ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  K Chandrashekhar Rao: ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಿಂದ ಮೊದಲ ಮುಖ್ಯಮಂತ್ರಿ ಸ್ಥಾನದವರೆಗೆ ಕೆ ಚಂದ್ರಶೇಕರ್ ರಾವ್; ಪ್ರೊಫೈಲ್

K Chandrashekhar Rao: ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಿಂದ ಮೊದಲ ಮುಖ್ಯಮಂತ್ರಿ ಸ್ಥಾನದವರೆಗೆ ಕೆ ಚಂದ್ರಶೇಕರ್ ರಾವ್; ಪ್ರೊಫೈಲ್

ಕಾಂಗ್ರೆಸ್‌ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದು ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಹಾಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹೋರಾಟ ಮಾಡಿದ್ರು. ಅವರ ಪ್ರೊಫೈಲ್ ಇಲ್ಲಿದೆ.

ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಪ್ರೊಫೈಲ್ (ANI)
ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಪ್ರೊಫೈಲ್ (ANI)

ಹೈದರಾಬಾದ್: ತೆಲಂಗಾಣ (Telangana) ರಾಜ್ಯದ ಮೊದಲ ಹಾಗೂ ಹಾಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrashekhar Rao) ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಿದ ಪ್ರಮುಖ ನಾಯಕರ ಪೈಕಿ ಇವರು ಕೂಡ ಒಬ್ಬರು.

ಪ್ರತ್ಯೇಕ ರಾಜ್ಯ ರಚನೆಯ ವಿಳಂಬದ ವಿರುದ್ಧ ಅಂದಿನ ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ತೆಲಂಗಾಣ ರಾಷ್ಟ್ರೀಯ ಸಮಿತಿ (ಈಗ ಭಾರತೀಯ ರಾಷ್ಟ್ರೀಯ ಸಮಿತಿ) 2006ರ ಡಿಸೆಂಬರ್‌ನಲ್ಲಿ ಆಂಧ್ರ ಹಾಗೂ ಕೇಂದ್ರದಲ್ಲಿನ ಸಮ್ಮಿಶ್ರ ಸರ್ಕಾರಗಳನ್ನು ತ್ಯಜಿಸಿ ಸ್ವತಂತ್ರ ಹೋರಾಟಕ್ಕೆ ಇಳಿಯುವ ಮೂಲಕ ಸೆಡ್ಡು ಹೊಡೆದಿತ್ತು.

ಹಲವರು ನಾಯಕರ ಹೋರಾಟಗಳಲ್ಲಿ ಭಾಗವಹಿಸಿದ್ದ ಕೆ ಚಂದ್ರಶೇಖರ್ ರಾವ್ ಉಪವಾಸ ಸತ್ಯಾಗ್ರಹದ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು. 40 ವರ್ಷಗಳ ಸುದೀರ್ಘ ಹೋರಾಟದ ಬಳಿಕ 2014ರ ಜೂನ್ 2 ರಂದು ಭಾರತ ಒಕ್ಕೂಟದ 29ನೇ ರಾಜ್ಯವಾಗಿ ತೆಲಂಗಾಣವನ್ನು ಘೋಷಿಸಲಾಯಿತು.

ನಾಳೆಗೆ (ಜೂನ್ 2, ಶುಕ್ರವಾರ) ತೆಲಂಗಾಣ ರಾಜ್ಯವಾಗಿ 9 ವಸಂತಗಳನ್ನು ಪೂರೈಸುತ್ತಿದೆ. ಮೊದಲ ಮುಖ್ಯಮಂತ್ರಿಯಾಗಿ ಕೆ ಚಂದ್ರಶೇಖರ್ ರಾವ್ ಆಯ್ಕೆಯಾದರು. ಪ್ರಸ್ತುತ ಅವರೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ.

ಕೆ ಚಂದ್ರಶೇಖರ್ ರಾವ್ ಅವರ ಪೂರ್ತಿಯ ಕಲ್ವಕುಂಟ್ಲ ಚೇಂದ್ರಶೇಖರ್ ರಾವ್ ಇವರನ್ನು ಸಾಮಾನ್ಯವಾಗಿ ಕೆಸಿಆರ್ ಅಂತಲೇ ಕರೆಯಲಾಗುತ್ತದೆ. ಮೇದಕ್ ಜಿಲ್ಲೆಯ ಸಿದ್ದಿಪೇಟ್ ಸಮೀಪದ ಚಿಂಟಮಡಕ ಎಂಬ ಗ್ರಾಮದಲ್ಲಿ 1954ರ ಫೆಬ್ರವರಿ 17 ರಂದು ಜನಿಸಿದರು. ಉಸ್ಮಾನಿಯ ಆರ್ಟ್ಸ್ ಕಾಲೇಜು, ಉಸ್ಮಾನಿಯಾ ವಿಶ್ವವಿದ್ಯಾಸಯದಿಂದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕೆಸಿಆರ್ ಮೊದಲ ಬಾರಿಗೆ ಮೇದಕ್ ಜಿಲ್ಲೆಯ ಯುವ ಕಾಂಗ್ರೆಸ್ ಸೇರುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ನಂತರ ಅಂದರೆ 1983ರಲ್ಲಿ ಆಂಧ್ರಪ್ರದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ, ಖ್ಯಾತ ನಟರೂ ಆಗಿದ್ದ ಎನ್‌ಟಿ ರಾಮರಾವ್ ಅವರ ನೇತೃತ್ವದ ತೆಲುಗು ದೇಶಂ ಪಕ್ಷವನ್ನು ಸೇರಿದ್ದರು.

ಟಿಡಿಪಿ ಸೇರಿದ ಬಳಿಕ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಎ ಮದನ್ ಮೋಹನ್ ವಿರುದ್ಧ ಸ್ಪರ್ಧಿಸಿ ಸೋಲು ಅನುಭಸಿದ್ದರು. ಆ ನಂತರ 1985 ಮತ್ತು 1999ರ ಮಧ್ಯೆ ಸಿದ್ದಿಪೇಟ್ ನಿಂದ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡರು.

1987-88 ರಿಂದ ಎನ್‌ಟಿಆರ್ ಅವರ ಸಚಿವ ಸಂಪುಟದಲ್ಲಿ ಬರ ಮತ್ತು ಪರಿಹಾರ ಸಚಿವರಾಗಿ ಕೆಲಸ ಮಾಡಿದ್ದರು. ಬಳಿಕ 1996ರಲ್ಲಿ ಚಂದ್ರಬಾಬು ನಾಯ್ಡು ಅವರು ಸಂಪುಟದಲ್ಲಿ ಸಾರಿಗೆ ಸಚಿವರಾಗಿ, 2000-01ರಲ್ಲಿ ಆಂಧ್ರ ಪ್ರದೇಶ ವಿಧಾನಸಭೆಯ ಉಪ ಸಭಾಧ್ಯಕ್ಷರಾಗಿ ಸೇವೆ ಮಾಡಿದ್ದಾರೆ.

2001ರಲ್ಲಿ ಉಪ ಸ್ಪೀಕರ್, ಶಾಸಕ ಸ್ಥಾನ ಹಾಗೂ ತೆಲಗು ದೇಶಂ ಪಕ್ಷಕ್ಕೆ ರಾಜೀನಾಮೆ ನೀಡಿ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಈಗಿ ಭಾರತ ರಾಷ್ಟ್ರೀಯ ಸಮಿತಿ ಎಂದು ಬದಲಾಯಿಸಲಾಗಿದೆ) ಯನ್ನು ಸ್ಥಾಪಿಸಿದ್ದರು. ಆಳಿಕ ಹೋರಾಟಕ್ಕೆ ಇಳಿದವರು.

ಇವರು ಸಂಸದಾಗಿ ಕರೀಂ ನಗರದಿಂದ ಮೂರು ಬಾರಿ, ಮೇದಕ್‌ನಿಂದ 1 ಬಾರಿ, ಶಾಸಕರಾಗಿ ಸಿದ್ದಿಪೇಟ್‌ನಿಂದ ಐದು ಬಾರಿ, ಗಜ್ವಾನ್‌ನಿಂದ ಒಂದು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕೆಸಿಆರ್ ಅವರು ಶೋಭಾ ಅವರನ್ನು ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇವರ ಪುತ್ರ ಕೆ ಟಿ ರಾಮರಾವ್ ಪ್ರಸ್ತುತ ತೆಲಂಗಾಣದ ಸಚಿವರಾಗಿದ್ದಾರೆ. ಪುತ್ರಿ ಕೆ ಕವಿತಾ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.

ಸದ್ಯ ತೆಲಂಗಾಣ ರಾಜ್ಯ ರಚನೆಯಾಗಿ ನಾಳೆಗೆ (ಜೂನ್ 2) 9 ವರ್ಷ ಪೂರೈಸುತ್ತಿದೆ. ಶೀಘ್ರವೇ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕೆಸಿಆರ್ ಅದಕ್ಕಾಗಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

IPL_Entry_Point

ವಿಭಾಗ