ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಕ್ನೋ ಸೂಪರ್ ಜೈಂಟ್ಸ್​​ ತಂಡದ ಕೆಎಲ್ ರಾಹುಲ್ ನಾಯಕತ್ವಕ್ಕೆ ಗುಡ್​ಬೈ; ಮುಂದಿನ ಪಂದ್ಯಗಳಿಗೆ ನೂತನ ಕ್ಯಾಪ್ಟನ್?

ಲಕ್ನೋ ಸೂಪರ್ ಜೈಂಟ್ಸ್​​ ತಂಡದ ಕೆಎಲ್ ರಾಹುಲ್ ನಾಯಕತ್ವಕ್ಕೆ ಗುಡ್​ಬೈ; ಮುಂದಿನ ಪಂದ್ಯಗಳಿಗೆ ನೂತನ ಕ್ಯಾಪ್ಟನ್?

  • KL Rahul: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವಕ್ಕೆ ಗುಡ್​ ಬೈ ಹೇಳಿದ್ದಾರೆ ಎಂದು ಹೇಳಲಾಗಿದೆ. ಲಕ್ನೋದ ಮುಂದಿನ ಎರಡು ಐಪಿಎಲ್ ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿದೆ.

ಸನ್​​ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯ ಸೋಲಿನ ನಂತರ ಲಕ್ನೋ ಸೂಪರ್‌ ಜೈಂಟ್ಸ್ ಫ್ರಾಂಚೈಸಿ ಮಾಲೀಕ ಸಂಜೀವ್‌ ಗೋಯೆಂಕಾ ಮತ್ತು ನಾಯಕ ಕೆಎಲ್‌ ರಾಹುಲ್‌ ನಡುವೆ ನಡೆದ ಮಾತಿನ ಚಕಮಕಿ ಮತ್ತೊಂದು ಹಂತಕ್ಕೆ ಹೋಗಿದೆ.
icon

(1 / 7)

ಸನ್​​ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯ ಸೋಲಿನ ನಂತರ ಲಕ್ನೋ ಸೂಪರ್‌ ಜೈಂಟ್ಸ್ ಫ್ರಾಂಚೈಸಿ ಮಾಲೀಕ ಸಂಜೀವ್‌ ಗೋಯೆಂಕಾ ಮತ್ತು ನಾಯಕ ಕೆಎಲ್‌ ರಾಹುಲ್‌ ನಡುವೆ ನಡೆದ ಮಾತಿನ ಚಕಮಕಿ ಮತ್ತೊಂದು ಹಂತಕ್ಕೆ ಹೋಗಿದೆ.(PTI)

2025ರಲ್ಲಿ ನಡೆಯಲಿರುವ ಮೆಗಾ ಹರಾಜಿಗೂ ಮುಂಚಿತವಾಗಿ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದೆ. ಅಲ್ಲದೆ, ಎಲ್​ಎಸ್​ಜಿ ತಂಡದ ಉಳಿದಿರುವ ಎರಡು ಪಂದ್ಯಗಳಿಗೆ ರಾಹುಲ್ ಹೊರಗುಳಿಯಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. 
icon

(2 / 7)

2025ರಲ್ಲಿ ನಡೆಯಲಿರುವ ಮೆಗಾ ಹರಾಜಿಗೂ ಮುಂಚಿತವಾಗಿ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದೆ. ಅಲ್ಲದೆ, ಎಲ್​ಎಸ್​ಜಿ ತಂಡದ ಉಳಿದಿರುವ ಎರಡು ಪಂದ್ಯಗಳಿಗೆ ರಾಹುಲ್ ಹೊರಗುಳಿಯಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. (PTI)

17ನೇ ಆವೃತ್ತಿಯಲ್ಲಿ ಲಕ್ನೋ ಮೇ 14ರಂದು ಡೆಲ್ಲಿ ವಿರುದ್ಧ, ಮೇ 17ರಂದು ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಎರಡು ಕೊನೆಯ ಪಂದ್ಯಗಳನ್ನಾಡಲಿದೆ. ಈ ಎರಡೂ ಪಂದ್ಯಗಳಿಗೆ ಎಲ್​ಎಸ್​ಜಿ ನೂತನ ಕ್ಯಾಪ್ಟನ್​ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ.
icon

(3 / 7)

17ನೇ ಆವೃತ್ತಿಯಲ್ಲಿ ಲಕ್ನೋ ಮೇ 14ರಂದು ಡೆಲ್ಲಿ ವಿರುದ್ಧ, ಮೇ 17ರಂದು ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಎರಡು ಕೊನೆಯ ಪಂದ್ಯಗಳನ್ನಾಡಲಿದೆ. ಈ ಎರಡೂ ಪಂದ್ಯಗಳಿಗೆ ಎಲ್​ಎಸ್​ಜಿ ನೂತನ ಕ್ಯಾಪ್ಟನ್​ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ.(PTI)

ಹೈದರಾಬಾದ್​ನ ರಾಜೀವ್​ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಎಲ್​ಎಸ್​ಜಿ 20 ಓವರ್​ಗಳಲ್ಲಿ 165 ರನ್ ಮಾತ್ರ ಕಲೆ ಹಾಕಿತ್ತು. ಪವರ್​​ಪ್ಲೇನಲ್ಲಿ ಕೇವಲ 27 ರನ್ ಕಲೆ ಹಾಕಿತ್ತು. ಕೆಎಲ್ ರಾಹಲ್ ಆಮೆಗತಿಯ ಆಟದಿಂದ ಎಲ್​ಎಸ್​ಜಿ ಕಡಿಮೆ ಮೊತ್ತ ಕಲೆ ಹಾಕಲು ಸಾಧ್ಯವಾಗಿತ್ತು.
icon

(4 / 7)

ಹೈದರಾಬಾದ್​ನ ರಾಜೀವ್​ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಎಲ್​ಎಸ್​ಜಿ 20 ಓವರ್​ಗಳಲ್ಲಿ 165 ರನ್ ಮಾತ್ರ ಕಲೆ ಹಾಕಿತ್ತು. ಪವರ್​​ಪ್ಲೇನಲ್ಲಿ ಕೇವಲ 27 ರನ್ ಕಲೆ ಹಾಕಿತ್ತು. ಕೆಎಲ್ ರಾಹಲ್ ಆಮೆಗತಿಯ ಆಟದಿಂದ ಎಲ್​ಎಸ್​ಜಿ ಕಡಿಮೆ ಮೊತ್ತ ಕಲೆ ಹಾಕಲು ಸಾಧ್ಯವಾಗಿತ್ತು.(PTI)

ಈ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಸನ್​ರೈಸರ್ಸ್​ ಹೈದರಾವಾದ್ 9.4 ಓವರ್​ಗಳಲ್ಲೇ ಗೆದ್ದು ಬೀಗಿತು. ಅಭಿಷೇಕ್ ಶರ್ಮಾ (75*) ಮತ್ತು ಟ್ರಾವಿಸ್ ಹೆಡ್ (89) ಬೊಂಬಾಟ್ ಬ್ಯಾಟಿಂಗ್ ನಡೆಸಿ ಎಲ್​ಎಸ್​​ಜಿಗೆ ಸೋಲುಣಿಸಿದ್ದರು. ಈ ಹೀನಾಯ ಸೋಲು ಅರಗಿಸಿಕೊಳ್ಳಲು ಸಾಧ್ಯವಾಗದ ಮಾಲೀಕರು ರಾಹುಲ್​ರನ್ನು ತರಾಟೆ ತೆಗೆದುಕೊಂಡಿದ್ದರು.
icon

(5 / 7)

ಈ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಸನ್​ರೈಸರ್ಸ್​ ಹೈದರಾವಾದ್ 9.4 ಓವರ್​ಗಳಲ್ಲೇ ಗೆದ್ದು ಬೀಗಿತು. ಅಭಿಷೇಕ್ ಶರ್ಮಾ (75*) ಮತ್ತು ಟ್ರಾವಿಸ್ ಹೆಡ್ (89) ಬೊಂಬಾಟ್ ಬ್ಯಾಟಿಂಗ್ ನಡೆಸಿ ಎಲ್​ಎಸ್​​ಜಿಗೆ ಸೋಲುಣಿಸಿದ್ದರು. ಈ ಹೀನಾಯ ಸೋಲು ಅರಗಿಸಿಕೊಳ್ಳಲು ಸಾಧ್ಯವಾಗದ ಮಾಲೀಕರು ರಾಹುಲ್​ರನ್ನು ತರಾಟೆ ತೆಗೆದುಕೊಂಡಿದ್ದರು.(PTI)

ಇದೇ ಕಾರಣದಿಂದ ನಾಯಕ ಮತ್ತು ಫ್ರಾಂಚೈಸಿ ಮಾಲೀಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ವರದಿಗಳು ಹೇಳುತ್ತಿವೆ. 2022ರ ಹರಾಜಿಗೂ ಮುನ್ನ 17 ಕೋಟಿಗೆ ಭಾರಿ ಒಪ್ಪಂದದ ಮೂಲಕ ಲಕ್ನೋ ರಾಹುಲ್​ರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.
icon

(6 / 7)

ಇದೇ ಕಾರಣದಿಂದ ನಾಯಕ ಮತ್ತು ಫ್ರಾಂಚೈಸಿ ಮಾಲೀಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ವರದಿಗಳು ಹೇಳುತ್ತಿವೆ. 2022ರ ಹರಾಜಿಗೂ ಮುನ್ನ 17 ಕೋಟಿಗೆ ಭಾರಿ ಒಪ್ಪಂದದ ಮೂಲಕ ಲಕ್ನೋ ರಾಹುಲ್​ರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.(AP)

ಉಳಿದ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಕಡೆಗೆ ಮಾತ್ರ ಗಮನ ಕೊಡಲಿದ್ದಾರೆ. ನಾಯಕತ್ವ ಬಿಟ್ಟುಕೊಟ್ಟರೆ ಯಾವುದೇ ಸಮಸ್ಯೆ ಇಲ್ಲ ಎಂದು ಐಪಿಎಲ್ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿವೆ.
icon

(7 / 7)

ಉಳಿದ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಕಡೆಗೆ ಮಾತ್ರ ಗಮನ ಕೊಡಲಿದ್ದಾರೆ. ನಾಯಕತ್ವ ಬಿಟ್ಟುಕೊಟ್ಟರೆ ಯಾವುದೇ ಸಮಸ್ಯೆ ಇಲ್ಲ ಎಂದು ಐಪಿಎಲ್ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿವೆ.


IPL_Entry_Point

ಇತರ ಗ್ಯಾಲರಿಗಳು