ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Relationship: ಕ್ಷಮೆಯ ಭಾಷೆ ಎಂದರೇನು, ಸಂಗಾತಿ ಜೊತೆಗಿನ ಮನಸ್ತಾಪವನ್ನು ಕೊನೆಗೊಳಿಸುವುದು ಹೇಗೆ?

Relationship: ಕ್ಷಮೆಯ ಭಾಷೆ ಎಂದರೇನು, ಸಂಗಾತಿ ಜೊತೆಗಿನ ಮನಸ್ತಾಪವನ್ನು ಕೊನೆಗೊಳಿಸುವುದು ಹೇಗೆ?

ಯಾವುದೇ ಸಂಬಂಧ ಆಗಲೀ ಅಲ್ಲಿ ಪ್ರೀತಿ ಜೊತೆಗೆ ಕೋಪ, ಜಗಳ, ಮನಸ್ತಾಪ ಇದ್ದೇ ಇರುತ್ತದೆ. ಆದರೆ ಅದನ್ನೆಲ್ಲಾ ಮುಂದುವರೆಸುವ ಗೋಜಿಗೆ ಹೋಗಬಾರದು. ತಮ್ಮದಲ್ಲದ ತಪ್ಪಿಗೆ ನಾನೇಕೆ ಕ್ಷಮೆ ಕೇಳಲಿ ಎಂಬ ಮನಸ್ಥಿತಿಯಿಂದ ಇಬ್ಬರೂ ಹೊರ ಬರಬೇಕು.

ಪ್ರೀತಿಯ ಭಾಷೆಯಂತೆ, ಪ್ರತಿಯೊಂದು ಸಂಬಂಧಕ್ಕೂ ಅದ್ದರದ್ದೇ ಭಾಷೆ ಇರುತ್ತದೆ. ನಮ್ಮ ತಪ್ಪುಗಳನ್ನು ಒಪ್ಪಿಕೊಂಡು ಜವಾಬ್ದಾರಿಯುತ ಸ್ಥಾನದಲ್ಲಿ ನಡೆದುಕೊಂಡರೆ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.  ಕ್ಷಮೆ ಯಾಚಿಸುವ ವಿಧಾನವು ಸಂಬಂಧದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಬಂಧದಲ್ಲಿನ ಘರ್ಷಣೆಗಳನ್ನು ತಪ್ಪಿಸುವುದು ಮತ್ತು ಅವುಗಳನ್ನು ಪರಿಹಾರ ಮಾಡುವ ಮಾರ್ಗಗಳನ್ನು ಕಂಡುಹಿಡಿಯುವುದು ಮುಖ್ಯವಾಗಿದೆ. ಕ್ಷಮೆಯ ಭಾಷೆಗಳು ಹೀಗಿವೆ.  
icon

(1 / 6)

ಪ್ರೀತಿಯ ಭಾಷೆಯಂತೆ, ಪ್ರತಿಯೊಂದು ಸಂಬಂಧಕ್ಕೂ ಅದ್ದರದ್ದೇ ಭಾಷೆ ಇರುತ್ತದೆ. ನಮ್ಮ ತಪ್ಪುಗಳನ್ನು ಒಪ್ಪಿಕೊಂಡು ಜವಾಬ್ದಾರಿಯುತ ಸ್ಥಾನದಲ್ಲಿ ನಡೆದುಕೊಂಡರೆ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.  ಕ್ಷಮೆ ಯಾಚಿಸುವ ವಿಧಾನವು ಸಂಬಂಧದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಂಬಂಧದಲ್ಲಿನ ಘರ್ಷಣೆಗಳನ್ನು ತಪ್ಪಿಸುವುದು ಮತ್ತು ಅವುಗಳನ್ನು ಪರಿಹಾರ ಮಾಡುವ ಮಾರ್ಗಗಳನ್ನು ಕಂಡುಹಿಡಿಯುವುದು ಮುಖ್ಯವಾಗಿದೆ. ಕ್ಷಮೆಯ ಭಾಷೆಗಳು ಹೀಗಿವೆ.  (Unsplash)

ನಿಮ್ಮ ತಪ್ಪಿಗೆ ವಿಷಾದ ವ್ಯಕ್ತಪಡಿಸುವುದು ಮುಖ್ಯ, ನೀವು ಮಾಡಿದ ತಪ್ಪು ಬೇರೆಯವರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ನೀವು ಅರ್ಥ ಮಾಡಿಕೊಂಡರೆ ಅದು ಸಂಗಾತಿಗೆ ಖುಷಿ ನೀಡುತ್ತದೆ.  
icon

(2 / 6)

ನಿಮ್ಮ ತಪ್ಪಿಗೆ ವಿಷಾದ ವ್ಯಕ್ತಪಡಿಸುವುದು ಮುಖ್ಯ, ನೀವು ಮಾಡಿದ ತಪ್ಪು ಬೇರೆಯವರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ನೀವು ಅರ್ಥ ಮಾಡಿಕೊಂಡರೆ ಅದು ಸಂಗಾತಿಗೆ ಖುಷಿ ನೀಡುತ್ತದೆ.  (Unsplash)

ನಿಮ್ಮ ಜವಾಬ್ದಾರಿ ಮಾತ್ರವಲ್ಲ, ನಿಮ್ಮ ತಪ್ಪುಗಳನ್ನೂ ಒಪ್ಪಿಕೊಳ್ಳಿ. ಅದನ್ನು ನಿಮ್ಮ ಸಂಗಾತಿ ಜೊತೆ ಸೂಕ್ತ ರೀತಿಯಲ್ಲಿ ಸಂವಹನ ನಡೆಸಿದರೆ ನಿಮ್ಮ ಸಂಬಂಧ ಬಹಳ ಆರೋಗ್ಯಕರ ವಾಗಿರುತ್ತದೆ. 
icon

(3 / 6)

ನಿಮ್ಮ ಜವಾಬ್ದಾರಿ ಮಾತ್ರವಲ್ಲ, ನಿಮ್ಮ ತಪ್ಪುಗಳನ್ನೂ ಒಪ್ಪಿಕೊಳ್ಳಿ. ಅದನ್ನು ನಿಮ್ಮ ಸಂಗಾತಿ ಜೊತೆ ಸೂಕ್ತ ರೀತಿಯಲ್ಲಿ ಸಂವಹನ ನಡೆಸಿದರೆ ನಿಮ್ಮ ಸಂಬಂಧ ಬಹಳ ಆರೋಗ್ಯಕರ ವಾಗಿರುತ್ತದೆ. (Unsplash)

ಕ್ಷಮೆ ಕೇಳುವುದು, ಮತ್ತು  ಸಮಸ್ಯೆಗೆ ಪರಿಹಾರಗಳನ್ನು ಹುಡುಕುವ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸಿದರೆ ನಿಮ್ಮ ನಡುವಿನ ವಿಶ್ವಾಸವನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ.  
icon

(4 / 6)

ಕ್ಷಮೆ ಕೇಳುವುದು, ಮತ್ತು  ಸಮಸ್ಯೆಗೆ ಪರಿಹಾರಗಳನ್ನು ಹುಡುಕುವ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸಿದರೆ ನಿಮ್ಮ ನಡುವಿನ ವಿಶ್ವಾಸವನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ.  (Unsplash)

ಬದಲಾವಣೆಗೆ ಭರವಸೆ ನೀಡುವುದು ಮತ್ತು ಆ ಭರವಸೆಯನ್ನು ಪರಿಪೂರ್ಣಗೊಳಿಸಲು ನೀವುಮಾಡುವ ಪ್ರಯತ್ನ ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.  
icon

(5 / 6)

ಬದಲಾವಣೆಗೆ ಭರವಸೆ ನೀಡುವುದು ಮತ್ತು ಆ ಭರವಸೆಯನ್ನು ಪರಿಪೂರ್ಣಗೊಳಿಸಲು ನೀವುಮಾಡುವ ಪ್ರಯತ್ನ ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.  (Unsplash)

 ನಿಮ್ಮ ತಪ್ಪಿಗಾಗಿ ಕ್ಷಮೆ ಯಾಚಿಸಿರೆ ನೀವು ಚಿಕ್ಕವರಾಗುವುದಿಲ್ಲ, ಬದಲಿಗೆ ನಿಮ್ಮ ಸಂಗಾತಿಯ ದೃಷ್ಟಿಯಿಂದ ದೊಡ್ಡವರಾಗುತ್ತೀರಿ. ಇದು ನಿಮ್ಮ ನಡುವಿನ ಸಮಸ್ಯೆ, ಮನಸ್ತಾಪವನ್ನು ಪರಿಹರಿಸುವ ಉತ್ತಮ ಮಾರ್ಗವಾಗಿದೆ.  
icon

(6 / 6)

 ನಿಮ್ಮ ತಪ್ಪಿಗಾಗಿ ಕ್ಷಮೆ ಯಾಚಿಸಿರೆ ನೀವು ಚಿಕ್ಕವರಾಗುವುದಿಲ್ಲ, ಬದಲಿಗೆ ನಿಮ್ಮ ಸಂಗಾತಿಯ ದೃಷ್ಟಿಯಿಂದ ದೊಡ್ಡವರಾಗುತ್ತೀರಿ. ಇದು ನಿಮ್ಮ ನಡುವಿನ ಸಮಸ್ಯೆ, ಮನಸ್ತಾಪವನ್ನು ಪರಿಹರಿಸುವ ಉತ್ತಮ ಮಾರ್ಗವಾಗಿದೆ.  (Unsplash)


IPL_Entry_Point

ಇತರ ಗ್ಯಾಲರಿಗಳು