Nihal weds Rishika Sharma: 10 ವರ್ಷದ ಸ್ನೇಹ, 9 ವರ್ಷದ ಪ್ರೀತಿಗೆ ಮದುವೆ ಮುದ್ರೆ; ‘ವಿಜಯಾನಂದ’ ನಿರ್ದೇಶಕಿ ರಿಷಿಕಾ ಜತೆ ನಿಹಾಲ್ ಕಲ್ಯಾಣ
‘ವಿಜಯಾನಂದ’ ಸಿನಿಮಾ ಮೂಲಕ ಗುರುತಿಸಿಕೊಂಡ ನಟ ಮತ್ತು ನಿರ್ದೇಶಕ ಜೋಡಿ ಇದೀಗ ದಾಂಪತ್ಯಕ್ಕೆ ಬಲಗಾಲಿಡಲು ಸಿದ್ಧತೆ ನಡೆಸಿದೆ. ಅಂದರೆ ಈ ಚಿತ್ರದ ನಾಯಕ ನಿಹಾಲ್ ರಜಪೂತ್ ಮತ್ತು ನಿರ್ದೇಶಕಿ ರಿಷಿಕಾ ಶರ್ಮಾ ಜೋಡಿ ಇದೇ ತಿಂಗಳಲ್ಲಿ ವಿವಾಹವಾಗಲಿದ್ದಾರೆ.
(1 / 10)
ನಟ ನಿಹಾಲ್ ರಜಪೂತ್ ಮತ್ತು ನಿರ್ದೇಶಕಿ ರಿಷಿಕಾ ಶರ್ಮಾ ಜೋಡಿ ಇದೀಗ ಸಿಹಿ ಸುದ್ದಿ ಹಂಚಿಕೊಂಡಿದೆ. (Instagram/ Rishika Sharma/ Nihal Rajput)
(2 / 10)
ಇದೇ ತಿಂಗಳ 15ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾರೆ. (Instagram/ Rishika Sharma/ Nihal Rajput)
(3 / 10)
ಈ ಖುಷಿಯ ವಿಚಾರವನ್ನು ಈ ನಟ ಮತ್ತು ನಿರ್ದೇಶಕಿ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದೆ. (Instagram/ Rishika Sharma/ Nihal Rajput)
(4 / 10)
15ರಂದು ಬೆಂಗಳೂರಿನಲ್ಲಿ ಮದುವೆ ಕಾರ್ಯ ನೆರವೇರಿದರೆ, ಫೆಬ್ರವರಿ 17ಕ್ಕೆ ಧಾರವಾಡದ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆರತಕ್ಷತೆ ಆಯೋಜಿಸಿದೆ. (Instagram/ Rishika Sharma/ Nihal Rajput)
(5 / 10)
ಕಳೆದ 10 ವರ್ಷಗಳಿಂದ ಸ್ನೇಹದಲ್ಲಿದ್ದ ಈ ಜೋಡಿ, 9 ವರ್ಷದಿಂದ ಪ್ರೀತಿಯಲ್ಲಿತ್ತು. ಇದೀಗ ಆ ಬಂಧಕ್ಕೆ ಮದುವೆ ಮುದ್ರೆ ಒತ್ತಿದೆ. (Instagram/ Rishika Sharma/ Nihal Rajput)
(6 / 10)
ವಿಜಯಾನಂದ ಸಿನಿಮಾಕ್ಕೂ ಮುನ್ನ ಈ ಜೋಡಿ ಟ್ರಂಕ್ ಎಂಬ ಸಿನಿಮಾದಲ್ಲಿಯೂ ಒಟ್ಟಿಗೆ ಕೆಲಸ ಮಾಡಿತ್ತು. (Instagram/ Rishika Sharma/ Nihal Rajput)
(7 / 10)
ಅದಾದ ಬಳಿಕ ಡಾ, ವಿಜಯ್ ಸಂಕೇಶ್ವರ ಅವರ ಬಯೋಪಿಕ್ ಸಿನಿಮಾ ತೆರೆಗೆ ತಂದು ಹೆಸರು ಮಾಡಿತು ಈ ಜೋಡಿ. (Instagram/ Rishika Sharma/ Nihal Rajput)
(8 / 10)
ಇದೀಗ ಸದ್ದಿಲ್ಲದೆ, ತಮ್ಮ ಪ್ರೀತಿಯ ವಿಚಾರವನ್ನು ಮನೆಯವರ ಮುಂದೆ ಖಚಿತಪಡಿಸಿ ಅವರ ಒಪ್ಪಿಗೆಯನ್ನೂ ಪಡೆದು ಅದ್ದೂರಿ ವಿವಾಹಕ್ಕೆ ಸಜ್ಜಾಗಿದೆ. (Instagram/ Rishika Sharma/ Nihal Rajput)
(9 / 10)
ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಹಂಚಿಕೊಳ್ಳುತ್ತಿದ್ದಂತೆ ಈ ಜೋಡಿಗೆ ಸೆಲೆಬ್ರಿಟಿಗಳು, ನೆಟ್ಟಿಗರು ಶುಭಾಶಯ ಕೋರುತ್ತಿದ್ದಾರೆ. (Instagram/ Rishika Sharma/ Nihal Rajput)
(10 / 10)
ವಿಜಯಾನಂದ ಸಿನಿಮಾ ಬಳಿಕ ಮುಂದೇನು ಎಂಬ ಬಗ್ಗೆ ಈ ಜೋಡಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಮದುವೆ ಮುಗಿದ ಬಳಿಕ ಆ ವಿಚಾರ ಹೊರಬೀಳುವ ಸಾಧ್ಯತೆ ಇದೆ. (Instagram/ Rishika Sharma/ Nihal Rajput)
ಇತರ ಗ್ಯಾಲರಿಗಳು