ಕನ್ನಡ ಸುದ್ದಿ  /  Sports  /  Cricket News Famous Rappers Nucleya King Divine Jonita Gandhi Special Performances In Ipl Final Closing Ceremony Prs

IPL 2023 Closing Ceremony: ಐಪಿಎಲ್ ಸಮಾರೋಪ ಸಮಾರಂಭ ಇನ್ನಷ್ಟು ವಿಶೇಷ; ನೂತನ ರೀತಿಯ ಸಂಭ್ರಮಾಚರಣೆಗೆ ಸಜ್ಜಾದ ಬಿಸಿಸಿಐ

ಇಷ್ಟು ದಿನ ಅಭಿಮಾನಿಗಳನ್ನು ರಂಜಿಸಿದ 16ನೇ ಆವೃತ್ತಿಯ ಐಪಿಎಲ್​ಗೆ ಅದ್ಭೂರಿ ಬೀಳ್ಕೊಡುಗೆ (IPL 2023 Closing Ceremony) ನೀಡಲು ಬಿಸಿಸಿಐ (BCCI) ಮುಂದಾಗಿದೆ. ಅಮೆರಿಕಾ ಮಾದರಿಯಲ್ಲಿ ಈ ಋತುವಿಗೆ ಅದ್ಧೂರಿ ಅಂತ್ಯ ನೀಡಲು ಸಜ್ಜಾಗಿದೆ. ಈ ಬಾರಿಯ ಸಮಾರೋಪ ಸಮಾರಂಭ ಸ್ವಲ್ಪ ಭಿನ್ನವಾಗಿರಲಿದೆ ಎಂಬುದು ವಿಶೇಷ.

ಐಪಿಎಲ್​ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲಿರುವ ತಾರೆಯರು.
ಐಪಿಎಲ್​ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲಿರುವ ತಾರೆಯರು.

ದೇಶದ ವಿವಿಧ ನಗರಗಳಲ್ಲಿ ಎರಡು ತಿಂಗಳಿಂದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿದ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ (Indian Premier League) ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಋತುವಿನಲ್ಲಿ ಎರಡು ಪಂದ್ಯಗಳು ಮಾತ್ರ ಉಳಿದಿವೆ. ಇಂದು (ಮೇ 26) ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ (Mumbai Indians vs Gujarat Titans) ನಡುವಿನ ಎರಡನೇ ಕ್ವಾಲಿಫೈಯರ್ ಅಹಮದಾಬಾದ್‌ನಲ್ಲಿ (Qualifier 2 in Narendra Modi Stadium) ನಡೆಯಲಿದೆ.

ಈ ಪಂದ್ಯದಲ್ಲಿ ಗೆದ್ದವರು ಮೇ 28 ರಂದು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ಇದೇ ಮೈದಾನದಲ್ಲಿ ನಡೆಯುವ ಫೈನಲ್ (IPL Final) ಆಡಲಿದ್ದಾರೆ. ಇಷ್ಟು ದಿನ ಅಭಿಮಾನಿಗಳನ್ನು ರಂಜಿಸಿದ 16ನೇ ಆವೃತ್ತಿಯ ಐಪಿಎಲ್​ಗೆ ಅದ್ಭೂರಿ ಬೀಳ್ಕೊಡುಗೆ (IPL 2023 Closing Ceremony) ನೀಡಲು ಬಿಸಿಸಿಐ (BCCI) ಮುಂದಾಗಿದೆ. ಅಮೆರಿಕಾ ಮಾದರಿಯಲ್ಲಿ ಈ ಋತುವಿಗೆ ಅದ್ಧೂರಿ ಅಂತ್ಯ ನೀಡಲು ಸಜ್ಜಾಗಿದೆ. ಈ ಬಾರಿಯ ಸಮಾರೋಪ ಸಮಾರಂಭ ರೋಮಾಂಚರವಾಗಿರಲಿದೆ ಎಂಬುದು ವಿಶೇಷ.

ಫೈನಲ್​​ ಪಂದ್ಯದ ಸಮಾರೋಪ ಸಮಾರಂಭಕ್ಕೆ ಅಭಿಮಾನಿಗಳನ್ನು ರಂಜಿಸಲು ವಿಶ್ವಪ್ರಸಿದ್ಧ, ಜನಪ್ರಿಯ ರ‍್ಯಾಪರ್​​ಗಳು ಬರುತ್ತಿರುವುದು ವಿಶೇಷ. ರ‍್ಯಾಪರ್​​ಗಳಾದ ವಿವಿಯನ್ ಡಿವೈನ್ (Divine), ನ್ಯೂಕ್ಲಿಯಾ (DJ Nucleya), ಕಿಂಗ್​​ (King), ಜೋನಿತಾ ಗಾಂಧಿ (Jonita Gandhi) ಅವರೊಂದಿಗೆ ಗಾನ ಬಜಾನ ಏರ್ಪಡಿಸಲಾಗಿದೆ. ಕಳೆದ ವರ್ಷದಂತೆ ಅಂತಿಮ ಸಮಾರಂಭದಲ್ಲಿ ಏಕಕಾಲದಲ್ಲಿ ಇಬ್ಬರು ರ‍್ಯಾಪರ್​​ಗಳು ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ರ‍್ಯಾಪರ್​​ಗಳಾದ ಕಿಂಗ್​ ಮತ್ತು ನ್ಯೂಕ್ಲಿಯಾ ಅವರು ಪಂದ್ಯಕ್ಕೂ ಮುನ್ನ ಪ್ರದರ್ಶನ ನೀಡಲಿದ್ದಾರೆ. ಪಂದ್ಯದ ಇನ್ನಿಂಗ್ಸ್ ನಂತರ, ನುಕ್ಲೆಯಾ 20 ನಿಮಿಷಗಳ ಕಾಲ ಜನಪ್ರಿಯ ಗಾಯಕಿ ಜೋನಿತಾ ಗಾಂಧಿ ಮತ್ತು ವಿವಿಯನ್ ಡಿವೈನ್ ತಮ್ಮ ಪ್ರದರ್ಶನ ನೀಡಲಿದ್ದಾರೆ. ಈ ರೀತಿಯ ವಿಭಿನ್ನ ಕಾರ್ಯಕ್ರಮ ಅಮೆರಿಕಾದಲ್ಲಿ ಚಾಲ್ತಿಯಲ್ಲಿದೆ.

ಇದಕ್ಕೂ ಮೊದಲು ಐಪಿಎಲ್​ ಸಮಾರೋಪ ಸಮಾರಂಭವನ್ನು ಪಂದ್ಯದ ಆರಂಭಕ್ಕೂ ಮುನ್ನ ನಡೆಸಲಾಗುತ್ತಿತ್ತು. ಇದೀಗ ಪಂದ್ಯದ ಆರಂಭಕ್ಕೂ ಮುನ್ನ ಮತ್ತು ಒಂದು ಇನ್ನಿಂಗ್ಸ್​​ನ ನಂತರವೂ ಕಾರ್ಯಕ್ರಮ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಪಂದ್ಯದಲ್ಲಿ ವಿಶೇಷ ಬೆಳಕಿನ ಪ್ರದರ್ಶನಕ್ಕೂ ಬಿಸಿಸಿಐ ಯೋಜಿಸುತ್ತಿದೆ.

ಈ ರೀತಿಯ ವಿಭಿನ್ನ ಸಮಾರಂಭ ನಮ್ಮಲ್ಲಿ ಹೊಸದಾದರೂ, ಅಮೆರಿಕನ್ ಫುಟ್ಬಾಲ್ ಮತ್ತು ಅಮೆರಿಕಾದ ನ್ಯಾಷನಲ್ ಫುಟ್ಬಾಲ್ ಲೀಗ್​​ನಲ್ಲಿ (NFL) ಬಹಳ ಪ್ರಸಿದ್ಧವಾಗಿದೆ. ಪ್ರೇಕ್ಷಕರನ್ನು ಆಕರ್ಷಿಸಲು ಬಿಸಿಸಿಐ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದೆ. ಇದೀಗ ಬಿಸಿಸಿಐ ಈ ನೂತನ ಸಮಾರಂಭ ಆಯೋಜನೆಗೆ ಮುಂದಾಗಿದೆ.

ವೀಕ್ಷಿಸುವುದು ಹೇಗೆ?

ನೀವು ಈ ಕಾರ್ಯಕ್ರಮವನ್ನು ಟಿವಿಗಳು ಮತ್ತು ಮೊಬೈಲ್‌ಗಳಲ್ಲಿ ವೀಕ್ಷಿಸಲು ಬಯಸಿದರೆ, ನೀವು ಐಪಿಎಲ್ ಟಿವಿ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ (Star Sports) ಮತ್ತು ಮೊಬೈಲ್ ಪಾಲುದಾರ ಜಿಯೋ ಸಿನಿಮಾ (Jiocinema) ಅಪ್ಲಿಕೇಶನ್‌ನಲ್ಲಿ ಇದನ್ನು ಲೈವ್ ಆಗಿ ವೀಕ್ಷಿಸಬಹುದು.

ಫೈನಲ್​ ಪಂದ್ಯ ಯಾವಾಗ?

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್​ ವಿರುದ್ಧ ಗೆದ್ದು ಬೀಗಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK vs GT)​ ನೇರವಾಗಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಇದೀಗ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್​ ಟೈಟಾನ್ಸ್ (MI vs GT)​ ತಂಡಗಳು ಸೆಣಸಾಟ ನಡೆಸಲಿದ್ದು, ಗೆದ್ದ ತಂಡವು ಫೈನಲ್​ಗೆ ಪ್ರವೇಶ ಪಡೆದುಕೊಳ್ಳಲಿದೆ. ಮೇ 28ರಂದು ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.