ಚೀನಾದಲ್ಲಿ ನಿಲ್ಲದ ಕೋವಿಡ್ ಸಂಕಟ;ಹೊಸ ತಳಿ ತಂದ ಆತಂಕ
ಜೂನ್ ಅಂತ್ಯದ ಹೊತ್ತಿಗೆ ಕೋವಿಡ್ ಪ್ರಕರಣಗಳು ಉತ್ತುಂಗಕ್ಕೆ ಹೋಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಎಕ್ಸ್ ಬಿಬಿ ಎನ್ನುವ ಹೊಸ ತಳಿಯ ವೈರಸ್‌ನಿಂದಾಗಿ ಸೋಂಕಿಗೆ ಒಳಗಾಗುವವರ ಸಂಖ್ಯೆ ಅಧಿಕವಾಗಿದೆ. ಕಳೆದ ಚಳಿಗಾಲದಲ್ಲಿ ಚೀನಾ ದೇಶ ಶೂನ್ಯ ಕೋವಿಡ್ ಘೋಷಣೆ ಮಾಡಿತ್ತು. ಆನಂತರ ಪ್ರಕರಣಗಳಲ್ಲಿ ಇಳಿಮುಖವಾಗಿತ್ತು.
ಬೀಜಿಂಗ್: ಚೀನಾದಲ್ಲಿ ಕೋವಿಡ್ ಆತಂಕ ಮತ್ತೆ ಹೆಚ್ಚಾಗಿದೆ.
ಹೊಸ ತಳಿಯ ವೈರಾಣುವಿನಿಂದಾಗಿ ಚೀನಾದಲ್ಲಿ ಒಂದು ವಾರದಲ್ಲೇ 65 ಮಿಲಿಯನ್( 65 ಕೋಟಿ) ಪ್ರಕರಣ ದಾಖಲಾಗುವ ಆತಂಕ ಎದುರಾಗಿದೆ.
ಜೂನ್ ಅಂತ್ಯದ ಹೊತ್ತಿಗೆ ಕೋವಿಡ್ ಪ್ರಕರಣಗಳು ಉತ್ತುಂಗಕ್ಕೆ ಹೋಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.
ಎಕ್ಸ್ ಬಿಬಿ ಎನ್ನುವ ಹೊಸ ತಳಿಯ ವೈರಸ್‌ನಿಂದಾಗಿ ಸೋಂಕಿಗೆ ಒಳಗಾಗುವವರ ಸಂಖ್ಯೆ ಅಧಿಕವಾಗಿದೆ. ಕಳೆದ ಚಳಿಗಾಲದಲ್ಲಿ ಚೀನಾ ದೇಶ ಶೂನ್ಯ ಕೋವಿಡ್ ಘೋಷಣೆ ಮಾಡಿತ್ತು. ಆನಂತರ ಪ್ರಕರಣಗಳಲ್ಲಿ ಇಳಿಮುಖವಾಗಿತ್ತು. ಈಗ ಪ್ರಕರಣಗಳ ಏರಿಕೆಯಿಂದ ಆಡಳಿತ ಲಸಿಕೆ ನೀಡುವಿಕೆ ಸೇರಿದಂತೆ ಪರ್ಯಾಯ ವ್ಯವಸ್ಥೆಗಳ ಕುರಿತು ಚಟುವಟಿಕೆ ಆರಂಭಿಸಿದೆ.
ಮೂರು ವರ್ಷದ ಹಿಂದೆ ಚೀನಾದಲ್ಲಿ ಉಂಟಾದ ಜೀವಹಾನಿಯನ್ನು ತಗ್ಗಿಸುವ ಜತೆಗೆ ಹಿರಿಯರು ಸೋಂಕಿಗೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದು, ಹೊಸ ತಳಿಯ ಅನಾಹುತ ತಪ್ಪಿಸುವ ಲಸಿಕೆ ಉತ್ಪಾದನೆಗೂ ಅನುಮತಿ ನೀಡಲಾಗಿದೆ.
ಆಸ್ಪತ್ರೆಗಳಲ್ಲೂ ಲಸಿಕೆ ಸಂಗ್ರಹಕ್ಕೂ ಒತ್ತು ಕೊಡಲಾಗಿದೆ ಎಂದು ಸರ್ಕಾರದ ಪ್ರತಿನಿಧಿಗಳು ತಿಳಿಸಿದ್ದಾರೆ.
ಹಿಂದಿನ ಚಳಿಗಾಲದಲ್ಲಿ ಉಂಟಾದ ಆತಂಕದ ವಾತಾವರಣ, ಆಸ್ಪತ್ರೆಗೆ ಆಗಮಿಸುವವರ ಸಂಖ್ಯೆ ಇಲ್ಲವಾದರೂ ಜನ ಭಯಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎನ್ನುವುದು ತಜ್ಞರ ವಿವರಣೆ.