ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Comprehensive History Of India: ಭಾಷಾ ಮೂಲ ಇತಿಹಾಸ ಆಧರಿಸಿ ಭಾರತದ ಇತಿಹಾಸ ಮರುರಚನೆ; ಮಾರ್ಚ್‌ನಲ್ಲಿ 1ನೇ ಸಂಪುಟ ಬಿಡುಗಡೆ ಎಂದ Ichr

Comprehensive history of India: ಭಾಷಾ ಮೂಲ ಇತಿಹಾಸ ಆಧರಿಸಿ ಭಾರತದ ಇತಿಹಾಸ ಮರುರಚನೆ; ಮಾರ್ಚ್‌ನಲ್ಲಿ 1ನೇ ಸಂಪುಟ ಬಿಡುಗಡೆ ಎಂದ ICHR

Comprehensive history of India: ವಿವಿಧ ಭಾಷೆಗಳಲ್ಲಿರುವ ಇತಿಹಾಸ ಮೂಲಗಳನ್ನು ಆಧರಿಸಿ ಭಾರತದ ಇತಿಹಾಸವನ್ನು ಮರುರಚಿಸುವ ಕೆಲಸ ಪ್ರಗತಿಯಲ್ಲಿದೆ. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಇದು ಪೂರ್ಣವಾಗಲಿದೆ. ಮೊದಲ ಸಂಪುಟ 2023ರ ಮಾರ್ಚ್‌ ತಿಂಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ವಿವರ ಇಲ್ಲಿದೆ.

ವಿವಿಧ ಭಾಷೆಗಳಲ್ಲಿರುವ ಇತಿಹಾಸ ಮೂಲಗಳನ್ನು ಆಧರಿಸಿ ಭಾರತದ ಇತಿಹಾಸವನ್ನು ಮರುರಚಿಸುವ ಕೆಲಸ ಪ್ರಗತಿಯಲ್ಲಿದೆ. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಇದು ಪೂರ್ಣವಾಗಲಿದೆ.
ವಿವಿಧ ಭಾಷೆಗಳಲ್ಲಿರುವ ಇತಿಹಾಸ ಮೂಲಗಳನ್ನು ಆಧರಿಸಿ ಭಾರತದ ಇತಿಹಾಸವನ್ನು ಮರುರಚಿಸುವ ಕೆಲಸ ಪ್ರಗತಿಯಲ್ಲಿದೆ. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಇದು ಪೂರ್ಣವಾಗಲಿದೆ.

ನವದೆಹಲಿ: ವಿವಿಧ ಭಾಷೆಗಳಲ್ಲಿರುವ ಇತಿಹಾಸವನ್ನು ಆಧರಿಸಿ ಭಾರತದ ಇತಿಹಾಸವನ್ನು ಮರುರಚಿಸುವ ಕೆಲಸ ಪ್ರಗತಿಯಲ್ಲಿದೆ. 2023ರ ಮಾರ್ಚ್‌ ತಿಂಗಳಲ್ಲಿ ಮೊದಲ ಸಂಪುಟ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಇಂಡಿಯನ್‌ ಕೌನ್ಸಿಲ್‌ ಆಫ್‌ ಹಿಸ್ಟಾರಿಕಲ್‌ ರೀಸರ್ಚ್‌ (ಐಸಿಎಚ್‌ಆರ್‌) ಮೂಲಗಳು ಹೇಳಿವೆ.
ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ICHR) ಭಾರತದ ಇತಿಹಾಸ "ಮರುರಚನೆ" ಪ್ರಾರಂಭಿಸಿದೆ. ಸಿಂಧೂ ಕಣಿವೆಯ ನಾಗರೀಕತೆಯ ಕಾಲದಿಂದ ಇಂದಿನವರೆಗಿನ ಇತಿಹಾಸ ಸ್ಥಳೀಯ ಭಾಷೆಗಳು ಮತ್ತು ಲಿಪಿಗಳಲ್ಲಿ ಲಭ್ಯವಿರುವ ಮೂಲಗಳನ್ನು ಬಳಸಿಕೊಂಡು ಈ ಕೆಲಸ ಮಾಡಲಿದೆ. ಇತಿಹಾಸದ ಪುಟಗಳಲ್ಲಿ ತಪ್ಪಿ ಹೋಗಿರುವ ರಾಜವಂಶ ಮತ್ತು ಯುರೋಪ್‌ ಕೇಂದ್ರಿತ ಮನಸ್ಥಿತಿಯಿಂದ ರಚಿಸುವಾಗ ತಪ್ಪಾಗಿರುವ ವಾಸ್ತವಾಂಶಗಳನ್ನು ಸರಿಪಡಿಸುವ ಕೆಲಸ ಈ ಯೋಜನೆಯಲ್ಲಿ ನಡೆಯಲಿದೆ ಎಂದು ಐಸಿಎಚ್‌ಆರ್‌ ಮೂಲಗಳು ಸೋಮವಾರ ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

ಕಾಂಪ್ರಹೆನ್ಸಿವ್‌ ಹಿಸ್ಟರಿ ಆಫ್‌ ಇಂಡಿಯಾ (Comprehensive history of India)

ಐಸಿಎಚ್‌ಆರ್‌ನ ಈ ಯೋಜನೆಗೆ “ಕಾಂಪ್ರಹೆನ್ಸಿವ್‌ ಹಿಸ್ಟರಿ ಆಫ್‌ ಇಂಡಿಯಾ (Comprehensive history of India)” ಎಂದು ಹೆಸರಿಡಲಾಗಿದೆ. ಇದರಲ್ಲಿ 12- 14 ಸಂಪುಟಗಳು ಇರಲಿವೆ. ಮುಂದಿನ ಮೂರರಿಂದ ನಾಲ್ಕು ವರ್ಷದ ಅವಧಿಯಲ್ಲಿ ಇದು ಪೂರ್ಣಗೊಳ್ಳಲಿದೆ. ಮೊದಲ ಸಂಪುಟವು 2023ರ ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಐಸಿಎಚ್‌ಆರ್‌ನ ಸದಸ್ಯ ಕಾರ್ಯದರ್ಶಿ ಉಮೇಶ್‌ ಕದಂ ತಿಳಿಸಿದ್ದಾರೆ.

ಈ ಯೋಜನೆಯ ಮೂಲಕ ಸಿಂಧೂ ಕಣಿಯವೆಯ ನಾಗರಿಕತೆಯ ರಾಖಿಗಢಿಯಿಂದ ಹಿಡಿದು ಇಂದಿನ ತನಕದ ಇತಿಹಾಸ ಒಳಗೊಳ್ಳಲಿದೆ. ಈ ಯೋಜನೆ ಈಗಾಗಲೇ ಶುರುವಾಗಿದೆ. ದೇಶದ 100ಕ್ಕೂ ಹೆಚ್ಚು ಇತಿಹಾಸಕಾರರು, ವಿವಿಧ ಕ್ಷೇತ್ರಗಳ ಪರಿಣತರು ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಯೋಜನೆಯಲ್ಲಿ ಭಾರತದ ಇತಿಹಾಸವನ್ನು ಭಾರತೀಯ ಭಾಷಾ ಮೂಲಗಳಲ್ಲಿರುವ ಇತಿಹಾಸವನ್ನು ಆಧರಿಸಿ ಮರುರಚಿಸಲಾಗುತ್ತದೆ.

ಭಾರತದ ಹೆಮ್ಮೆಯನ್ನು ಬಿಂಭಿಸುವ ವಿಚಾರಗಳ ಕಡೆಗೆ ಗಮನ ಕೇಂದ್ರೀಕರಿಸಲಾಗುತ್ತದೆ. ಭಾರತದ ಈಗಿನ ಇತಿಹಾಸವು ಭೌಗೋಳಿಕ ಸಾಂಸ್ಕೃತಿಕ ಆಯಾಮದಲ್ಲಿದೆ. ಅದು ಭೌಗೋಳಿಕ ರಾಜಕೀಯ ಆಯಾಮದಲ್ಲಿಲ್ಲ. ಭಾರತದ ಇತಿಹಾಸವನ್ನು ವಸಾಹತುಶಾಹಿ ಅರ್ಥೈಸುವಿಕೆಯಿಂದ ಬದಲಾಯಿಸಬೇಕಾದ ಅಗತ್ಯವಿದೆ. ಆ ಕೆಲಸವನ್ನು ಈ ಯೋಜನೆ ಮೂಲಕ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಭಾರತೀಯರಲ್ಲಿ ಪ್ರತ್ಯೇಕತೆಯ ಭಾವ ಹೆಚ್ಚಿಸುವ ವಸಾಹತುಸಾಹಿ ಅರ್ಥೈಸುವಿಕೆ ಇತಿಹಾಸ

“ಭಾರತದ ಎಲ್ಲ ರಾಜವಂಶಗಳಿಗೆ ಸಮಾನ ಪ್ರಾತಿನಿಧ್ಯವನ್ನು ನೀಡುವ ಮೂಲಕ ಭಾರತದ ದೇಶೀಯ ಮೂಲಗಳನ್ನು ಬಳಸಿಕೊಂಡು ಭಾರತೀಯ ಇತಿಹಾಸವನ್ನು ಪುನಃ ಬರೆಯುವ ಕೆಲಸ ನಡೆಯುತ್ತಿದೆ. ಇಲ್ಲಿಯವರೆಗೆ ಇತಿಹಾಸದ ಪುಟಗಳಲ್ಲಿ ತಪ್ಪಿಸಿಕೊಂಡ ಅಥವಾ ಉದ್ದೇಶಪೂರ್ವಕವಾಗಿ ಬದಿಗಿಟ್ಟವರಿಗೆ ಸರಿಯಾದ ಮಾನ್ಯತೆ ನೀಡಲು ಇದನ್ನು ಕೈಗೆತ್ತಿಕೊಳ್ಳಲಾಗಿದೆ”ಎಂದು ಅವರು ಹೇಳಿದರು.

"ವಸಾಹತುಶಾಹಿ ಇತಿಹಾಸವು ಜನರ ಮನಸ್ಸನ್ನು ಪ್ರತ್ಯೇಕಿಸಲು ಪ್ರಯತ್ನಿಸಿದೆ ಮತ್ತು ಜನರಲ್ಲಿ 'ಪ್ರತ್ಯೇಕತಾವಾದಿ' ಪ್ರವೃತ್ತಿಯನ್ನು ಪೋಷಿಸಿದೆ. ನಾವು ಅಂತಹ ಸಮಸ್ಯೆಗಳನ್ನು ಸವಾಲು ಮಾಡಲು ಮತ್ತು ಸರಿಪಡಿಸಲು ಬಯಸುತ್ತೇವೆ. ಇಂದಿನ ಅಸ್ಸಾಂನ ಅಹೋಮ್ ರಾಜವಂಶ, ದೇವಗಿರಿಯ ಯಾದವ ರಾಜವಂಶ, ರಾಷ್ಟ್ರಕೂಟ ರಾಜವಂಶ ಮತ್ತು ಕದಂಬ ರಾಜವಂಶ ಸೇರಿದಂತೆ ಇಲ್ಲಿಯವರೆಗೆ "ನಿರ್ಲಕ್ಷಿಸಲ್ಪಟ್ಟ" ರಾಜವಂಶಗಳ ಬಗ್ಗೆ ಬರೆಯುವ ಅಗತ್ಯವಿದೆ" ಎಂದು ಕದಮ್ ಹೇಳಿದರು.

ಈ ಯೋಜನೆಯು ಐತಿಹಾಸಿಕ ಚಳವಳಿಗಳನ್ನು "ಸರಿಯಾದ ರೀತಿಯಲ್ಲಿ" ಪ್ರಸ್ತುತಪಡಿಸುತ್ತದೆ. ಹಾಲಿ ಇತಿಹಾಸದಲ್ಲಿ ಅದನ್ನು "ಯುರೋಪ್‌ ಕೇಂದ್ರಿತ" ರೀತಿಯಲ್ಲಿ ಬರೆಯಲಾಗಿದೆ. ಇದು ಭಾರತೀಯ ಇತಿಹಾಸವನ್ನು "ನಿರುತ್ಸಾಹಗೊಳಿಸುವಿಕೆ ಮತ್ತು ಕಳಂಕಕ್ಕೆ" ಕಾರಣವಾಗುವಂತಿದೆ ಎಂದು ಕದಮ್‌ ವಿವರಿಸಿದರು.

"ಉದಾಹರಣೆಗೆ, ಭಕ್ತಿ ಚಳುವಳಿ ಕೇವಲ ಆಧ್ಯಾತ್ಮಿಕ ಪ್ರಸರಣದ ಬಗ್ಗೆ ಅಲ್ಲ. ಎಲ್ಲರೂ ಸಮಾನರು ಮತ್ತು ಜಾತಿ, ಜನಾಂಗ ಮತ್ತು ಜನಾಂಗದ ವಿಷಯದಲ್ಲಿ ಯಾರೂ ತಾರತಮ್ಯ ಮಾಡಬಾರದು ಎಂದು ಜನರಿಗೆ ಅರ್ಥವಾಯಿತು. ಭಕ್ತಿ ಆಂದೋಲನವನ್ನು ವಸಾಹತುಶಾಹಿ ಮತ್ತು ಮಾರ್ಕ್ಸ್‌ವಾದಿ ಇತಿಹಾಸಕಾರರು ಸರಿಯಾದ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಂಡಿಲ್ಲ,” ಎಂದು ಕದಂ ಹೇಳಿದರು.

IPL_Entry_Point