ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mental Health: ಮನಸೇ ರಿಲ್ಯಾಕ್ಸ್​ ಪ್ಲೀಸ್​; ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಇಲ್ಲಿವೆ ಹಲವು ಟಿಪ್ಸ್​

Mental Health: ಮನಸೇ ರಿಲ್ಯಾಕ್ಸ್​ ಪ್ಲೀಸ್​; ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಇಲ್ಲಿವೆ ಹಲವು ಟಿಪ್ಸ್​

  • ಪ್ರತಿಯೊಬ್ಬರ ಜೀವನದಲ್ಲಿಯೂ ಆತ್ಮವಿಶ್ವಾಸ ಎಂಬುವುದು ತುಂಬಾನೇ ಮುಖ್ಯ. ಆತ್ಮ ವಿಶ್ವಾಸವೊಂದಿದ್ದರೆ ಎಂಥಹ ಕಠಿಣ ಸವಾಲುಗಳನ್ನೂ ಎದುರಿಸಿಬಿಡಬಹುದು. ಆದರೆ ಕೆಲವೊಮ್ಮೆ ನಾವು ಆತ್ಮಸ್ಥೈರ್ಯವನ್ನು ಕಳೆದುಕೊಂಡು ಬಿಡುತ್ತೇವೆ. ಆದರೆ ಈ ರೀತಿ ಚಿಕ್ಕ ಪುಟ್ಟ ವಿಚಾರಕ್ಕೂ ನಿಮ್ಮ ಮೇಲಿನ ನಂಬಿಕೆಯನ್ನು ನೀವೆ ಕಳೆದುಕೊಳ್ಳುವವರಿಗಾಗಿ ಇಲ್ಲಿದೆ ಹಲವು ಸಲಹೆಗಳು.

ಪರಿಸ್ಥಿತಿ ಎಂತದ್ದೇ ಇರಲಿ. ಸಂಕಷ್ಟಗಳು ಎಷ್ಟೇ ಬರಲಿ. ಎಂದಿಗೂ ನಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಮಗೆ ತಿಳಿಯದಂತೆ ನಾವು ಆತ್ಮವಿಶ್ವಾಸ ಕಳೆದುಕೊಂಡು ಬಿಡುತ್ತೇವೆ. ನಿಮ್ಮ ಆತ್ಮವಿಶ್ವಾಸವನ್ನು ನೀವು ಕಳೆದುಕೊಂಡು ಬಿಟ್ಟರೆ ಬಳಿಕ ನಿಮ್ಮ ವೈಯಕ್ತಿಕ ಬೆಳವಣಿಗೆ ಕೂಡ ರಿವರ್ಸ್ ಗೇರ್​ಗೆ ಸಾಗಿಬಿಡಬಹುದು. ಹೀಗಾಗಿ ನೀವು ಏನೆಲ್ಲ ಮಾಡಿದ್ರೆ ನಿಮ್ಮೊಳಗೆ ಇರುವ ಆತ್ಮವಿಶ್ವಾಸವನ್ನು ಗಟ್ಟಿಯಾಗಿ ಇಟ್ಟುಕೊಳ್ಳಲು ಸಾಧ್ಯ ಎಂಬ ಪ್ರಶ್ನೆ ಈಗ ನಿಮ್ಮ ಮನದಲ್ಲಿ ಮೂಡಿರಬಹುದು. ನಿಮ್ಮ ಈ ಗೊಂದಲಗಳಿಗೆ ಉತ್ತರ ಇಲ್ಲಿದೆ. (PC: Unsplash)
icon

(1 / 5)

ನಮ್ಮ ಸುತ್ತಲೂ ನಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವ ಅಥವಾ ಸದಾ ಕಾಲ ನಮ್ಮನ್ನು ಟೀಕಿಸುವ ಜನರೇ ಇದ್ದಾಗ ನಮಗೆ ಗೊತ್ತಿಲ್ಲದೇ ನಾವು ಅಸಮರ್ಥರು ಇರಬಹುದು ಎಂಬ ಭಾವನೆಗೆ ಬಂದು ಬಿಡುತ್ತೇವೆ. ಆತ್ಮವಿಶ್ವಾಸ ಎಂಬುದನ್ನು ಸಂಪೂರ್ಣವಾಗಿ ಕಳೆದುಕೊಂಡು ಬಿಡಬಹುದು. ಹೀಗಾಗಿ ನೀವು ಯಾವಾಗ ವ್ಯಕ್ತಿಗಳ ಆಯ್ಕೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬರುತ್ತೀರೋ ಬಹುಶಃ ನೀವು ಇಂತಹ ಜನರನ್ನು ಭೇಟಿಯಾಗೋಕೆ ಇಚ್ಛಿಸದೇ ಇರಬಹುದು. ಆಗ ನೀವು ನಿಮ್ಮ ಬಗ್ಗೆ ನಕರಾತ್ಮಕವಾಗಿ ಮಾತನಾಡುವವರಿಂದ ದೂರವಿದ್ದಂತೆ ಆಗುತ್ತದೆ. (PC: Unsplash)
icon

(2 / 5)

ಎಲ್ಲರಿಗೂ ಅವರದ್ದೇ ಆದ ಒಂದು ಜೀವನದ ಜರ್ನಿ ಇರುತ್ತದೆ. ಹೀಗಾಗಿ ನಾವು ಎಂದಿಗೂ ನಮ್ಮ ಜೀವನವನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳಲು ಹೋಗಲೇಬಾರದು. ಏಕೆಂದರೆ ಇನ್ನೊಬ್ಬರಿಗೆ ನಮ್ಮನ್ನು ಹೋಲಿಕೆ ಮಾಡಿಕೊಂಡಾಗ ನಾವು ಅವರಷ್ಟು ಸಾಧನೆ ಮಾಡಿಲ್ಲ ಎಂಬ ಕೀಳರಿಮೆ ಮೂಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದು ನಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡಬಹುದು. ಇನ್ನೊಬ್ಬರಿಂದ ಸ್ಫೂರ್ತಿ ಪಡೆಯುವುದು ತಪ್ಪಲ್ಲ. ಆದರೆ ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಂಡು ನಮ್ಮನ್ನು ನಾವು ಕೀಳಾಗಿ ಕಾಣುವುದು ತಪ್ಪು. (PC: Unsplash)
icon

(3 / 5)

ನಿಮ್ಮ ಬಗ್ಗೆ ನೀವು ಎಂದಿಗೂ ನಕಾರಾತ್ಮಕವಾಗಿ ಯೋಚನೆ ಮಾಡಬಾರದು. ಇದು ಮಾನಸಿಕವಾಗಿಯೂ ನಿಮ್ಮನ್ನು ಕುಗ್ಗಿಸಿ ಬಿಡುತ್ತದೆ. ಮೊದಲು ನಿಮ್ಮನ್ನು ನೀವು ಪ್ರೀತಿಸುವುದನ್ನು, ನೀವು ಹೇಗಿದ್ದಿರೋ ಹಾಗೆ ನಿಮ್ಮನ್ನು ನೀವು ಮೊದಲು ಒಪ್ಪಿಕೊಳ್ಳುವುದಕ್ಕೆ ಕಲಿಯಬೇಕು. ಆಗ ಮಾತ್ರ ನಿಮಗೆ ಆತ್ಮವಿಶ್ವಾಸ ಇರುತ್ತದೆ ಹಾಗೂ ಉಳಿದವರು ನಿಮ್ಮ ಆತ್ಮವಿಶ್ವಾಸ ಕುಗ್ಗಿಸುವ ಪ್ರಯತ್ನದಲ್ಲಿಯೂ ಸೋಲುತ್ತಾರೆ. (PC: Freepik)
icon

(4 / 5)

ಸೋಲಿನ ಬಗ್ಗೆ ಅತಿಯಾದ ಅಂಜಿಕೆ ನಿಮ್ಮನ್ನು ವರ್ತಮಾನದ ಕ್ಷಣಗಳಿಂದ ಎಂಜಾಯ್​ ಮಾಡುವುದನ್ನು ತಪ್ಪಿಸಿಬಿಡಬಹುದು. ಸೋಲಿನ ಬಗ್ಗೆ ಚಿಂತೆ ಇರಬೇಕು ನಿಜ, ಆದರೆ ಅತಿಯಾದ ಚಿಂತೆ ಕೂಡ ಒಳ್ಳೆಯದಲ್ಲ. ಆಗುವ ಸೋಲಿಗೆ ಹೆದರಿಕೊಂಡು ಪ್ರಯತ್ನವನ್ನೇ ಮಾಡದಿದ್ದರೆ ನೀವು ಗೆಲ್ಲುವ ಅವಕಾಶವನ್ನೂ ಕಳೆದುಕೊಂಡು ಬಿಡಬಹುದು. (PC: Unsplash)
icon

(5 / 5)

IPL_Entry_Point

ಇತರ ಗ್ಯಾಲರಿಗಳು