ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Aadhaar Pan Linking: ಮಾರ್ಚ್ 31ರ ಒಳಗೆ ಆಧಾರ್-ಪ್ಯಾನ್ ಲಿಂಕ್ ಮಾಡದಿದ್ರೆ ಏನಾಗುತ್ತೆ?

Aadhaar PAN Linking: ಮಾರ್ಚ್ 31ರ ಒಳಗೆ ಆಧಾರ್-ಪ್ಯಾನ್ ಲಿಂಕ್ ಮಾಡದಿದ್ರೆ ಏನಾಗುತ್ತೆ?

ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು 2023ರ ಮಾರ್ಚ್ 31 ಕೊನೆಯ ದಿನವಾಗಿದೆ. ಒಂದು ವೇಳೆ ಈ ಕೊನೆಯ ದಿನದೊಳಗೆ ಲಿಂಕ್ ಮಾಡದಿದ್ದರೆ ಏನಾಗುತ್ತೆ ಎಂಬುುದರ ಮಾಹಿತಿ ಇಲ್ಲಿದೆ.

ಆಧಾರ್ -ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಮಾರ್ಚ್ 31 ಕೊನೆಯ ದಿನವಾಗಿದೆ.
ಆಧಾರ್ -ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಮಾರ್ಚ್ 31 ಕೊನೆಯ ದಿನವಾಗಿದೆ.

ನವದೆಹಲಿ: ದೇಶದ ಪ್ರತಿಯೊಬ್ಬರು ಪರ್ಮನೆಂಟ್ ಅಕೌಂಟ್ ನಂಬರ್- PAN ನೊಂದಿಗೆ ಆಧಾರ್ ಸಂಖ್ಯೆಯನ್ನ ಲಿಂಕ್ ಮಾಡಬೇಕೆಂಬುದನ್ನು ಕಡ್ಡಾಯಗೊಳಿಸಿ ಸರ್ಕಾರ ಸುತ್ತೋಲೆ ಹೊರಡಿಸಿ ಬಹಳ ದಿನಗಳಾಗಿವೆ. ಆದರೆ ಇಂದಿಗೂ ಹಲವರು ಆಧಾರ್-ಪ್ಯಾನ್ ಜೋಡಣೆಯನ್ನು ಮಾಡಿಲ್ಲ.

ಟ್ರೆಂಡಿಂಗ್​ ಸುದ್ದಿ

ಆಧಾರ್-ಪ್ಯಾನ್ ಜೋಡಣೆಯಿಂದ ಪ್ರಯೋಜನವೇನು?

ಎಲ್ಲಾ ತೆರಿಗೆದಾರರು ತಮ್ಮ ಪ್ಯಾನ್‌ಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನ ಲಿಂಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆ ಡೆಡ್ ಲೈನ್ ನೀಡಿದೆ. ಈ ಆಧಾರ್-ಪ್ಯಾನ್ ಲಿಂಕ್ ಮಾಡುವುದರಿಂದ ತೆರಿಗೆ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟ್ಯಾಕ್ಸ್ ಕಟ್ಟುವ ಪ್ರತಿಯೊಬ್ಬರು 2023ರ ಮಾರ್ಚ್ 31ರ ಒಳಗೆ ಈ ಎರಡಕ್ಕೂ ಕಡ್ಡಾಯವಾಗಿ ಲಿಂಕ್ ಮಾಡಬೇಕು, ವಿಫಲವಾದರೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ-CBDT ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಐಟಿ ಕಾಯ್ದೆಯ ಅಡಿಯಲ್ಲಿ ಹಲವಾರು ಪರಿಣಾಮಗಳನ್ನ ಎದುರಿಸಬೇಕಾಗುತ್ತದೆ.

ಆಧಾರ್-ಪ್ಯಾನ್ ಕಾರ್ಡ್‌ಗಳನ್ನು ಲಿಂಕ್ ಮಾಡಲು ಇನ್ನುಳಿದಿರುವುದು ನಾಲ್ಕೇ ದಿನಗಳು. ಒಂದು ವೇಳೆ ಲಿಂಕ್ ಮಾಡದಿದ್ದರೆ ಏನಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಮಾರ್ಚ್ 31 ರೊಳಗೆ ನೀವು ನಿಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡದಿದ್ದರೆ, ಮೊದಲು ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. CBDT ಸುತ್ತೋಲೆಯ ಪ್ರಕಾರ, ಆದಾಯ-ತೆರಿಗೆ ನಿಯಮಗಳ ನಿಯಮ 114AAA ಅಡಿಯಲ್ಲಿ ಒಬ್ಬ ವ್ಯಕ್ತಿಯ ಪ್ಯಾನ್ ಕಾರ್ಡ್ ನಿಷ್ಕ್ರಿಯವಾದರೆ ಹಣಕಾಸಿನ ವ್ಯವಹಾರಗಳಿಗೆ ಸಮಸ್ಯೆಯಾಗಲಿದೆ.

ಪ್ಯಾನ್ ಕಾರ್ಡ್ ಅಗತ್ಯ ಇರುವ ಯೋಜನೆ ಅಥವಾ ಸೌಲಭ್ಯಗಳಿಂದ ವಂಚಿತನಾಗುತ್ತಾನೆ. ಈ ನಿಯಮಗಳ ಅಡಿಯಲ್ಲಿ ಎಲ್ಲಾ ರೀತಿಯ ಪರಿಣಾಮಗಳಿಗೆ ಆವ್ಯಕ್ತಿಯೇ ಹೊಣೆಗಾರನಾಗಿರುತ್ತಾನೆ.

ನೀವು ಇಂದೇ ನಿಮ್ಮ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಿದರೆ, ದಂಡವಿಲ್ಲದೆ ಲಿಂಕ್ ಮಾಡುವ ಕೊನೆಯ ದಿನಾಂಕ 2022ರ ಜೂನ್ 30ಕ್ಕೆ ಮುಗಿದಿರುವ ಕಾರಣ 1,000 ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಅವಧಿಯೂ ಈಗಾಗಲೇ ಮುಗಿದಿದೆ.

ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ಲಿಂಕ್ ಮಾಡದಿದ್ದರೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವುದು ಸಹ ಸವಾಲಾಗಬಹುದು. ನಿಮ್ಮ ಐಟಿಆರ್ ಅನ್ನು ಆದಾಯ ತೆರಿಗೆ ಇಲಾಖೆ ತಿರಸ್ಕರಿಸಬಹುದು. ಐಟಿ ಇಲಾಖೆಯು ನಿಮ್ಮ ಐಟಿಆರ್ ಅನ್ನು ಫೈಲ್ ಮಾಡದಂತೆ ತಡೆಯಬಹುದು, ತೆರಿಗೆ ಮರುಪಾವತಿಯನ್ನು ಪಡೆಯುವ ಅವಕಾಶವನ್ನು ನೀವು ಕಳೆದುಕೊಳ್ಳಬಹುದು.

ಬಿಕ್ಯೂ ಪ್ರೈಮ್ ಪ್ರಕಾರ, ಆಧಾರ್-ಪ್ಯಾನ್ ಕಾರ್ಡ್‌ಗಳನ್ನು ಲಿಂಕ್ ಮಾಡದಿದ್ದರೆ, ಸಬ್ಸಿಡಿ, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಮತ್ತು ಬ್ಯಾಂಕ್ ಖಾತೆಯನ್ನು ತೆರೆಯುವುದು ಮುಂತಾದ ಕೆಲವು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತೊಂದರೆ ಆಗುತ್ತದೆ.

ಆಧಾರ್‌ಗೆ ಲಿಂಕ್ ಮಾಡದಿದ್ದರೆ ಹೊಸ ಪ್ಯಾನ್ ಪಡೆಯುವುದು ಕಷ್ಟವಾಗಬಹುದು. ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋದರೆ ಅಥವಾ ಹಾನಿಗೊಳಗಾದರೆ, ಎರಡು ದಾಖಲೆಗಳನ್ನು ಲಿಂಕ್ ಮಾಡದೆಯೇ ಹೊಸದನ್ನು ಪಡೆಯುವುದು ನಿಮಗೆ ಕಷ್ಟವಾಗಬಹುದು. ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಸಂಖ್ಯೆಯನ್ನು ಸೇರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಆಧಾರ್ ಜೊತೆಗೆ ವೋಟರ್ ಐಡಿಗೂ ಲಿಂಕ್ ಮಾಡಬೇಕು.. ಆದರೆ

ಬಳಕೆದಾರರು ತಮ್ಮ ಆಧಾರ್‌ ಜತೆಗೆ ವೋಟರ್‌ ಐಡಿ ಜೋಡಿಸುವ ಕೆಲಸವನ್ನು ಆನ್‌ಲೈನ್‌ ಮೂಲಕ ಅಥವಾ ಎಸ್‌ಎಂಎಸ್‌ ಮೂಲಕ ಮಾಡಬೇಕಿದೆ. ಆದರೆ 2024ರ ಮಾರ್ಚ್‌ 31ರ ಒಳಗೆ ಪೂರ್ಣಗೊಳಿಸಬೇಕು. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದರೆ ಅದನ್ನು ರದ್ದುಗೊಳಿಸುವುದಕ್ಕೆ ಇದು ನೆರವಾಗಲಿದೆ ಎಂದು ಚುನಾವಣಾ ಆಯೋಗ ಈ ಹಿಂದೆ ತಿಳಿಸಿತ್ತು.

IPL_Entry_Point

ವಿಭಾಗ