ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sslc Result: ಕಮಲ್‌ ಹಾಸನ್‌ರಿಂದ ಆಮೀರ್‌ ಖಾನ್‌ವರೆಗೆ; ಎಸ್ಸೆಸೆಲ್ಸಿಯಲ್ಲಿ ಫೇಲ್‌ ಆಗಿ ಜೀವನದಲ್ಲಿ ಗೆದ್ದು ಬೀಗಿದ ಸಿನಿಮಾ ತಾರೆಯವರಿವರು

SSLC Result: ಕಮಲ್‌ ಹಾಸನ್‌ರಿಂದ ಆಮೀರ್‌ ಖಾನ್‌ವರೆಗೆ; ಎಸ್ಸೆಸೆಲ್ಸಿಯಲ್ಲಿ ಫೇಲ್‌ ಆಗಿ ಜೀವನದಲ್ಲಿ ಗೆದ್ದು ಬೀಗಿದ ಸಿನಿಮಾ ತಾರೆಯವರಿವರು

  • ಪರೀಕ್ಷೆಯಲ್ಲಿ ಫೇಲ್‌ ಆಗುವುದು ಜೀವನದ ಶಾಶ್ವತ ಸೋಲಲ್ಲ. ಅದು ಮತ್ತೊಂದು, ಮಗದಷ್ಟು ಕಲಿಕೆಗೆ ನೆರವಾಗುವ ಏಣಿ. SSLCಯಲ್ಲಿ ಫೇಲ್‌ ಆದೆ ಎಂಬ ಕಾರಣಕ್ಕೆ ಕೆಟ್ಟ ಆಲೋಚನೆಯನ್ನು ಬದಿಗಿಟ್ಟು ಪಾಸಿಟಿವ್‌ ಆಗಿರಿ. ಇದೇ 10ನೇ ತರಗತಿ ಪಾಸಾಗದೇ, ಜೀವನದಲ್ಲಿ ಗೆದ್ದು ಬೀಗಿದವರ ಸಂಖ್ಯೆಗೇನು ಕಡಿಮೆ ಇಲ್ಲ. ಇಲ್ನೋಡಿ ಹೀಗೆ ಫೇಲ್‌ ಆದವರೀಗ ಚಿತ್ರೋದ್ಯಮವನ್ನೇ ಆಳುತ್ತಿದ್ದಾರೆ..

 SSLCಯಲ್ಲಿ ಫೇಲ್‌ ಆದೆ ಎಂಬ ಕಾರಣಕ್ಕೆ ಕೆಟ್ಟ ಆಲೋಚನೆಯನ್ನು ಬದಿಗಿಟ್ಟು ಪಾಸಿಟಿವ್‌ ಆಗಿರಿ. ಇದೇ 10ನೇ ತರಗತಿ ಪಾಸಾಗದೇ, ಜೀವನದಲ್ಲಿ ಗೆದ್ದು ಬೀಗಿದವರ ಸಂಖ್ಯೆಗೇನು ಕಡಿಮೆ ಇಲ್ಲ. ಇಲ್ನೋಡಿ ಹೀಗೆ ಫೇಲ್‌ ಆದವರೀಗ ಚಿತ್ರೋದ್ಯಮವನ್ನೇ ಆಳುತ್ತಿದ್ದಾರೆ.. (Photo/ Hindustan Times)
icon

(1 / 7)

ಆಮೀರ್‌ ಖಾನ್‌: ಬಾಲಿವುಡ್‌ ನಟ ಆಮೀರ್‌ ಖಾನ್‌, ಸಿನಿಮಾ ಇಂಡಸ್ಟ್ರಿಯ ಸ್ಟಾರ್‌ ನಟ. ತಮ್ಮ ನಟನೆಯಿಂದಲೇ ಎಲ್ಲರ ಗಮನ ಸೆಳೆದಾತ. ಇವರನ್ನು ಮಿಸ್ಟರ್‌ ಫರ್ಫೆಕ್ಷನಿಸ್ಟ್‌ ಎಂದೇ ಕರೆಯುತ್ತಾರೆ. ಆದರೆ, ಗೊತ್ತಿರಲಿ ಇದೇ ಹೀರೋ ಶಾಲಾ ದಿನದಲ್ಲಿ ಓದು ತಲೆಗೆ ಹತ್ತದೇ ನಿತ್ಯ ಶಿಕ್ಷಕರಿಂದ ಪೆಟ್ಟು ತಿನ್ನುತ್ತಿದ್ದರಂತೆ. ಅಷ್ಟೇ ಅಲ್ಲ 10ನೇ ತರಗತಿಯನ್ನೂ ಫೇಲ್‌ ಆಗಿದ್ದರಂತೆ. (Photo/ Hindustan Times)
icon

(2 / 7)

ಸಲ್ಮಾನ್‌ ಖಾನ್‌: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಕಳೆದ 3 ದಶಕಗಳಿಂದ ಸಿನಿಮಾರಂಗದಲ್ಲಿ ಅವರು ಸಕ್ರಿಯರಾಗಿದ್ದಾರೆ. ಸಾಕಷ್ಟು ಹಿಟ್‌ ಸಿನಿಮಾ ನೀಡಿ ಬಿಟೌನ್‌ನಲ್ಲಿ ಟಾಪ್‌ ಮೋಸ್ಟ್‌ ಸ್ಟಾರ್‌ಪಟ್ಟ ಅಲಂಕರಿಸಿದ್ದಾರೆ. ಆದರೆ ಹೆಚ್ಚಿನವರಿಗೆ ಗೊತ್ತಿಲ್ಲ ಈ ನಟ 8ನೇ ತರಗತಿಯಲ್ಲಿಯೇ ಫೇಲ್‌ ಆಗಿದ್ದರೆಂದು. (Photo/ Hindustan Times)
icon

(3 / 7)

ಕಮಲ್‌ ಹಾಸನ್‌: ಸೌತ್‌ ಸಿನಿ ದುನಿಯಾದ ದಂತಕತೆ ಕಮಲ್‌ ಹಾಸನ್‌ ತೆರೆಮೇಲೆ ಬಂದರೆ ಶಿಳ್ಳೆ ಚಪ್ಪಾಳೆಗೆ ಕೊರೆತೆಯೇ? ತಮಿಳು ಚಿತ್ರರಂಗದಲ್ಲಿ ಮಾಸ್ಟರ್‌ಪೀಸ್‌ ಎನಿಸುವ ಸಿನಿಮಾ ನೀಡಿದ ಖ್ಯಾತಿ ಇವರದ್ದು. ಇವರ ನಟನೆಗೆ ಹಲವು ರಾಷ್ಟ್ರ ಪ್ರಶಸ್ತಿಗಳೂ ಅರಸಿ ಬಂದಿವೆ. ಹೀಗಿರುವ ಇದೇ ಕಮ್‌ ಹಾಸನ್‌ ಓದಿನಲ್ಲಿ ಅಷ್ಟಕಷ್ಟೇ. SSLCಯಲ್ಲಿಯೂ ಅತ್ಯಂತ ಕಳಪೆ ಅಂಕ ಪಡೆದಿದ್ದರು ಈ ಸೂಪರ್‌ ಸ್ಟಾರ್‌. ಹಾಗಂತ ಕುಗ್ಗಲಿಲ್ಲ. ಶಾಲೆ ಬಿಟ್ಟು ಸಿನಿಮಾ ಕಡೆ ವಾಲಿದರು. ಯಶಸ್ಸು ಅವರನ್ನು ಅಪ್ಪಿಕೊಂಡಿತು. (Photo/ Hindustan Times)
icon

(4 / 7)

ಶಾಹೀದ್‌ ಕಪೂರ್‌: ಬಾಲಿವುಡ್‌ನ ಮತ್ತೋರ್ವ ನಟ ಶಾಹೀದ್‌ ಕಪೂರ್‌ ತಮ್ಮ ಸಿನಿಮಾಗಳ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕಪೂರ್‌ ಖಾಂದಾನ್‌ನ ಈ ಕುಡಿ ಓದಿನಲ್ಲಿ ಅಷ್ಟಕಷ್ಟೇ. 10ನೇ ತರಗತಿ ಫೇಲ್‌ ಆದರೂ ಸಿನಿಮಾರಂಗದಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದಾರೆ. (Photo/ Hindustan Times)
icon

(5 / 7)

ಬಾಬಿ ಡಿಯೋಲ್‌: ಆನ್‌ಸ್ಕ್ರೀನ್‌ನಲ್ಲಿ ರಗಡ್‌ ಆಗಿಯೇ ಕಾಣಿಸಿಕೊಳ್ಳುವ ಬಾಲಿವುಡ್‌ ನಟ ಬಾಬಿ ಡಿಯೋಲ್‌ ಸಹ ಓದಿನಲ್ಲಿ ಹೆಚ್ಚು ಮುಂದಿರಲಿಲ್ಲ. ಈ ನಟನೂ ಸಹ 10ನೇ ತರಗತಿಯನ್ನು ಫೇಲ್‌ ಆಗಿಯೇ, ಸಿನಿಮಾದಲ್ಲಿ ಯಶಸ್ಸು ಕಂಡವರು. (Photo/ Hindustan Times)
icon

(6 / 7)

ಕರೀಷ್ಮಾ ಕಪೂರ್‌: ಬಾಲಿವುಡ್‌ನ ಕಪೂರ್‌ ಕುಟುಂದ ಕುಡಿ ಸ್ಟಾರ್‌ ನಟಿ ಕರೀಷ್ಮಾ ಕಪೂರ್‌ ತಮ್ಮ ನಟನೆಯ ಮೂಲಕವೇ ತೆರೆಮೇಲೆ ಎಲ್ಲರ ನಿದ್ದೆಗೆಡಿಸಿದವರು. ಆದರೆ ಗೊತ್ತಿರಲಿ ಈ ನಟಿ 10ನೇ ತರಗತಿಯನ್ನೂ ಪೂರ್ಣಗೊಳಿಸಿಲ್ಲ. ಅರ್ಧಕ್ಕೆ ಮೊಟಕುಗೊಳಿಸಿ ಚಿತ್ರೋದ್ಯಮದಲ್ಲಿ ಗೆದ್ದವರು. (Photo/ Hindustan Times)
icon

(7 / 7)

IPL_Entry_Point

ಇತರ ಗ್ಯಾಲರಿಗಳು