Turkey Earthquake death toll rises: ಟರ್ಕಿ ಪ್ರಬಲ ಭೂಕಂಪನಕ್ಕೆ 4 ಸಾವಿರಕ್ಕೂ ಅಧಿಕ ಮಂದಿ ಬಲಿ; ಭೂಮಿ ಕಂಪಿಸಿರುವುದಕ್ಕೆ ಇದೇ ಕಾರಣ
Turkey Earthquake death toll: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸತ್ತವರ ಸಂಖ್ಯೆ 4,000ಕ್ಕೂ ಅಧಿಕ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಜ್ಞಾನಿಗಳು ಟರ್ಕಿಯಲ್ಲಿ ಭೂಕಂಪನಕ್ಕೆ ನಿಜವಾದ ಕಾರಣ ಏನು ಅಂತ ತಿಳಿಸಿದ್ದಾರೆ.
(1 / 5)
ಟರ್ಕಿಯಲ್ಲಿ ಸೋಮವಾರ ಸಂಭವಿಸಿದ ಸರಣಿ ಭೂಕಂಪದಿಂದ ತತ್ತರಿಸಿದೆ. ಅಲ್ಲಿನ ದುರಂತ ದೃಶ್ಯಗಳನ್ನು ನೋಡಿ ಇಡೀ ಜಗತ್ತು ಕಣ್ಣೀರು ಹಾಕುವಂತಾಗಿದೆ. ಭೂಕಂಪದಲ್ಲಿ ಸತ್ತವರ ಸಂಖ್ಯೆ ಬರೋಬ್ಬರಿ 4 ಸಾವಿರಕ್ಕೂ ಅಧಿಕ ಎಂದು ಹೇಳಲಾಗಿದೆ. (AFP)
(2 / 5)
ಭೂಕಂಪದಿಂದ ಅನೇಕ ನಗರಗಳಲ್ಲಿ ಹಲವು ಕಟ್ಟಡಗಳು ನಾಶವಾಗಿವೆ. ಅವಶೇಷಗಳಡಿಯಲ್ಲಿ ಸಾವಿರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅವಶೇಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. (AP)
(3 / 5)
ಭೂಕಂಪನದ ವೇಳೆ ಕಟ್ಟಡಗಳು ಕುಸಿದು ಬೀಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರತ ಸೇರಿದಂತೆ ಹಲವು ದೇಶಗಳು ಟರ್ಕಿಗೆ ನೆರವು ನೀಡಲು ಮುಂದೆ ಬಂದಿವೆ. ತಕ್ಷಣ ರಕ್ಷಣಾ ತಂಡಗಳನ್ನು ಟರ್ಕಿಗೆ ಕಳುಹಿಸಲಾಗಿದೆ. (AFP)
(4 / 5)
ಟರ್ಕಿಯಲ್ಲಿ ಭೂಕಂಪದ ತೀವ್ರತೆಯ ಹಿಂದಿನ ನಿಜವಾದ ಕಾರಣ "ಪೂರ್ವ ಅನಾಟೋಲಿಯನ್ ಫಾಲ್ಟ್" ಎಂದು ವಿಜ್ಞಾನಿಗಳು ಹೇಳುತ್ತಾರೆ. ಸೋಮವಾರ, ಈ ದೋಷದ ಮೇಲೆ 18 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ವಿವರಿಸಲಾಗಿದೆ. ಅಲ್ಲಿಂದ ಆರಂಭವಾದ ಕಂಪನಗಳು ಈಶಾನ್ಯ ಟರ್ಕಿ ಮತ್ತು ಸಿರಿಯಾದತ್ತ ಪಸರಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ.(AFP)
(5 / 5)
ಪೂರ್ವ ಅನಾಟೋಲಿಯನ್ ದೋಷವು ಸ್ಟ್ರಿಪ್-ಸ್ಲಿಪ್ ದೋಷವಾಗಿದೆ. ಈ ಘನ ಶಿಲಾ ಫಲಕಗಳನ್ನು ಲಂಬವಾಗಿ ಪರಸ್ಪರ ಅಂಟಿಸಲಾಗುತ್ತದೆ. ಇವು ಚಲಿಸಲು ಪ್ರಾರಂಭಿಸಿದಾಗ, ಭೂಕಂಪಗಳು ಪ್ರಾರಂಭವಾಗುತ್ತವೆ. ಅಂತಿಮವಾಗಿ ಅವುಗಳಲ್ಲಿ ಒಂದು ಸಮತಲವಾಗಿ ಬಿದ್ದು ಹೆಚ್ಚಿನ ಪ್ರಮಾಣದ ಭೂಕಂಪವನ್ನು ಉಂಟುಮಾಡುತ್ತದೆ. ಸೋಮವಾರ ಟರ್ಕಿಯಲ್ಲಿ ಅದೇ ಸಂಭವಿಸಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. (AP)
ಇತರ ಗ್ಯಾಲರಿಗಳು