ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Food Storage: ಅಕ್ಕಿ-ಬೇಳೆ, ಗೋಧಿಹಿಟ್ಟಿನಂತಹ ಅಡುಗೆ ಸಾಮಗ್ರಿಗಳನ್ನು ಈ ರೀತಿ ಸಂಗ್ರಹಿಸಿ ನೋಡಿ; ಹುಳ-ಕೀಟ ಬರುವ ಚಾನ್ಸೇ ಇಲ್ಲ

Food Storage: ಅಕ್ಕಿ-ಬೇಳೆ, ಗೋಧಿಹಿಟ್ಟಿನಂತಹ ಅಡುಗೆ ಸಾಮಗ್ರಿಗಳನ್ನು ಈ ರೀತಿ ಸಂಗ್ರಹಿಸಿ ನೋಡಿ; ಹುಳ-ಕೀಟ ಬರುವ ಚಾನ್ಸೇ ಇಲ್ಲ

  • ಬೇಳೆಕಾಳುಗಳು, ಅಕ್ಕಿ, ರವೆ, ಗೋಧಿಹಿಟ್ಟು ಮುಂತಾದ ಸಾಮಗ್ರಿಗಳನ್ನು ಮನೆಯಲ್ಲಿ ತಂದಿಟ್ಟರೆ ಕೆಲವೇ ದಿನಗಳಲ್ಲಿ ಹುಳ ಆಗಲು ಆರಂಭಿಸುತ್ತದೆ, ಒಂದು ರೀತಿಯ ಕೀಟ ಹಾರಾಡಲು ಆರಂಭಿಸುತ್ತದೆ. ಆದ್ರೆ ನೀವು ಅದನ್ನು ಹೀಗೆ ಶೇಖರಿಸಿ ಇಟ್ರೆ ಖಂಡಿತ ತುಂಬಾ ದಿನ ಕೆಡದೇ ಇರುತ್ತದೆ.

ಗೋಧಿಹಿಟ್ಟಿನಿಂದ ಹಿಡಿದು ರವೆ, ಮೈದಾ ಮತ್ತು ಬೇಳೆಕಾಳುಗಳವರೆಗೆ ಈ ಎಲ್ಲವನ್ನೂ ಸರಿಯಾಗಿ ಸಂಗ್ರಹಿಸದಿದ್ದರೆ ಬೇಗನೆ ಹಾಳಾಗುತ್ತದೆ. ಇದರಲ್ಲಿ ಹುಳ, ಕೀಟಗಳು ಹರಿದಾಡಲು ಆರಂಭಿಸುತ್ತವೆ. ಹಾಗಾದ್ರೆ ಇದನ್ನು ಇಡುವಾಗ ಅನುಸರಿಸಬೇಕಾದ ಕ್ರಮಗಳೇನು ನೋಡಿ.
icon

(1 / 8)

ಮನೆಯಲ್ಲಿ ಆಹಾರ ಪದಾರ್ಥಗಳನ್ನು ಶೇಖರಿಸಿಟ್ಟಾಗ ಅವುಗಳಿಗೆ ಕೀಟಬಾಧೆ ಹೆಚ್ಚುವುದು ಸಹಜ. ಇದಕ್ಕೆ ಕಾರಣಗಳು ಹಲವಿದ್ದರೂ, ಇದರಿಂದ ಆ ಪದಾರ್ಥಗಳು ಕೆಡುತ್ತವೆ, ಅದನ್ನು ಬಳಸದೇ ಎಸೆಯಬೇಕಾಗುತ್ತದೆ. ದ್ವಿದಳ ಧಾನ್ಯಗಳಲ್ಲಿರುವ ಕೀಟಗಳು ಅವುಗಳ ಉಂಡೆಗಳಂತೆ ಕಾಣುವಂತೆ ಮಾಡುತ್ತವೆ. ಹಿಟ್ಟು ಮತ್ತು ರವೆಯಲ್ಲಿನ ಕಾಣಿಸುವ ಹುಳಗಳು ಬಲೆ ಕಟ್ಟಿದಂತೆ ಆಗುತ್ತವೆ. ಇಷ್ಟು ಮಾತ್ರವಲ್ಲದೆ ಅಡುಗೆ ಮನೆಯಲ್ಲಿ ತೇವಾಂಶವಿದ್ದರೆ ಸಾಂಬಾರ್‌ ಪದಾರ್ಥಗಳಲ್ಲಿ ಜೇಡರ ಬಲೆಯಂತೆ ಬಲೆ ಆವರಿಸಿಕೊಳ್ಳುತ್ತದೆ. ಆದರೆ ಅಡುಗೆಮನೆಯಲ್ಲಿ ಇರುವ ಈ ಕೆಲವು ವಸ್ತುಗಳನ್ನು ಹೀಗೆ ಸಂಗ್ರಹಿಸಿಟ್ಟರೆ ಹುಳ, ಕೀಟಗಳು ಬಾಧಿಸದಂತೆ ಹಲವು ದಿನಗಳವರೆಗೆ ಸಂಗ್ರಹಿಸಿ ಇಡಬಹುದು. 
icon

(2 / 8)

ನೀವು ಹೆಚ್ಚು ಗೋಧಿಹಿಟ್ಟು ಬಳಸುವವರಾಗಿದ್ದು, ಇದನ್ನು ತಂದು ಮನೆಯಲ್ಲಿ ಸಂಗ್ರಹಿಸಿಡುವ ಹಾಗಿದ್ದರೆ, ಅದರ ಜೊತೆಗೆ ಸ್ವಲ್ಪ ಕೆಂಪುಮೆಣಸಿನ ಪುಡಿ ಅಂದರೆ ಖಾರದ ಪುಡಿಯನ್ನು ಸಂಗ್ರಹಿಸಿ ಇಡಿ. ಇದರಿಂದ ಕೀಟಬಾಧೆ ಇರುವುದಿಲ್ಲ. ಹುಳಗಳು ಹಿಟ್ಟನ್ನು ಉಂಡೆ ಮಾಡುವುದಿಲ್ಲ. 
icon

(3 / 8)

ತೊಗರಿಬೇಳೆ, ಹೆಸರುಬೇಳೆಯಂತಹ ಯಾವುದೇ ಬೇಳೆಯನ್ನು ಸಂಗ್ರಹಿಸಿ ಇಡುವುದಾದರೆ ಆ ಪಾತ್ರೆಯಲ್ಲಿ ಒಣಗಿದ ದಾಲ್ಚಿನ್ನಿ ಎಲೆಯನ್ನು ಸೇರಿಸಿ. ಇದರ ವಾಸನೆಗೆ ಹುಳಗಳು ಬೇಳೆಕಾಳುಗಳ ಹತ್ತಿರ ಸುಳಿಯುವುದಿಲ್ಲ. 
icon

(4 / 8)

ಬಟಾಣಿ, ಕಡಲೆಕಾಳು, ಹೆಸರುಕಾಳುಗಳನ್ನು ಗಾಳಿಯಾಡದ ಪಾತ್ರೆಯಲ್ಲಿ ಇಟ್ಟು ತುಂಬಾ ದಿನಗಳವರೆಗೆ ಸಂಗ್ರಹಿಸಿ ಇಡಬಹುದು. ಸ್ವಲ್ಪ ಗಾಳಿಯಾಡಿದರೂ ಅದರಲ್ಲಿ ಹುಳ ಕಾಣಿಸುವುದು ಸಹಜ. ಹಾಗಿದ್ದಾಗ ಅದನ್ನು ಸಂಗ್ರಹಿಸುವಾಗ ಒಂದೆರಡು ಏಲಕ್ಕಿ ಸೇರಿಸಿ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಇಡಿ. ಇದರಿಂದ ಕಾಳುಗಳಿಗೆ ಹುಳ ಹಿಡಿಯುವುದಿಲ್ಲ.  
icon

(5 / 8)

ಅಕ್ಕಿಗೂ ಹುಳ, ಕೀಟ ಬರುತ್ತವೆ. ಅದಕ್ಕಾಗಿ ಬೇವಿನಎಲೆಗಳನ್ನು ತೆಳ್ಳಗಿನ ಬಟ್ಟೆಯಲ್ಲಿ ಕಟ್ಟಿ, ಇದನ್ನು ಅಕ್ಕಿ ಚೀಲದಲ್ಲಿ ಇರಿಸಿ. ಇದರಿಂದ ಕೀಟ, ಹುಳ ಅಕ್ಕಿಯನ್ನು ಹಾಳು ಮಾಡುವುದಿಲ್ಲ.  
icon

(6 / 8)

ಖಾರದಪುಡಿಗೂ ಒಮ್ಮೊಮ್ಮೆ ಹುಳ ಬಾದಿಸುತ್ತದೆ. ಇದರಿಂದ ಬೂಸ್ಟ್‌ ಅಂದಂತೆ ಖಾರದಪುಡಿ ಬೇಗನೆ ಹಾಳಾಗುತ್ತದೆ. ಅಂತಹ ಸಂದರ್ಭ ಖಾರದ ಪುಡಿಯೊಂದಿಗೆ ಕೊಂಚ ಇಂಗು ಸೇರಿಸಿ ಇಡಿ. ಇದರಿಂದ ಬಹಳ ದಿನಗಳವರೆಗೆ ಇರಿಸಬಹುದು.  
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

IPL_Entry_Point

ಇತರ ಗ್ಯಾಲರಿಗಳು