Kannada News  /  Nation And-world  /  Infosys To Layoff 600 Freshers Employees After They Failed Internal Fresher Assessment Test
ಇನ್ಫೋಸಿಸ್ 600 ಮಂದಿ ಫ್ರೆಶರ್ಸ್ ಉದ್ಯೋಗಿಗಳನ್ನು ವಜಾ ಮಾಡಿದೆ.
ಇನ್ಫೋಸಿಸ್ 600 ಮಂದಿ ಫ್ರೆಶರ್ಸ್ ಉದ್ಯೋಗಿಗಳನ್ನು ವಜಾ ಮಾಡಿದೆ.

Infosys layoff: ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಅನುತ್ತೀರ್ಣ; 600 ಮಂದಿ ಫ್ರೆಶರ್ ಗಳನ್ನ ವಜಾ ಮಾಡಿದ ಇನ್ಫೋಸಿಸ್

07 February 2023, 14:10 ISTHT Kannada Desk
07 February 2023, 14:10 IST

Infosys fires 600 freshers: ಇನ್ಫೋಸಿಸ್‌ ಸಂಸ್ಥೆಯಿಂದ 600 ಮಂದಿ ಫ್ರೆಶರ್‌ಗಳನ್ನು ಉದ್ಯೋಗದಿಂದ ವಜಾ ಮಾಡಲಾಗಿದೆ. ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಈ ಫ್ರೆಶರ್‌ಗಳು ಕೆಲಸ ಕಳೆದುಕೊಂಡಿದ್ದಾರೆ.

ಬೆಂಗಳೂರು: ಆರ್ಥಿಕ ಹಿಂಜರಿತದಿಂದಾಗಿ ಜಾಗತಿಕವಾಗಿ ಹಲವು ಕಂಪನಿಗಳು ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಮಂದಿ ಉದ್ಯೋಗಿಗಳನ್ನು ವಜಾ ಮಾಡಿವೆ. ಇದೀಗ ಈ ಪಟ್ಟಿಗೆ ದೇಶ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ಸೇರಿದೆ.

ಟ್ರೆಂಡಿಂಗ್​ ಸುದ್ದಿ

ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಫ್ರೆಶರ್‌ಗಳು ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಕಾರಣ ಅವರನ್ನು ಕಂಪನಿ ವಜಾ ಮಾಡಿದೆ ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ.

ಸಂಸ್ಥೆ ಇತ್ತೀಚೆಗೆ ನಡೆಸಿರುವ ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಅನುತ್ತೀರ್ಣರಾದ 600 ಉದ್ಯೋಗಿಗಳನ್ನು ಇನ್ಫೋಸಿಸ್ ವಜಾ ಮಾಡಿದೆ. ಈ 600 ಹೊಸಬರ ಪೈಕಿ 208 ಮಂದಿಯನ್ನು ಎರಡು ವಾರಗಳ ಹಿಂದೆಯೇ ಕಂಪನಿಯಿಂದ ಹೊರಹಾಕಲಾಗಿದೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷ ಜುಲೈಗೂ ಮೊದಲು ಸೇರ್ಪಡೆಗೊಂಡವರು ಮೌಲ್ಯಮಾಪನ ಪರೀಕ್ಷೆಯಲ್ಲಿ ವಿಫಲರಾಗಿದ್ದರೂ ಸಹ ಅವರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ.

ನಾನು 2022ರ ಆಗಸ್ಟ್ ನಲ್ಲಿ ಕೆಲಸಕ್ಕಾಗಿ ಇನ್ಫೋಸಿಸ್‌ ಗೆ ಸೇರಿದ್ದೆ. ಎಸ್ಎಪಿ ಎಬಿಎಪಿ (SAP ABAP) ಸ್ಟ್ರೀಮ್‌ಗಾಗಿ ತರಬೇತಿ ನೀಡಲಾಗಿದೆ. ನನ್ನ ಗುಂಪಿನ 150 ಜನರಲ್ಲಿ 60 ಮಂದಿ ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಉಳಿದವರನ್ನೆಲ್ಲ ಎರಡು ವಾರಗಳ ಹಿಂದೆ ವಜಾಗೊಳಿಸಲಾಗಿತ್ತು. ಜುಲೈನಲ್ಲಿ ಸೇರಿದ್ದ ಒಟ್ಟು 150 ಜನರಲ್ಲಿ 85 ಮಂದಿಯನ್ನು ಕೈಬಿಡಲಾಗಿದೆ. ಎಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹೊಸಬರ ಪೈಕಿ ಒರ್ವ ಉದ್ಯೋಗಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಆದರೆ ಫ್ರೆಶರ್ಸ್ ಉದ್ಯೋಗಿಗಳನ್ನು ವಜಾಗೊಳಿಸಿರುವ ಸಂಬಂಧ ಇನ್ಫೋಸಿಸ್ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಕೆಲವು ತಿಂಗಳ ಹಿಂದೆ, ಇನ್ಫೋಸಿಸ್ ಕಂಪನಿಯು ಆಂತರಿಕ ಫ್ರೆಶರ್ ಮೌಲ್ಯಮಾಪನ ಪರೀಕ್ಷೆಯನ್ನು ನಡೆಸಿತ್ತು ಎಂದು ಮೂಲಗಳು ಹೇಳಿದೆ.

ಹೊಸಬರು ಈ ಪರೀಕ್ಷೆಯನ್ನು ಬರೆಯಬೇಕು. ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಎರಡು ವಾರಗಳ ಹಿಂದೆ 600 ಫ್ರೆಶರ್‌ಗಳನ್ನು ವಜಾ ಮಾಡಲಾಗಿದೆ ಎಂದು ಇನ್ಫೋಸಿಸ್ ಉನ್ನತ ಉದ್ಯೋಗಿಯೊಬ್ಬರು ಹೇಳಿದ್ದಾರೆ. ಇವರೆಲ್ಲರೂ 8 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಕಂಪನಿಯ ಜಾಬ್ ಆಫರ್ ಸ್ವೀಕರಿಸಿ ಕೆಲಸಕ್ಕೆ ಸೇರಲು ಸಿದ್ಧವಾಗಿದ್ದಾಗಲೇ ವಜಾ ಮಾಡುವ ಪ್ರಕ್ರಿಯೆ ನಡೆದಿದೆ. ಇದರಿಂದ ಉದ್ಯೋಗಿಗಳು ಆತಂಕಗೊಂಡಿದ್ದಾರೆ.

ಐಟಿ ದೈತ್ಯ ವಿಪ್ರೋ ಕೂಡ 2023ರ ಜನವರಿಯಲ್ಲಿ 452 ಫ್ರೆಶರ್‌ಗಳನ್ನು ವಜಾಗೊಳಿಸಿದೆ. ತರಬೇತಿಯ ನಂತರ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಅವರನ್ನು ವಜಾಗೊಳಿಸಲಾಗಿದೆ ಎಂದು ಅದು ಹೇಳಿತ್ತು. ಮತ್ತೊಂದೆಡೆ ಆರ್ಥಿಕ ಹಿಂಜರಿತದ ಭೀತಿಯಿಂದ ದೊಡ್ಡ ದೊಡ್ಡ ಐಟಿ ಕಂಪನಿಗಳು ಉದ್ಯೋಗ ವಜಾ ಮಾಡುವ ಘೋಷಣೆ ಮಾಡುತ್ತಿರುವುದು ತಿಳಿದಿರುವ ವಿಚಾರ. ಮೈಕ್ರೋಸಾಫ್ಟ್, ಟ್ವಿಟರ್, ಮೆಟಾ, ಅಮೆಜಾನ್, ಗೂಗಲ್ ನಂತಹ ಕಂಪನಿಗಳು ಈಗಾಗಲೇ ಉದ್ಯೋಗಿಗಳನ್ನು ವಜಾ ಮಾಡಿವೆ.

ಸ್ವಿಗ್ಗಿ, ಫಿಲಿಪ್ಸ್, ಒಎಲ್ಎಕ್ಸ್ ಕಂಪನಿಗಳು ಸಹ ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಿವೆ. ಟೆಕ್ ದೈತ್ಯ ಇಂಟೆಲ್ ಉದ್ಯೋಗಿಗಳನ್ನು ವಜಾ ಮಾಡುವ ಬದಲು ಅವರ ಸಂಬಳವನ್ನು ಕಡಿತಗೊಳಿಸಿದೆ.

ವಿಭಾಗ