ಕನ್ನಡ ಸುದ್ದಿ  /  Photo Gallery  /  Hair Care In Summer How To Control Hair Fall 6 Home Remedies To Control Summer Hair Fall Dandruff Rst

Summer Hair Care: ಬೇಸಿಗೆಯಲ್ಲಿ ಅತಿಯಾಗಿ ಕೂದಲು ಉದುರುವುದನ್ನು ತಡೆಯಲು ಇಲ್ಲಿದೆ 6 ಮನೆಮದ್ದು

  • ಈ ವರ್ಷ ಬಿಸಿಲಿನ ಜೊತೆಗೆ ಕೂದಲು ಉದುರುವುದು ಕೂಡ ಹೆಚ್ತಾ ಇದ್ಯಾ? ಅತಿಯಾಗಿ ಕೂದಲು ಉದುರಲು ಕಾರಣಗಳು ಹಲವು. ಆದರೆ ಈ ಕೆಲವು ನೈಸರ್ಗಿಕ ವಿಧಾನಗಳಿಂದ ಕೂದಲು ಉದುರುವುದನ್ನು ತಡೆಯಬಹುದು. ಇವು ನೆತ್ತಿಯ ಭಾಗವನ್ನು ಸ್ವಚ್ಛ ಮಾಡಿ ಬುಡದಿಂದಲೇ ಕೂದಲು ಸದೃಢವಾಗಲು ಸಹಾಯ ಮಾಡುತ್ತವೆ.

ಅತಿಯಾದ ಉಷ್ಣಾಂಶವು ಕೂದಲು ಉದುರಲು ಕಾರಣವಾಗಬಹುದು. ಹೀಗಾಗಿ ಬೇಸಿಗೆಯಲ್ಲಿ ನೆತ್ತಿಯ ಭಾಗವನ್ನು ತಂಪಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಬೇಸಿಗೆಯಲ್ಲಿ ಕೂದಲು ಉದುರುವ ಪ್ರಮಾಣ ಹೆಚ್ಚಿತು ಎಂದು ಸಿಕ್ಕ ಸಿಕ್ಕ ಉತ್ಪನ್ನಗಳನ್ನು ಬಳಸುವ ಬದಲು ಮನೆಯಲ್ಲೇ ಈ ಸುಲಭ ಮಾರ್ಗಗಳನ್ನು ಅನುಸರಿಸಿ ನೋಡಿ. 
icon

(1 / 9)

ಕೂದಲಿನ ಸರ್ವಸಮಸ್ಯೆಗೂ ತೆಂಗಿನೆಣ್ಣೆ ಮದ್ದು ಎಂದರೆ ತಪ್ಪಾಗಲಿಕ್ಕಿಲ್ಲ. ಇದು ಕೂದಲಿನ ಹಾನಿಯನ್ನು ತಪ್ಪಿಸುತ್ತದೆ. ಇದು ಹಾನಿಯಾದ ಹಾನಿ ಹಾನಿಯಾಗದ ಕೂದಲಿನಲ್ಲಿ ಪ್ರೊಟೀನ್‌ ನಷ್ಟವನ್ನು ತಪ್ಪಿಸುತ್ತದೆ. ತೆಂಗಿನೆಣ್ಣೆ ಬಿಸಿ ಮಾಡಿ ಉಗುರು ಬೆಚ್ಚಗೆ ಇರುವಾಗ ನೆತ್ತಿಗೆ ಭಾಗಕ್ಕೆ ಚೆನ್ನಾಗಿ ಮಸಾಜ್‌ ಮಾಡಿಕೊಳ್ಳುವುದರಿಂದ ರಕ್ತದ ಹರಿವು ಹೆಚ್ಚುತ್ತದೆ. ಇಲ್ಲದೆ ಇದು ಹೊಸ ಕೂದಲಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ. ವಾರದಲ್ಲಿ ಮೂರು ಬಾರಿ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಲಭಿಸುತ್ತದೆ. ಎಣ್ಣೆ ಹಚ್ಚಿ ರಾತ್ರಿಯಿಡಿ ಹಾಗೇ ಇರಿಸಿ. ಮರುದಿನ ರಾಸಾಯನಿಕ ಯುಕ್ತ ಶಾಂಪೂ ಬಳಸಿ ತಲೆಸ್ನಾನ ಮಾಡಿ.
icon

(2 / 9)

ಡಯೆಟ್‌ ಮತ್ತು ಹೈಡ್ರೇಷನ್‌: ಕೂದಲ ಕಾಳಜಿಯ ವಿಚಾರಕ್ಕೆ ಬಂದಾಗ ಡಯೆಟ್‌ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಆಹಾರಕ್ರಮದಲ್ಲಿ ಕಬ್ಬಿಣಾಂಶ, ಝಿಂಕ್‌, ಬಯೋಟಿನ್‌, ನಿಯಾಸಿನ್‌, ವಿಟಮಿನ್‌ ಸಿ, ವಿಟಮಿನ್‌ ಡಿ, ಒಮೆಗಾ 3ಎಸ್‌ ಹಾಗೂ ಒಮೆಗಾ 6ಎಸ್‌ ಈ ಎಲ್ಲವೂ ಒಳಗೊಂಡಿರಬೇಕು. ಬಾದಾಮಿ ಹಾಗೂ ವಾಲ್‌ನಟ್‌ ಕೂಡ ನಿಮ್ಮ ಪಟ್ಟಿಯಲ್ಲಿ ಸೇರಿರಬೇಕು. ಜೊತೆಗೆ ನಿರ್ಲಜೀಕರಣವು ಕೂದಲು ಉದುರಲು ಕಾರಣವಾಗಬಹುದು. ಹಾಗಾಗಿ ದೇಹವು ಹೈಡ್ರೇಟ್‌ ಆಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಪ್ರತಿದಿನ 2 ರಿಂದ 3 ಲೀಟರ್‌ ನೀರು ಕುಡಿಯಿರಿ. ಇದರೊಂದಿಗೆ ನೀರಿನಾಂಶ ಅಧಿಕವಾಗಿರುವ ಸೌತೆಕಾಯಿ, ಟೊಮೆಟೊ, ಕಲ್ಲಂಗಡಿಯಂತಹ ಹಣ್ಣುಗಳನ್ನು ಹೆಚ್ಚು ಸೇವಿಸಿ. 
icon

(3 / 9)

ಲೋಳೆಸರದ ತಿರುಳು: ತಾಜಾ ಲೋಳೆಸರದ ತಿರುಳನ್ನು ನೆತ್ತಿಯ ಬುಡಕ್ಕೆ ಹಚ್ಚುವುದರಿಂದ ಕೂದಲು ಉದುರುವುದನ್ನು ನಿಯಂತ್ರಿಸಬಹುದು. ಇದರಿಂದ ಕೂದಲು ಉದುರುವುದು ನಿಲ್ಲುವುದರ ಜೊತೆಗೆ ಕೂದಲಿನ ತುದಿ ಸೀಳುವುದು ನಿಲ್ಲುತ್ತದೆ. ನೆತ್ತಿಯ ಭಾಗವನ್ನು ತೇವಗೊಳಿಸುವ ಮೂಲಕ ತಲೆಹೊಟ್ಟನ್ನು ನಿಯಂತ್ರಿಸುತ್ತದೆ. 
icon

(4 / 9)

ಡೀಪ್‌ ಕಂಡೀಷನಿಂಗ್‌: ಕೂದಲಿಗೆ ಡೀಪ್‌ ಕಂಡೀಷನಿಂಗ್‌ ಮಾಡುವುದು ಕೂಡ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಅದಕ್ಕಾಗಿ ನೀವು ಈ ಮಾಸ್ಕ್‌ ಬಳಸಬಹುದು. ಎರಡು ಮೊಟ್ಟೆಯನ್ನು ಒಡೆದ ಬೌಲ್‌ಗೆ ಹಾಕಿ ಚೆನ್ನಾಗಿ ತಿರುಗಿಸಿ. ಅದಕ್ಕೆ 2 ಚಮಚ ಆಪಲ್‌ ಸೀಡರ್‌ ವಿನೇಗರ್‌ ಸೇರಿಸಿ ನಂತರ ಆಲಿವ್‌ ಎಣ್ಣೆ ಹಾಗೂ ಒಂದು ಚಮಚ ಜೇನುತುಪ್ಪ ಬೆರೆಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್‌ ಅನ್ನು ನೆತ್ತಿಯ ಬುಡಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. 
icon

(5 / 9)

ಹೀಟ್‌ ಸ್ಟೈಲಿಂಗ್‌ ಉಪಕರಣಗಳ ಬಳಕೆ ಕಡಿಮೆ ಮಾಡಿ: ಕೂದಲನ್ನು ಕರ್ಲಿ ಮಾಡುವ, ಸ್ಟ್ರೇಟ್‌ ಮಾಡುವ ಅಥವಾ ಕೂದಲು ಒಣಗಿಸುವ ಎಲೆಕ್ಟ್ರಾನಿಕ್‌ ಪರಿಕರಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಮಖ್ಯವಾಗುತ್ತದೆ. ಇದರಿಂದ ಬೇಸಿಗೆಯಲ್ಲಿ ಕೂದಲಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಕೂದಲನ್ನು ಗಾಳಿಗೆ ಹರಡಲು ಬಿಟ್ಟು ಹಾಗೇ ಒಣಗಿಸುವುದು ಉತ್ತಮ ವಿಧಾನ. 
icon

(6 / 9)

ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯಲ್ಲಿ ವಿಟಮಿನ್‌, ಅಗತ್ಯ ಫ್ಯಾಟಿ ಆಸಿಡ್‌, ಆಂಟಿಆಕ್ಸಿಡೆಂಟ್ಸ್‌ ಅಂಶ ಸಮೃದ್ಧವಾಗಿದ್ದು, ಇದು ಕೂದಲಿನ ಆರೋಗ್ಯ ವೃದ್ಧಿಯಾಗಲು ಸಹಾಯ ಮಾಡುತ್ತದೆ. ವಿಟಮಿನ್‌ ಇ ನೈಸರ್ಗಿಕ ಆಂಟಿಆಕ್ಸಿಡೆಂಟ್‌ ಆಗಿದ್ದು, ಇದು ಆಕ್ಸಿಡೇಟಿವ್‌ ಒತ್ತಡ ಹಾಗೂ ಯುವಿ ಕಿರಣಗಳಿಂದಾಗುವ ಹಾನಿಯನ್ನು ತಪ್ಪಿಸುತ್ತದೆ. ಇದು ಕೂದಲನ್ನು ಮಾಯಿಶ್ಚರೈಸ್‌ ಮಾಡುವುದು ಮಾತ್ರವಲ್ಲ, ಕೂದಲು ತುಂಡಾಗುವುದನ್ನು ತಡೆಯುತ್ತದೆ. 
icon

(7 / 9)

ಬೇಸಿಗೆಯಲ್ಲಿ ಕೂದಲು ಉದುರುವುದನ್ನು ತಡೆಯಲು ಈ ಮೇಲಿನ ಮಾರ್ಗಗಳನ್ನು ಅನುಸರಿಸುವ ಜೊತೆಗೆ ನಿಮ್ಮ ನೆತ್ತಿಯ ಭಾಗವನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ. ವಾರದಲ್ಲಿ ಮೂರು ಬಾರಿ ಸಲ್ಫೇಟ್‌ ಅಂಶ ರಹಿತ ಶಾಂಪೂವಿನಿಂದ ತಲೆಸ್ನಾನ ಮಾಡಿ. ಕೂದಲನ್ನು ಒಣಗಿಸದೇ ಜುಟ್ಟು ಹಾಕುವುದು, ತುರುಬು ಕಟ್ಟುವುದು ಮಾಡಬೇಡಿ. 
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

IPL_Entry_Point

ಇತರ ಗ್ಯಾಲರಿಗಳು