ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಲ್ಲಡ್ಕದಲ್ಲಿ ಷಟ್ಪಥ ಫ್ಲೈಓವರ್ ಕಾಮಗಾರಿ ಸಂದರ್ಭ ಮಳೆ ಬಂದ್ರೆ ಮಂಗಳೂರು ಹಾಸನ ರಸ್ತೆ ಸಂಚಾರಕ್ಕೆ ತೊಡಕು, ಇಲ್ಲಿವೆ ಚಿತ್ರಮಾಹಿತಿ

ಕಲ್ಲಡ್ಕದಲ್ಲಿ ಷಟ್ಪಥ ಫ್ಲೈಓವರ್ ಕಾಮಗಾರಿ ಸಂದರ್ಭ ಮಳೆ ಬಂದ್ರೆ ಮಂಗಳೂರು ಹಾಸನ ರಸ್ತೆ ಸಂಚಾರಕ್ಕೆ ತೊಡಕು, ಇಲ್ಲಿವೆ ಚಿತ್ರಮಾಹಿತಿ

ಮಂಗಳೂರು ಬೆಂಗಳೂರು ಸಂಪರ್ಕ ಹೆದ್ದಾರಿಯಲ್ಲಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಇದರಲ್ಲಿ ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಆದರೆ, ಕಲ್ಲಡ್ಕದಲ್ಲಿ ಷಟ್ಪಥ ಫ್ಲೈಓವರ್ ಕಾಮಗಾರಿ ಸಂದರ್ಭ ಮಳೆ ಬಂದ್ರೆ ಮಂಗಳೂರು ಹಾಸನ ರಸ್ತೆ ಸಂಚಾರಕ್ಕೆ ತೊಡಕು ಉಂಟಾಗಲಿದೆ. ಇಲ್ಲಿದೆ ಚಿತ್ರನೋಟ. (ವರದಿ-ಹರೀಶ್ ಮಾಂಬಾಡಿ, ಮಂಗಳೂರು)

ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದಿದ್ದರೆ ಸಮಸ್ಯೆಗಳ ಸರಮಾಲೆ ನಿಶ್ಚಿತವೆಂದು ಕಾಮಗಾರಿ ನೋಡಿದಾಗ ಭಾಸವಾಗುತ್ತದೆ. ದಿನಕ್ಕೆ ಸಾವಿರಾರು ವಾಹನಗಳು ಓಡಾಡುವ, ಮಂಗಳೂರಿನಿಂದ ಬೆಂಗಳೂರು, ಮೈಸೂರು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಭಾಗದ ಸುಮಾರು 2 ಕಿ.ಮೀ ರಸ್ತೆ ಮುಂದಿನ ಮಳೆಗಾಲ ಸಂದರ್ಭ ಸ್ತಬ್ಧವಾಗಬಹುದು ಎಂದು ಹೇಳಲಾಗುತ್ತಿದೆ.ಸಾಮಾನ್ಯವಾಗಿ ಫ್ಲೈಓವರ್ ಕಾಮಗಾರಿ ನಡೆಯುವ ಜಾಗಗಳಲ್ಲಿ ಸರ್ವೀಸ್ ರಸ್ತೆಗಳು ವಾಹನ ಸಂಚಾರಕ್ಕೆಂದು ಇರುತ್ತವೆ. ಆದರೆ ಇಲ್ಲಿ ಹಾಗಲ್ಲ, ಮೇಲೆ ಕೆಲಸವಾಗುತ್ತಿದ್ದರೆ, ಅಡಿಯಲ್ಲೇ ವಾಹನಗಳು ಸಾಗುತ್ತವೆ. ಇದು ಸಮಸ್ಯೆ.
icon

(1 / 7)

ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದಿದ್ದರೆ ಸಮಸ್ಯೆಗಳ ಸರಮಾಲೆ ನಿಶ್ಚಿತವೆಂದು ಕಾಮಗಾರಿ ನೋಡಿದಾಗ ಭಾಸವಾಗುತ್ತದೆ. ದಿನಕ್ಕೆ ಸಾವಿರಾರು ವಾಹನಗಳು ಓಡಾಡುವ, ಮಂಗಳೂರಿನಿಂದ ಬೆಂಗಳೂರು, ಮೈಸೂರು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಭಾಗದ ಸುಮಾರು 2 ಕಿ.ಮೀ ರಸ್ತೆ ಮುಂದಿನ ಮಳೆಗಾಲ ಸಂದರ್ಭ ಸ್ತಬ್ಧವಾಗಬಹುದು ಎಂದು ಹೇಳಲಾಗುತ್ತಿದೆ.ಸಾಮಾನ್ಯವಾಗಿ ಫ್ಲೈಓವರ್ ಕಾಮಗಾರಿ ನಡೆಯುವ ಜಾಗಗಳಲ್ಲಿ ಸರ್ವೀಸ್ ರಸ್ತೆಗಳು ವಾಹನ ಸಂಚಾರಕ್ಕೆಂದು ಇರುತ್ತವೆ. ಆದರೆ ಇಲ್ಲಿ ಹಾಗಲ್ಲ, ಮೇಲೆ ಕೆಲಸವಾಗುತ್ತಿದ್ದರೆ, ಅಡಿಯಲ್ಲೇ ವಾಹನಗಳು ಸಾಗುತ್ತವೆ. ಇದು ಸಮಸ್ಯೆ.(ಚಿತ್ರಗಳು: ವರುಣ್ ಕಲ್ಲಡ್ಕ)

ಇಲ್ಲಿ ಮಳೆ ಬಂದರೆ ಜಲಪಾತದಂಥ ಪರಿಸ್ಥಿತಿ ನಿರ್ಮಾಣವಾಗುವ ಸ್ಥಿತ ತಂದೊಡ್ಡಿದೆ. ಇನ್ನು ಕಲ್ಲಡ್ಕದ ಅಲ್ಲಲ್ಲಿ ಮಿನಿ ದ್ವೀಪಗಳು ಹುಟ್ಟಿಕೊಳ್ಳಬಹುದು. ಈ ಭಾಗದಲ್ಲಿ ಮಳೆನೀರು ಹರಿದುಹೋಗುವ ವ್ಯವಸ್ಥೆಯನ್ನು ಸಮರ್ಪಕವಾಗಿ ಇನ್ನೂ ಕಲ್ಪಿಸದೇ ಇರುವುದು ಅಲ್ಲದೆ, ಸರಿಯಾದ ಸರ್ವೀಸ್ ರಸ್ತೆ ಇಲ್ಲದೇ ಇರುವುದು ಧಾರಾಕಾರ ಮಳೆ ಬಂದರೆ, ಕಲ್ಲಡ್ಕ ಪೇಟೆ ಕೃತಕ ನೆರೆಯಿಂದ ಬಾಧೆಗೊಳಗಾಗುವ ಸಾಧ್ಯತೆ ಜಾಸ್ತಿ. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ನಿಶ್ಚಿತವಾಗಿಯೂ ಇದರಿಂದ ತೊಂದರೆಗೆ ಒಳಗಾಗಲಿದ್ದಾರೆ.
icon

(2 / 7)

ಇಲ್ಲಿ ಮಳೆ ಬಂದರೆ ಜಲಪಾತದಂಥ ಪರಿಸ್ಥಿತಿ ನಿರ್ಮಾಣವಾಗುವ ಸ್ಥಿತ ತಂದೊಡ್ಡಿದೆ. ಇನ್ನು ಕಲ್ಲಡ್ಕದ ಅಲ್ಲಲ್ಲಿ ಮಿನಿ ದ್ವೀಪಗಳು ಹುಟ್ಟಿಕೊಳ್ಳಬಹುದು. ಈ ಭಾಗದಲ್ಲಿ ಮಳೆನೀರು ಹರಿದುಹೋಗುವ ವ್ಯವಸ್ಥೆಯನ್ನು ಸಮರ್ಪಕವಾಗಿ ಇನ್ನೂ ಕಲ್ಪಿಸದೇ ಇರುವುದು ಅಲ್ಲದೆ, ಸರಿಯಾದ ಸರ್ವೀಸ್ ರಸ್ತೆ ಇಲ್ಲದೇ ಇರುವುದು ಧಾರಾಕಾರ ಮಳೆ ಬಂದರೆ, ಕಲ್ಲಡ್ಕ ಪೇಟೆ ಕೃತಕ ನೆರೆಯಿಂದ ಬಾಧೆಗೊಳಗಾಗುವ ಸಾಧ್ಯತೆ ಜಾಸ್ತಿ. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ನಿಶ್ಚಿತವಾಗಿಯೂ ಇದರಿಂದ ತೊಂದರೆಗೆ ಒಳಗಾಗಲಿದ್ದಾರೆ.(ಚಿತ್ರಗಳು: ವರುಣ್ ಕಲ್ಲಡ್ಕ)

ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಕಲ್ಲಡ್ಕದಲ್ಲಿ ನಿರ್ಮಾಣವಾಗುತ್ತಿರುವ 2.16 ಕಿ.ಮೀ. ಉದ್ದರ ಷಟ್ಪಥ ಫ್ಲೈಓವರ್ ಕಾಮಗಾರಿ ಪೂರ್ತಿ ಆಗಿಲ್ಲ. ಒಟ್ಟು 72 ಕಂಬಗಳ ನಿರ್ಮಾಣ ಮಾಡಬೇಕಿದ್ದು, ಎರಡು ಕಂಬಗಳ ನಡುವೆ 30 ಮೀಟರ್ ಅಂತರವಿದೆ. ಕೆಲ ಕಂಬಗಳು ಇನ್ನೂ ಎದ್ದು ನಿಲ್ಲಲು ಬಾಕಿ ಇದ್ದು, ಈಗಾಗಲೇ 35 ಗರ್ಡರ್ ಗಳನ್ನು ಹಾಕಲಾಗಿದೆ. ಇವುಗಳ ಪೈಕಿ, 30ರಷ್ಟು ಗರ್ಡರ್ ಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ಸರಿಸುಮಾರು ಅರ್ಧಾಂಶದಷ್ಟು ಕೆಲಸ ಬಾಕಿ ಇದೆ. ಪ್ರಸ್ತುತ ಮೇಲೆ ಕಾಂಕ್ರೀಟ್ ಹಾಕುವ ಕಾರ್ಯ ಭರದಿಂದ ಸಾಗುತ್ತಿದೆ.
icon

(3 / 7)

ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಕಲ್ಲಡ್ಕದಲ್ಲಿ ನಿರ್ಮಾಣವಾಗುತ್ತಿರುವ 2.16 ಕಿ.ಮೀ. ಉದ್ದರ ಷಟ್ಪಥ ಫ್ಲೈಓವರ್ ಕಾಮಗಾರಿ ಪೂರ್ತಿ ಆಗಿಲ್ಲ. ಒಟ್ಟು 72 ಕಂಬಗಳ ನಿರ್ಮಾಣ ಮಾಡಬೇಕಿದ್ದು, ಎರಡು ಕಂಬಗಳ ನಡುವೆ 30 ಮೀಟರ್ ಅಂತರವಿದೆ. ಕೆಲ ಕಂಬಗಳು ಇನ್ನೂ ಎದ್ದು ನಿಲ್ಲಲು ಬಾಕಿ ಇದ್ದು, ಈಗಾಗಲೇ 35 ಗರ್ಡರ್ ಗಳನ್ನು ಹಾಕಲಾಗಿದೆ. ಇವುಗಳ ಪೈಕಿ, 30ರಷ್ಟು ಗರ್ಡರ್ ಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ಸರಿಸುಮಾರು ಅರ್ಧಾಂಶದಷ್ಟು ಕೆಲಸ ಬಾಕಿ ಇದೆ. ಪ್ರಸ್ತುತ ಮೇಲೆ ಕಾಂಕ್ರೀಟ್ ಹಾಕುವ ಕಾರ್ಯ ಭರದಿಂದ ಸಾಗುತ್ತಿದೆ.(ಚಿತ್ರಗಳು: ವರುಣ್ ಕಲ್ಲಡ್ಕ)

ಸದ್ಯದ ಸ್ಥಿತಿಯಲ್ಲಿ ಕಲ್ಲಡ್ಕದಲ್ಲಿ ವಾಹನ ಚಲಾಯಿಸಿಕೊಂಡು ಹೋಗುವುದು ಬಹಳ ರಿಸ್ಕ್. ಮೇಲ್ಗಡೆ ಕಾಮಗಾರಿ ನಡೆಯುತ್ತಿದ್ದರೆ, ಕೆಳಗೆ ವಾಹನಗಳನ್ನು ಸಾಗಲು ಬಿಡಲಾಗುತ್ತಿದೆ. ಈ ಸಂದರ್ಭ ಸಿಮೆಂಟ್ ಹುಡಿ, ಕೆಲವೊಮ್ಮೆ ಕಲಸಿದ ಸಿಮೆಂಟ್ ವಾಹನಗಳ ಮೇಲೆ ಬೀಳುತ್ತವೆ. ಸರ್ವೀಸ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಲ್ಲಿ ಹೊಂಡಗಳಿವೆ. ದಿನಕ್ಕೆ ನಾಲ್ಕೈದು ಸ್ಕೂಟರ್ ಸವಾರರು ಕಲ್ಲಡ್ಕದಲ್ಲಿ ಬಿದ್ದೇ ಬೀಳುತ್ತಾರೆ.
icon

(4 / 7)

ಸದ್ಯದ ಸ್ಥಿತಿಯಲ್ಲಿ ಕಲ್ಲಡ್ಕದಲ್ಲಿ ವಾಹನ ಚಲಾಯಿಸಿಕೊಂಡು ಹೋಗುವುದು ಬಹಳ ರಿಸ್ಕ್. ಮೇಲ್ಗಡೆ ಕಾಮಗಾರಿ ನಡೆಯುತ್ತಿದ್ದರೆ, ಕೆಳಗೆ ವಾಹನಗಳನ್ನು ಸಾಗಲು ಬಿಡಲಾಗುತ್ತಿದೆ. ಈ ಸಂದರ್ಭ ಸಿಮೆಂಟ್ ಹುಡಿ, ಕೆಲವೊಮ್ಮೆ ಕಲಸಿದ ಸಿಮೆಂಟ್ ವಾಹನಗಳ ಮೇಲೆ ಬೀಳುತ್ತವೆ. ಸರ್ವೀಸ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಲ್ಲಿ ಹೊಂಡಗಳಿವೆ. ದಿನಕ್ಕೆ ನಾಲ್ಕೈದು ಸ್ಕೂಟರ್ ಸವಾರರು ಕಲ್ಲಡ್ಕದಲ್ಲಿ ಬಿದ್ದೇ ಬೀಳುತ್ತಾರೆ.(ಚಿತ್ರಗಳು: ವರುಣ್ ಕಲ್ಲಡ್ಕ)

ತುರ್ತು ಕಾಮಗಾರಿಗಳೇನಾದರೂ ಮಾಡದೇ ಇದ್ದಲ್ಲಿ ಧಾರಾಕಾರವಾಗಿ ಮಳೆ ಸುರಿದರೆ, ಕಲ್ಲಡ್ಕದಲ್ಲಿ ನಡೆದುಕೊಂಡು ಹೋಗಲೂ ಅಸಾಧ್ಯ. ಮಂಗಳೂರಿನಿಂದ ಆಗಮಿಸುವಾಗ ನರಹರಿ ಪರ್ವತ ದಾಟಿ ಮುಂದೆ ಸಾಗಿದಾಗ ಫ್ಲೈಓವರ್ ಕಾಮಗಾರಿ ಕಾಣಸಿಗುತ್ತದೆ. ಇಲ್ಲಿಂದ ಇಳಿಜಾರಿನಂಥ ಜಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಕ್ಕಪಕ್ಕದಲ್ಲಿ ನೀರು ಹರಿದುಹೋಗಲು ಯಾವುದೇ ಚರಂಡಿಯಾಗಲೀ, ವ್ಯವಸ್ಥೆಯಾಗಲೀ ಮಾಡಿದ್ದು ಕಾಣಿಸುವುದಿಲ್ಲ. ಅದೇ ದಾರಿಯಲ್ಲಿ ಮುಂದೆ ಹೋದರೆ, ಅಮ್ಟೂರಿಗೆ ತೆರಳುವ ಕಲ್ಲಡ್ಕ ಕ್ರಾಸ್ ರೋಡ್ ಭಾಗದಲ್ಲೂ ನೀರು ಹರಿದುಹೋಗುವ ವ್ಯವಸ್ಥೆ ಇಲ್ಲದೇ ಇರುವುದು ಕಂಡುಬರುತ್ತಿದ್ದು, ಈ ಭಾಗದಲ್ಲೇನಾದರೂ ಮಳೆ ಬಂದರೆ, ಜಲಾಶಯದಂಥ ಪರಿಸ್ಥಿತಿ ನಿರ್ಮಾಣವಾಗುವುದು ಗ್ಯಾರಂಟಿ.
icon

(5 / 7)

ತುರ್ತು ಕಾಮಗಾರಿಗಳೇನಾದರೂ ಮಾಡದೇ ಇದ್ದಲ್ಲಿ ಧಾರಾಕಾರವಾಗಿ ಮಳೆ ಸುರಿದರೆ, ಕಲ್ಲಡ್ಕದಲ್ಲಿ ನಡೆದುಕೊಂಡು ಹೋಗಲೂ ಅಸಾಧ್ಯ. ಮಂಗಳೂರಿನಿಂದ ಆಗಮಿಸುವಾಗ ನರಹರಿ ಪರ್ವತ ದಾಟಿ ಮುಂದೆ ಸಾಗಿದಾಗ ಫ್ಲೈಓವರ್ ಕಾಮಗಾರಿ ಕಾಣಸಿಗುತ್ತದೆ. ಇಲ್ಲಿಂದ ಇಳಿಜಾರಿನಂಥ ಜಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಕ್ಕಪಕ್ಕದಲ್ಲಿ ನೀರು ಹರಿದುಹೋಗಲು ಯಾವುದೇ ಚರಂಡಿಯಾಗಲೀ, ವ್ಯವಸ್ಥೆಯಾಗಲೀ ಮಾಡಿದ್ದು ಕಾಣಿಸುವುದಿಲ್ಲ. ಅದೇ ದಾರಿಯಲ್ಲಿ ಮುಂದೆ ಹೋದರೆ, ಅಮ್ಟೂರಿಗೆ ತೆರಳುವ ಕಲ್ಲಡ್ಕ ಕ್ರಾಸ್ ರೋಡ್ ಭಾಗದಲ್ಲೂ ನೀರು ಹರಿದುಹೋಗುವ ವ್ಯವಸ್ಥೆ ಇಲ್ಲದೇ ಇರುವುದು ಕಂಡುಬರುತ್ತಿದ್ದು, ಈ ಭಾಗದಲ್ಲೇನಾದರೂ ಮಳೆ ಬಂದರೆ, ಜಲಾಶಯದಂಥ ಪರಿಸ್ಥಿತಿ ನಿರ್ಮಾಣವಾಗುವುದು ಗ್ಯಾರಂಟಿ.(ಚಿತ್ರಗಳು: ವರುಣ್ ಕಲ್ಲಡ್ಕ)

ನಯಾರಾ ಪೆಟ್ರೋಲ್ ಪಂಪ್ ಮುಂಭಾಗದಿಂದ ಕಲ್ಲಡ್ಕದ ಪೂರ್ಲಿಪ್ಪಾಡಿವರೆಗೆ ಹಾಗೂ ಆ ಭಾಗದಿಂದ ಕೆ.ಸಿ.ರೋಡ್ ವರೆಗೆ ಇನ್ನೊಂದು ಬದಿ ಏಕಮುಖ ಸಂಚಾರವಿದ್ದು, ತೀರಾ ಇಕ್ಕಟ್ಟಾಗಿರುವ ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವುದೂ ಕಷ್ಟ, ಪೂರ್ಲಿಪ್ಪಾಡಿವರೆಗೆ ಇದೀಗ ನೀರು ಹರಿದುಹೋಗಲು ವ್ಯವಸ್ಥೆಯನ್ನು ಸ್ಥಳೀಯರ ಆಗ್ರಹದ ಬಳಿಕ ನಿರ್ಮಾಣ ಕಂಪನಿ ಮಾಡುತ್ತಿದ್ದು, ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಮಳೆ ಬಂದಾಗ ಗೊತ್ತಾಗಲಿದೆ. ಕಳೆದ ವರ್ಷ ಕಲ್ಲಡ್ಕದ ಪೋಸ್ಟ್ ಆಫೀಸ್ ಗೆ ಹೋಗಲೂ ಅಸಾಧ್ಯವಾದ ಪರಿಸ್ಥಿತಿ ಒಂದು ಮಳೆಗೇ ಉದ್ಭವವಾಗಿತ್ತು. ಆದರೆ ಈ ಬಾರಿ ಅಲ್ಲಿ ನೀರು ಹರಿದುಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ. ಈಗ ಡ್ರೈನೇಜ್ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ನೀರು ಮುಂದಕ್ಕೆ ಎಲ್ಲಿಗೆ ಹರಿದುಹೋಗುತ್ತದೆ ಎಂಬುದಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
icon

(6 / 7)

ನಯಾರಾ ಪೆಟ್ರೋಲ್ ಪಂಪ್ ಮುಂಭಾಗದಿಂದ ಕಲ್ಲಡ್ಕದ ಪೂರ್ಲಿಪ್ಪಾಡಿವರೆಗೆ ಹಾಗೂ ಆ ಭಾಗದಿಂದ ಕೆ.ಸಿ.ರೋಡ್ ವರೆಗೆ ಇನ್ನೊಂದು ಬದಿ ಏಕಮುಖ ಸಂಚಾರವಿದ್ದು, ತೀರಾ ಇಕ್ಕಟ್ಟಾಗಿರುವ ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವುದೂ ಕಷ್ಟ, ಪೂರ್ಲಿಪ್ಪಾಡಿವರೆಗೆ ಇದೀಗ ನೀರು ಹರಿದುಹೋಗಲು ವ್ಯವಸ್ಥೆಯನ್ನು ಸ್ಥಳೀಯರ ಆಗ್ರಹದ ಬಳಿಕ ನಿರ್ಮಾಣ ಕಂಪನಿ ಮಾಡುತ್ತಿದ್ದು, ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಮಳೆ ಬಂದಾಗ ಗೊತ್ತಾಗಲಿದೆ. ಕಳೆದ ವರ್ಷ ಕಲ್ಲಡ್ಕದ ಪೋಸ್ಟ್ ಆಫೀಸ್ ಗೆ ಹೋಗಲೂ ಅಸಾಧ್ಯವಾದ ಪರಿಸ್ಥಿತಿ ಒಂದು ಮಳೆಗೇ ಉದ್ಭವವಾಗಿತ್ತು. ಆದರೆ ಈ ಬಾರಿ ಅಲ್ಲಿ ನೀರು ಹರಿದುಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ. ಈಗ ಡ್ರೈನೇಜ್ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ನೀರು ಮುಂದಕ್ಕೆ ಎಲ್ಲಿಗೆ ಹರಿದುಹೋಗುತ್ತದೆ ಎಂಬುದಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.(ಚಿತ್ರಗಳು: ವರುಣ್ ಕಲ್ಲಡ್ಕ)

ಪ್ರಸ್ತುತ ಸನ್ನಿವೇಶದಲ್ಲಿ ಕಲ್ಲಡ್ಕದ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಸಾಕಷ್ಟು ಸಂಕಟಗಳನ್ನು ಅನುಭವಿಸುತ್ತಿದ್ದಾರೆ. ಧೂಳಿನಿಂದಲೂ ಸಮಸ್ಯೆ, ಮಳೆ ಬಂದರೆ ಮತ್ತೊಂದು ಸಮಸ್ಯೆ ಆಗುವ ಸಾಧ್ಯತೆ ಇದೆ. ಸರಿಯಾಗಿ ನೀರು ಹರಿದು ಹೋಗುವ ವ್ಯವಸ್ಥೆ ಕಲ್ಪಿಸದೇ ಇದ್ದರೆ, ಮಳೆಗಾಲ ಸಂದರ್ಭ ಕಲ್ಲಡ್ಕದಲ್ಲಿ ಸಾಗುವವರು ತೊಂದರೆ ಅನುಭವಿಸಬೇಕಾದೀತು ಎನ್ನುತ್ತಾರೆ ಸ್ಥಳೀಯರು.
icon

(7 / 7)

ಪ್ರಸ್ತುತ ಸನ್ನಿವೇಶದಲ್ಲಿ ಕಲ್ಲಡ್ಕದ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಸಾಕಷ್ಟು ಸಂಕಟಗಳನ್ನು ಅನುಭವಿಸುತ್ತಿದ್ದಾರೆ. ಧೂಳಿನಿಂದಲೂ ಸಮಸ್ಯೆ, ಮಳೆ ಬಂದರೆ ಮತ್ತೊಂದು ಸಮಸ್ಯೆ ಆಗುವ ಸಾಧ್ಯತೆ ಇದೆ. ಸರಿಯಾಗಿ ನೀರು ಹರಿದು ಹೋಗುವ ವ್ಯವಸ್ಥೆ ಕಲ್ಪಿಸದೇ ಇದ್ದರೆ, ಮಳೆಗಾಲ ಸಂದರ್ಭ ಕಲ್ಲಡ್ಕದಲ್ಲಿ ಸಾಗುವವರು ತೊಂದರೆ ಅನುಭವಿಸಬೇಕಾದೀತು ಎನ್ನುತ್ತಾರೆ ಸ್ಥಳೀಯರು.(ಚಿತ್ರಗಳು: ವರುಣ್ ಕಲ್ಲಡ್ಕ)


IPL_Entry_Point

ಇತರ ಗ್ಯಾಲರಿಗಳು