ಕನ್ನಡ ಸುದ್ದಿ  /  Photo Gallery  /  Tips To Manage Hair Fall: Nutritionist Suggests Tips

Tips to manage hair fall: ಕೂದಲು ಉದುರುತ್ತಿದೆಯೇ? ತಜ್ಞರು ನೀಡಿದ ಈ ಟಿಪ್ಸ್ ಫಾಲೋ ಮಾಡಿ

  • ಕೂದಲು ಉದುರುವುದು ಕೇವಲ ದೈಹಿಕ ಸಮಸ್ಯೆಯಲ್ಲ, ಮಾನಸಿಕವಾಗಿಯೂ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕೂದಲ ರಕ್ಷಣೆಯು ನಮ್ಮ ದಿನಚರಿಯ ಪ್ರಮುಖ ಭಾಗವಾಗಿರಬೇಕು. ಇದಕ್ಕಾಗಿ ಏನು ಮಾಡಬೇಕು ಎಂದು ತಜ್ಞರು ನೀಡಿರುವ ಸಲಹೆಯನ್ನು ನೋಡಿ.

ಅನೇಕ ಜನರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಹಾಗೂ ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪವಾಗಿರಬೇಕು ಎಂದು ಬಯಸುತ್ತಾರೆ. ಆರೋಗ್ಯಕರ ಕೂದಲಿಗೆ ಪೋಷಣೆ ಮುಖ್ಯ. ನಾವು ತಿನ್ನುವ ಆಹಾರ ಮತ್ತು ನಾವು ನಡೆಸುವ ಜೀವನಶೈಲಿಗೂ ಸಹ ಕೂದಲು ಉದುರುವಿಕೆ ಸಂಬಂಧಹೊಂದಿದೆ. ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರ ಪ್ರಕಾರ ಕೂದಲು ಆರೋಗ್ಯಕರ ಮತ್ತು ಬಲಶಾಲಿಯಾಗಬೇಕೆಂದರೆ ಅಗತ್ಯವಾದ ಪೋಷಕಾಂಶಗಳು ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ನಿಯಮಿತವಾಗಿ ಸೇವಿಸಬೇಕು.
icon

(1 / 10)

ಅನೇಕ ಜನರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಹಾಗೂ ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪವಾಗಿರಬೇಕು ಎಂದು ಬಯಸುತ್ತಾರೆ. ಆರೋಗ್ಯಕರ ಕೂದಲಿಗೆ ಪೋಷಣೆ ಮುಖ್ಯ. ನಾವು ತಿನ್ನುವ ಆಹಾರ ಮತ್ತು ನಾವು ನಡೆಸುವ ಜೀವನಶೈಲಿಗೂ ಸಹ ಕೂದಲು ಉದುರುವಿಕೆ ಸಂಬಂಧಹೊಂದಿದೆ. ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರ ಪ್ರಕಾರ ಕೂದಲು ಆರೋಗ್ಯಕರ ಮತ್ತು ಬಲಶಾಲಿಯಾಗಬೇಕೆಂದರೆ ಅಗತ್ಯವಾದ ಪೋಷಕಾಂಶಗಳು ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ನಿಯಮಿತವಾಗಿ ಸೇವಿಸಬೇಕು.(Unsplash)

ಕೂದಲು ಉದುರುವಿಕೆ ಹಲವು ಕಾರಣಗಳಿಂದ ಉಂಟಾಗಬಹುದು. ಪಿಸಿಓಎಸ್, ಅಪೌಷ್ಟಿಕತೆ ಅಥವಾ ಒತ್ತಡವೂ ಆಗಿರಬಹುದು. ಕೂದಲು ಉದುರುವಿಕೆಗೆ ಮೂಲ ಕಾರಣವನ್ನು ಮೊದಲು ಕಂಡುಹಿಡಿಯುವುದು ಮುಖ್ಯ.
icon

(2 / 10)

ಕೂದಲು ಉದುರುವಿಕೆ ಹಲವು ಕಾರಣಗಳಿಂದ ಉಂಟಾಗಬಹುದು. ಪಿಸಿಓಎಸ್, ಅಪೌಷ್ಟಿಕತೆ ಅಥವಾ ಒತ್ತಡವೂ ಆಗಿರಬಹುದು. ಕೂದಲು ಉದುರುವಿಕೆಗೆ ಮೂಲ ಕಾರಣವನ್ನು ಮೊದಲು ಕಂಡುಹಿಡಿಯುವುದು ಮುಖ್ಯ.(Unsplash)

ಬೃಂಗರಾಜ ಎಣ್ಣೆ ಕೂದಲಿಗೆ ತುಂಬಾ ಒಳ್ಳೆಯದು. ರಾತ್ರಿಯಿಡೀ ಇದನ್ನು ಹಚ್ಚಿ ಮರುದಿನ  ತೊಳೆದರೆ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ.
icon

(3 / 10)

ಬೃಂಗರಾಜ ಎಣ್ಣೆ ಕೂದಲಿಗೆ ತುಂಬಾ ಒಳ್ಳೆಯದು. ರಾತ್ರಿಯಿಡೀ ಇದನ್ನು ಹಚ್ಚಿ ಮರುದಿನ  ತೊಳೆದರೆ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ.(Unsplash)

ಕೂದಲು ಉದುರಲು ಒತ್ತಡವೂ ಪ್ರಮುಖ ಕಾರಣವಾಗಿದೆ. ಅಂತಹ ಸಂದರ್ಭಗಳಲ್ಲಿ, ಬೃಂಗರಾಜ ಎಣ್ಣೆ ಮತ್ತು ಬ್ರಾಹ್ಮಿ ಎಣ್ಣೆಯ ಮಿಶ್ರಣವನ್ನು ಕೂದಲಿಗೆ ಅನ್ವಯಿಸಬಹುದು.
icon

(4 / 10)

ಕೂದಲು ಉದುರಲು ಒತ್ತಡವೂ ಪ್ರಮುಖ ಕಾರಣವಾಗಿದೆ. ಅಂತಹ ಸಂದರ್ಭಗಳಲ್ಲಿ, ಬೃಂಗರಾಜ ಎಣ್ಣೆ ಮತ್ತು ಬ್ರಾಹ್ಮಿ ಎಣ್ಣೆಯ ಮಿಶ್ರಣವನ್ನು ಕೂದಲಿಗೆ ಅನ್ವಯಿಸಬಹುದು.(Unsplash)

ಕೂದಲಿಗೆ ನಾವು ಬಳಸುವ ಬಾಚಣಿಗೆ ಬಹಳ ಮುಖ್ಯ. ಕೂದಲು ಹೆಚ್ಚು ಉದುರದಿರಲು ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸುವುದು ಉತ್ತಮ.
icon

(5 / 10)

ಕೂದಲಿಗೆ ನಾವು ಬಳಸುವ ಬಾಚಣಿಗೆ ಬಹಳ ಮುಖ್ಯ. ಕೂದಲು ಹೆಚ್ಚು ಉದುರದಿರಲು ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸುವುದು ಉತ್ತಮ.(Unsplash)

ಬಿಗಿಯಾದ ಪೋನಿಟೇಲ್‌ಗಳು ನೆತ್ತಿಯಿಂದ ಕೂದಲನ್ನು ಎಳೆಯುತ್ತವೆ ಮತ್ತು ಕೂದಲನ್ನು ಹಾನಿಗೊಳಿಸುತ್ತವೆ. ಪೋನಿಟೇಲ್ ಅನ್ನು ಸಡಿಲವಾಗಿ ಇಡುವುದು ಉತ್ತಮ.
icon

(6 / 10)

ಬಿಗಿಯಾದ ಪೋನಿಟೇಲ್‌ಗಳು ನೆತ್ತಿಯಿಂದ ಕೂದಲನ್ನು ಎಳೆಯುತ್ತವೆ ಮತ್ತು ಕೂದಲನ್ನು ಹಾನಿಗೊಳಿಸುತ್ತವೆ. ಪೋನಿಟೇಲ್ ಅನ್ನು ಸಡಿಲವಾಗಿ ಇಡುವುದು ಉತ್ತಮ.(Unsplash)

ನಿಕೋಟಿನ್ ಕೂದಲಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಅಡ್ಡಿಪಡಿಸುತ್ತದೆ. ಆದ್ದರಿಂದ, ಕೂದಲು ಉದುರುವುದನ್ನು ತಡೆಯಲು ಧೂಮಪಾನವನ್ನು ತ್ಯಜಿಸುವುದು ಉತ್ತಮ ಮಾರ್ಗವಾಗಿದೆ.
icon

(7 / 10)

ನಿಕೋಟಿನ್ ಕೂದಲಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಅಡ್ಡಿಪಡಿಸುತ್ತದೆ. ಆದ್ದರಿಂದ, ಕೂದಲು ಉದುರುವುದನ್ನು ತಡೆಯಲು ಧೂಮಪಾನವನ್ನು ತ್ಯಜಿಸುವುದು ಉತ್ತಮ ಮಾರ್ಗವಾಗಿದೆ.(Unsplash)

ನಮ್ಮ ನಿದ್ರೆಯೂ ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿದೆ.. ನಮಗೆ ಪ್ರತಿದಿನ 7-8 ಗಂಟೆಗಳ ನಿದ್ರೆ ಇರಬೇಕು, ನಿದ್ದೆ ಕಡಿಮೆಯಾದರೆ ಒತ್ತಡ ಹೆಚ್ಚಾಗುತ್ತದೆ. ಒತ್ತಡ ಹೆಚ್ಚಾದರೆ ಕೂದಲು ಉದುರುತ್ತದೆ. 
icon

(8 / 10)

ನಮ್ಮ ನಿದ್ರೆಯೂ ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿದೆ.. ನಮಗೆ ಪ್ರತಿದಿನ 7-8 ಗಂಟೆಗಳ ನಿದ್ರೆ ಇರಬೇಕು, ನಿದ್ದೆ ಕಡಿಮೆಯಾದರೆ ಒತ್ತಡ ಹೆಚ್ಚಾಗುತ್ತದೆ. ಒತ್ತಡ ಹೆಚ್ಚಾದರೆ ಕೂದಲು ಉದುರುತ್ತದೆ. (Unsplash)

ದಿನ ತಿನ್ನುವ ಆಹಾರವು, ಐರನ್, ಫೋಲಿಕ್ ಯಾಸಿಡ್, ಪ್ರೋಟೀನ್ ಮುಂತಾದ ಪೋಷಕಾಂಶಗಳಿಂದ ಸಮೃದ್ಧಿಯಾಗಿರಬೇಕು. 
icon

(9 / 10)

ದಿನ ತಿನ್ನುವ ಆಹಾರವು, ಐರನ್, ಫೋಲಿಕ್ ಯಾಸಿಡ್, ಪ್ರೋಟೀನ್ ಮುಂತಾದ ಪೋಷಕಾಂಶಗಳಿಂದ ಸಮೃದ್ಧಿಯಾಗಿರಬೇಕು. (Unsplash)

ನೀವು ಎಷ್ಟು ಪ್ರಯತ್ನಗಳನ್ನು ಮಾಡಿದರೂ ಕೂದಲು ಉದುರುವುದು ನಿಲ್ಲದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. 
icon

(10 / 10)

ನೀವು ಎಷ್ಟು ಪ್ರಯತ್ನಗಳನ್ನು ಮಾಡಿದರೂ ಕೂದಲು ಉದುರುವುದು ನಿಲ್ಲದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. (Unsplash)


IPL_Entry_Point

ಇತರ ಗ್ಯಾಲರಿಗಳು