚಿಗಳಾದ ನಿಫ್ಟಿ 50 ಮತ್ತು ಎಸ್‌ಆಂಡ್‌ಪಿ ಬಿಎಸ್‌ಇ ಸೆನ್ಸೆಕ್ಸ್‌ ಕಳೆದ ಶುಕ್ರವಾರ ತಮ್ಮ ಎರಡನೇ ನೇರ ಸಾಪ್ತಾಹಿಕ ಲಾಭ ದಾಖಲಿಸಿವೆ. ದೇಶದ ಕೈಗಾರಿಕಾ ಉತ್ಪಾದನೆಯ ವೇಗದ ವಿಸ್ತರಣೆ, ಆರ್ಥಿಕ ಬೆಳವಣಿಗೆಯ ನಿರೀಕ್ಷೆಗೆ ಸಂಬಂಧಪಟ್ಟ ಅಂಕಿಅಂಶಗಳು ಇಂತಹ ಲಾಭಕ್ಕೆ ಬೆಂಬಲ ನೀಡಿವೆ.

ಈ ವಾರ ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರು ಆರ್‌ಬಿಐನ ಹಣಕಾಸು ನೀತಿ ನಿರ್ಧಾರವನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಜೂನ್‌ 8ರಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವು ತನ್ನ ಪ್ರಮುಖ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆಯಿದೆ ಎಂದು ರಾಯಿಟರ್ಸ್‌ ಸಮೀಕ್ಷೆ ತಿಳಿಸಿದೆ.

ಸೋಮವಾರ ಜಾಗತಿಕ ಷೇರುಪೇಟೆಯನ್ನು ಗಮನದಲ್ಲಿಟ್ಟುಕೊಂಡು ಏಷ್ಯಾ ಷೇರುಗಳು ಉತ್ತಮ ಆಶಾವಾದ ಹೊಂದಿವೆ. ವಿಶೇಷವಾಗಿ ಫೆಡರಲ್‌ ಸರಕಾರವು ದರ ಹೆಚ್ಚಳವನ್ನು ಸ್ಥಗಿತಗೊಳಿಸಲಿದೆ ಎಂಬ ಸೂಚನೆ, ಅಮೆರಿಕದ ಆರ್ಥಿಕತೆಗೆ ಕಳೆದ ತಿಂಗಳಲ್ಲಿ ಸೇರ್ಪಡೆಗೊಂಡ 3,39,000 ಜಾಬ್‌ಗಳು ಆಶಾವಾದಕ್ಕೆ ಪೂರಕವಾಗಿದೆ. ಇದರೊಂದಿಗೆ ನಿರುದ್ಯೋಗ ದರ ಹೆಚ್ಚಳ, ವೇತನದ ಬೆಳವಣಿಗೆ ಮಧ್ಯಮಮಟ್ಟದಲ್ಲಿರುವುದು ಷೇರುಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು.

ಈ ನಡುವೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 6.59 ಶತಕೋಟಿ ರೂಪಾಯಿ (80 ಮಿಲಿಯನ್ ಡಾಲರ್‌) ಮೌಲ್ಯದ ಭಾರತೀಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೇ ಸಮಯದಲ್ಲಿ ದೇಶೀಯ ಹೂಡಿಕೆದಾರರು 5.82 ಶತಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ನಿವ್ವಳ ಆಧಾರದ ಮೇಲೆ ಖರೀದಿಸಿದ್ದಾರೆ ಎಂದು ಎನ್‌ಎಸ್‌ಇ ತಾತ್ಕಾಲಿಕ ಡೇಟಾಗಳಿಂದ ತಿಳಿದುಬಂದಿದೆ.

ಇಂದು ಗಮನದಲ್ಲಿಟ್ಟುಕೊಳ್ಳಬೇಕಾದ ಷೇರುಗಳು

ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್: ಏರ್‌ಬಸ್‌ ಕಂಪನಿಯು ತನ್ನ A320-ಫ್ಯಾಮಿಲಿ ಜೆಟ್‌ಗಳನ್ನು ಭಾರತದ ಅತಿದೊಡ್ಡ ಏರ್‌ಲೈನ್ ಕ್ಯಾರಿಯರ್ ಇಂಡಿಗೋ ಆಪರೇಟರ್‌ಗೆ ಮಾರಾಟ ಮಾಡುವ ಒಪ್ಪಂದ ಮುಕ್ತಾಯ ಹಂತದಲ್ಲಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ಎಸ್‌ಬಿಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್: ಸಹರಾ ಇಂಡಿಯಾ ಲೈಫ್‌ ಇನ್ಸುರೆನ್ಸ್‌ ಅನ್ನು ಎಸ್‌ಬಿಐ ಲೈಫ್‌ ಇನ್ಸುರೆನ್ಸ್‌ಗೆ ಸ್ವಾಧೀನಪಡಿಸಿಕೊಳ್ಳಲು ಭಾರತೀಯ ವಿಮಾ ನಿಯಂತ್ರಣ ಸಂಸ್ಥೆ ಆದೇಶಿಸಿದೆ. ಸಹರಾ ಹಣಕಾಸಿನ ಸ್ಥಿತಿಯ ನಿರಂತರ ಕ್ಷೀಣತೆ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅಪೋಲೋ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿಮಿಟೆಡ್: ಕಂಪನಿಯು ತನ್ನ ಆನ್‌ಲೈನ್‌ ವೇದಿಕೆಯಲ್ಲಿ ತನ್ನ ಶೇಕಡ 6ರವರೆಗೆ ಷೇರುಗಳನ್ನು ಮಾರಾಟ ಮಾಡಿ 200 ದಶಲಕ್ಷ ಡಾಲರ್‌ ಸಂಗ್ರಹಿಸಲು ಯೋಜಿಸಿರುವುದಾಗಿ ಅಪೋಲೋ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿ ಕೃಷ್ಣನ್ ಅಖಿಲೇಶ್ವರನ್ ಶುಕ್ರವಾರ ಹೇಳಿದ್ದಾರೆ.

ಟಾಟಾ ಮೋಟಾರ್ಸ್ ಲಿಮಿಟೆಡ್: ದೇಶದಲ್ಲಿ ಎಲೆಕ್ಟ್ರಿಕ್‌ ವಾಹನ ಪೂರೈಕೆ ಜಾಲ ರಚಿಸುವ ಉದ್ದೇಶದಿಂದ ಸುಮಾರು 130 ಶತಕೋಟಿ ರೂಪಾಯಿಗಳ ಹೂಡಿಕೆಯ ಲಿಥಿಯಂ-ಐಯಾನ್ ಸೆಲ್ ಫ್ಯಾಕ್ಟರಿ ನಿರ್ಮಿಸುವ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ.

ಕರೆನ್ಸಿ ಮೌಲ್ಯ

1 ಡಾಲರ್‌ = 82.5077 ಭಾರತೀಯ ರೂಪಾಯಿಗಳು

(ಮೂಲ ವರದಿ: ರಾಯಿಟರ್ಸ್‌, ಕನ್ನಡಕ್ಕೆ: ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ)

IPL_Entry_Point