ಕನ್ನಡ ಸುದ್ದಿ  /  Photo Gallery  /  Cricket News Ireland S Harry Tector Turns Heads By Overtaking Kohli Rohit De Kock Buttler In Icc Odi Rankings Prs

ICC ODI Ranking: ಏಕದಿನ ರ್ಯಾಂಕಿಂಗ್​​​ನಲ್ಲಿ ಐರ್ಲೆಂಡ್ ಕ್ರಿಕೆಟಿಗಿನ ಮಹಾ ಸಾಧನೆ; ಕೊಹ್ಲಿ, ರೋಹಿತ್​ರನ್ನೇ ಹಿಂದಿಕ್ಕಿದ ಯುವ ಆಟಗಾರ

ಐಸಿಸಿ ಏಕದಿನ ರ್ಯಾಕಿಂಗ್​​​​ ಪ್ರಕಟಗೊಂಡಿದೆ. ಐರ್ಲೆಂಡ್​ನ ಯುವ ಕ್ರಿಕೆಟಿಗನೊಬ್ಬ ಐಸಿಸಿ ರ್ಯಾಕಿಂಗ್​​​​ನಲ್ಲಿ ಧೂಳೆಬ್ಬಿಸಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ಕ್ವಿಂಟನ್ ಡಿ ಕಾಕ್, ರೋಹಿತ್​ ಶರ್ಮಾ ಅವರಂತಹ ಬಿಗ್​ ಸ್ಟಾರ್​ಗಳನ್ನೇ ಹಿಂದಿಕ್ಕಿದ್ದಾರೆ.

ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಸರಣಿಯ 2ನೇ ಏಕದಿನ ಪಂದ್ಯದಲ್ಲಿ ಐರ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಟೆಕ್ಟರ್ 140 ರನ್ ಗಳಿಸಿ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ ಗಳಿಸಿದರು.
icon

(1 / 7)

3 ಪಂದ್ಯಗಳಲ್ಲಿ 206 ರನ್ ಗಳಿಸಿ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್‌ಮನ್ ಹ್ಯಾರಿ ಟೆಕ್ಟರ್, ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರ 7ಕ್ಕೆ ಏರಿದ್ದಾರೆ.
icon

(2 / 7)

ಹಲವು ತಿಂಗಳಿಂದ 7ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ, 8ನೇ ಸ್ಥಾನಕ್ಕೆ ಕುಸಿದರೆ, 8ನೇ ಶ್ರೇಯಾಂಕದಲ್ಲಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟನ್​​ ಡಿ ಕಾಕ್ ಹ್ಯಾರಿ ಟೆಕ್ಟರ್ ಹೊಡೆತದಿಂದ 9ನೇ ಸ್ಥಾನಕ್ಕೆ ಕುಸಿದಿದ್ದಾರೆ.
icon

(3 / 7)

ಏಕದಿನ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅಗ್ರಸ್ಥಾನದಲ್ಲಿ ಮುಂದುವರಿದರೆ, ಶುಭಮನ್ ಗಿಲ್ ಅಗ್ರ 5ರಲ್ಲಿದ್ದಾರೆ. 
icon

(4 / 7)

ಪ್ರಸ್ತುತ 722 ಅಂಕಗಳನ್ನು ಗಳಿಸಿರುವ ಹ್ಯಾರಿ ಟೆಕ್ಟರ್, ಏಕದಿನದಲ್ಲಿ ಐರ್ಲೆಂಡ್ ಕ್ರಿಕೆಟಿಗರಲ್ಲಿ ಅತ್ಯುನ್ನತ ಶ್ರೇಯಾಂಕ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ.
icon

(5 / 7)

ಇದಕ್ಕೂ ಮುನ್ನ ಐರಿಷ್​ ಕ್ರಿಕೆಟಿಗ ಇಯಾನ್ ಮಾರ್ಗನ್​, ಇಂಗ್ಲೆಂಡ್​ ತಂಡದ ಪರ ಆಡುವಾಗ 712 ಪಾಯಿಂಟ್ಸ್ (2019ರಲ್ಲಿ)​ ಪಡೆದಿದ್ದರು. ಪಾಲ್ ಸ್ಟಿರ್ಲಿಂಗ್ ಜೂನ್ 2021ರಲ್ಲಿ 697 ಅಂಕ ಪಡೆದಿದ್ದರು. ಈ ಇಬ್ಬರ ದಾಖಲೆಯನ್ನು ಹ್ಯಾರಿ ಟೆಕ್ಟರ್ ಮುರಿದಿದ್ದಾರೆ.
icon

(6 / 7)

ವಿರಾಟ್​ ಕೊಹ್ಲಿ 719 ಅಂಕ ಪಡೆದಿದ್ದರೆ, ಡಿ ಕಾಕ್​ 718 ಅಂಕ, ರೋಹಿತ್​ ಶರ್ಮಾ 707 ಅಂಕ ಪಡೆದು ಕ್ರಮವಾಗಿ 8, 9, 10ನೇ ಸ್ಥಾನದಲ್ಲಿದ್ದಾರೆ.
icon

(7 / 7)

IPL_Entry_Point

ಇತರ ಗ್ಯಾಲರಿಗಳು