ಕನ್ನಡ ಸುದ್ದಿ  /  Nation And-world  /  Cheap 5g Smartphone From Jio Is Codenamed Ganga Is On The Way Report

5G Ganga Jio Phones: ಜಿಯೋದಿಂದ ಬರಲಿದೆ 'ಗಂಗಾ' 5G ಸ್ಮಾರ್ಟ್‌ಫೋನ್!;‌ ಬೆಲೆ ಕಡಿಮೆ, ಬಗೆಬಗೆ ಫೀಚರ್ಸ್‌.. ಇಲ್ಲಿದೆ ಮಾಹಿತಿ.

ಶೀಘ್ರದಲ್ಲಿ Jioನ 5G ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೆಚ್ಚಿನ ವೆಚ್ಚದ ಫೋನ್‌ ಖರೀದಿ ಮಾಡಲು ಬಯಸದ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕಡಿಮೆ ಬೆಲೆಯ ಫೋನ್‌ ಅಭಿವೃದ್ಧಿ ಪಡಿಸುತ್ತಿದೆ ಜಿಯೋ.

ಜಿಯೋದಿಂದ ಬರಲಿದೆ 'ಗಂಗಾ' 5G ಸ್ಮಾರ್ಟ್‌ಫೋನ್!;‌ ಬೆಲೆ ಕಡಿಮೆ, ಬಗೆಬಗೆ ಫೀಚರ್ಸ್‌.. ಇಲ್ಲಿದೆ ಮಾಹಿತಿ.
ಜಿಯೋದಿಂದ ಬರಲಿದೆ 'ಗಂಗಾ' 5G ಸ್ಮಾರ್ಟ್‌ಫೋನ್!;‌ ಬೆಲೆ ಕಡಿಮೆ, ಬಗೆಬಗೆ ಫೀಚರ್ಸ್‌.. ಇಲ್ಲಿದೆ ಮಾಹಿತಿ.

ಕೊನೆಗೂ 5ಜಿ ಸೇವೆ ಭಾರತದಲ್ಲಿ ಪ್ರಧಾನಿ ಮೋದಿ ಅವರಿಂದ ಲಾಂಚ್‌ ಆಗಿದೆ. ಇತ್ತ ಶೀಘ್ರದಲ್ಲಿಯೇ ತನ್ನ ಬಳಕೆದಾರರಿಗೆ ಈ ಸೇವೆಯನ್ನು ನೀಡಲು ಜಿಯೋ ಉತ್ಸುಕತೆ ವಹಿಸಿದೆ. 5ಜಿ ಸೇವೆಯ ಪ್ರಯೋಜನಗಳನ್ನು ನೀಡಲು ತಯಾರಿ ನಡೆಸಿದೆ. ಅಂದರೆ, ಅಗ್ಗದ 5ಜಿ ಸೇವೆ ಲಭ್ಯವಾಗುವ ಸ್ಮಾರ್ಟ್‌ಫೋನ್‌ ಅಭಿವೃದ್ಧಿಪಡಿಸುವ ಕೆಲಸ ಶುರುವಾಗಿದೆ. ಈ ಹಿಂದೆಯೇ ಗೂಗಲ್‌ ಜತೆ ಸೇರಿಕೊಂಡು ಹೊಸ ಡಿವೈಸ್‌ ಅಭಿವೃದ್ಧಿ ಪಡಿಸುವ ಕೆಲಸ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿತ್ತು. ಇದೀಗ Jio Phone 5Gಗೆ ಸಂಬಂಧಿಸಿದ ಹಲವು ಮಾಹಿತಿಗಳು ಮುನ್ನೆಲೆಗೆ ಬಂದಿವೆ.

ಕಡಿಮೆ ಬೆಲೆಯಲ್ಲಿ 5G Jio Phone ಲಭ್ಯ

ಹೌದು ಶೀಘ್ರದಲ್ಲಿ Jioನ 5G ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೆಚ್ಚಿನ ವೆಚ್ಚದ ಫೋನ್‌ ಖರೀದಿ ಮಾಡಲು ಬಯಸದ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕಡಿಮೆ ಬೆಲೆಯ ಫೋನ್‌ ಅಭಿವೃದ್ಧಿ ಪಡಿಸುತ್ತಿದೆ ಜೀಯೋ. ಈ ಹಿಂದೆಯೂ ಜಿಯೋ ಸಂಸ್ಥೆಯಿಂದ ಅಗ್ಗದ ಫೋನ್‌ಗಳು ಮಾರುಕಟ್ಟೆಗೆ ಬಂದಿದ್ದವು. ಕಡಿಮೆ ಸಮಯದಲ್ಲಿ ಆ ಮಾಡೆಲ್‌ ಫೋನ್‌ಗಳು ಹೆಚ್ಚು ಬಿಕರಿಯಾಗಿದ್ದವು. ಇದೀಗ 5ಜಿ ಫೋನ್‌ ಸರದಿ.

ಗಂಗಾ ಹೆಸರಿನ 5ಜಿ ಜಿಯೋ ಫೋನ್‌

ಜಿಯೋದ ಹೊಸ ಫೋನ್‌ನ ಕೋಡ್ ನೇಮ್ 'ಗಂಗಾ' ಎಂದು ತಿಳಿದುಬಂದಿದೆ. ಅದರ ಮಾಡೆಲ್‌ ಸಂಖ್ಯೆ LS1654QB5 ಎಂದು 91Mobiles ತನ್ನ ಲೀಕ್ಡ್ ಫರ್ಮ್‌ವೇರ್‌ ವರದಿಯಲ್ಲಿ ಉಲ್ಲೇಖಿಸಿದೆ. ಅಷ್ಟೇ ಅಲ್ಲ LYF ಸಹಭಾಗಿತ್ವದಲ್ಲಿ Jio ಕಂಪನಿ ಈ ಹೊಸ ಸ್ಮಾರ್ಟ್‌ಫೋನ್‌ ಅಭಿವೃದ್ಧಿಪಡಿಸುತ್ತಿದೆ. 6.5-ಇಂಚಿನ HD+LCD ಸ್ಕ್ರೀನ್‌ ಹೊಂದಿದ್ದು, 90Hz ಹೆಚ್ಚಿನ ರಿಫ್ರೆಶ್-ರೇಟ್ ಈ ಸ್ಮಾರ್ಟ್‌ಫೋನ್‌ನಲ್ಲಿ ಕಾಣಬಹುದು. ಈ ಡಿವೈಸ್‌ 4GB LPDDR4X RAM ಮತ್ತು 32GB ಇನ್‌ಬಿಲ್ಟ್‌ ಸ್ಟೋರೇಜ್‌ ಮತ್ತು Qualcomm Snapdragon 480 ಪ್ರೊಸೆಸರ್ ಅನ್ನು ಹೊಂದಿರಲಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್

JioPhone 5Gಯಲ್ಲಿ ಹಿಂಭಾಗದ ಪ್ಯಾನೆಲ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಇರಲಿದೆ. 12MP ಹಿಂಬದಿ ಕ್ಯಾಮರಾ ಮತ್ತು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಫೋನ್‌ನಲ್ಲಿ 8MP ಮುಂಭಾಗದ ಕ್ಯಾಮೆರಾವನ್ನು ಕಾಣಬಹುದು. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು ಆಂಡ್ರಾಯ್ಡ್ 12 ಆಧಾರಿತ ಸಾಫ್ಟ್‌ವೇರ್‌ನೊಂದಿಗೆ ಪ್ರಾರಂಭಿಸಬಹುದು. ವೈಫೈ 802.11 a / b / g / n ಮತ್ತು ಬ್ಲೂಟೂತ್ 5.1 ಕನೆಕ್ಷನ್‌ ಈ ಫೋನ್‌ನಲ್ಲಿ ಲಭ್ಯವಿರುತ್ತದೆ.

ಹಾಗಾದರೆ ಇದರ ಬೆಲೆ ಎಷ್ಟು

ಹೊಸ JioPhone ನ ಬೆಲೆಯ ಬಗ್ಗೆ ತಿಳಿಯುವುದಾದರೆ, 12,000 ರೂ.ಗಿಂತ ಕಡಿಮೆ ಬೆಲೆಯ ಈ ಫೋನ್‌ ಗ್ರಾಹಕರಿಗೆ ಲಭ್ಯವಾಗಲಿದೆಯೆಂತೆ. ಕೌಂಟರ್‌ಪಾಯಿಂಟ್ ರಿಸರ್ಚ್‌ನ ಇತ್ತೀಚಿನ ವರದಿಯ ಪ್ರಕಾರ ಈ ಸಾಧನದ ಬೆಲೆ 8,000ದಿಂದ 12,000 ರೂಪಾಯಿಗಳ ಒಳಗೆ ಇರಬಹುದು ಎನ್ನಲಾಗುತ್ತಿದೆ.

IPL_Entry_Point

ವಿಭಾಗ