ಕನ್ನಡ ಸುದ್ದಿ  /  Nation And-world  /  Covid-19 Infection Raises Diabetes Risk: Research

COVID-19 diabetes risk: ಕೊರೊನಾ ಸೋಂಕಿತರಿಗೆ ಟೈಪ್‌ 2 ಮಧುಮೇಹದ ಆಪಾಯ ಹೆಚ್ಚು, ಹೃದಯಕ್ಕೂ ತೊಂದರೆ ಎಂದ ಸಂಶೋಧನೆ

ಕೋವಿಡ್‌ 19 (COVID-19 )ಸೋಂಕಿಗೆ ಈಡಾದ ವ್ಯಕ್ತಿಗಳಿಗೆ ಹೊಸದಾಗಿ ಮಧುಮೇಹ ಕಾಯಿಲೆ (diabetes risk) ಆರಂಭವಾಗುವ ಅಪಾಯ ಹೆಚ್ಚಿದೆ ಎಂದು ಸೆಡಾರ್ಸ್-ಸಿನೈ ಹಾರ್ಟ್‌ ಇನ್‌ಸ್ಟಿಟ್ಯೂಟ್‌ನ (Cedars-Smidt Sinai's Heart Institute) ಸಂಶೋಧಕರು ಖಚಿತಪಡಿಸಿದ್ದಾರೆ.

COVID-19 diabetes risk: ಕೊರೊನಾ ಸೋಂಕಿತರಿಗೆ ಟೈಪ್‌ 2 ಮಧುಮೇಹದ ಆಪಾಯ ಹೆಚ್ಚು, ಹೃದಯಕ್ಕೂ ತೊಂದರೆ ಎಂದ ಸಂಶೋಧನೆ
COVID-19 diabetes risk: ಕೊರೊನಾ ಸೋಂಕಿತರಿಗೆ ಟೈಪ್‌ 2 ಮಧುಮೇಹದ ಆಪಾಯ ಹೆಚ್ಚು, ಹೃದಯಕ್ಕೂ ತೊಂದರೆ ಎಂದ ಸಂಶೋಧನೆ

ವಾಷಿಂಗ್ಟನ್‌: ಕೋವಿಡ್‌ 19 (COVID-19 )ಸೋಂಕಿಗೆ ಈಡಾದ ವ್ಯಕ್ತಿಗಳಿಗೆ ಹೊಸದಾಗಿ ಮಧುಮೇಹ ಕಾಯಿಲೆ (diabetes risk) ಆರಂಭವಾಗುವ ಅಪಾಯ ಹೆಚ್ಚಿದೆ ಎಂದು ಸೆಡಾರ್ಸ್-ಸಿನೈ ಹಾರ್ಟ್‌ ಇನ್‌ಸ್ಟಿಟ್ಯೂಟ್‌ನ (Cedars-Smidt Sinai's Heart Institute) ಸಂಶೋಧಕರು ಖಚಿತಪಡಿಸಿದ್ದಾರೆ. ಈ ಬಗೆಯ ಮಧುಮೇಹವು ಹೃದಯದ ರಕ್ತನಾಳದ ಕಾಯಿಲೆಗೆ (cardiovascular disease) ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

"COVID-19 ಸೋಂಕಿನ ನಂತರ ಟೈಪ್ 2 ಮಧುಮೇಹ ಉಂಟಾಗುವ ಅಪಾಯವು ಕೇವಲ ನಮ್ಮ ಆರಂಭಿಕ ಅವಲೋಕನವಲ್ಲ. ಸಾಕಷ್ಟು ಫಲಿತಾಂಶಗಳ ಪ್ರಕಾರ ಕೊರೊನಾ ಸೋಂಕಿನಿಂದ ಮಧುಮೇಹ ಉಂಟಾಗುವ ಸಾಧ್ಯತೆ ಹೆಚ್ಚಿರುವುದನ್ನು ನಮ್ಮ ಸಂಶೋಧನೆ ಖಚಿತಪಡಿಸಿದೆ. ಈಗಿನ ಓಮಿಕ್ರಾನ್ ಯುಗದಲ್ಲಿ ಈ ಅಪಾಯ ಇನ್ನೂ ಹೆಚ್ಚಾಗಿದೆ" ಎಂದು ಈ ಇನ್‌ಸ್ಟಿಟ್ಯೂಟ್‌ನ ವ್ಯವಸ್ಥಾಪಕ ನಿರ್ದೇಶಕರಾದ ಅಲನ್ ಕ್ವಾನ್ ಹೇಳಿದ್ದಾರೆ.

ಈಗಲೂ ಬಹುತೇಕರು ಕೋವಿಡ್‌ 19 ಸೋಂಕಿನ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. "ನಮ್ಮ ಸಂಶೋಧನೆಯು ಕಾರ್ಡಿಯೊವಾಸ್ಕ್ಯುಲರ್‌ ಕಾಯಿಲೆಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ನೆರವಾಗುತ್ತದೆʼʼ ಎಂದು ಕ್ವಾನ್‌ ಹೇಳಿದ್ದಾರೆ.

ಮಧುಮೇಹದ ಹೆಚ್ಚುತ್ತಿರುವ ದರವನ್ನು ನಿರ್ಧರಿಸಲು ಸಂಶೋಧಕರು 23,709 ವಯಸ್ಕ ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಮೌಲ್ಯಮಾಪನ ಮಾಡಿದ್ದಾರೆ. ಇವರೆಲ್ಲರಿಗೂ ಒಮ್ಮೆ ಕೊರೊನಾ ಸೋಂಕು ಬಂದಿತ್ತು. ಇವರು 2020-2022 ರಲ್ಲಿ ಲಾಸ್ ಏಂಜಲೀಸ್‌ನ ಸೆಡಾರ್ಸ್-ಸಿನೈ ಹೆಲ್ತ್ ಸಿಸ್ಟಮ್‌ನಲ್ಲಿ ಚಿಕಿತ್ಸೆ ಪಡೆದರು. ಪ್ರತಿಯೊಬ್ಬರೂ ಸರಾಸರಿ 47 ವರ್ಷ ವಯಸ್ಸಿನವನಾಗಿದ್ದರು. ಇವರಲ್ಲಿ 54% ರಷ್ಟು ಮಹಿಳೆಯರಿದ್ದರು.

ಕೊರೊನಾ ಲಸಿಕೆ ಪಡೆದವರು ಮತ್ತು ಪಡೆಯದವರಿಗೂ ಡಯಾಬಿಟೀಸ್‌ ಅಪಾಯ ಇರುವುದನ್ನು ಈ ಅಧ್ಯಯನ ಕಂಡುಕೊಂಡಿದೆ. ಕೊರೊನಾ ಪೂರ್ವದಲ್ಲಿ ಡಯಾಬಿಟೀಸ್‌ ಅಪಾಯವಿದ್ದರೆ, ಕೊರೊನಾ ಬಳಿಕ ಶೇಕಡ 70ರಷ್ಟು ಡಯಾಬಿಟೀಸ್‌ ಅಪಾಯ ಹೆಚ್ಚಾಗಿರುವುದನ್ನು ಈ ಅಧ್ಯಯನ ಕಂಡುಕೊಂಡಿದೆ.

ಲಸಿಕೆ ಹಾಕದ ರೋಗಿಗಳಿಗೆ COVID-19 ಸೋಂಕು ಬಂದ ಬಳಿಕ ಟೈಪ್ 2 ಡಯಾಬಿಟಿಸ್‌ನ ಅಪಾಯವು 2.7% ಆಗಿತ್ತು, ಇವರಲ್ಲಿ 74% ಜನರಿಗೆ COVID-19 ಸೋಂಕು ಕಾಣಿಸಿಕೊಂಡ ಬಳಿಕ ಡಯಾಬಿಟೀಸ್‌ ಬಂದಿತ್ತು.

ವಿವಾಹವಾದ್ರೆ ಬ್ಲಡ್‌ ಶುಗರ್‌ ಕಡಿಮೆಯಾಗುತ್ತೆ, ಬೇಕಿಲ್ಲ ಮಧುಮೇಹ ಚಿಂತೆ

ರಕ್ತದಲ್ಲಿ ಸಕ್ಕರೆ ಮಟ್ಟವನ್ನು ತಗ್ಗಿಸುವಲ್ಲಿ ಮದುವೆ ಅಥವಾ ಸಹಬಾಳ್ವೆ ನೆರವಾಗಬಹುದು ಎಂದಿದೆ ನೂತನ ಅಧ್ಯಯನ. ಇದಕ್ಕೆ ಸಂಬಂಧಪಟ್ಟಂತೆ ಅಧ್ಯಯನ ವರದಿಯೊಂದು ಬಿಎಂಜೆ ಓಪನ್ ಡಯಾಬಿಟಿಸ್ ರಿಸರ್ಚ್ & ಕೇರ್ ಜರ್ನಲ್‌ ಆನ್‌ಲೈನ್‌ನಲ್ಲಿ ಪ್ರಕಟವಾಗಿದೆ. ನೀವು ಮದುವೆಯಾದ ಬಳಿಕ ಸಂಗಾತಿಯ ಜತೆ ಅನ್ಯೋನ್ಯವಾಗಿದ್ದೀರೋ, ದಿನಾ ಜಗಳ ಇರುತ್ತೋ ಮುಖ್ಯವಲ್ಲ, ನಿಮ್ಮ ಹೊಂದಾಣಿಕೆ, ಬಾಳ್ವೆ ಹೇಗಿದ್ದರೂ ರಕ್ತದ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಮತ್ತು ಆರೋಗ್ಯವಾಗಿರಲು ಒಬ್ಬಳು/ಒಬ್ಬ ಸಂಗಾತಿಯ ಜತೆ ಇರುವುದು ನೆರವಾಗಬಹುದು ಎಂದು ಈ ಅಧ್ಯಯನ ಹೇಳಿದೆ. ಯಾರು ತಮ್ಮ ಸಂಗಾತಿಯ ಜತೆ ಜೀವಿಸುವವರೋ ಅವರಲ್ಲಿ ರಕ್ತದ ಸಕ್ಕರೆ ಮಟ್ಟದ ಪ್ರಮಾಣ ಕಡಿಮೆ ಇರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಈ ಅಧ್ಯಯನ ಹೇಳಿದೆ. ಸಂಪೂರ್ಣ ವರದಿ ಓದಿ.

IPL_Entry_Point