Uddhav Thackeray: 'ಯುದ್ಧ ಆರಂಭವಾಗಿದೆ'; ಮಹಾರಾಷ್ಟ್ರ ಸಿಎಂ ಶಿಂಧೆ ಬಣ ವಿರುದ್ಧ ಮತ್ತೆ ಗುಡುಗಿದ ಉದ್ಧವ್ ಠಾಕ್ರೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Uddhav Thackeray: 'ಯುದ್ಧ ಆರಂಭವಾಗಿದೆ'; ಮಹಾರಾಷ್ಟ್ರ ಸಿಎಂ ಶಿಂಧೆ ಬಣ ವಿರುದ್ಧ ಮತ್ತೆ ಗುಡುಗಿದ ಉದ್ಧವ್ ಠಾಕ್ರೆ

Uddhav Thackeray: 'ಯುದ್ಧ ಆರಂಭವಾಗಿದೆ'; ಮಹಾರಾಷ್ಟ್ರ ಸಿಎಂ ಶಿಂಧೆ ಬಣ ವಿರುದ್ಧ ಮತ್ತೆ ಗುಡುಗಿದ ಉದ್ಧವ್ ಠಾಕ್ರೆ

ಯುದ್ಧ ಆರಂಭವಾಗಿದೆ ಎನ್ನುವ ಮೂಲಕ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಶಿವಸೇನೆ ಹೆಸರು, ಪಕ್ಷದ ಚಿಹ್ನೆ ವಿಚಾರದಲ್ಲಿ ಮತ್ತೆ ಸಿಎಂ ಏಕನಾಥ್ ಶಿಂಧೆ ಬಣದ ವಿರುದ್ಧ ಗುಡುಗಿದ್ದಾರೆ.

ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ (ಫೋಟೋ-ಫೈಲ್)
ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ (ಫೋಟೋ-ಫೈಲ್)

ಮುಂಬೈ: ಮಹಾರಾಷ್ಟ್ರದಲ್ಲಿ ಸಿಎಂ ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಬಣಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಶಿವಸೇನೆ ಪಕ್ಷದ ಹೆಸರು ಹಾಗೂ ಪಕ್ಷದ ಚಿಹ್ನೆಯ ವಿಚಾರದಲ್ಲಿ ಅಂತೂ ಉದ್ಧವ್ ಠಾಕ್ರೆ ಕೆರಳಿ ಕೆಂಡವಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆ ಹೆಸರು ಮತ್ತು ಪಕ್ಷದ ಚಿಹ್ನೆ ನೀಡಿರುವ ವಿಚಾರವಾಗಿ ನಿನ್ನೆಯೇ ವಾಗ್ದಾಳಿ ನಡೆಸಿದ್ದ ಠಾಕ್ರೆ ಅವರು ಇಂದು ಕೂಡ ತಮ್ಮ ದಾಳಿಯನ್ನು ಮುಂದುವರೆಸಿದ್ದಾರೆ.

ಚುನಾವಣಾ ಆಯೋಗವು ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆಯ ಅಧಿಕೃತ ಹೆಸರು ಮತ್ತು ಬಿಲ್ಲು-ಬಾಣದ ಚಿಹ್ನೆಯನ್ನು ಪಡೆಯುತ್ತದೆ ಎಂದು ಆದೇಶವನ್ನು ಜಾರಿಗೊಳಿಸಿದ ಒಂದು ದಿನದ ನಂತರವೂ ಅವರನ್ನು ‘ಕಳ್ಳರು’ ಎಂದು ಠಾಕ್ರೆ ಕರೆದಿದ್ದಾರೆ.

ಬಿಜೆಪಿ ವಿರುದ್ಧವೂ ಸಿಡಿದಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೆ ಮಹಾರಾಷ್ಟ್ರಕ್ಕೆ ಬರಲು ಬಾಳಾಸಾಹೇಬ್ ಠಾಕ್ರೆಯ ಮುಖವಾಡ ಬೇಕು ಎಂದಿದ್ದಾರೆ. ಮೋದಿ ಅವರಿಗೆ ಬಾಳಾಸಾಹೇಬ್ ಠಾಕ್ರೆ ಅವರ ಮುಖ ಮತ್ತು ಚುನಾವಣಾ ಚಿಹ್ನೆ ಬೇಕು. ಆದರೆ ಅವರಿಗೆ ಶಿವಸೇನೆಯ ಕುಟುಂಬ ಬೇಕಾಗಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಯಾವ ಮುಖ ನಿಜ ಮತ್ತು ಯಾವುದು ಅಲ್ಲ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ, ಎಂದು ಮುಂಬೈನ ಮಾತೋಶ್ರೀ ಹೊರಗೆ ಶಕ್ತಿ ಪ್ರದರ್ಶನವಾಗಿ ನೆರೆದಿದ್ದ ಜನಸಮೂಹವನ್ನುದ್ದೇಶಿಸಿ ಮಾತನಾಡುವಾಗ ಉದ್ಧವ್ ಠಾಕ್ರೆ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ಕಳ್ಳರಿಗೆ ಪವಿತ್ರವಾದ ಬಿಲ್ಲು ಮತ್ತು ಬಾಣ

ಕಳ್ಳರಿಗೆ ಪವಿತ್ರವಾದ 'ಬಿಲ್ಲು ಮತ್ತು ಬಾಣ'ವನ್ನು ನೀಡಲಾಯಿತು, ಅದೇ ರೀತಿ ಟಾರ್ಚ್ ಅನ್ನು ತೆಗೆದುಕೊಂಡು ಹೋಗಬಹುದು. ನಾನು ಅವರಿಗೆ ಸವಾಲು ಹಾಕುತ್ತೇನೆ. ಅವರು ಗಂಡಸರೇ ಆಗಿದ್ದರೇ ಕದ್ದ 'ಬಿಲ್ಲು ಮತ್ತು ಬಾಣ'ದೊಂದಿಗೆ ನಮ್ಮ ಮುಂದೆ ಬನ್ನಿ. ನಾವು 'ಜ್ಯೋತಿ'ಯೊಂದಿಗೆ ಚುನಾವಣೆಗೆ ಸ್ಪರ್ಧಿಸುತ್ತೇವೆ. ಇದು ನಮ್ಮ ಪರೀಕ್ಷೆ, ಯುದ್ಧ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.

ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಮಾತನಾಡಿ, ಚುನಾವಣಾ ಆಯೋಗ ಸಂಪೂರ್ಣವಾಗಿ ರಾಜಿ ಮಾಡಿಕೊಂಡ ಸಂಸ್ಥೆ ಎಂದು ಕರೆದಿದ್ದಾರೆ.

ಸಂಪೂರ್ಣವಾಗಿ ರಾಜಿ ಮಾಡಿಕೊಂಡ ಸಂಸ್ಥೆ ಇಸಿ ಪ್ರಜಾಪ್ರಭುತ್ವವನ್ನು ಮುಗಿಸಲು ಬಯಸುತ್ತಿರುವಂತೆ ತೋರುತ್ತಿದೆ, ಕಳ್ಳರ ಗುಂಪನ್ನು ಕಾನೂನುಬದ್ಧಗೊಳಿಸುವುದು, ಕಳ್ಳತನವನ್ನು ಕಾನೂನುಬದ್ಧಗೊಳಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಆದಿತ್ಯ ಠಾಕ್ರೆ, ಇತರರ ಮುಖವಾಡ ಮತ್ತು ಗುರುತುಗಳನ್ನು ಮರೆಚುವ ಪ್ರಯತ್ನ ಇದಾಗಿದೆ. ಅವರಿಗೆ ತಮ್ಮ ಬಗ್ಗೆಯೇ ಮುಜುಗರಕ್ಕೊಳಗಾಗುತ್ತಾರೆ ಎಂದು ಟೀಕಿಸಿದ್ದಾರೆ.

ನಿನ್ನೆಯಷ್ಟೇ (ಫೆ.17, ಶುಕ್ರವಾರ) ಚುನಾವಣಾ ಆಯೋಗವು ಶಿವಸೇನಾ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡಿ ಆದೇಶ ಹೊರಡಿಸಿದೆ. ತನ್ನ 78 ಪುಟಗಳ ಆದೇಶ ನೀಡಿದೆ. ಶಿಂಧೆ ಮತ್ತು ಉದ್ಧವ್ ಠಾಕ್ರೆ ಬಣಗಳ ನಡುವೆ ಪಕ್ಷದ ಹೆಸರು ಮತ್ತು ಚಿಹ್ನೆಯ ಹಕ್ಕಿನ ಬಗ್ಗೆ ನಡೆಯುತ್ತಿರುವ ಜಗಳದಲ್ಲಿ ಎರಡೂ ಬಣಗಳಿಗೆ ಬ್ರೇಕ್ ನೀಡಿದ್ದ ಇಸಿ, ಉಪಚುನಾವಣೆ ವೇಳೆ ಶಿಂಧೆ ಬಣಕ್ಕೆ ಎರಡು ಕತ್ತಿ ಹಾಗೂ ಗುರಾಣಿ ಹಾಗೂ ಉದ್ಧವ್ ಬಣಕ್ಕೆ ಜ್ವಾಲೆಯ ಚಿಹ್ನೆಯನ್ನು ನೀಡಿತ್ತು.

ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷದ ನಾಯಕರು ಮತ್ತು ಪದಾಧಿಕಾರಿಗಳ ಸಭೆಯನ್ನು ನಡೆಸಿದ್ದು, ಇಸಿ ಆದೇಶದ ವಿರುದ್ಧ ಮುಂದಿನ ಕ್ರಮದ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಈ ಎರಡೂ ಬಣಗಳ ನಡುವಿನ ಸಮರ ಮುಂದೆ ಯಾವ ಮಟ್ಟಕ್ಕೆ ಹೋಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.