ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nobel Peace Prize: ವಿಶ್ವಶಾಂತಿಗೆ ಕೆಲಸ ಮಾಡುವ ಪ್ರಧಾನಿ ಮೋದಿಗೇಕೆ ನೊಬೆಲ್‌ ಕೊಡಬಾರದು?; ಸಂಚಲನ ಮೂಡಿಸಿದೆ ಹೀಗೊಂದೆ ಪ್ರಶ್ನೆ

Nobel Peace Prize: ವಿಶ್ವಶಾಂತಿಗೆ ಕೆಲಸ ಮಾಡುವ ಪ್ರಧಾನಿ ಮೋದಿಗೇಕೆ ನೊಬೆಲ್‌ ಕೊಡಬಾರದು?; ಸಂಚಲನ ಮೂಡಿಸಿದೆ ಹೀಗೊಂದೆ ಪ್ರಶ್ನೆ

Nobel Peace Prize for Narendra Modi: ವಿವಿಧ ಜಾಗತಿಕ ವಿದ್ಯಮಾನಗಳ ನಡುವೆ ಏಕಾಕಿಯಾಗಿ ನೊಬೆಲ್‌ ಶಾಂತಿ ಪುರಸ್ಕಾರದ ವಿಚಾರ ಪ್ರಸ್ತಾಪವಾಗಿದೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾಕೆ ಈ ಪುರಸ್ಕಾರಕ್ಕೆ ಪರಿಗಣಿಸಬಾರದು ಎಂಬ ವಿಚಾರ ಮುನ್ನೆಲೆ ಬಂದಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೊಬೆಲ್‌ ಕಮಿಟಿಯ ವೈಸ್‌ ಚೇರ್‌ ಅಸ್ಲೆ ತೋಜೆ
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನೊಬೆಲ್‌ ಕಮಿಟಿಯ ವೈಸ್‌ ಚೇರ್‌ ಅಸ್ಲೆ ತೋಜೆ

ನವದೆಹಲಿ: ಜಾಗತಿಕವಾಗಿ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ ದಿನೇದಿನೆ ಹೆಚ್ಚಾಗುತ್ತಿದೆ. ರಷ್ಯಾ-ಯುಕ್ರೇನ್‌ ಸಮರ, ಜಾಗತಿಕ ಬಿಕ್ಕಟ್ಟುಗಳ ವಿಚಾರದಲ್ಲಿ ಪ್ರಧಾನಿ ಮೋದಿಯವರ ನಿಲುವು ಮತ್ತು ಮಾತುಗಳು ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲಿ ಸಂಚಲನ ಮೂಡಿಸಿರುವುದು ಸುಳ್ಳಲ್ಲ.

ಈಗ ಜಿ20 ಅಧ್ಯಕ್ಷತೆಯೂ ಭಾರತಕ್ಕೆ ಲಭಿಸಿದ್ದು, ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಅಧ್ಯಕ್ಷತೆಯ ಹೊಣೆಗಾರಿಕೆಯೂ ಇರುವ ಕಾರಣ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನಡೆ, ನುಡಿ ಮತ್ತು ಯೋಜನೆಗಳಿಗೆ ಹೆಚ್ಚಿನ ಪ್ರಾಮು‍ಖ್ಯತೆ ಲಭ್ಯವಾಗಿದೆ.

ಜಾಗತಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಭಾರತ ಸರ್ಕಾರ, ಪ್ರಧಾನಿ ಮೋದಿ ಏನು ಹೇಳುತ್ತಾರೆ ಅವರ ಪ್ರತಿಕ್ರಿಯೆ ಏನು ಎಂಬುದನ್ನು ಜಗತ್ತಿನ ಮುಂಚೂಣಿ ನಾಯಕರು ಗಮನಿಸುತ್ತಿದ್ದಾರೆ ಎಂಬುದು ಕೂಡಾ ವಾಸ್ತವ.

ಈ ಎಲ್ಲ ವಿದ್ಯಮಾನಗಳ ನಡುವೆ ಏಕಾಕಿಯಾಗಿ ನೊಬೆಲ್‌ ಶಾಂತಿ ಪುರಸ್ಕಾರದ ವಿಚಾರ ಪ್ರಸ್ತಾಪವಾಗಿದೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಾಕೆ ಈ ಪುರಸ್ಕಾರಕ್ಕೆ ಪರಿಗಣಿಸಬಾರದು ಎಂಬ ವಿಚಾರ ಮುನ್ನೆಲೆ ಬಂದಿದೆ.

ಇದಕ್ಕೆ ಕಾರಣ, ನೊಬೆಲ್‌ ಕಮಿಟಿಯ ವೈಸ್‌ ಚೇರ್‌ ಆಗಿರುವ ಅಸ್ಲೆ ತೋಜೆ ನೀಡಿರುವ ಹೇಳಿಕೆ. ಅವರು ಎಬಿಪಿ ನ್ಯೂಸ್‌ ಜತೆಗೆ ಮಾತನಾಡುತ್ತ, ಈಗ ಭಾರತವು ಸೂಪರ್‌ ಪವರ್‌ ಆಗಿದೆ. ಪ್ರಪಂಚದ ರಾಜಕಾರಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ರಷ್ಯಾ ಮತ್ತು ಅಮೆರಿಕ ನಡುವಿನ ಶೀತಲ ಸಮರದ ನಡುವೆ, ಬೈಡೆನ್‌ ಮತ್ತು ಪುತಿನ್‌ ನಡುವಿನ ಆಕ್ರೋಶ ಶಮನಗೊಳಿಸುವ ಶಾಂತಿದೂತರಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕಂಡುಬಂದಿದ್ದಾರೆ" ಎಂಬುದನ್ನು ಉಲ್ಲೇಖಿಸಿದ್ದಾರೆ.

ಅವರ ಈ ಮಾತುಗಳು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಮೇಗ್‌ಅಪ್ಡೇಟ್ಸ್‌ ಎಂಬ ಟ್ವಿಟರ್‌ ಖಾತೆ ಇದನ್ನು ಕಿರು ಸುದ್ದಿಯನ್ನಾಗಿ ಕೂಡ ಬಿತ್ತರಿಸಿದೆ. ಅದು ಹೀಗಿದೆ ನೋಡಿ

ಗಮನಿಸಬಹುದಾದ ಸುದ್ದಿಗಳು

ಇಬ್ಬರು ಹೆಂಡಿರ ಮುದ್ದಿನ ಗಂಡನ ಕಂಡುಕೊಂಡ ʻಸುಖ ಸಂಸಾರದ ಸೂತ್ರʼ -ಏನದು?

Agreement B/w Husband and Two Wives: ಆತ 28 ವರ್ಷದ ಯುವಕ. ಇಬ್ಬರು ಸಹೋದ್ಯೋಗಿ ಯುವತಿಯರನ್ನು ಪರಸ್ಪರ ಅರಿವಾಗದಂತೆ ವಿವಾಹವಾಗಿದ್ದ. ಇಬ್ಬರಲ್ಲೂ ಮಕ್ಕಳನ್ನು ಪಡೆದ. ಮೊದಲ ಪತ್ನಿ ಕೇಸ್‌ ದಾಖಲಿಸಿದಾಗ, ʻಸುಖ ಸಂಸಾರಕ್ಕೆ ಒಂದು ಸೂತ್ರʼ ಮುಂದಿಟ್ಟ. ಪತ್ನಿಯರಿಬ್ಬರು ಮತ್ತು ಕೋರ್ಟ್‌ ಕೂಡ ಒಪ್ಪಿಕೊಂಡಿತು. ಏನು ಆ ʻಸೂತ್ರʼ?! ಇಲ್ಲಿದೆ ನೋಡಿ

ಡ್ರೈವರ್‌ ಡ್ರಿಂಕ್ಸ್‌ ತಗೊಂಡಿದ್ದಾನಾ.. ದೂರದಿಂದಲೇ ಪತ್ತೆಮಾಡಲಿದೆ ಈ ಉಪಕರಣ; ಕೋಲ್ಕತ ಪೊಲೀಸರು ಖರೀದಿಸ್ತಾರಂತೆ!

Drink and Drive Test: ಹೊಸ ಸಾಧನಗಳಲ್ಲಿ 'ಊದುವ' ಕಥೆ ಇಲ್ಲ. ದೂರದಲ್ಲಿ ನಿಂತಾಗ, ಯಂತ್ರದ ಸೆನ್ಸರ್‌ ಒಬ್ಬ ವ್ಯಕ್ತಿಯು ಕುಡಿದಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡುತ್ತದೆ. ಅಷ್ಟೇ ಅಲ್ಲ, ಆ ವ್ಯಕ್ತಿ ಎಷ್ಟು ಕುಡಿದಿದ್ದಾನೆ ಎಂಬುದನ್ನೂ ಈ ಉಪಕರಣವು ಕಂಡುಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಇಷ್ಟು ಮಾಡೋಕೆ ಇದಕ್ಕೆ ಬೇಕಾದ್ದು ಕೇವಲ 5 ಸೆಕೆಂಡ್ಸ್! ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಕೇವಲ 90 ಸೆಕೆಂಡಲ್ಲಿ ದ್ರಾಕ್ಷಿ ಗಾತ್ರದ ಹೃದಯ ಶಸ್ತ್ರಚಿಕಿತ್ಸೆ!; ಏಮ್ಸ್‌ ವೈದ್ಯರ ವಿರಳ ಸಾಧನೆ

Rare Surgery of a Fetus in 90 seconds: ದೆಹಲಿಯ ಏಮ್ಸ್ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ ಜಗತ್ತಿನ ಗಮನಸೆಳೆದಿದ್ದಾರೆ. ಗರ್ಭದಲ್ಲಿದ್ದ ಶಿಶುವಿನ ದ್ರಾಕ್ಷಿ ಗಾತ್ರದ ಹೃದಯದ ಶಸ್ತ್ರಚಿಕಿಸೆಯನ್ನು ಅವರು ನೆರವೇರಿಸಿದ್ದರು. ಇದಕ್ಕೆ ಅವರು ತೆಗೆದುಕೊಂಡ ಸಮಯ ಕೇವಲ 90 ಸೆಕೆಂಡ್ಸ್! ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point