ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget Session: ಕಲಾಪ ನುಂಗಿದ ಅದಾನಿ ವಿವಾದ: ಸಿಜೆಐ ಮೇಲ್ವಿಚಾರಣೆಗೆ ವಿಪಕ್ಷಗಳ ಬಿಗಿ ಪಟ್ಟು

Budget Session: ಕಲಾಪ ನುಂಗಿದ ಅದಾನಿ ವಿವಾದ: ಸಿಜೆಐ ಮೇಲ್ವಿಚಾರಣೆಗೆ ವಿಪಕ್ಷಗಳ ಬಿಗಿ ಪಟ್ಟು

ಷೇರು ಕುಸಿತಕ್ಕೆ ಕಾರಣವಾಗಿರುವ ಅದಾನಿ ಗ್ರೂಪ್ ವಿರುದ್ಧದ ವಂಚನೆಯ ಆರೋಪಗಳ ಕುರಿತು, ಸಂಸದೀಯ ಸಮಿತಿ ಅಥವಾ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಸಬೇಕೆಂದು ವಿರೋಧ ಪಕ್ಷಗಳು ಗುರುವಾರ ಒತ್ತಾಯಿಸಿವೆ. ಲೋಕಸಭೆಯಲ್ಲಿ ಈ ಕುರಿತು ಚರ್ಚೆಗೆ ಪಟ್ಟು ಹಿಡಿದಿರುವ ವಿಪಕ್ಷಗಳು, ಸರ್ಕಾರ ಈ ವಿಷಯದಲ್ಲಿ ಏನನ್ನೋ ಮುಚ್ಚಿಡುತ್ತಿದೆ ಎಂದು ಗಂಭೀರ ಆರೋಪ ಮಾಡಿವೆ.

ಲೋಕಸಭೆ(ಸಂಗ್ರಹ ಚಿತ್ರ)
ಲೋಕಸಭೆ(ಸಂಗ್ರಹ ಚಿತ್ರ) (PTI)

ನವದೆಹಲಿ: ಷೇರು ಕುಸಿತಕ್ಕೆ ಕಾರಣವಾಗಿರುವ ಅದಾನಿ ಗ್ರೂಪ್ ವಿರುದ್ಧದ ವಂಚನೆಯ ಆರೋಪಗಳ ಕುರಿತು, ಸಂಸದೀಯ ಸಮಿತಿ ಅಥವಾ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯಿಂದ ತನಿಖೆ ನಡೆಸಬೇಕೆಂದು ವಿರೋಧ ಪಕ್ಷಗಳು ಗುರುವಾರ ಒತ್ತಾಯಿಸಿವೆ. ಲೋಕಸಭೆಯಲ್ಲಿ ಈ ಕುರಿತು ಚರ್ಚೆಗೆ ಪಟ್ಟು ಹಿಡಿದಿರುವ ವಿಪಕ್ಷಗಳು, ಸರ್ಕಾರ ಈ ವಿಷಯದಲ್ಲಿ ಏನನ್ನೋ ಮುಚ್ಚಿಡುತ್ತಿದೆ ಎಂದು ಗಂಭೀರ ಆರೋಪ ಮಾಡಿವೆ.

ಕಲಾಪದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಎಲ್‌ಐಸಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುವ ಸಮಸ್ಯೆಗಳ ಬಗ್ಗೆ ನಿಯಮ 267ರ ಅಡಿಯಲ್ಲಿ ಚರ್ಚಿಸಲು ನಾವು ಬಯಸಿದ್ದೇವೆ. ಸರ್ಕಾರ ಕೋಟ್ಯಂತರ ಭಾರತೀಯರ ಕಷ್ಟಪಟ್ಟು ದುಡಿದ ಹಣವನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಕಿಡಿಕಾರಿದರು.

ಈ ವಿಷಯವಾಗಿ ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂ ಕೋರ್ಟ್‌ನ ಸಿಜೆಐ ಮೇಲ್ವಿಚಾರಣೆಯ ತಂಡದಿಂದ ತನಿಖೆ ನಡೆಸಬೇಕು ಎಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.

ನಾವು ಈ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆ ಮಾಡಲು ಬಯಸುತ್ತೇವೆ. ಆದರೆ ಸ್ಪೀಕರ್‌ ಸರ್ಕಾರದ ಒತ್ತಡಕ್ಕೆ ಮಣಿದು ನಮ್ಮ ನೋಟೀಸ್ ತಿರಸ್ಕರಿಸಿದ್ದಾರೆ. ನಾವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದಾಗ, ಅವುಗಳ ಬಗ್ಗೆ ಚರ್ಚೆಗೆ ಸಮಯ ನೀಡುವುದಿಲ್ಲ. ಎಲ್‌ಐಸಿ, ಎಸ್‌ಬಿಐ ಮತ್ತು ಇತರೆ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಬಡವರ ಹಣವಿದೆ ಮತ್ತು ಅದನ್ನು ಆಯ್ದ ಕಂಪನಿಗಳಿಗೆ ನೀಡಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದರು.

ಸತ್ಯ ತಿಳಿಯಲು ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂಬುದು ನಮ್ಮ ಒತ್ತಾಯ. ಸರ್ಕಾರ ಈ ವಿಷಯದಲ್ಲಿ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಸತ್ತಿನ ಚರ್ಚೆಗೂ ಸರ್ಕಾರ ಆಸ್ಪದ ನೀಡದಿರುವುದು ಖಂಡನೀಯ ಎಂದು ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಈ ಸರ್ಕಾರ ಶ್ರೀಮಂತರ ಪರವಾಗಿದೆ. ಹೀಗಾಗಿಯೇ ಅವರ ತಪ್ಪುಗಳನ್ನು ಮರೆಮಾಚಲಾಗುತ್ತಿದೆ. ಆದರೆ ಈ ಸರ್ಕಾರ ಇರುವುದು ಶ್ರೀಮಂತರಿಗಾಗಿ ಅಲ್ಲ, ಬದಲಿಗೆ ಕೋಟ್ಯಂತರ ಬಡವರಿಗಾಗಿ ಎಂಬುದನ್ನು ನಾವು ನೆನಪು ಮಾಡಿಕೊಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಗುಡುಗಿದರು.

ಇದಕ್ಕೂ ಮೊದಲು ಲೋಕಸಭೆಯಲ್ಲಿ ಹಿಂಡೆನ್‌ಬರ್ಗ್ ರಿಸರ್ಚ್‌ನ ವಂಚನೆಯ ವರದಿಯ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷಗಳು, ಅದಾನಿ ಗ್ರೂಪ್‌ನ ಷೇರುಗಳಲ್ಲಿನ ಮುಂದುವರಿದ ಸ್ಲೈಡ್‌ನಿಂದ ಭಾರತೀಯ ಹೂಡಿಕೆದಾರರಿಗೆ ಅಪಾಯವನ್ನು ಚರ್ಚಿಸಲು ನಿಯಮಿತ ಸಂಸತ್ತಿನ ಕಲಾಪಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದವು.

ಇಂದಿನ ಪ್ರಮುಖ ಸುದ್ದಿಗಳು

Defence Budget: ಚೀನಾ ಮಣಿಸುವ ಗ್ಲೇಮ್‌ ಪ್ಲ್ಯಾನ್: ಶೇಕಡಾ 13ರಷ್ಟು ಹೆಚ್ಚಳಗೊಂಡ ಭಾರತದ ರಕ್ಷಣಾ ಬಜೆಟ್‌

ಭಾರತವು ಬುಧವಾರ 5.94 ಟ್ರಿಲಿಯನ್ (72.6 ಶತಕೋಟಿ ಡಾಲರ್) ರಕ್ಷಣಾ ವೆಚ್ಚವನ್ನು 2023-24 ಹಣಕಾಸು ವರ್ಷದಲ್ಲಿ ಪ್ರಸ್ತಾಪಿಸಿದೆ. ಹಿಂದಿನ ಅವಧಿಯ ಆರಂಭಿಕ ಅಂದಾಜಿಗಿಂತ‌ ಇದು ಶೇಕಡಾ 13ರಷು ಹೆಚ್ಚಾಗಿದೆ, ಚೀನಾದೊಂದಿಗಿನ ತನ್ನ ಉದ್ವಿಗ್ನ ಗಡಿಯಲ್ಲಿ ಹೆಚ್ಚಿನ ಯುದ್ಧ ವಿಮಾನಗಳು ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಯ ಗುರಿಯನ್ನು ಭಾರತ ಹೊಂದಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Gautam Adani: ಅರೆ..! ಲೈವ್ ಬಂದ ಗೌತಮ್ ಅದಾನಿ:‌ ದೂರ ಮಾಡಿದರಾ ಹೂಡಿಕೆದಾರರ ಎಲ್ಲಾ ಗುಮಾನಿ?

ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ನ ವರದಿಯ ಬಳಿಕ, ಅದಾನಿ ಸಮೂಹಕ್ಕೆ ಸೇರಿದ ಕಂಪನಿಗಳ ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರಲ್ಲಿ ಭಾರೀ ಆತಂಕ ಎದುರಾಗಿದ್ದು, ಅವ್ಯವಹಾರದ ಬಗ್ಗೆ ಇದೀಗ ಖುದ್ದು ಗೌತಮ್‌ ಅದಾನಿ ಸ್ಪಷ್ಟನೆ ನೀಡಿದ್ದು, ಕಂಪನಿ ಕಡೆಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point

ವಿಭಾಗ