ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Threat From Chinese Mobile Phones: ದೇಶ ಹಿತಕ್ಕೆ ಮಾರಕ ಈ ಚೀನೀ ಮೊಬೈಲ್‌ಗಳು; ಡಿಫೆನ್ಸ್ ಇಂಟೆಲಿಜೆನ್ಸ್‌ ಪಟ್ಟಿಯಲ್ಲಿ ಯಾವುದೆಲ್ಲ ಇದೆ?

Threat from Chinese mobile phones: ದೇಶ ಹಿತಕ್ಕೆ ಮಾರಕ ಈ ಚೀನೀ ಮೊಬೈಲ್‌ಗಳು; ಡಿಫೆನ್ಸ್ ಇಂಟೆಲಿಜೆನ್ಸ್‌ ಪಟ್ಟಿಯಲ್ಲಿ ಯಾವುದೆಲ್ಲ ಇದೆ?

Threat from Chinese mobile phones: ಡಿಫೆನ್ಸ್‌ ಇಂಟೆಲಿಜೆನ್ಸ್‌ ಏಜೆನ್ಸಿ ರವಾನಿಸಿರುವ ಸಂದೇಶದ ಪ್ರಕಾರ, ಸೇನಾ ಯೋಧರು ಮತ್ತು ಸೇನೆಯಲ್ಲಿ ಕೆಲಸ ಮಾಡುವವರು ಚೀನಾ ನಿರ್ಮಿತ ಮೊಬೈಲ್‌ ಹ್ಯಾಂಡ್‌ಸೆಟ್‌ ಬಳಸಬಾರದು. ಅವುಗಳ ಬಳಕೆ ದೇಶದ ಸುರಕ್ಷಾ ದೃಷ್ಟಿಯಿಂದ ಹಿತವಾದುದಲ್ಲ ಎಂಬ ಸಂದೇಶ ಸೇನಾ ವಲಯದಲ್ಲಿ ರವಾನೆಯಾಗಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (Photo by Josep LAGO / AFP))

ನವದೆಹಲಿ: ವಾಸ್ತವ ಗಡಿ ರೇಖೆಯಲ್ಲಿ ಚೀನಾ ಜತೆಗೆ ಸಂಘರ್ಷಮಯ ಸನ್ನಿವೇಶ ಮುಂದುವರಿದಿದೆ. ಹೀಗಿರುವಾಗಲೇ ಚೀನಾ ಮೇಡ್‌ ಮೊಬೈಲ್‌ ಹ್ಯಾಂಡ್‌ ಸೆಟ್‌ ಬಳಸದಂತೆ ಡಿಫೆನ್ಸ್‌ ಇಂಟೆಲಿಜೆನ್ಸ್‌ ಏಜೆನ್ಸಿ ಎಚ್ಚರಿಕೆ ಸಂದೇಶ ರವಾನಿಸಿದೆ.

ಸೇನಾ ಯೋಧರು ಮತ್ತು ಸೇನೆಯಲ್ಲಿ ಕೆಲಸ ಮಾಡುವವರು ಚೀನಾ ನಿರ್ಮಿತ ಮೊಬೈಲ್‌ ಹ್ಯಾಂಡ್‌ಸೆಟ್‌ ಬಳಸಬಾರದು ಎಂಬ ಸಂದೇಶ ಸೇನಾ ವಲಯದಲ್ಲಿ ರವಾನೆಯಾಗಿದೆ. ಡಿಫೆನ್ಸ್‌ ಇಂಟೆಲಿಜೆನ್ಸ್‌ ಏಜೆನ್ಸಿ ರವಾನಿಸಿರುವ ಸಂದೇಶದ ಪ್ರಕಾರ, ಚೀನಾ ನಿರ್ಮಿತ ಮೊಬೈಲ್‌ ಫೋನ್‌ ಉಪಕರಣಗಳನ್ನು ಬಹಳ ಎಚ್ಚರಿಕೆಯಿಂದ ಗಮನಿಸಬೇಕು. ಅವುಗಳ ಬಳಕೆ ದೇಶದ ಸುರಕ್ಷಾ ದೃಷ್ಟಿಯಿಂದ ಹಿತವಾದುದಲ್ಲ.

ಲಭ್ಯ ಡಿಫೆನ್ಸ್‌ ಇಂಟೆಲಿಜೆನ್ಸ್‌ ಏಜೆನ್ಸಿಯ ಸಂದೇಶದ ಪ್ರತಿಯನ್ನು ಇಟ್ಟುಕೊಂಡು ಎಎನ್‌ಐ ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿ ಪ್ರಕಾರ, ನಮ್ಮ ದೇಶದ ಹಿತಕ್ಕೆ ವಿರುದ್ಧವಾಗಿರುವ ದೇಶಗಳ ಉತ್ಪನ್ನಗಳು ವಿಶೇಷವಾಗಿ ಮೊಬೈಲ್‌ ಫೋನ್‌ ಖರೀದಿಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಸೇನೆಯಲ್ಲಿ ಕೆಲಸ ಮಾಡುವವರು ತಮಗೆ ಅಥವಾ ತಮ್ಮ ಕುಟುಂಬದ ಸದಸ್ಯರಿಗೆ ಫೋನ್‌ ಖರೀದಿಸುವಾಗ ಚೀನಾ ನಿರ್ಮಿತ ಫೋನ್‌ ಮತ್ತು ಇತರೆ ಇಲೆಕ್ಟ್ರಾನಿಕ್‌ ಉಪಕರಣ ಖರೀದಿಸದಂತೆ, ಬಳಸದಂತೆ ಮುತುವರ್ಜಿವಹಿಸಬೇಕು. ವಿಶೇಷವಾಗಿ ಚೀನಾ ನಿರ್ಮಿತ ಮೊಬೈಲ್‌ ಫೋನ್‌ಗಳ ಬಳಕೆ ಬಿಡುವುದು ಬಹಳ ಉತ್ತಮ. ಈ ಮೊಬೈಲ್‌ಗಳಲ್ಲಿ ಮಾಲ್ವೇರ್‌ ಮತ್ತು ಸ್ಪೈವೇರ್‌ಗಳು ಪತ್ತೆಯಾಗಿವೆ ಎಂದು ಸಲಹಾ ಸಂದೇಶ ಹೇಳಿದೆ.

ಸಲಹೆಯೊಂದಿಗೆ ಲಗತ್ತಿಸಲಾದ ಪಟ್ಟಿಯಲ್ಲಿ ಉಲ್ಲೇಖಿಸಲಾದ ಕಂಪನಿಗಳ ಫೋನ್‌ಗಳ ಬಳಕೆಯನ್ನು ಕೈಬಿಟ್ಟು, ಇತರೆ ಕಂಪನಿಗಳ ಫೋನ್‌ ಬಳಕೆ ಮಾಡುವುದಕ್ಕೆ ಡಿಫೆನ್ಸ್‌ ಇಂಟೆಲಿಜೆನ್ಸ್‌ ಏಜೆನ್ಸಿಯ ಸಂದೇಶದಲ್ಲಿರುವ ಮಾರ್ಗಸೂಚಿ ತಿಳಿಸಿದೆ.

ದೇಶದಲ್ಲಿ ವಾಣಿಜ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಚೀನೀ ಮೊಬೈಲ್ ಫೋನ್‌ಗಳ ಪೈಕಿ ಡಿಫೆನ್ಸ್‌ ಇಂಟೆಲಿಜೆನ್ಸ್‌ ಏಜೆನ್ಸಿಯ ಸಂದೇಶದಲ್ಲಿ ಉಲ್ಲೇಖವಾಗಿರುವ ಕಂಪನಿಗಳ ಪಟ್ಟಿಯಲ್ಲಿ Vivo, Oppo, Xiaomi, One Plus, Honor, Real Me, ZTE, Gionee, ASUS ಮತ್ತು Infinix ಸೇರಿ ಕೊಂಡಿವೆ.

ಚೀನಾದ ಮೊಬೈಲ್ ಫೋನ್ ಅಪ್ಲಿಕೇಶನ್‌ಗಳ ಮೇಲೆ ಬೇಹುಗಾರಿಕಾ ಏಜೆನ್ಸಿಗಳ ನಿಗಾ ತೀವ್ರವಾಗಿದೆ. ಮಿಲಿಟರಿ ಸಿಬ್ಬಂದಿಯ ಫೋನ್‌ಗಳಿಂದ ಅಂತಹ ಅನೇಕ ಅಪ್ಲಿಕೇಶನ್‌ಗಳನ್ನು ಈಗಾಗಲೇ ಅನ್‌ಇನ್‌ಸ್ಟಾಲ್‌ ಮಾಡಲಾಗಿದೆ. ರಕ್ಷಣಾ ಪಡೆಗಳು ತಮ್ಮ ಸಾಧನಗಳಲ್ಲಿ ಚೀನಾದ ಮೊಬೈಲ್ ಫೋನ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ನಿಲ್ಲಿಸಿವೆ.

ಭಾರತ ಮತ್ತು ಚೀನಾ ಮಾರ್ಚ್ 2020 ರಿಂದ ಮಿಲಿಟರಿ ಬಿಕ್ಕಟ್ಟಿನಲ್ಲಿ ತೊಡಗಿವೆ ಮತ್ತು ಪೂರ್ವ ಲಡಾಖ್‌ನಲ್ಲಿ ಅರುಣಾಚಲ ಪ್ರದೇಶಕ್ಕೆ ಎಲ್‌ಎಸಿಯಲ್ಲಿ ಪರಸ್ಪರರ ವಿರುದ್ಧ ಭಾರೀ ಪ್ರಮಾಣದ ನಿಯೋಜನೆ ಆಗಿದೆ.

ಗಮನಿಸಬಹುದಾದ ಸುದ್ದಿಗಳು

ಚಿನ್ನದ ಗಟ್ಟಿಗೂ ಇನ್ನು ಹಾಲ್‌ಮಾರ್ಕ್ ಕಡ್ಡಾಯ; ಬಹಿರಂಗವಾಗಿದೆ ಸರ್ಕಾರ ಮಟ್ಟದ ಚಿಂತನೆಯ ಸುಳಿವು

ಚಿನ್ನಾಭರಣಗಳಿಗೆ ಹಾಲ್‌ ಮಾರ್ಕ್‌ ಕಡ್ಡಾಯ ಆಗಿದೆ. ಇದೇ ಕ್ರಮ ಇನ್ನು ಚಿನ್ನದ ಗಟ್ಟಿಗೂ ಅನ್ವಯವಾಗುವ ದಿನ ದೂರ ಇಲ್ಲ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂಬ ಸುಳಿವನ್ನು ನೀಡಿದ್ದಾರೆ ಬಿಐಎಸ್‌ ಮುಖ್ಯಸ್ಥ ಪ್ರಮೋದ್ ಕುಮಾರ್ ತಿವಾರಿ.

ಹಾಲ್‌ಮಾರ್ಕಿಂಗ್ (ಗುಣಮಟ್ಟದ ಪ್ರಮಾಣೀಕರಣ) ದೇಶದ 288 ಜಿಲ್ಲೆಗಳಲ್ಲಿ ಚಿನ್ನದ ಆಭರಣಗಳು (14, 18, ಮತ್ತು 22 ಕ್ಯಾರೆಟ್) ಮತ್ತು ಆರ್ಟಿಕ್ರಾಫ್ಟ್‌ಗಳಿಗೆ 2022ರ ಜುಲೈ 1 ರಿಂದ ಜಾರಿಗೆ ಬರುವಂತೆ ಕಡ್ಡಾಯಗೊಳಿಸಲಾಗಿದೆ. ಚಿನ್ನಾಭರಣಕ್ಕೆ ಹಾಲ್‌ಮಾರ್ಕ್ ಇದ್ದರೆ ಮಾತ್ರ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬಹುದು ಎಂಬುದು ಮಧ್ಯಸ್ಥಗಾರರ ಬೇಡಿಕೆ. ಇದರಂತೆ ನಾವು ಕರಡು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದೇವೆ. ಅದನ್ನು ಆಧಾರವಾಗಿಟ್ಟುಕೊಂಡು ನಾವು ಸಮಾಲೋಚನಾ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ ಎಂದು ತಿವಾರಿ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point