ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಕ್ಕರೆಗಿಂತ ಬೆಲ್ಲ ಏಕೆ ಉತ್ತಮ? ಮುಟ್ಟಿನ ನೋವು, ಮಲಬದ್ಧತೆ, ತೂಕ ನಿಯಂತ್ರಣಕ್ಕೂ ಸಹಕಾರಿ ಬೆಲ್ಲ

ಸಕ್ಕರೆಗಿಂತ ಬೆಲ್ಲ ಏಕೆ ಉತ್ತಮ? ಮುಟ್ಟಿನ ನೋವು, ಮಲಬದ್ಧತೆ, ತೂಕ ನಿಯಂತ್ರಣಕ್ಕೂ ಸಹಕಾರಿ ಬೆಲ್ಲ

  • Health benefits of jaggery: ಕೆಲವರಿಗೆ ಸಕ್ಕರೆ ಇಷ್ಟ, ಕೆಲವರಿಗೆ ಬೆಲ್ಲ ಇಷ್ಟ. ಆದ್ರೆ ಆರೋಗ್ಯಕ್ಕೆ ಯಾವುದು ಹಿತ ಎಂಬುದು ಮುಖ್ಯ. ಸಕ್ಕರೆಗಿಂತ ಬೆಲ್ಲವೇ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಆಹಾರದಲ್ಲಿ ಸಕ್ಕರೆ ಬದಲಿಗೆ ಬೆಲ್ಲ ಬಳಸುವುದರ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ..

ಬೆಲ್ಲವು ಒಂದಿಷ್ಟು ಪ್ರಮಾಣದ ವಿಟಮಿನ್‌ಗಳು, ಕಬ್ಬಿಣಾಂಶ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ಸಂಸ್ಕರಿಸಿದ ಸಕ್ಕರೆಯಲ್ಲಿ ಇರುವುದಿಲ್ಲ. ಬೆಲ್ಲದಲ್ಲಿನ ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ. ಬೆಲ್ಲದಲ್ಲಿನ ಕಬ್ಬಿಣಾಂಶವು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುವ ಮೂಲಕ ರಕ್ತಹೀನತೆಯನ್ನು ದೂರ ಇಡುತ್ತದೆ
icon

(1 / 8)

ಕಬ್ಬು ಅಥವಾ ತಾಳೆ ಮರದ ಸಾಂದ್ರೀಕೃತ ರಸದಿಂದ ತಯಾರಿಸಿದ ಬೆಲ್ಲವು ನೈಸರ್ಗಿಕ ಸಿಹಿಕಾರಕವಾಗಿದೆ. ಇದು ಅಲ್ಪ ಪ್ರಮಾಣದ ಸಂಸ್ಕರಣೆಗೆ ಒಳಗಾಗುತ್ತದೆ ಹೀಗಾಗಿ ರಾಸಾಯನಿಕಗಳು ಇರುವುದಿಲ್ಲ. ಆದರೆ, ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಲಾಗುತ್ತದೆ. ಇದು ನೈಸರ್ಗಿಕ ಸಿಹಿ ಆಗಿರುವುದಿಲ್ಲ. 
icon

(2 / 8)

ಮಲಬದ್ಧತೆ ಸಮಸ್ಯೆ ಇರುವವರು ಸಕ್ಕರೆಗಿಂತ ಬೆಲ್ಲವನ್ನು ಬಳಸುವುದು ಉತ್ತಮ. ಏಕೆಂದರೆ ಬೆಲ್ಲವು ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ಊಟದ ಬಳಿಕ ಒಂದು ಸಣ್ಣ ತುಂಡು ಬೆಲ್ಲ ತಿನ್ನಬಹುದು. 
icon

(3 / 8)

ಹೆಚ್ಚು ಕಲುಷಿತ ನಗರಗಳಲ್ಲಿ ಕೆಲಸ ಮಾಡುವ ಅಥವಾ ಕಲ್ಲಿದ್ದಲು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರಿಗೆ ಬೆಲ್ಲವನ್ನು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ, ಇದರಿಂದಾಗಿ ಅವರ ಶ್ವಾಸಕೋಶಗಳು ನಿರಂತರವಾಗಿ ಅಶುದ್ಧ ಗಾಳಿಗೆ ಒಡ್ಡಿಕೊಳ್ಳುವುದರಿಂದ ಅವರ ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದಿಲ್ಲ.  
icon

(4 / 8)

ಬೆಲ್ಲದ ಮತ್ತೊಂದು ಆರೋಗ್ಯ ಪ್ರಯೋಜನವೆಂದರೆ ಅದು ಹೊಟ್ಟೆಯನ್ನು ತಂಪಾಗಿಸುತ್ತದೆ. ಅದಕ್ಕಾಗಿಯೇ ವೈದ್ಯರು ಬೇಸಿಗೆಯ ಬೆಲ್ಲದ ಪಾನಕ ಅಥವಾ ಬೆಲ್ಲದ ನೀರು ಕುಡಿಯುವಂತೆ ಶಿಫಾರಸ್ಸು ಮಾಡುತ್ತಾರೆ. 
icon

(5 / 8)

ಜ್ವರ-ನೆಗಡಿಯಿಂದ ಬಳಲುತ್ತಿರುವರಿಗೆ ನೀಡುವ ಕಷಾಯದಲ್ಲಿ ಬೆಲ್ಲ ಸೇರಿಸಲು ಸಲಹೆ ನೀಡಲಾಹಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೋಂಕಿಗೆ ಒಳಗಾದ ದೇಹಕ್ಕೆ ಸಹಾಯಕಾರಿಯಾಗಿದ್ದು, ಸ್ವತಂತ್ರ ರಾಡಿಕಲ್​​ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ. 
icon

(6 / 8)

ಋತುಚಕ್ರದ ವೇಳೆ ಬೆಲ್ಲ ಅಥವಾ ಬೆಲ್ಲದ ನೀರಿನ ಸೇವನೆಯಿಂದ ಮುಟ್ಟಿನ ನೋವು/ಸೆಳೆತ ಕಡಿಮೆಯಾಗುತ್ತದೆ.  ಋತುಚಕ್ರಕ್ಕೆ ಕೆಲವು ದಿನಗಳ ಮೊದಲು ಬೆಲ್ಲವನ್ನು ಸೇವಿಸಲು ಪ್ರಾರಂಭಿಸಿದರೆ ಹೊಟ್ಟೆ ನೋವು ಬರುವ ಪ್ರಮಾಣ ಕಡಿಮೆ ಇರುತ್ತದೆ ಮತ್ತು ಮೂಡ್ ಸ್ವಿಂಗ್‌ ಆಗದಂತೆ ತಡೆಡಯುತ್ತದೆ. 
icon

(7 / 8)

ಬೆಲ್ಲವು ವಿಶಿಷ್ಟವಾದ ಪರಿಮಳವನ್ನು ಹೊಂದಿದ್ದು ಅದು ಭಕ್ಷ್ಯಗಳು ಮತ್ತು ಪಾನೀಯಗಳಿಗೆ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಹೆಚ್ಚು ಸಂಸ್ಕರಣೆಗೆ ಒಳಗಾಗುವ ಸಕ್ಕರೆ ಸುವಾಸನೆ ಹೊಂದಿರುವುದಿಲ್ಲ. ಉಳಿದಂತೆ ಬೆಲ್ಲವು ತೂಕ ನಿಯಂತ್ರಣ, ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಮಧುಮೇಹಿಗಳೂ ಅಪರೂಪಕ್ಕೆ ಸಕ್ಕರೆ ಬದಲು ಬೆಲ್ಲ ಬಳಸಬಹುದು. 
icon

(8 / 8)

IPL_Entry_Point

ಇತರ ಗ್ಯಾಲರಿಗಳು