ಕನ್ನಡ ಸುದ್ದಿ  /  Photo Gallery  /  Do You Love The Cat? Must Know This Things

ಬೆಕ್ಕನ್ನು ಸಾಕುತ್ತಿದ್ದೀರಾ? ಬೆಕ್ಕಿನ ಕುರಿತಾದ ಈ ಸತ್ಯ-ಮಿಥ್ಯಗಳ ಬಗ್ಗೆ ನೀವು ತಿಳಿಯಲೇಬೇಕು

ಬೆಕ್ಕುಗಳು ನಮ್ಮ ನೆಚ್ಚಿನ ಸಾಕುಪ್ರಾಣಿಗಳಲ್ಲಿ ಒಂದು. ಬೆಕ್ಕನ್ನು ಅತಿಯಾಗಿ ಪ್ರೀತಿಸುವ ನಾವು ಅವುಗಳ ಬಗ್ಗೆ ಕೆಲವೊಂದು ಅಪನಂಬಿಕೆಗಳನ್ನು ಹೊಂದಿದ್ದೇವೆ. ಹಾಗಾದರೆ ಬೆಕ್ಕಿನ ಬಗ್ಗೆ ನಮ್ಮಲ್ಲಿರುವ ನಂಬಿಕೆ ಹಾಗೂ ಅಪನಂಬಿಕೆಗಳು ಯಾವುವು?

ಬೆಕ್ಕು ವಿಶ್ವದ ಅತ್ಯಂತ ಪ್ರೀತಿಯ ಸಾಕುಪ್ರಾಣಿಗಳಲ್ಲಿ ಒಂದು. ತಮ್ಮ ಸ್ವತಂತ್ರ ಹಾಗೂ ಕೆಲವೊಮ್ಮೆ ನಿಗೂಢ ನಡವಳಿಕೆಗಳಿಂದ ಇವುಗಳನ್ನು ಅರ್ಥ ಮಾಡಿಕೊಳ್ಳುವುದು ನಮಗೆ ಕಷ್ಟವಾಗುತ್ತದೆ. ಬೆಕ್ಕನ್ನು ಕಂಡಾಗ ಮುದ್ದಿಸುವ ಜನರು ಅವುಗಳ ಬಗ್ಗೆ ಕೆಲವೊಂದು ಅಪನಂಬಿಕೆಗಳನ್ನೂ ಹೊಂದಿದ್ದಾರೆ. ಬೆಕ್ಕುಗಳನ್ನು ಅಪಶಕುನ ಎಂದು ಕರೆಯಲಾಗುತ್ತದೆ. ಈ ಲೇಖನದಲ್ಲಿ ಬೆಕ್ಕಿನ ಕುರಿತು ಕೆಲವು ಸತ್ಯ ಹಾಗೂ ಮಿಥ್ಯಗಳನ್ನು ತಿಳಿಸಲಾಗಿದೆ. 
icon

(1 / 7)

1. ಮಿಥ್ಯ: ಬೆಕ್ಕುಗಳು ಒಂಟಿ ಜೀವಿಗಳು.  ಸತ್ಯ - ಜನರಲ್ಲಿನ ಈ ನಂಬಿಕೆ ಸುಳ್ಳು. ಬದಲಾಗಿ ಬೆಕ್ಕುಗಳು ಒಂಟಿ ಜೀವಿಗಳಲ್ಲ. ಅವು ಸಾಮಾಜಿಕ ಪ್ರಾಣಿಗಳು. ತಮ್ಮ ಮಾಲೀಕರು ಮತ್ತು ಇತರ ಸಾಕುಪ್ರಾಣಿಗಳೊಂದಿಗೆ ಆಳವಾದ ಬಂಧಗಳನ್ನು ಬೆಳೆಸಿಕೊಳ್ಳುವ ಗುಣಗಳನ್ನು ಇವು ಹೊಂದಿವೆ. ಬೆಕ್ಕುಗಳು ವಿವಿಧ ದೇಹ ಭಾಷೆಯನ್ನು ಬಳಸಿಕೊಂಡು ಪರಸ್ಪರ ಸಂವಹನ ನಡೆಸುತ್ತವೆ.
icon

(2 / 7)

2. ಮಿಥ್ಯ: ಬೆಕ್ಕುಗಳು ಕಾಲಿನ ಸಹಾಯದಿಂದ ಕೆಳಗಿಳಿಯುತ್ತವೆ.  ಸತ್ಯ - ಬೆಕ್ಕುಗಳು ಅತ್ಯುತ್ತಮ ಆರೋಹಿಗಳಾಗಿದ್ದರೂ, ಅವು ಯಾವಾಗಲೂ ತಮ್ಮ ಕಾಲಿನ ಸಹಾಯದಿಂದ ಕೆಳಗಿಳಿಯುವುದಿಲ್ಲ. ಒಂದು ವೇಳೆ ಬೆಕ್ಕು ಎತ್ತರದ ಸ್ಥಳದಿಂದ ಬಿದ್ದರೆ, ಅವರು ಬೇಗನೆ ಚೇತರಿಸಿಕೊಳ್ಳುವುದಿಲ್ಲ. ಅಲ್ಲದೆ ಹೀಗೆ ಬೀಳುವುದರಿಂದ ಅವುಗಳಿಗೆ ಗಾಯವಾಗುವ ಸಾಧ್ಯತೆಯೂ ಹೆಚ್ಚು.  
icon

(3 / 7)

3. ಸತ್ಯ: ಬೆಕ್ಕುಗಳು ಶುದ್ಧ ಪ್ರಾಣಿಗಳು.  ಬೆಕ್ಕುಗಳು ತುಂಬಾ ಸ್ವಚ್ಛವಾದ ಪ್ರಾಣಿಗಳು ಮತ್ತು ಅವು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತವೆ. ಈ ನಡವಳಿಕೆಯು ಅವುಗಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ ಮಾತ್ರವಲ್ಲ, ಆ ಹೊತ್ತಿನಲ್ಲಿ ಅವು ಶಾಂತವಾಗಿರುತ್ತವೆ.
icon

(4 / 7)

4. ಮಿಥ್ಯ: ಬೆಕ್ಕುಗಳಿಗೆ ಸಂಪೂರ್ಣ ಕತ್ತಲೆಯಲ್ಲೂ ಕಣ್ಣು ಕಾಣಿಸುತ್ತದೆ.  ಬೆಕ್ಕುಗಳಿಗೆ ದೃಷ್ಟಿ ಚುರುಕಾಗಿರುತ್ತದೆ. ಆ ಕಾರಣಕ್ಕೆ ಕಡಿಮೆ ಬೆಳಕಿದ್ದರೂ ಅವುಗಳು ಚಲಿಸಬಲ್ಲವು, ಜೊತೆಗೆ ವಸ್ತುಗಳನ್ನು ಕಂಡುಹಿಡಿಯಬಲ್ಲವು. ಹಾಗಂತ ಸಂಪೂರ್ಣ ಕತ್ತಲೆಯಲ್ಲಿ ಅವುಗಳಿಗೆ ನೋಡಲು ಸಾಧ್ಯವಾಗುವುದಿಲ್ಲ. ಅವು ಕತ್ತಲೆಯಲ್ಲಿ ಸ್ಪರ್ಶ ಮತ್ತು ಶ್ರವಣದಂತಹ ಇಂದ್ರಿಯಗಳನ್ನು ಬಳಸಿಕೊಳ್ಳುತ್ತವೆ.  
icon

(5 / 7)

5. ಸತ್ಯ: ನಿಮ್ಮ ಬೆಕ್ಕಿಗೆ ಸಂತಾನಹರಣ ಚಿಕಿತ್ಸೆ ಮಾಡಿಸುವುದರಿಂದ ಹಲವು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಸಂತಾನಹರಣದಿಂದ ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಅವುಗಳನ್ನು ದೂರ ಇರಿಸಬಹುದು. ಆಕ್ರಮಣಶೀಲತೆಯಂತಹ ಅನಪೇಕ್ಷಿತ ನಡವಳಿಕೆಗಳನ್ನು ನಿಗ್ರಹಿಸಲು ಇದು ಸಹಾಯ ಮಾಡುತ್ತದೆ.
icon

(6 / 7)

ಬೆಕ್ಕುಗಳು ಪ್ರಪಂಚದಾದ್ಯಂತ ಲಕ್ಷಾಂತರ ಮನಸ್ಸುಗಳಿಗೆ ಹತ್ತಿರವಾದ ಆಕರ್ಷಕ ಸಾಕುಪ್ರಾಣಿಗಳು. ಅದಾಗ್ಯೂ, ಅವುಗಳ ನಡವಳಿಕೆ ಮತ್ತು ಅಗತ್ಯಗಳನ್ನು ಅರ್ಥಮಾಡಿಕೊಂಡು ಕಾಲ್ಪನಿಕತೆಯಿಂದ ಸತ್ಯವನ್ನು ಪ್ರತ್ಯೇಕಿಸುವುದು ಮುಖ್ಯವಾಗಿದೆ. ಬೆಕ್ಕುಗಳ ಬಗ್ಗೆ ಇರುವ ಕೆಲವು ಸಾಮಾನ್ಯ ಅಪನಂಬಿಕೆಗಳನ್ನು ಹೊರಹಾಕುವ ಮೂಲಕ, ಅವುಗಳ ಬಗ್ಗೆ ಇನ್ನಷ್ಟು ಪ್ರೀತಿ ಹಾಗೂ ತಿಳುವಳಿಕೆ ಬೆಳೆಸಿಕೊಳ್ಳಬಹುದು. 
icon

(7 / 7)

IPL_Entry_Point

ಇತರ ಗ್ಯಾಲರಿಗಳು