ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Joe Biden: ಮಹತ್ವದ ದಾಖಲೆಗಳಿಗಾಗಿ ಅಮೆರಿಕದ ಅಧ್ಯಕ್ಷರ ಮನೆಯನ್ನೇ ತಲಾಷ್ ಮಾಡಿದ ಅಧಿಕಾರಿಗಳು: ಬೈಡನ್‌ ಬಳಿ ಅಂತದ್ದೇನಿದೆ?

Joe Biden: ಮಹತ್ವದ ದಾಖಲೆಗಳಿಗಾಗಿ ಅಮೆರಿಕದ ಅಧ್ಯಕ್ಷರ ಮನೆಯನ್ನೇ ತಲಾಷ್ ಮಾಡಿದ ಅಧಿಕಾರಿಗಳು: ಬೈಡನ್‌ ಬಳಿ ಅಂತದ್ದೇನಿದೆ?

ಅಮೆರಿಕದ ಕಾನೂನು ಜಾರಿ ಅಧಿಕಾರಿಗಳು ಡೆಲವೇರ್‌ನಲ್ಲಿರುವ ಅಧ್ಯಕ್ಷ ಜೋ ಬೈಡನ್ ಅವರ ಬೀಚ್ ಹೌಸ್‌ನಲ್ಲಿ, ಸರಿಯಾಗಿ ಸಂಗ್ರಹಿಸದ ವರ್ಗೀಕೃತ ದಾಖಲೆಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ನಡೆಸಿದ್ದಾರೆ. "ಅಧ್ಯಕ್ಷರ ಸಂಪೂರ್ಣ ಬೆಂಬಲ ಮತ್ತು ಸಹಕಾರದೊಂದಿಗೆ" ಈ ಕಾರ್ಯಾಚರಣೆ ನಡೆದಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಜೋ ಬೈಡನ್‌ (ಸಂಗ್ರಹ ಚಿತ್ರ)
ಜೋ ಬೈಡನ್‌ (ಸಂಗ್ರಹ ಚಿತ್ರ) (REUTERS)

ವಾಷಿಂಗ್ಟನ್: ಅಮೆರಿಕದ ಕಾನೂನು ಜಾರಿ ಅಧಿಕಾರಿಗಳು ಡೆಲವೇರ್‌ನಲ್ಲಿರುವ ಅಧ್ಯಕ್ಷ ಜೋ ಬೈಡನ್ ಅವರ ಬೀಚ್ ಹೌಸ್‌ನಲ್ಲಿ, ಸರಿಯಾಗಿ ಸಂಗ್ರಹಿಸದ ವರ್ಗೀಕೃತ ದಾಖಲೆಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ನಡೆಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ಅಧ್ಯಕ್ಷರ ಸಂಪೂರ್ಣ ಬೆಂಬಲ ಮತ್ತು ಸಹಕಾರದೊಂದಿಗೆ" ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಟಾರ್ನಿ ಬಾಬ್ ಬೌರ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆಯೂ ವಿಲ್ಮಿಂಗ್ಟನ್‌ನಲ್ಲಿರುವ ಬೈಡನ್‌ ಅವರ ಮನೆ ಮತ್ತು ವಾಷಿಂಗ್ಟನ್ ಡಿಸಿಯಲ್ಲಿರುವ ಅವರ ಹಿಂದಿನ ಕಚೇರಿ ಮೇಲೂ ದಾಳಿ ನಡೆಸಲಾಗಿತ್ತು ಎಂದು ಬಾಬ್‌ ಬೌರ್‌ ಹೇಳಿದ್ದಾರೆ.

ಬೈಡನ್ ಅವರು ತಮ್ಮ ಮೊದಲ ಅವಧಿಯ ಮಿಡ್-ಪಾಯಿಂಟ್ ಅನ್ನು ಆಚರಿಸುತ್ತಿರುವಾಗ, ಸಂಗ್ರಹಿಸದ ವರ್ಗೀಕೃತ ದಾಖಲೆಗಳನ್ನು ಪತ್ತೆಹಚ್ಚಲು ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.

ಈ ಹಿಂದೆ ರಹಸ್ಯ ದಾಖಲೆಗಳ ಪತ್ತೆಗಾಗಿ ಫ್ಲೋರಿಡಾದಲ್ಲಿರವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನೆ ಮೇಲೂ ದಾಳಿ ನಡೆಸಲಾಗಿತ್ತು. ವಿಶೇಷ ವಕೀಲರ ನೇತೃತ್ವದಲ್ಲಿ ಈ ತನಿಖೆಯ ಮೇಲ್ವಿಚಾರಣೆ ನಡೆಯುತ್ತಿದ್ದು, ಜೋ ಬೈಡನ್‌ ಅವರ ಪ್ರಕರಣದ ಸ್ವತಂತ್ರ ತನಿಖೆ ನಡೆಸಲು ನ್ಯಾಯಾಂಗ ಇಲಾಖೆಯು ವಿಶೇಷ ವಕೀಲರನ್ನು ನೇಮಿಸಿದೆ.

ಒಂದು ದಶಕದ ಹಿಂದೆ ಬರಾಕ್ ಒಬಾಮಾ ಅವರ ಆಡಳಿತಾವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡನ್‌, ಮಹತ್ವದ ದಾಖಲೆಗಳನ್ನು ಸಂಗ್ರಹಿಸುವಲ್ಲಿ ಆಕಸ್ಮಿಕ ತಪ್ಪುಗಳನ್ನು ಎಸಗಿದ್ದಾರೆ. ಹೀಗಾಗಿ ಸಂಗ್ರಹಿಸದ ವರ್ಗೀಕೃತ ದಾಖಲೆಗಳನ್ನು ಪತ್ತೆಹಚ್ಚಲು, ಕಾನೂನು ಅಧಿಕಾರಿಗಳು ಜೋ ಬೈಡನ್‌ ಅವರ ಡೆಲವರ್‌ನಲ್ಲಿರುವ ಜೋ ಬೈಡನ್‌ ಅವರ ಬೀಚ್‌ ಹೌಸ್‌ ಮೇಲೆ ದಾಳಿ ನಡೆಸಿದ್ದಾರೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.

2021ರಲ್ಲಿ ಶ್ವೇತಭವನವನ್ನು ತೊರೆದ ನಂತರ ನೂರಾರು ವರ್ಗೀಕೃತ ದಾಖಲೆಗಳನ್ನು ಹಸ್ತಾಂತರಿಸುವುದನ್ನು ಟ್ರಂಪ್‌ ವಿರೋಧಿಸಿದ್ದರು. ಆದರರೆ ತಾವು ವಾಷಿಂಗ್ಟನ್‌ನ ಥಿಂಕ್ ಟ್ಯಾಂಕ್‌ನ ಕಚೇರಿಯಲ್ಲಿನ ಬೆರಳೆಣಿಕೆಯಷ್ಟು ವರ್ಗೀಕೃತ ದಾಖಲೆಗಳನ್ನು ಸಂಗ್ರಹಿಸುವಲ್ಲಿ ಎಡವಿದ್ದು, ಈ ಪ್ರಕರಣದ ವಿಚಾರಣೆಯಲ್ಲಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ ಎಂದು ಜೋ ಬೈಡನ್‌ ಕೂಡ ಸ್ಪಷ್ಟಪಡಿಸಿದ್ದಾರೆ.

ವಿಲ್ಮಿಂಗ್ಟನ್‌ನಲ್ಲಿರುವ ಅವರ ಮುಖ್ಯ ಖಾಸಗಿ ಮನೆಯಲ್ಲಿ, ಎಫ್‌ಬಿಐ ನಡೆಸಿದ ಹುಡುಕಾಟದಲ್ಲಿ ಹೆಚ್ಚಿನ ದಾಖಲೆಗಳು ಕಂಡುಬಂದಿವೆ ಎನ್ನಲಾಗಿದ್ದು, ಈ ವರ್ಗೀಕೃತ ದಾಖಲೆಗಳಲ್ಲಿ ಏನಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

"ಇಂದಿನ ಹುಡುಕಾಟವು ಸಂಪೂರ್ಣ ಮತ್ತು ಸಮಯೋಚಿತ ಪ್ರಕ್ರಿಯೆಯಲ್ಲಿ ನಡೆದಿದೆ. ಈ ತನಿಖೆಗೆ ನಾವು ಸಂಪೂರ್ಣ ಬೆಂಬಲ ನೀಡಲಿದ್ದೇವೆ. ಇಂದಿನ ಹುಡುಕಾಟದ ಕೊನೆಯಲ್ಲಿ ನಾವು ಹೆಚ್ಚಿನ ಮಾಹಿತಿಯನ್ನು ಹೊಂದಿದ್ದೇವೆ.." ಎಂದು ಅಟಾರ್ನಿ ಬಾಬ್ ಬೌರ್ ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಸುದ್ದಿಗಳು

PM Modi on Budget: ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬಲವಾದ ಅಡಿಪಾಯ: ಕೇಂದ್ರ ಬಜೆಟ್‌ ಕೊಂಡಾಡಿದ ಪ್ರಧಾನಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಲೋಕಸಭೆಯಲ್ಲಿ ಇಂದು(ಫೆ.01-ಬುಧವಾರ) ಕೇಂದ್ರ ಬಜೆಟ್‌ 2023ರನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನ್ನು ಸ್ವಾಗತಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದೊಂದು ಅಭಿವೃದ್ಧಿ ಪರ ಹಾಗೂ ಜನಪರ ಬಜೆಟ್‌ ಎಂದು ಬಣ್ಣಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Union Budget: ಅಮೃತ ಕಾಲ ಅಲ್ಲ, 'ಮಿತ್ರ ಕಾಲದ ಬಜೆಟ್' ಎಂದ ರಾಹುಲ್​.. 'ಇದು ಬಜೆಟ್ಟಾ ಅಥವಾ ದಿನಸಿ ಅಂಗಡಿ ರಸೀದಿಯಾ?' ಎಂದ ಬಿಜೆಪಿ ನಾಯಕ

ಕೇಂದ್ರ ಬಜೆಟ್​​ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅಮೃತ ಕಾಲ ಅಲ್ಲ, 'ಮಿತ್ರ ಕಾಲದ ಬಜೆಟ್' ಎಂದು ಟೀಕಿಸಿದ್ದಾರೆ. ವಿರೋಧ ಪಕ್ಷಗಳು ಬಜೆಟ್​ ಅನ್ನು ಟೀಕಿಸುವುದು ಸಾಮಾನ್ಯ. ಆದರೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರೇ ತಮ್ಮ ಪಕ್ಷದ ನೇತೃತ್ವದ ಸರ್ಕಾರದ ಬಜೆಟ್​ ಕುರಿತು "ಇದು ಬಜೆಟ್ಟಾ ಅಥವಾ ದಿನಸಿ ಅಂಗಡಿ ರಸೀದಿಯಾ?" ಎಂದು ವ್ಯಂಗ್ಯವಾಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point

ವಿಭಾಗ