Kannada News  /  Photo Gallery  /  India Players Chilling In South Africa Ahead Of The T20 World Cup 2023

Women's T20 World Cup 2023: ದಕ್ಷಿಣ ಆಫ್ರಿಕಾದಲ್ಲಿ ಜಾಲಿ ಮೂಡ್‌ನಲ್ಲಿ ಕೌರ್‌ ಪಡೆ; ವಿಶ್ವಕಪ್‌ಗೂ ಮುನ್ನ ಜಾಲಿ ಟ್ರಿಪ್

05 February 2023, 22:18 IST HT Kannada Desk
05 February 2023, 22:18 , IST

ಈ ಬಾರಿಯ ಐಸಿಸಿ ವನಿತೆಯರ ಟಿ20 ವಿಶ್ವಕಪ್‌ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಎಲ್ಲಾ 10 ರಾಷ್ಟ್ರಗಳ ತಂಡಗಳು ಹರಿಣಗಳ ನಾಡಿಗೆ ಪ್ರಯಾಣಿಸಿವೆ. ಫೆಬ್ರವರಿ 10ರಿಂದ ಪಂದ್ಯಗಳು ಆರಂಭವಾಗಲಿದ್ದು, ಅದಕ್ಕೂ ಮುನ್ನ ಭಾರತ ಸೇರಿದಂತೆ ವಿವಿಧ ದೇಶಗಳ ಆಟಗಾರ್ತಿಯರು ಜಾಲಿ ಮೂಡ್‌ನಲ್ಲಿದ್ದಾರೆ. 

ವಿಶ್ವಕಪ್‌ಗೂ ಮುನ್ನ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಆಟಗಾರ್ತಿಯರು ದಕ್ಷಿಣ ಆಫ್ರಿಕಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್‌ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ಬಿಸಿಸಿಐ ಹಾಗೂ ಐಸಿಸಿ ಶೇರ್‌ ಮಾಡಿಕೊಂಡಿದೆ.

(1 / 6)

ವಿಶ್ವಕಪ್‌ಗೂ ಮುನ್ನ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಆಟಗಾರ್ತಿಯರು ದಕ್ಷಿಣ ಆಫ್ರಿಕಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್‌ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ಬಿಸಿಸಿಐ ಹಾಗೂ ಐಸಿಸಿ ಶೇರ್‌ ಮಾಡಿಕೊಂಡಿದೆ.(BCCI)

ವಿಶ್ವಕಪ್‌ನಲ್ಲಿ ಸ್ಪರ್ಧಿಸುತ್ತಿರುವ ವಿವಿಧ ದೇಶಗಳ ನಾಯಕಿಯರು

(2 / 6)

ವಿಶ್ವಕಪ್‌ನಲ್ಲಿ ಸ್ಪರ್ಧಿಸುತ್ತಿರುವ ವಿವಿಧ ದೇಶಗಳ ನಾಯಕಿಯರು(BCCI)

ಭಾರತ ತಂಡದ ವನಿತೆಯರು ಹಾಗೂ ಸಿಬ್ಬಂದಿ

(3 / 6)

ಭಾರತ ತಂಡದ ವನಿತೆಯರು ಹಾಗೂ ಸಿಬ್ಬಂದಿ(ICC/BCCI)

ಪಾಕಿಸ್ತಾನ ಕ್ರಿಕೆಟ್‌ ತಂಡದ ಸದಸ್ಯರು

(4 / 6)

ಪಾಕಿಸ್ತಾನ ಕ್ರಿಕೆಟ್‌ ತಂಡದ ಸದಸ್ಯರು(ICC)

ಈ ಬಾರಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 10ರಿಂದ ಪ್ರಾರಂಭವಾಗಲಿದೆ. ಇದು ಮಹಿಳಾ ಟಿ20 ವಿಶ್ವಕಪ್‌ನ ಎಂಟನೇ ಆವೃತ್ತಿಯಾಗಿದ್ದು, ಒಟ್ಟು 10 ತಂಡಗಳ ಕಪ್‌ಗಾಗಿ ಕಾದಾಡಲಿವೆ. ಎಲ್ಲಾ ಹತ್ತು ತಂಡಗಳನ್ನು ಎರಡು ಗುಂಪುಗಳಿಗೆ ತಲಾ ಐದರಂತೆ ವಿಂಗಡಿಸಲಾಗಿದೆ. ಗ್ರೂಪ್ 1 ಮತ್ತು ಗ್ರೂಪ್ 2ರಿಂದ ಎರಡು ಅಗ್ರ ತಂಡಗಳು 2023ರ ಮಹಿಳಾ ವಿಶ್ವಕಪ್‌ನ ಸೆಮಿಫೈನಲ್ ಹಂತವನ್ನು ಪ್ರವೇಶಿಸುತ್ತವೆ. ಫೈನಲ್ ಪಂದ್ಯವು ಫೆಬ್ರವರಿ 26ರಂದು ನಡೆಯಲಿದೆ.

(5 / 6)

ಈ ಬಾರಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 10ರಿಂದ ಪ್ರಾರಂಭವಾಗಲಿದೆ. ಇದು ಮಹಿಳಾ ಟಿ20 ವಿಶ್ವಕಪ್‌ನ ಎಂಟನೇ ಆವೃತ್ತಿಯಾಗಿದ್ದು, ಒಟ್ಟು 10 ತಂಡಗಳ ಕಪ್‌ಗಾಗಿ ಕಾದಾಡಲಿವೆ. ಎಲ್ಲಾ ಹತ್ತು ತಂಡಗಳನ್ನು ಎರಡು ಗುಂಪುಗಳಿಗೆ ತಲಾ ಐದರಂತೆ ವಿಂಗಡಿಸಲಾಗಿದೆ. ಗ್ರೂಪ್ 1 ಮತ್ತು ಗ್ರೂಪ್ 2ರಿಂದ ಎರಡು ಅಗ್ರ ತಂಡಗಳು 2023ರ ಮಹಿಳಾ ವಿಶ್ವಕಪ್‌ನ ಸೆಮಿಫೈನಲ್ ಹಂತವನ್ನು ಪ್ರವೇಶಿಸುತ್ತವೆ. ಫೈನಲ್ ಪಂದ್ಯವು ಫೆಬ್ರವರಿ 26ರಂದು ನಡೆಯಲಿದೆ.(ICC)

ವನಿತೆಯರ ವಿಶ್ವಕಪ್‌ಗೆ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್) ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ.

(6 / 6)

ವನಿತೆಯರ ವಿಶ್ವಕಪ್‌ಗೆ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್) ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ.(ICC)

ಇತರ ಗ್ಯಾಲರಿಗಳು