ಕನ್ನಡ ಸುದ್ದಿ  /  Nation And-world  /  Social Media Risks Kids And Teenagers Opinion Article Facebook Twitter Instagram Snapchat Effects Of Social Media Pcp

Opinion: ಸೋಷಿಯಲ್‌ ಮೀಡಿಯಾ ಮಕ್ಕಳಿಗೆ ಕೆಟ್ಟದು ಅಂತ ನಮಗೆ ಗೊತ್ತು, ಬನ್ನಿ ಅದನ್ನು ಸಾಬೀತುಪಡಿಸೋಣ

ಸಾಮಾಜಿಕ ಮಾಧ್ಯಮಗಳು ಮಕ್ಕಳಿಗೆ ಹಾನಿಕಾರಕ ಎಂಬ ಸಂಗತಿ ನಮಗೆಲ್ಲರಿಗೂ ಗೊತ್ತು. ಇದನ್ನು ಸಾಬೀತುಪಡಿಸಿ ಇದಕ್ಕೊಂದು ಸೂಕ್ತ ನಿಯಂತ್ರಣ ವ್ಯವಸ್ಥೆ ಬೇಕೆನ್ನುತ್ತಾರೆ ಬ್ಲೂಮ್‌ಬರ್ಗ್‌ ಅಂಕಣಗಾರ್ತಿ ಜೆಸ್ಸಿಕಾ ಕಾರ್ಲ್. ನಿಮ್ಮ ಮಕ್ಕಳು ಮೊಬೈಲ್‌ ಬಳಸುತ್ತಾರ? ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ಸುರಕ್ಷಿತವೇ? ಓದಿ ಈ ಲೇಖನ.

Opinion: ಸೋಷಿಯಲ್‌ ಮೀಡಿಯಾ ಮಕ್ಕಳಿಗೆ ಕೆಟ್ಟದು ಅಂತ ನಮಗೆ ಗೊತ್ತು, ಬನ್ನಿ ಅದನ್ನು ಸಾಬೀತುಪಡಿಸೋಣ
Opinion: ಸೋಷಿಯಲ್‌ ಮೀಡಿಯಾ ಮಕ್ಕಳಿಗೆ ಕೆಟ್ಟದು ಅಂತ ನಮಗೆ ಗೊತ್ತು, ಬನ್ನಿ ಅದನ್ನು ಸಾಬೀತುಪಡಿಸೋಣ

ಐಫೋನ್‌ನಲ್ಲಿರುವ ಸ್ಕ್ರೀನ್‌ ಟೈಮ್‌ ಸೆಟ್ಟಿಂಗ್‌ ಪ್ರಕಾರ ಈ ವಾರ ನಾನು ನನ್ನ ಫೋನ್‌ನಲ್ಲಿ 30 ಗಂಟೆ 22 ನಿಮಿಷ ಕಳೆದಿದ್ದೇನೆ. ಅದರಲ್ಲಿ ಅರ್ಧದಷ್ಟು ಅಂದ್ರೆ, 15 ಗಂಟೆ 27 ನಿಮಿಷ ನಾನು ಸೋಷಿಯಲ್‌ ಮೀಡಿಯಾದಲ್ಲಿ ಕಳೆದಿದ್ದೇನೆ. ನಾನು ಪ್ರತಿದಿನ ಎಚ್ಚರದಲ್ಲಿರುವ ಸಮಯದಲ್ಲಿ, ಶೇಕಡ 10ರಷ್ಟು ಸಮಯವನ್ನು ನಿಯಮಿತವಾಗಿ ಮೊಬೈಲ್‌ ಫೋನ್‌ ಮುಂದೆ ಕಳೆಯುತ್ತಿದ್ದೇನೆ ಎಂಬ ಅಂಶ ಅತ್ಯಂತ ಮುಜುಗರದ ಸಂಗತಿಯಾಗಿದೆ.

ಆದರೆ, ಈ ಸೋಷಿಯಲ್‌ ಮೀಡಿಯಾವನ್ನು ತಪ್ಪಿಸಿಕೊಳ್ಳುವುದು ಹೇಗೆ?

ಬೇಯಿಸಿದ 26 ಬಾದಾಮಿ ಬೆರ್ರಿ ಲೇಯರ್ ಕೇಕ್

ಲಾರ್ಡ್ ಆಫ್ ದಿ ರಿಂಗ್ಸ್‌ನ ಎಲ್ಲಾ ಮೂರು ಸಂಪುಟಗಳನ್ನು ಓದಿ

ಕೋಡಿಂಗ್ ಜ್ಞಾನ ಹೆಚ್ಚಿಸಿಕೊಳ್ಳಲು ಪೈಥಾನ್‌ ಕೋರ್ಸ್‌ನ ಮಾಹಿತಿ ಇಲ್ಲಿದೆ

ಹೀಗೆ, ಎಲ್ಲರ ಆಸಕ್ತಿಗೆ ತಕ್ಕಂತಹ ವಿಚಾರಗಳು ಮೊಬೈಲ್‌ ಫೋನ್‌ನಲ್ಲಿ ಕೈಗೆ ಸಿಗುತ್ತವೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಇದು ವಿಡಂಬನೆ ಎನ್ನುವುದು ಗೊತ್ತು. ಆದರೆ, ಸಾಮಾಜಿಕ ಮಾಧ್ಯಮವನ್ನು ವ್ಯಸನಕಾರಿಯಾಗಿ ವಿನ್ಯಾಸ ಮಾಡಲಾಗಿರುತ್ತದೆ. ಬೇಡ, ಸೋಷಿಯಲ್‌ ಮೀಡಿಯಾ ಸಾಕು ಎಂದು ಹೊರಗೆ ಬರಲು ಪ್ರಯತ್ನಿಸಿ. ಆಗ ಸ್ನೇಹಿತರೊಬ್ಬರು ಹಸಿರು ಬೆಳ್ಳುಳ್ಳಿ ಬೆಣ್ಣೆಯನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ವೀಡಿಯೊವನ್ನು ನನಗೆ ಕಳುಹಿಸುತ್ತಾರೆ. ಮತ್ತೆ ನಾನು ಆ ಬೆಣ್ಣೆಯಲ್ಲಿ ಮುಳುಗುತ್ತೇನೆ.

ನನ್ನ ಆಸಕ್ತಿಗೆ ತಕ್ಕಂತೆ ಬೆಳ್ಳುಳ್ಳಿ ಬೆಣ್ಣೆಯನ್ನು ನನಗೆ ಸೋಷಿಯಲ್‌ ಮೀಡಿಯಾ ತೋರಿಸಬಹುದು. ಆದರೆ, ಮಕ್ಕಳಿಗೆ ಸ್ಕ್ರೀನ್‌ ಇನ್ನಷ್ಟು ಕೆಟ್ಟದಾಗಿರಬಹುದು. ಅವರಿಗೆ ಹಸಿರು ಬೆಳ್ಳುಳ್ಳಿ ಬೆಣ್ಣೆಯ ಬದಲಿಗೆ, ಅವರು ಆತ್ಮಹತ್ಯೆ ಅಥವಾ ಡಿಶುಂ ಡಿಶುಂ ವಿಡಿಯೋಗಳು ಕಾಣಿಸಬಹುದು. "ಸೋಷಿಯಲ್‌ ಮೀಡಿಯಾವು ಹದಿಹರೆಯದವರ ಸಮಯವನ್ನು ಆಕ್ರಮಿಸಿಕೊಳ್ಳುತ್ತಿದೆ. ಅಮೆರಿಕದ ಪ್ರತಿ ಹದಿಹರೆಯದವರಲ್ಲಿ ಶೇಕಡ 95ರಷ್ಟು ಮಕ್ಕಳು ಸೋಷಿಯಲ್‌ ಮೀಡಿಯಾದಲ್ಲಿದ್ದಾರೆ" ಎಂದು ಲಿಸಾ ಜಾರ್ವಿಸ್‌ ಬರೆಯುತ್ತಾರೆ. ಅವರ ಪ್ರಕಾರ "ಮಕ್ಕಳು ನಿರಂತರವಾಗಿ ಸೋಷಿಯಲ್‌ ಮೀಡಿಯಾ ನೋಡುತ್ತಾರೆ, ಅವರನ್ನು ಮನೆಯಲ್ಲಿ ಮೊಬೈಲ್‌ ನೋಡದಂತೆ ಹೇಳಿದರೂ ಅವರು ಅದನ್ನು ಆಟದ ಮೈದಾನದಲ್ಲಿ, ಶಾಲೆಯಲ್ಲಿ ನೋಡುತ್ತಾರೆ" ಎಂದು ಅವರು ಹೇಳುತ್ತಾರೆ.

ಅಮೆರಿಕದ ಪ್ರಧಾನ ಸರ್ಜನ್ ವಿವೇಕ್ ಮೂರ್ತಿ ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಎಚ್ಚರಿಕೆ ನೀಡಿದ್ದರು. ಸೋಷಿಯಲ್‌ ಮೀಡಿಯಾವು ಹದಿಹರೆಯದವರ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಭಿಪ್ರಾಯವ್ಯಕ್ತಪಡಿಸಿದ್ದರು. "ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸುವ ಆರೋಗ್ಯದ ಎಚ್ಚರಿಕೆ ಸಂದೇಶಗಳು, ಆಲ್ಕೋಹಾಲ್‌ ಆರೋಗ್ಯಕ್ಕೆ ಹಾನಿಕಾರಕ, ಸಿಗರೇಟ್‌ನಿಂದ ಕ್ಯಾನ್ಸರ್‌ ಸಂಭವಿಸುತ್ತದೆ" ಇತ್ಯಾದಿಗಳು ಮಕ್ಕಳ ಕಣ್ಣಿಗೆ ಕಾಣಿಸದ ರೀತಿ ಇರುತ್ತವೆ. "ಸಾಮಾಜಿಕ ಮಾಧ್ಯಮ ಮತ್ತು ಮಕ್ಕಳ ಮಾನಸಿಕ ಆರೋಗ್ಯದ ಮೇಲಿನ ಪರಿಣಾಮದ ಕುರಿತು ಹೆಚ್ಚು ಎಚ್ಚರಿಕೆ ವಹಿಸಬೇಕು" ಎಂದು ನೋಹ್‌ ಹೇಳಿದ್ದಾರೆ. ಈ ಅಭಿಪ್ರಾಯಕ್ಕೆ (ಚರ್ಚೆಗೆ) ಲೀಸಾ ಸಹಮತ ಸೂಚಿಸಿದ್ದಾರೆ. "ಕಂಪನಿಗಳಿಂದ ಸಂಗ್ರಹಿಸಲಾದ ಬೃಹತ್ ಪ್ರಮಾಣದ ಡೇಟಾ ಮತ್ತು ಅವರ ಅಲ್ಗಾರಿದಮ್‌ಗಳ ಪ್ರಭಾವದ ಆಧಾರದಲ್ಲಿ ಮಕ್ಕಳ ಮೇಲೆ ಆಗುತ್ತಿರುವ ಪರಿಣಾಮವನ್ನು ಅಧ್ಯಯನ ಮಾಡಬಹುದು" ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಹಾನಿಯನ್ನು ಎಫ್‌ಡಿ ಫ್ಲಾಮ್‌ ಒಪ್ಪಿಕೊಳ್ಳುತ್ತಾರೆ. ಅವರ ಪ್ರಕಾರ "ಕಳೆದ ಮೂರು ವರ್ಷಗಳಲ್ಲಿ 19 ವರ್ಷದೊಳಗಿನವರ ಆತ್ಮಹತ್ಯೆ ಶೇಕಡ 20ರಷ್ಟು ಹೆಚ್ಚಾಗಿದೆ. ಕಾರ್‌ ಕ್ರ್ಯಾಷ್‌, ಆರತ್ಮಹತ್ಯೆ, ಡ್ರಗ್‌ ಸೇವನೆ (ಓವರ್‌ಡೋಸ್‌) ಇತ್ಯಾದಿಗಳಿಂದ ಸಾವು ಹೆಚಚಾಗಿದೆ. ಕೊರೊನಾ ಬಳಿಕ ಇಂತಹ ಘಟನೆಗಳು ಹೆಚ್ಚಾಗಿವೆ. ಕೊರೊನಾ ಸಮಯದಲ್ಲಿ ಅತಿಯಾದ ಮೊಬೈಲ್‌ ಬಳಕೆಯೂ ಇದಕ್ಕೆ ಕಾರಣ ಇರಬಹುದು. ಹದಿನಾಲ್ಕು ವರ್ಷದ ಬಾಲಕ ಈಗ ಹೊರಗಡೆ ಸ್ನೇಹಿತರನ್ನು ಮಾಡಲು ಬಯಸುವುದಿಲ್ಲ. ಹೊರಗೆ ಜನರೊಂದಿಗೆ ಬೆರೆಯುವ ಮನೋಭಾವ ಮಕ್ಕಳಲ್ಲಿ ಕಡಿಮೆಯಾಗಿದೆ" ಎಂದು ಅವರು ಹೇಳಿದ್ದಾರೆ,

ಮಕ್ಕಳಿಗೆ ಆರ್‌ಆಂಡ್‌ಆರ್‌ ಅಗತ್ಯವಿದೆ. ಆರ್‌ಆರ್‌ ಅಂದ್ರೆ ವಿಶ್ರಾಂತಿ (ರೆಸ್ಟ್‌) ಮತ್ತು ರಿಲಾಕ್ಸ್‌ ಅಲ್ಲ. ರಿಸರ್ಚ್‌ ಮತ್ತು ರೆಗ್ಯುಲೇಷನ್‌ ಅಗತ್ಯವಿದೆ. ಮಕ್ಕಳ ಮೇಲೆ ಸಾಮಾಜಿಕ ಮಾಧ್ಯಮದ ಹಾನಿಯ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕು ಮತ್ತು ಇದಕ್ಕೊಂದು ಸೂಕ್ತ ನಿಯಂತ್ರಣದ ಅಗತ್ಯವಿದೆ. ಸೋಷಿಯಲ್‌ ಮೀಡಿಯಾ ಕೆಟ್ಟದು ಎನ್ನುವುದನ್ನು ಸಾಬೀತುಪಡಿಸುವುದು ಇಂದಿನ ತುರ್ತು.

(ಬ್ಲೂಮ್‌ಬರ್ಗ್‌ ಒಪಿನಿಯನ್‌ ಅಂಕಣಗಾರ್ತಿ ಜೆಸ್ಸಿಕಾ ಕಾರ್ಲ್‌ ಇಂಗ್ಲಿಷ್‌ ಲೇಖನದ ಅನುವಾದ)

IPL_Entry_Point