ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gst On Petrol And Diesel: ಶೀಘ್ರವೇ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌ ಮತ್ತು ಡೀಸೆಲ್‌?; ಕೇಂದ್ರ ವಿತ್ತ ಸಚಿವರು ಇಂದು ಹೇಳಿದ್ದೇನು?

GST on Petrol and Diesel: ಶೀಘ್ರವೇ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌ ಮತ್ತು ಡೀಸೆಲ್‌?; ಕೇಂದ್ರ ವಿತ್ತ ಸಚಿವರು ಇಂದು ಹೇಳಿದ್ದೇನು?

GST on Petrol and Diesel: ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟ ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವ ವಿಚಾರ ಸಾರ್ವಜನಿಕವಾಗಿ ಬಹಳ ಚರ್ಚೆಯಲ್ಲಿರುವಂಥದ್ದು. ಕೇಂದ್ರ ವಿತ್ತ ಸಚಿವರು ಬುಧವಾರ ಈ ವಿಚಾರ ಪ್ರಸ್ತಾಪಿಸಿರುವುದು ದೇಶದ ಗಮನಸೆಳೆದಿದೆ. ಯಾವಾಗದಿಂದ ಇದು ಜಾರಿ ಎಂಬ ಕುತೂಹಲವೂ ಹೆಚ್ಚಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (PTI)

ಪೆಟ್ರೋಲ್‌ ಮತ್ತು ಡೀಸೆಲ್‌ ಸೇರಿ ಪೆಟ್ರೋಲಿಯಂ ಉತ್ಪನ್ನಗಳು ಶೀಘ್ರವೇ ಜಿಎಸ್‌ಟಿ ವ್ಯಾಪ್ತಿಗೆ ಬರಲಿದೆ. ಇಂತಹದೊಂದು ಸುಳಿವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ನೀಡಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ ಕೆಲವೇ ತಿಂಗಳ ಅಂತರದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಸುಳಿವು ನೀಡಿದರು.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬುಧವಾರ ಕೈಗಾರಿಕಾ ಸಂಘಟನೆ ಪಿಎಚ್‌ಡಿಸಿಸಿಐನ ಸದಸ್ಯರ ಜತೆಗೆ ಪೋಸ್ಟ್‌ ಬಜೆಟ್‌ ಮಾತುಕತೆ ನಡೆಸುತ್ತಿದ್ದಾಗ ಈ ಸುಳಿವು ನೀಡಿದರು. ರಾಜ್ಯಗಳ ನಡುವೆ ಒಪ್ಪಂದ ಏರ್ಪಟ್ಟರೆ ಈ ಕೆಲಸ ಸುಗಮವಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ರಾಜ್ಯಗಳು ಒಪ್ಪಿಗೆ ನೀಡಿದರೆ ಕೇಂದ್ರ ಸರ್ಕಾರವು "ಯಾವುದೇ ಸಮಯದಲ್ಲೂ‌ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಸಿದ್ಧವಾಗಿದೆ" ಎಂದು ಸಚಿವ ಪುರಿ 2022ರ ನವೆಂಬರ್‌ನಲ್ಲಿ ನೀಡಿದ ಹೇಳಿಕೆಯನ್ನು ವಿತ್ತ ಸಚಿವರ ಹೇಳಿಕೆ ಪ್ರತಿಧ್ವನಿಸಿದೆ. ಆದರೆ ಅಂತಹ ನಿರ್ಧಾರವನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎಂಬುದರ ಕುರಿತು ಆಡಳಿತವು ಯಾವುದೇ ಸೂಚನೆಯನ್ನು ನೀಡಿಲ್ಲ.

"ರಾಜ್ಯಗಳು ಇದರಿಂದ ಆದಾಯವನ್ನು ಪಡೆಯುತ್ತಿವೆ. ಆದಾಯವನ್ನು ಪಡೆಯುವವರು ಅದನ್ನು ಏಕೆ ಬಿಡುತ್ತಾರೆ? ಮದ್ಯ ಮತ್ತು ಇಂಧನ ಆದಾಯವನ್ನು ಗಳಿಸುವ ಎರಡು ಉತ್ಪನ್ನಗಳು. ಹಣದುಬ್ಬರ ಮತ್ತು ಇತರ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಮಾತ್ರ ಚಿಂತಿಸುತ್ತಿದೆ ಎಂದು ಪುರಿ ಅಂದು ವಿವರಿಸಿದ್ದರು.

ವರ್ಷಗಳಲ್ಲಿ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಿದೆ. ವಿದ್ಯುತ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಮುಂದುವರಿಸಲು ಮತ್ತು 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಯೋಜನೆಯನ್ನು ಜಾರಿಗೆ ತರಲು ರಾಜ್ಯಗಳನ್ನು ಒತ್ತಾಯಿಸಲಾಗುತ್ತಿದೆ ಎಂದು ಸೀತಾರಾಮನ್ ಬುಧವಾರ ಹೇಳಿದರು.

"ಕಳೆದ ಮೂರು-ನಾಲ್ಕು ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕ ಬಂಡವಾಳ ವೆಚ್ಚಕ್ಕೆ ಒತ್ತು ನೀಡಲಾಗುತ್ತಿದೆ. ಈ ಬಜೆಟ್‌ನಲ್ಲಿ ನಾವು ಅದನ್ನು ಉಳಿಸಿಕೊಂಡಿದ್ದೇವೆ ... ಬಂಡವಾಳ ವೆಚ್ಚವನ್ನು ಈ ಬಜೆಟ್‌ನ ನಿಜವಾದ ಗಮನ ಎಂದು ಸ್ಪಷ್ಟವಾಗಿ ಹೇಳಬಹುದು" ಎಂದು ಅವರು ಹೇಳಿದರು.

2023-24ರ ಬಜೆಟ್‌ನಲ್ಲಿ ಸರ್ಕಾರವು ಬಂಡವಾಳ ವೆಚ್ಚವನ್ನು ಶೇಕಡ 33 ಏರಿಸಿ 10 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಿದೆ ಎಂದು ಸೀತಾರಾಮನ್ ಹೇಳಿದರು.

ಈ ವರ್ಷ ಜನವರಿಯಲ್ಲಿ ಜಿಎಸ್‌ಟಿಯ ಒಟ್ಟು ಆದಾಯವು 1,55,922 ಕೋಟಿ ರೂಪಾಯಿ ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಇದು ಮೂರನೇ ಬಾರಿಗೆ, ಜಿಎಸ್‌ಟಿ ಸಂಗ್ರಹವು 1.50 ಲಕ್ಷ ಕೋಟಿ ರೂಪಾಯಿ ಗಡಿ ದಾಟಿದೆ. ಈ ವರ್ಷದ ಜನವರಿ ತಿಂಗಳ GST ಸಂಗ್ರಹವು 2022ರ ಏಪ್ರಿಲ್‌ ತಿಂಗಳ ನಂತರದ ಎರಡನೇ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಏಪ್ರಿಲ್ 2022 ರಲ್ಲಿ ವರದಿಯಾದ ಸಂಗ್ರಹದ ನಂತರದ ಎರಡನೇ ಅತಿ ಹೆಚ್ಚು ಸಂಗ್ರಹವಾಗಿದೆ.

(ಏಜೆನ್ಸಿಗಳ ಮಾಹಿತಿಯೊಂ

IPL_Entry_Point