ಕನ್ನಡ ಸುದ್ದಿ  /  Nation And-world  /  India News How Ied Works Naxals Use Ied To Kill Security Forces In Chhattisgarh Improvised Explosive Device Nkn

IED Challenge: ಭಾರತದ ಭದ್ರತಾ ಪಡೆಗಳಿಗೆ ದುಸ್ವಪ್ನವಾಗಿರುವ ಐಇಡಿ; ನಕ್ಸಲ್, ಉಗ್ರರ ನಿಯಂತ್ರಣಕ್ಕೆ ಇದು ಹೊಸ ಸವಾಲು

ಐಇಡಿ (ಸುಧಾರಿತ ಸ್ಪೋಟಕ ಸಾಧನ) ಎಂಬುದು ನಿಜಕ್ಕೂ ಒಂದು ಮಾರಣಾಂತಿಕ ಸಾಧನ. ಸ್ಫೋಟಕಗಳನ್ನು ಬಳಸಿ ವೈರಿಗಳನ್ನು ಕೊಲ್ಲಲು ಬಳಸುವ ಈ ಸಾಧನ, ಜಾಗತಿಕ ಮಿಲಿಟರಿ ಕಾರ್ಯಾಚರಣೆಯಲ್ಲಿ ಹೆಚ್ಚಾಗಿ ಬಳಸಲ್ಪಡುತ್ತದೆ. ಆದರೆ ಈ ಸಾಧನ ಉಗ್ರರು, ಸಮಾಜಘಾತುಕ ಶಕ್ತಿಗಳು ಹಾಗೂ ನಕ್ಸಲರ ಕೈ ಸೇರಿರುವುದು ನಿಜಕ್ಕೂ ದುರಂತ. ಐಇಡಿ ಕುರಿತಾದ ವಿಸ್ತೃತ ಮಾಹಿತಿ ಇಲ್ಲಿದೆ..

ಹುದುಗಿಸಿ ಇಡಲಾಗಿದ್ದ ಐಇಡಿ ಸ್ಫೋಟಕ
ಹುದುಗಿಸಿ ಇಡಲಾಗಿದ್ದ ಐಇಡಿ ಸ್ಫೋಟಕ (ANI)

ನವದೆಹಲಿ: ಛತ್ತೀಸ್‌ಗಢದ ದಂತೇವಾಡದಲ್ಲಿ (Dantewada) ಮತ್ತೆ ನಕ್ಸಲೀಯರು ಅಟ್ಟಹಾಸ ಮೆರೆದಿದ್ದು, ರಾಜ್ಯ ಪೊಲೀಸ್‌ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ವಾಹನದ ಮೇಲೆ ದಾಳಿ ನಡೆಸಿದ ಪರಿಣಾಮ,10 ಪೊಲೀಸರು ಹುತಾತ್ಮರಾಗಿದ್ದಾರೆ. ಐಇಡಿ (ಸುಧಾರಿತ ಸ್ಪೋಟಕ ಸಾಧನ) ಬಳಸಿ ನಕ್ಸಲರು ದಾಳಿ ನಡೆಸಿದ್ದು, ಈ ಮಾರಣಾಂತಿಕ ಸಾಧನದ ಕಾರ್ಯವೈಖರಿ ಬಗ್ಗೆ ಇದೀಗ ಚರ್ಚೆಗಳು ಆರಂಭವಾಗಿವೆ.

ಹೌದು, ಐಇಡಿ (ಸುಧಾರಿತ ಸ್ಪೋಟಕ ಸಾಧನ) ಎಂಬುದು ನಿಜಕ್ಕೂ ಒಂದು ಮಾರಣಾಂತಿಕ ಸಾಧನ. ಸ್ಫೋಟಕಗಳನ್ನು ಬಳಸಿ ವೈರಿಗಳನ್ನು ಕೊಲ್ಲಲು ಬಳಸುವ ಈ ಸಾಧನ, ಜಾಗತಿಕ ಮಿಲಿಟರಿ ಕಾರ್ಯಾಚರಣೆಯಲ್ಲಿ ಹೆಚ್ಚಾಗಿ ಬಳಸಲ್ಪಡುತ್ತದೆ. ಆದರೆ ಈ ಸಾಧನ ಉಗ್ರರು, ಸಮಾಜಘಾತುಕ ಶಕ್ತಿಗಳು ಹಾಗೂ ನಕ್ಸಲರ ಕೈ ಸೇರಿರುವುದು ನಿಜಕ್ಕೂ ದುರಂತ.

ಐಐಡಿ ಎಂದರೇನು?

ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸಾಂಪ್ರದಾಯಿಕ ಮಿಲಿಟರಿ ಕಾರ್ಯಾಚರಣೆಗೆ ಬಳಸುವ ಶಕ್ತಿಶಾಲಿ ಬಾಂಬ್‌ ಆಗಿದೆ. ಇದನ್ನು ಆರ್ಟಿಲರಿ ಶೆಲ್‌ನಂತಹ ಸಾಂಪ್ರದಾಯಿಕ ಮಿಲಿಟರಿ ಸ್ಫೋಟಕಗಳಿಂದ ನಿರ್ಮಿಸಬಹುದಾಗಿದೆ. ಸ್ಥಳೀಯವಅಗಿ ತಯಾರಿಸಿದ ಬಾಂಬ್‌ಗಳನ್ನೂ ಐಐಡಿ ಸ್ಫೋಟಕ ಸಾಧನವನ್ನಾಗಿ ಪರಿವರ್ತಿಸಲು ಸಾಧ್ಯವಿದೆ.

"ಐಇಡಿ" ಎಂಬ ಪದವನ್ನು ಉತ್ತರ ಐರ್ಲೆಂಡ್ ಸಂಘರ್ಷದ ಸಮಯದಲ್ಲಿ, ಐಆರ್‌ಎ ಸಂಶೋಧಿಸಿದ್ದ ಮಾರಣಾಂತಿಕ ಸ್ಫೋಟಕವನ್ನು ಗುರುತಿಸಲು ಬ್ರಿಟಿಷ್‌ ಸೈನ್ಯವು ಮೊದಲ ಬಾರಿಗೆ ಬಳಸಿತ್ತು. ನಂತರ ಇದು ಅಮೆರಿಕದ ಸೇನೆಯಲ್ಲಿ ಜನಪ್ರಿಯತೆ ಪಡೆದುಕೊಂಡಿತು. ಪ್ರಸ್ತುತ ವಿಶ್ವದ ಎಲ್ಲಾ ದೇಶಗಳ ಮಿಲಟರಿಯಲ್ಲಿ ಐಇಡಿ ಸ್ಫೋಟಕಗಳನ್ನು ಬಳಸಲಾಗುತ್ತದೆ.

ಐಇಡಿಗಳನ್ನು ಸಾಮಾನ್ಯವಾಗಿ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ಅಥವಾ ಕಮಾಂಡೋ ಪಡೆಗಳ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತದೆ. ಇರಾಕ್ ಯುದ್ಧದ ಸಮಯದಲ್ಲಿ (2003–2011) ಇರಾಕ್‌ ಸೇನೆ ಮತ್ತು ದಂಗೇಕೋರರು, ಅಮೆರಿಕ ನೇತೃತ್ವದ ಪಡೆಗಳ ವಿರುದ್ಧ ಐಇಡಿಗಳನ್ನು ವ್ಯಾಪಕವಾಗಿ ಬಳಸಿತ್ತು. 2007ರ ಅಂತ್ಯದ ವೇಳೆಗೆ ಐಇಡಿ ದಾಳಿಯಿಂದ ಇರಾಕ್‌ನಲ್ಲಿ ಸುಮಾರು ಶೇ. 63 ರಷ್ಟು ಸಾವು ಸಂಭವಿಸಿದ್ದವು ಎಂದು ವರದಿಯೊಂದು ಹೇಳುತ್ತದೆ.

ಶ್ರೀಲಂಕಾದ ಅಂತರ್ಯುದ್ಧದ ಸಮಯದಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಕೂಡ ಐಇಡಿಗಳನ್ನು ಬಳಸಿತ್ತು. ಐಇಡಿ ಎಂಬುದು ವಿನಾಶಕಾರಿ ಪೈರೋಟೆಕ್ನಿಕ್ ಅಥವಾ ಬೆಂಕಿಯಿಡುವ ರಾಸಾಯನಿಕಗಳನ್ನು ಸಂಯೋಜಿಸುವ ಸುಧಾರಿತ ರೀತಿಯಲ್ಲಿ ತಯಾರಿಸಿದ ಬಾಂಬ್ ಆಗಿದೆ. ಕೆಲವು ಸಂದರ್ಭಗಳಲ್ಲಿ, ಐಇಡಿಗಳನ್ನು ಗಳನ್ನು ವಿಚಲಿತಗೊಳಿಸಲು, ಅಡ್ಡಿಪಡಿಸಲು ಅಥವಾ ಎದುರಾಳಿ ಬಲವನ್ನು ಕುಗ್ಗಿಸಲು ಬಳಸಲಾಗುತ್ತದೆ.

ಐಇಡಿಯು ಸ್ವಿಚ್ (ಆ್ಯಕ್ಟಿವೇಟರ್), ಇನಿಶಿಯೇಟರ್ (ಫ್ಯೂಸ್), ಕಂಟೇನರ್, ಚಾರ್ಜ್ (ಸ್ಫೋಟಕ), ಮತ್ತು ವಿದ್ಯುತ್ ಮೂಲ (ಬ್ಯಾಟರಿ) ಎಂಬ ಐದು ಘಟಕಗಳನ್ನು ಹೊಂದಿದೆ. ಶತ್ರು ಪಡೆಯ ವಾಹನ ಅಥವಾ ಟ್ಯಾಂಕ್‌ಗಳಂತಹ ಶಸ್ತ್ರಸಜ್ಜಿತ ಗುರಿಗಳನ್ನು ನಾಶಪಡಿಸಲು ಐಇಡಿಗಳನ್ನು ಬಳಸಲಾಗುತ್ತದೆ.

ಐಇಡಿ ನಿಷ್ಕ್ರೀಯಗೊಳಿಸುವುದು ಏಕೆ ಕಷ್ಟ?

ಐಇಡಿ ಎಂಬ ಮಾರಣಾಂತಿಕ ಸಾಧನವನ್ನು ಗುರುತಿಸುವುದು ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಇದನ್ನು ನೆಲದಡಿ, ವಾಹನಗಳಲ್ಲಿ, ಪ್ರಾಣಿಗಳ ದೇಹದಲ್ಲಿ, ರೋಬೋಟಿಕ್‌ ಮಷಿನ್‌ಗಳಲ್ಲಿ, ಮೊಬೈಲ್‌ ಫೋನ್‌ಗಳಲ್ಲಿ ಅಷ್ಟೇ ಏಕೆ ಶಸ್ತ್ರಚಿಕಿತ್ಸೆ ಮೂಲಕ ಮಾನವರ ದೇಹದಲ್ಲೂ ಅಳವಡಿಸಬಹುದಾಗಿದೆ. ಅಲ್ಲದೇ ರಿಮೋಟ್‌ ಕಂಟ್ರೋಲ್‌ ಮೂಲಕ ದೂರದಿಂದಲೇ ಇದನ್ನು ನಿಯಂತ್ರಿಸಿ ಸ್ಫೋಟಿಸಬಹುದಾಗಿದೆ.

ಐಇಡಿ ನಿರ್ಮಾಣಕ್ಕೆ ಬಳಕೆಯಾಗುವ ವಸ್ತುಗಳು ಕೂಡ, ಇದರ ಪತ್ತೆಯನ್ನು ಮತ್ತಷ್ಟು ಕಷ್ಟವಾಗಿಸುತ್ತದೆ. ಸ್ಫೋಟಕ ಸಾಧನಗಳನ್ನು ಗಪತ್ತೆಹಚ್ಚುವ ಸುಧಾರಿತ ತಂತ್ರಜ್ಞಾನದಿಂದಲೂ ಐಇಡಿ ಇರುವ ಕರಾರುವಕ್ಕಾದ ಸ್ಥಳವನ್ನು ಗುರುತಿಸಲು ಸಾಧ್ಯವಿಲ್ಲ. ಹೀಗಾಗಿ ದಂತೇವಾಡದಂತ ದುರ್ಗಮ ಅರಣ್ಯ ಪ್ರದೇಶದಲ್ಲಿ, ನಕ್ಸಲರು ಐಇಡಿಗಳನ್ನು ಸುಲಭವಾಗಿ ಹುದುಗಿಡುತ್ತಾರೆ.

ಛತ್ತೀಸಗಢ ಸವಾಲುಗಳು:

ಛತ್ತೀಸಗಢ ರಾಜ್ಯವು ನಕ್ಸಲ್‌ ಪ್ರಭಾವವಿರುವ ರಾಜ್ಯಗಳಲ್ಲಿ ಒಂದು. ಅದರಲ್ಲೂ ರಾಜ್ಯದ ದಂತೇವಾಡ ದಂಡಕಾರಣ್ಯ ಭಾಗದಲ್ಲಿ ನಕ್ಸಲರು ಹೆಚ್ಚಿನ ಸಂಖ್ಯೆಯಲ್ಲಿ ಬೀಡು ಬಿಟ್ಟಿದ್ದಾರೆ. ಇಲ್ಲಿಂದಲೇ ತಮ್ಮ ಕಾರ್ಯಾಚರಣೆಯ ಯೋಜನೆಗಳನ್ನು ಜಾರಿಗೊಳಿಸುವ ನಕ್ಸಲರು, ಭದ್ರತಾ ಸಿಬ್ಬಂದಿ ಮೇಲೆ ಆಗಾಗ್ಗೆ ಮಾರಣಾಂತಿಕ ದಾಳಿ ಮಾಡುತ್ತಿರುತ್ತಾರೆ.

ನಕ್ಸಲರ ಪತ್ತೆ ಇಲ್ಲಿನ ಭದ್ರತಾ ಸಿಬ್ಬಂದಿಗೆ ಪ್ರಮುಖ ಸವಾಲಾಗಿದೆ. ದಂಡಕಾರಣ್ಯದಲ್ಲಿ ನಕ್ಸಲರ ಗುಪ್ತ ಠಿಕಾಣಿಗಳನ್ನು ಪತ್ತೆಹಚ್ಚಿ, ಅವರ ವಿರುದದ್ಧ ಕಾರ್ಯಾಚರಣೆ ಕೈಗೊಳ್ಳುವುದು ಭದ್ರತಾ ಪಡೆಗಳಿಗೆ ಸವಾಲಿನ ಕೆಲಸವಾಗಿದೆ. ಅದರಲ್ಲೂ ಮಳೆಗಾಲದ ಸಮಯದಲ್ಲಿ, ಈ ದುರ್ಗಮ ರಸ್ತೆಗಳಲ್ಲಿ ಓಡಾಡುವುದೇ ಕಷ್ಟಕರ.

ನಕ್ಸಲರು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಲು ಐಇಡಿ ಸ್ಫೋಟಕಗಳನ್ನೇ ಬಳಸುತ್ತಿದ್ದು, ಇವುಗಳನ್ನು ಪತ್ತೆಹೆಚ್ಚುವ ಕಾರ್ಯ ಭದ್ರತಾ ಪಡೆಗಳಿಗೆ ಭಾರೀ ಸವಾಲಿನದ್ದಾಗಿದೆ. ದುರ್ಗಮ ರಸ್ತೆಗಳಲ್ಲಿ, ಕಾಡು ದಾರಿಗಳಲ್ಲಿ ಐಇಡಿಗಳನ್ನು ಬಚ್ಚಿಡುವ ನಕ್ಸಲರು, ರಿಮೋಟ್‌ ಕಂಟ್ರೋಲ್‌ ಮೂಲಕ ಭದ್ರತಾ ಸಿಬ್ಬಂದಿ ಬಾಹನಗಳ ಮೇಲೆ ಕರಾರುವಕ್ಕಾದ ದಾಳಿ ಮಾಡುತ್ತಾರೆ. ದಂತೇವಾಡಾ ಅರಣ್ಯ ಪ್ರದೇಶದಲ್ಲೇ ಭದ್ರತಾ ಸಿಬ್ಬಂದಿ ಮೇಲೆ ಐಇಡಿ ದಾಳಿಗಳು ಹೆಚ್ಚಾಗಿ ನಡೆಯುತ್ತವೆ.

ಐಇಡಿ ಸ್ಫೋಟಕಗಳನ್ನು ಒಂದರ ಪಕ್ಕ ಒಂದನ್ನು ಸಲಭವಾಗಿ ಜೋಡಿಸಬಹುದಾದ್ದರಿಂದ, ಭಾರೀ ಗಾತ್ರದ ವಾಹನಗಳ ಮೇಲೂ ಭೀಕರ ದಾಳಿ ನಡೆಸುವುದು ಸುಲಭವಾಗಿದೆ. ಈ ಕಾರಣಕ್ಕೆ ನಕ್ಸಲ್‌ ನಿಗ್ರಹ ಪಡೆಗಳು ದಂತೇವಾಡಾ ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ, ನಕ್ಸಲರು ಗುಂಪು ಐಇಡಿ ಸ್ಫೋಟಿಸಿ ಭದ್ರತಾ ಸಿಬ್ಬಂದಿಯ ಸಾವಿಗೆ ಕಾರಣರಾಗುತ್ತಾರೆ.

ಒಟ್ಟಿನಲ್ಲಿ ಐಇಡಿ ಎಂಬ ಮಾರಣಾಂತಿಕ ಸ್ಫೋಟಕ ಸಾಧನವನ್ನು ಬಳಸಿ, ನಕ್ಸಲೀಯರು ನಮ್ಮ ಭದ್ರತಾ ಸಿಬ್ಬಂದಿ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವುದು ನಿಜಕ್ಕೂ ದುರಂತವೇ ಸರಿ. ಮನುಷ್ಯರನ್ನು ಕ್ರೂರವಾಗಿ ಕೊಲ್ಲುವ ಶಸ್ತ್ರಾಸ್ತ್ರಗಳ ಬಳಕೆ ಅದೆಷ್ಟು ಸರಿ ಎಂಬ ಪ್ರಶ್ನೆಯನ್ನು ನಾಗರಿಕ ಸಮಾಜ ಕೇಳಬೇಕಿದೆ.

IPL_Entry_Point

ವಿಭಾಗ