ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Up News: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಉತ್ತರ ಪ್ರದೇಶದ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿದ ಕೋರ್ಟ್‌

UP News: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಉತ್ತರ ಪ್ರದೇಶದ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿದ ಕೋರ್ಟ್‌

ಉತ್ತರ ಪ್ರದೇಶದ ಮುಜಾಫರ್‌ ನಗರದ ವಿಶೇಷ ನ್ಯಾಯಾಲಯವು ಸುಮಾರು ಏಳು ವರ್ಷಗಳ ಹಿಂದೆ ಎಂಟು ವರ್ಷದ ದಲಿತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯೊಬ್ಬನಿಗೆ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

UP News: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಉತ್ತರ ಪ್ರದೇಶದ ಆರೋಪಿಗೆ ಜೀವಾವಧಿ ಶಿಕ್ಷೆ
UP News: ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ, ಉತ್ತರ ಪ್ರದೇಶದ ಆರೋಪಿಗೆ ಜೀವಾವಧಿ ಶಿಕ್ಷೆ

ಮುಜಾಫರ್‌ನಗರ (ಯುಪಿ): ಉತ್ತರ ಪ್ರದೇಶದ ಮುಜಾಫರ್‌ ನಗರದ ವಿಶೇಷ ನ್ಯಾಯಾಲಯವು ಸುಮಾರು ಏಳು ವರ್ಷಗಳ ಹಿಂದೆ ಎಂಟು ವರ್ಷದ ದಲಿತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯೊಬ್ಬನಿಗೆ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಆರೋಪಿಗೆ ಕೋರ್ಟ್‌ ಜೀವಾವಧಿ ಶಿಕ್ಷೆಯೊಂದಿಗೆ 30,000 ರೂಪಾಯಿ ದಂಡ ವಿಧಿಸಿದೆ.

ಜಿಲ್ಲಾ ಸರ್ಕಾರಿ ವಕೀಲ ರಾಜೀವ್ ಶರ್ಮಾ ಶನಿವಾರ ಪಿಟಿಐ-ಭಾಷಾಗೆ ಈ ಮಾಹಿತಿ ನೀಡಿದ್ದಾರೆ. ವಿಶೇಷ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ನ್ಯಾಯಾಲಯವು ಖಾಲಿದ್ ಎಂಬ ವ್ಯಕ್ತಿಗೆ ಈ ಶಿಕ್ಷೆ ವಿಧಿಸಿದೆ. ಬಾಲಕನು ಜುಲೈ 2016 ರಲ್ಲಿ ಶೌಚಾಲಯಕ್ಕೆ ಹೋಗಿದ್ದಾಗ ಈ ಆರೋಪಿಯು ದೌರ್ಜನ್ಯ ಎಸಗಿದ್ದನು.

ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಖಾಲಿದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಸರಾಸರಿ ಮೂರರಲ್ಲಿ ಎರಡು ಮಕ್ಕಳು ದೈಹಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಶೆಕಡ 53ರಷ್ಟು ಮಕ್ಕಳು ಒಂದಲ್ಲ ಒಂದು ರೀತಿ ಲೈಂಗಿಕ ದೌರ್ಜನ್ಯದ ಹಿಂಸೆ ಅನುಭವಿಸುತ್ತಿದ್ದಾರೆ. ಪ್ರತಿ ಎರಡನೇ ಮಗು ಭಾವನಾತ್ಮಕ ದೌರ್ಜನ್ಯದಿಂದ ಮಾನಸಿಕವಾಗಿ ತೀವ್ರ ಪರಿಣಾಮ ಎದುರಿಸುತ್ತದೆ. ಬಾಲಕರು ಲೈಂಗಿಕ ದೌರ್ಜನ್ಯ (ಸೊಡೊಮಿ)ಕ್ಕೆ ಪಾತ್ರರಾಗುವುದು ಕೂಡ ಅಧಿಕವಾಗಿದೆ. 18 ವರ್ಷದೊಳಗಿನ 73 ಮಿಲಿಯನ್ ಬಾಲಕರು, 150 ಮಿಲಿಯನ್ ಬಾಲಕಿಯರು ಬಲಾತ್ಕಾರ, ಸಂಭೋಗದಂತಹ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಅಂದಾಜು ಮಾಡಿದೆ.

ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತಹ ಹೀನ ಕೃತ್ಯಗಳು ದೇಶದಲ್ಲಿ ಆಗಾಗ ಬೆಳಕಿಗೆ ಬರುತ್ತಿವೆ. ಕರ್ನಾಟಕದಲ್ಲಿಯೂ ಇಂತಹದ್ದೇ ಪ್ರಕರಣ ಕೆಲವು ವರ್ಷಗಳ ಹಿಂದೆ ಬೆಳಕಿಗೆ ಬಂದಿತ್ತು. ಉಡುಪಿಯಲ್ಲಿ ಕೆಲವು ವರ್ಷದ ಹಿಂದೆ 21 ಶಾಲಾ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯದ ಪೋಕ್ಸೋ ವಿಶೇಷ ನ್ಯಾಯಾಲಯವು ಚಂದ್ರ ಕೆ. ಹೆಮ್ಮಾಡಿ ಎಂಬ ಆರೋಪಿಗೆ ಶಿಕ್ಷೆ ನೀಡಿತ್ತು.

ಕ್ರಿಶ್ಚಿಯನ್‌ ಸೆಮಿನರಿಯಲ್ಲಿರುವ ನಾಲ್ವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲಂ ಜಿಲ್ಲೆಯ ಪೋಕ್ಸೊ ನ್ಯಾಯಾಲಯವು ಕ್ಯಾಥೊಲಿಕ್‌ ಪಾದ್ರಿ ಯೊಬ್ಬರಿಗೆ 18 ವರ್ಷಗಳ ಕಠಿಣ ಸೆರೆವಾಸ ಶಿಕ್ಷೆಯನ್ನು ಕಳೆದ ವರ್ಷ ವಿಧಿಸಿತ್ತು.

ಕೊಲ್ಲಂ ಜಿಲ್ಲೆಯಲ್ಲಿರುವ ಕ್ರಿಶ್ಚಿಯನ್‌ ಸೆಮಿನರಿಯಲ್ಲಿದ್ದ ನಾಲ್ವರು ಮಕ್ಕಳನ್ನು ಪಾದ್ರಿಯು ಲೈಂಗಿಕವಾಗಿ ಶೋಷಿಸಿ ಚಿತ್ರಹಿಂಸೆ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಕೋರ್ಟ್‌, 35 ವರ್ಷದ ಪಾದ್ರಿ ಥಾಮಸ್‌ ಪೆರಿಕುಲಮ್‌ ಅವರಿಗೆ ಜೈಲು ಶಿಕ್ಷೆ ವಿಧಿಸಿತ್ತು.

ಮುರುಘಾ ಸ್ವಾಮಿಯ ಮೇಲಿನ ದೋಷಾರೋಪ ನಿಗದಿ

ಚಿತ್ರದುರ್ಗ: ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮಿಯ ಮೇಲಿನ ದೋಷಾರೋಪವನ್ನು ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ನಿಗದಿಪಡಿಸಿದೆ.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಸಲ್ಲಿಸಿದ್ದ ಎರಡು ದೋಷಾರೋಪ ಪಟ್ಟಿಗಳ ಪೈಕಿ ಒಂದರಲ್ಲಿನ ದೋಷಾರೋಪವನ್ನು ನಿಗದಿಪಡಿಸಿ ವಿಚಾರಣೆಯನ್ನು ಇದೇ ಏಪ್ರಿಲ್‌ 21ಕ್ಕೆ ಮುಂದೂಡಲಾಗಿದೆ.

ಇಬ್ಬರು ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಳೆದ ಅಕ್ಟೋಬರ್ 27ರಂದು ದೋಷಾರೋಪಪಟ್ಟಿ ಸಲ್ಲಿಸಿದ್ದರು.

ಶಿವಮೂರ್ತಿ ಸ್ವಾಮಿ, ಹಾಸ್ಟೆಲ್ ನ ಮಹಿಳಾ ವಾರ್ಡನ್ ಹಾಗೂ ಮಠದ ವ್ಯವಸ್ಥಾಪಕರಾಗಿದ್ದ ಪರಮಶಿವಯ್ಯ ವಿರುದ್ಧ ದೋಷಾರೋಪ ಮಾಡಲಾಗಿತ್ತು. ಈ ಮೂವರ ವಿರುದ್ಧವೂ ದೋಷಾರೋಪ ನಿಗದಿಯಾಗಿದೆ.

IPL_Entry_Point