ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Stabbing Flight Attendant: ವಿಮಾನದಲ್ಲಿ ಎಮರ್ಜೆನ್ಸಿ ಡೋರ್ ತೆಗೆಯಲು ಮುಂದಾದ ಪ್ರಯಾಣಿಕ.. ತಡೆಯಲು ಬಂದ ಸಿಬ್ಬಂದಿಗೆ ಇರಿತ

Stabbing flight attendant: ವಿಮಾನದಲ್ಲಿ ಎಮರ್ಜೆನ್ಸಿ ಡೋರ್ ತೆಗೆಯಲು ಮುಂದಾದ ಪ್ರಯಾಣಿಕ.. ತಡೆಯಲು ಬಂದ ಸಿಬ್ಬಂದಿಗೆ ಇರಿತ

ಇತ್ತೀಚಿನ ದಿನಗಳಲ್ಲಿ ಚಲಿಸುತ್ತಿರುವ ವಿಮಾನಗಳಲ್ಲಿ ಪ್ರಯಾಣಿಕರು ನಿಯಮ ಉಲ್ಲಂಘಿಸುವುದು, ಅಸಭ್ಯವಾಗಿ ವರ್ತಿಸುವುದು ಸೇರಿದಂತೆ ಅಶಿಸ್ತಿನ ಪ್ರಯಾಣಿಕರ ದುರ್ವರ್ತನೆಗಳು ಹೆಚ್ಚಾಗುತ್ತಿವೆ. ಇದೀಗ ಕಾರಣವಿಲ್ಲದೆ ಎಮರ್ಜೆನ್ಸಿ ಡೋರ್ ತೆಗೆಯಲು ಪ್ರಯಾಣಿಕನೊಬ್ಬ ಯತ್ನಿಸಿದ್ದಾನೆ. ಅಷ್ಟೇ ಅಲ್ಲ ಇದನ್ನು ತಡೆಯಲು ಬಂದ ವಿಮಾನ ಸಿಬ್ಬಂದಿಯ ಕುತ್ತಿಗೆಗೆ ಚಮಚದಿಂದ ಇರಿದಿದ್ದಾನೆ.

ವಿಮಾನದಲ್ಲಿ ಪ್ರಯಾಣಿಕನ ದುರ್ವರ್ತನೆ
ವಿಮಾನದಲ್ಲಿ ಪ್ರಯಾಣಿಕನ ದುರ್ವರ್ತನೆ

ಬೋಸ್ಟನ್‌: ಇತ್ತೀಚಿನ ದಿನಗಳಲ್ಲಿ ಚಲಿಸುತ್ತಿರುವ ವಿಮಾನಗಳಲ್ಲಿ ಪ್ರಯಾಣಿಕರು ನಿಯಮ ಉಲ್ಲಂಘಿಸುವುದು, ಅಸಭ್ಯವಾಗಿ ವರ್ತಿಸುವುದು ಸೇರಿದಂತೆ ಅಶಿಸ್ತಿನ ಪ್ರಯಾಣಿಕರ ದುರ್ವರ್ತನೆಗಳು ಹೆಚ್ಚಾಗುತ್ತಿವೆ. ಇದೀಗ ಕಾರಣವಿಲ್ಲದೆ ಎಮರ್ಜೆನ್ಸಿ ಡೋರ್ ತೆಗೆಯಲು ಪ್ರಯಾಣಿಕನೊಬ್ಬ ಯತ್ನಿಸಿದ್ದಾನೆ. ಅಷ್ಟೇ ಅಲ್ಲ ಇದನ್ನು ತಡೆಯಲು ಬಂದ ವಿಮಾನ ಸಿಬ್ಬಂದಿಯ ಕುತ್ತಿಗೆಗೆ ಚಮಚದಿಂದ ಇರಿದಿದ್ದಾನೆ.

ಸೋಮವಾರ (ಮಾರ್ಚ್​ 6) ಲಾಸ್ ಏಂಜಲೀಸ್‌ನಿಂದ ಬೋಸ್ಟನ್‌ಗೆ ಹಾರಾಟ ನಡೆಸುತ್ತಿದ್ದ ಯುನೈಟೆಡ್​​ ಏರ್​ಲೈನ್ಸ್ ವಿಮಾನದಲ್ಲಿ ತುರ್ತು ನಿರ್ಗಮನದ ಬಾಗಿಲು ತೆರೆಯಲು ಪ್ರಯಾಣಿಕನೊಬ್ಬ ಯತ್ನಿಸಿದ್ದು, ಮುರಿದ ಲೋಹದ ಚಮಚದಿಂದ ಫ್ಲೈಟ್ ಅಟೆಂಡೆಂಟ್ ಕುತ್ತಿಗೆಗೆ ಮೂರು ಬಾರಿ ಇರಿದಿದ್ದು, ವಿಮಾನದ ಇತರ ಸಿಬ್ಬಂದಿ ಮತ್ತು ಪ್ರಯಾಣಿಕರು ಟೊರೆಸ್​​ನನ್ನು ನಿಯಂತ್ರಿಸಿದರು.

ಆರೋಪಿಯನ್ನು ಮೆಸಾಚುಸೆಟ್ಸ್‌ನ ಫ್ರಾನ್ಸಿಸ್ಕೊ ಸೆವೆರೊ ಟೊರೆಸ್ (33) ಎಂದು ಗುರುತಿಸಲಾಗಿದೆ. ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್​ ಆದ ತಕ್ಷಣವೇ ಈತನನ್ನು ಬಂಧಿಸಲಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ. ಭವಿಷ್ಯದಲ್ಲಿ ತನ್ನ ವಿಮಾನಗಳಲ್ಲಿ ಟೊರೆಸ್‌ಗೆ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಯುನೈಟೆಡ್ ಏರ್‌ಲೈನ್ಸ್ ಹೇಳಿದೆ.

"ನಮ್ಮ ವಿಮಾನಗಳಲ್ಲಿ ಯಾವುದೇ ರೀತಿಯ ಹಿಂಸಾಚಾರಕ್ಕೆ ನಾವು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ ಮತ್ತು ಈತ ಯುನೈಟೆಡ್‌ ಏರ್​ಲೈನ್ಸ್​ ವಿಮಾನಗಳಲ್ಲಿ ಸಚರಿಸುವುದನ್ನು ನಿಷೇಧಿಸಲಾಗಿದೆ. ತನಿಖೆಯಲ್ಲಿ ನಾವು ಕಾನೂನು ಜಾರಿಯೊಂದಿಗೆ ಸಹಕರಿಸುತ್ತಿದ್ದೇವೆ" ಎಂದು ಯುನೈಟೆಡ್‌ ಏರ್​ಲೈನ್ಸ್​ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತೊಂದು ಮೂತ್ರ ವಿಸರ್ಜನೆ ಪ್ರಕರಣ

ಕುಡಿದ ಮತ್ತಿನಲ್ಲಿ ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿಂದೆ ನಡೆದ ಇಂತಹದ್ದೇ ಪ್ರಕರಣದಲ್ಲಿ ಆರೋಪಿ ಪ್ರಯಾಣಿಕ ಮತ್ತು ಏರ್​ಲೈನ್ಸ್​ ವಿರುದ್ಧ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಕಠಿಣ ಕ್ರಮ ಕೈಗೊಂಡಿತ್ತು. ಇದೀಗ ಇಂತಹದ್ದೆ ಮತ್ತೊಂದು ಘಟನೆ ವರದಿಯಾಗಿದೆ.

ಅಮೆರಿಕನ್ ಏರ್‌ಲೈನ್ಸ್​​ನ ವಿಮಾನವು (flight 292) ಮಾರ್ಚ್​ 4ರ ರಾತ್ರಿ ಜಾನ್ ಎಫ್. ಕೆನಡಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಿಂದ (ಜೆಎಫ್‌ಕೆ) ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಈ ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ ಮಾರ್ಗಮಧ್ಯೆ ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಆರೋಪ ಕೇಳಿ ಬಂದಿದೆ.

ಆರೋಪಿಯನ್ನು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತದ ವಿದ್ಯಾರ್ಥಿ ಆರ್ಯ ವೋಹ್ರಾ (21) ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತ ಪ್ರಯಾಣಿಕನು ಅಮೆರಿಕ ಪ್ರಜೆಯಾಗಿದ್ದಾರೆ ಎಂದು ಇಂದಿರಾಗಾಂಧಿ ಏರ್​ಪೋರ್ಟ್​ನ ಡಿಸಿಪಿ ತಿಳಿಸಿದ್ದಾರೆ. ಇತ್ತ, ಅಮೆರಿಕನ್ ಏರ್‌ಲೈನ್ಸ್, ಆರೋಪಿ ವಿದ್ಯಾರ್ಥಿಗೆ ತನ್ನ ವಿಮಾನದಲ್ಲಿ ಸಂಚರಿಸಲು ನಿರ್ಬಂಧ ವಿಧಿಸಿದೆ.

ಮೊದಲ ಪ್ರಕರಣ

ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದ (AI-102) ಬಿಸಿನೆಸ್ ಕ್ಲಾಸ್‌ನಲ್ಲಿ ಶಂಕರ್ ಮಿಶ್ರಾ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಪ್ಯಾಂಟ್​ ಜಿಪ್​ ಅನ್ನು ಬಿಚ್ಚಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದನು. ಅಷ್ಟೇ ಅಲ್ಲದೇ ಸ್ವಲ್ಪ ಸಮಯದ ವರೆಗೂ ಆತ ತನ್ನ ಖಾಸಗಿ ಅಂಗವನ್ನು ಪ್ರದರ್ಶಿಸುತ್ತಿದ್ದ.

ಜನವರಿ 4 ರಂದು ದೆಹಲಿಯಲ್ಲಿ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು ಮತ್ತು ಎರಡು ದಿನಗಳ ನಂತರ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಸದ್ಯ ಮಿಶ್ರಾ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಶಂಕರ್ ಮಿಶ್ರಾ ಅವರನ್ನು ‘ನೊ ಫ್ಲೈ ಲಿಸ್ಟ್‌’ಗೆ ಸೇರಿಸಲಾಗಿದ್ದು, 4 ತಿಂಗಳ ಕಾಲ ವಿಮಾನದಲ್ಲಿ ಸಂಚರಿಸಲು ನಿಷೇಧಿಸಲಾಗಿದೆ.

ಘಟನೆ ಸಂಬಂಧ ತಕ್ಷಣದ ಕ್ರಮ ಕೈಗೊಂಡಿದ್ದ ಡಿಜಿಸಿಎ, ಏರ್​ ಇಂಡಿಯಾ ಸಂಸ್ಥೆಗೆ 30 ಲಕ್ಷ ರೂ. ದಂಡ ವಿಧಿಸಿತ್ತು. ಅಲ್ಲದೇ 1937 ರ ವಿಮಾನಯಾನ ನಿಯಮಗಳ 141 ರೂಲ್​ ಅಡಿಯಲ್ಲಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದ ಕಾರಣಕ್ಕಾಗಿ ಮೂರು ತಿಂಗಳ ಅವಧಿಗೆ ಪೈಲಟ್-ಇನ್-ಕಮಾಂಡ್​ನ ಪರವಾನಗಿಯನ್ನು ಅಮಾನತುಗೊಳಿಸಿತ್ತು.

IPL_Entry_Point

ವಿಭಾಗ