ಕನ್ನಡ ಸುದ್ದಿ  /  ಕ್ರೀಡೆ  /  Hardik Pandyaಗೆ ಬಿಸಿಸಿಐನಿಂದ ಬಂಪರ್​ ಆಫರ್​​; ಟೆಸ್ಟ್​​​ ಕ್ರಿಕೆಟ್​​ಗೆ ಮರಳುವಂತೆ ಮನವಿ?

Hardik Pandyaಗೆ ಬಿಸಿಸಿಐನಿಂದ ಬಂಪರ್​ ಆಫರ್​​; ಟೆಸ್ಟ್​​​ ಕ್ರಿಕೆಟ್​​ಗೆ ಮರಳುವಂತೆ ಮನವಿ?

Hardik Pandya: ಶಿವಸುಂದರ್ ದಾಸ್ ನೇತೃತ್ವದ ಆಯ್ಕೆ ಸಮಿತಿ ಕೂಡ ಹಾರ್ದಿಕ್​​ ಪಾಂಡ್ಯ ಅವರನ್ನು ಟೆಸ್ಟ್​ ಕ್ರಿಕೆಟ್​​ಗೆ ಮರಳುವಂತೆ ಹಾರ್ದಿಕ್ ಜೊತೆ ಮಾತುಕತೆ ನಡೆಸಲು ಸಿದ್ಧತೆ ನಡೆಸಿದೆ. ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್​ಗೆ ಭಾರತ ಪ್ರವೇಶ ಪಡೆದರೆ, ಹಾರ್ದಿಕ್​ರನ್ನು ಆಡಿಸಲು ಚಿಂತನೆ ನಡೆಸಿದೆ.

ಹಾರ್ದಿಕ್​​ ಪಾಂಡ್ಯ
ಹಾರ್ದಿಕ್​​ ಪಾಂಡ್ಯ

ಹಾರ್ದಿಕ್​ ಪಾಂಡ್ಯ.. (Hardik Pandya) ಟೀಮ್​ ಇಂಡಿಯಾದ ONE OF THE FINEST ಆಲ್​ರೌಂಡರ್​​​.! 4D ಪ್ಲೇಯರ್​​ ಅಂತಾನೇ ಖ್ಯಾತಿ ಪಡೆದಿದ್ದಾರೆ. ಬ್ಯಾಟಿಂಗ್​​, ಬೌಲಿಂಗ್​​​, ಫೀಲ್ಡಿಂಗ್​​​ ಜೊತೆಗೆ ನಾಯಕನಾಗಿಯೂ ಖತನಾರ್ಕ್​ ಪ್ರದರ್ಶನ ನೀಡುತ್ತಿದ್ದಾರೆ. ಮೆನ್​ ಇನ್​ ಬ್ಲೂ ಪಡೆಯ ಬಿಗ್​ ​ಗೇಮ್​​​ ಚೇಂಜರ್​, ಮ್ಯಾಚ್​ ವಿನ್ನರ್ ಎನಿಸಿದ್ದಾರೆ. ಹೀಗಿರುವಾಗ ಪಾಂಡ್ಯಗೆ ಮತ್ತೊಂದು ಬಂಪರ್​​​​​ ಆಫರ್​​ ಸಿಕ್ಕಿದೆ.

T20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟೆಸ್ಟ್​​ಗೆ (Test Cricket) ಮರಳುತ್ತಾರಾ.? ಪ್ರಮುಖ ಆಟಗಾರರೇ ಇಂಜುರಿಗಳಿಂದ ಹಾಸಿಗೆ ಹಿಡಿದಿರುವಾಗ ಪಾಂಡ್ಯ ಅವರನ್ನು ದೀರ್ಘ ಸ್ವರೂಪಕ್ಕೆ ಮರಳಲು ಅನುಮತಿ ನೀಡಲಾಗುತ್ತದೆಯೇ.? ಆದರೆ, ಹೌದು ಎನ್ನುತ್ತಿವೆ ಬಿಸಿಸಿಐ ಮೂಲಗಳು..! ಸದ್ಯ ಟಿ20, ಏಕದಿನ ಕ್ರಿಕೆಟ್​​ನಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿರುವ ಪಾಂಡ್ಯರನ್ನು ಮತ್ತೆ ಟೆಸ್ಟ್​​​​​ ತಂಡಕ್ಕೆ ಕರೆ ತರಲು ಬಿಸಿಸಿಐ ಚಿಂತನೆ ನಡೆಸಿದೆ. ಈ ಬಗ್ಗೆ ಚರ್ಚಿಸಲುಮುಂದಾಗಿದೆ.

ಹಾರ್ದಿಕ್​ ಜೊತೆಗೆ ಆಯ್ಕೆ ಸಮಿತಿ ಚರ್ಚೆ!

ಶಿವಸುಂದರ್ ದಾಸ್ ನೇತೃತ್ವದ ಆಯ್ಕೆ ಸಮಿತಿ ಕೂಡ ಈ ನಿಟ್ಟಿನಲ್ಲಿ ಹಾರ್ದಿಕ್ ಜೊತೆ ಮಾತುಕತೆ ನಡೆಸಲು ಸಿದ್ಧತೆ ನಡೆಸಿದೆ. ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಒಂದು ವೇಳೆ ಭಾರತ ಗೆದ್ದರೆ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಆಡುವ ಸಾಧ್ಯತೆ ಇದೆ. ಹಾರ್ದಿಕ್ ಒಪ್ಪಿದರೆ, WTC ಫೈನಲ್‌ನಲ್ಲಿ ಆಡಿಸಲು ಬಿಸಿಸಿಐ ಸಿದ್ಧವಾಗಿರುವುದರ ಬಗ್ಗೆ ಬಿಸಿಸಿಐ ಮೂಲಗಳೇ ತಿಳಿಸಿವೆ. ತಂಡದಲ್ಲಿ ಫಾಸ್ಟ್​ ಬೌಲಿಂಗ್​ ಆಲ್​ರೌಂಡರ್​ಗಳ ಕೊರತೆ ಇರುವ ಕಾರಣ, ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಈ ಕುರಿತು ಬಿಸಿಸಿಐ ಪ್ರತಿನಿಧಿಯೊಬ್ಬರು ಮಾತನಾಡಿದ್ದು, 'ಸದ್ಯಕ್ಕೆ ಹಾರ್ದಿಕ್​​ ಪಾಂಡ್ಯ ಅವರನ್ನು ಟೆಸ್ಟ್‌ ತಂಡಕ್ಕೆ ಕರೆತರುವ ಯಾವುದೇ ಆತುರವಿಲ್ಲ. ಆದರೆ ಮಹತ್ವದ WTC ಫೈನಲ್‌ಗೂ ಮೊದಲು ಅವರೊಂದಿಗೆ ಚರ್ಚಿಸುತ್ತೇವೆ. ಬೂಮ್ರಾ ಅಲಭ್ಯತೆಯಲ್ಲಿ ಹಾರ್ದಿಕ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಆದರೆ ಈ ವಿಷಯದಲ್ಲಿ ಪಾಂಡ್ಯ ಮೇಲೆ ಒತ್ತಡ ಹೇರಲು ನಾವು ಬಯಸುವುದಿಲ್ಲ. ಸದ್ಯ ಅವರು ಟೆಸ್ಟ್‌ನಿಂದ ದೂರ ಉಳಿದಿದ್ದಾರೆ. ಮೂರೂ ಮಾದರಿಯಲ್ಲಿ ಆಡಿದರೆ, ಅವರ ಫಿಟ್ನೆಸ್ ಹೇಗಿರುತ್ತದೆ. ಗಾಯಗಳನ್ನು ತಡೆಗಟ್ಟಲು ಹೇಗೆ ಕಾಳಜಿ ತೆಗೆದುಕೊಳ್ಳಬೇಕು ಎಂಬುದರ ಮೇಲೆ ಗಮನ ಹರಿಸಿದ್ದೇವೆ. ಆದರೆ ಎನ್​​ಸಿಎ ಕ್ಲಿಯರೆನ್ಸ್ ನೀಡಿದರೆ ಮತ್ತು ಹಾರ್ದಿಕ್ ಸಿದ್ಧರಾದರೆ, ಸ್ಪರ್ಧೆಗೆ ಇಳಿಯುವುದು ಖಚಿತ ಎಂದು ಹೇಳಿದ್ದಾರೆ.

ಇಂಜುರಿ ಬಳಿಕ ಟೆಸ್ಟ್​​​ ತಂಡಕ್ಕೆ ದೂರ.!

2018ರಲ್ಲಿ ಇಂಜುರಿಗೆ ತುತ್ತಾಗಿದ್ದ ಹಾರ್ದಿಕ್​​​​ ಪಾಂಡ್ಯ, ಸಂಪೂರ್ಣ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದು, 2020ರಲ್ಲಿ. ಗಾಯದ ನಂತರ ಟೀಮ್​ ಇಂಡಿಯಾ ಸೇರಿಕೊಂಡ ಹಾರ್ದಿಕ್ ಫೀಲ್ಡಿಂಗ್​​​, ಬ್ಯಾಟಿಂಗ್​​​ನಲ್ಲಿ ಕೊಡುಗೆ ನೀಡುತ್ತಿದ್ದರು. ಆದರೆ ಬೌಲಿಂಗ್​​ನಿಂದ ಹಿಂದೆ ಸರಿದರು. IPL​ನಲ್ಲೂ ಇದೇ ಪುನರಾವರ್ತನೆಯಾಯಿತು. ಆ ಬಳಿಕ ಟೆಸ್ಟ್​ ತಂಡದಿಂದ ಅವರನ್ನು ಕೈಬಿಡಲಾಯಿತು. ರೆಡ್​​ ಬಾಲ್ ಕ್ರಿಕೆಟ್​​​ಗೆ (ಟೆಸ್ಟ್) ಮರಳುತ್ತೀರಾ ಎಂಬ ಪ್ರಶ್ನೆಗೆ ಈ ಹಿಂದೆ ಉತ್ತರಿಸಿದ್ದ ಪಾಂಡ್ಯ, ಆ ಯೋಚನೆ ಇಲ್ಲ ಎಂದಿದ್ದರು. ಆದರೆ ಅವಕಾಶ ಸಿಕ್ಕರೆ ಟೆಸ್ಟ್ ತಂಡಕ್ಕೆ ಮರಳುವೆ ಎಂದು ಕಳೆದ ವರ್ಷ ಈ ಬಗ್ಗೆ ಹೇಳಿದ್ದರು.

2017ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಹಾರ್ದಿಕ್ ಇದುವರೆಗೆ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಕೊನೆಯ ಬಾರಿಗೆ 2018 ರಲ್ಲಿ ಟೆಸ್ಟ್ ಆಡಿದರು. ಅವರು ಈ ಸ್ವರೂಪದಲ್ಲಿ 532 ರನ್ ಗಳಿಸಿದ್ದು, ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಬೌಲರ್ ಆಗಿ 17 ವಿಕೆಟ್ ಕೂಡ ಪಡೆದಿದ್ದಾರೆ.