ಕನ್ನಡ ಸುದ್ದಿ  /  Sports  /  Cricket News Ipl 2023 Punjab Kings Put Huge Target Against Rajasthan Royals Indian Premier League Pbks Vs Rr Jra

PBKS vs RR: ಕಳಪೆ ಪೀಲ್ಡಿಂಗ್‌ಗೆ ಬೆಲೆ ತೆತ್ತ ಸ್ಯಾಮ್ಸನ್ ಪಡೆ; ರಾಜಸ್ಥಾನಕ್ಕೆ ಬೃಹತ್ ಗುರಿ ನೀಡಿದ ಪಂಜಾಬ್

ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಳ್ಳಲು ಉಭಯ ತಂಡಗಳಿಗೂ ಇಂದು ಗೆಲುವು ಅನಿವಾರ್ಯ. ಅದು ಕೂಡಾ ಬೃಹತ್​ ಅಂತರದ ಜಯ ಸಾಧಿಸುವ ಅನಿವಾರ್ಯತೆ ಇದೆ. ಇಂದು ಸೋಲುವು ತಂಡವು ಟೂರ್ನಿಯಿಂದ ಅಧಿಕೃತವಾಗಿ ಹೊರ ಬೀಳಲಿದ್ದು, ಗೆಲ್ಲುವ ತಂಡವು ಅದೃಷ್ಟದ ಮೇಲೆ ಪ್ಲೇ ಆಫ್‌‌ ಟಿಕೆಟ್‌ ಪಡೆದುಕೊಳ್ಳಲಿದೆ.

ಜಿತೇಶ್‌ ಶರ್ಮಾ ಮತ್ತು ಸ್ಯಾಮ್‌ ಕರನ್
ಜಿತೇಶ್‌ ಶರ್ಮಾ ಮತ್ತು ಸ್ಯಾಮ್‌ ಕರನ್

ಐಪಿಎಲ್‌ನ ಪ್ರಸಕ್ತ ಆವೃತ್ತಿಯ ಪ್ಲೇ ಆಫ್‌ ಹತ್ತಿರವಾಗುತ್ತಿದೆ. ಪ್ಲೇ ಆಫ್‌ ಲೆಕ್ಕಾಚಾರಗಳು ಗರಿಗೆದರಿದ್ದು, ಇಂದು ರಾಜಸ್ಥಾನ ರಾಯಲ್ಸ್ (Rajasthan Royals)​​ ಮತ್ತು ಪಂಜಾಬ್​ ಕಿಂಗ್ಸ್​ (Punjab Kings) ತಂಡಗಳು ಮುಖಾಮುಖಿಯಾಗುತ್ತಿವೆ.

ಮಹತ್ವದ ಪಂದ್ಯದಲ್ಲಿ ಟಾಸ್‌ ಸೋತು ಮೊದಲಿಗೆ ಬ್ಯಾಟಿಂಗ್‌ ನಡೆಸಿದ ಶಿಖರ್‌ ಧವನ್‌ ನೇತೃತ್ವದ ಪಂಜಾಬ್‌ ಕಿಂಗ್ಸ್‌ ತಂಡವು, ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ. ರಾಜಸ್ಥಾನದ ಬೌಲರ್‌ ನವದೀಪ್‌ ಸೈನಿ ನಿರಂತರ ದಾಳಿಯ ನಡುವೆಯೂ ಸ್ಥಿರ ಪ್ರದರ್ಶನ ಮುಂದುವರೆಸಿದ ಆತಿಥೇಯರು, 5 ವಿಕೆಟ್‌ ಕಳೆದುಕೊಂಡು 187 ರನ್‌ ಗಳಿಸಿದ್ದಾರೆ. ಆ ಮೂಲಕ ರಾಜಸ್ಥಾನಕ್ಕೆ ಬೃಹತ್‌ ಗುರಿ ನೀಡಿದ್ದಾರೆ.

ಬ್ಯಾಟಿಂಗ್‌ ಆರಂಭಿಸಿದ ಪಂಜಾಬ್‌ ತಂಡವು ಆರಂಭದಲ್ಲೇ ಆಘಾತ ಎದುರಿಸಿತು. ಶತಕವೀರ ಪ್ರಭ್‌ಸಿಮ್ರಾನ್‌ ಸಿಂಗ್‌ ಕೇವಲ 2 ರನ್‌ ಗಳಿಸಿ ಔಟಾದರು. ಮೊದಲ ಓವರ್‌ನಲ್ಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ, ಅಥರ್ವಟೈಡೆ ತುಸು ಚೇತರಿಕೆ ತಂದುಕೊಟ್ಟರು. ಅಬ್ಬರದಾಟಕ್ಕೆ ಮುಂದಾದ ಅವರು, 19 ರನ್‌ ಗಳಿಸಿ ಸೈನಿಗೆ ವಿಕೆಟ್‌ ಒಪ್ಪಿಸಿದರು. ಅದಾದ ಬೆನ್ನಲ್ಲೇ ನಾಯಕ ಧವನ್‌ ಕೂಡಾ ಜಂಪಾ ಮ್ಯಾಜಿಕ್‌ಗೆ ಬಲಿಯಾದರು. ಕೊನೆಯ ಪಂದ್ಯದಲ್ಲಿ ಸ್ಫೋಟಿಸಿದ್ದ ಲಿವಿಂಗ್‌ಸ್ಟನ್‌ಗೂ ನವದೀಪ್‌ ಸೈನಿ ಕಂಟಕರಾದರು. ಒಂದಂಕಿ ಮೊತ್ತಕ್ಕೆ ಇಂಗ್ಲೆಂಡ್‌ ದೈತ್ಯ ವಿಕೆಟ್‌ ಒಪ್ಪಿಸಿದರು.

ಈ ವೇಳೆ ಸ್ಫೋಟಕ ಆಟವಾಡಿದ ಜಿತೇಶ ಶರ್ಮಾ, ಬೌಂಡರಿ ಸಿಕ್ಸರ್‌ಗಳ ಮಳೆ ಸುರಿಸಿದರು. ಆದರೆ 44 ರನ್‌ ಗಳಿಸಿದ್ದಾಗ ಸೈನಿಗೆ ವಿಕೆಟ್‌ ಒಪ್ಪಿಸಿ ಅರ‍್ಧಶತಕದ ಅಂಛಿನಲ್ಲಿ ವಿಕೆಟ್‌ ಒಪ್ಪಿಸಿದರು. ಈ ವೇಳೆ ಒಂದಾದ ಸ್ಯಾಮ್‌ ಕರನ್‌ ಮತ್ತು ಶಾರುಖ್‌ ಖಾನ್‌ ಅಬ್ಬರ ಮುಂದುವರೆಸಿದರು. ಅರ್ಧಶತಕದ ಜೊತೆಯಾಟವಾಡಿ ತಂಡದ ಮೊತ್ತ ಹೆಚ್ಚಿಸಿದರು. ಕರನ್‌ ಅಜೇಯ 49 ರನ್‌ ಗಳಿಸಿದರೆ, ಶಾರುಖ್‌ ಅಜೇಯ 41 ರನ್‌ ಗಳಿಸಿದರು. ಇವರಿಬ್ಬರ ಅಜೇಯ ಆಟ ತಂಡದ ಮೊತ್ತಕ್ಕೆ ನೆರವಾಯ್ತು.

ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಳ್ಳಲು ಉಭಯ ತಂಡಗಳಿಗೂ ಇಂದು ಗೆಲುವು ಅನಿವಾರ್ಯ. ಅದು ಕೂಡಾ ಬೃಹತ್​ ಅಂತರದ ಜಯ ಸಾಧಿಸುವ ಅನಿವಾರ್ಯತೆ ಇದೆ. ಇಂದು ಸೋಲುವು ತಂಡವು ಟೂರ್ನಿಯಿಂದ ಅಧಿಕೃತವಾಗಿ ಹೊರ ಬೀಳಲಿದ್ದು, ಗೆಲ್ಲುವ ತಂಡವು ಅದೃಷ್ಟದ ಮೇಲೆ ಪ್ಲೇ ಆಫ್‌‌ ಟಿಕೆಟ್‌ ಪಡೆದುಕೊಳ್ಳಲಿದೆ.

ಮಹತ್ವದ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ ರಾಯಲ್ಸ್, ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಬೆನ್ನು ನೋವಿನ ಕಾರಣದಿಂದಾಗಿ ಇಂದಿನ ಪಂದ್ಯದಲ್ಲಿ ಸ್ಪಿನ್ನರ್‌ ಅಶ್ವಿನ್‌ ಆಡುತ್ತಿಲ್ಲ. ಅತ್ತ ಶಿಖರ್‌ ಧವನ್‌ ಬಳಗವು, ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ಆಡುವ ಬಳಗದೊಂದಿಗೆ ಇಂದು ಕೂಡಾ ಆಡುತ್ತಿದೆ.

ಪಂಜಾಬ್ ಕಿಂಗ್ಸ್ ಆಡುವ ಬಳಗ

ಶಿಖರ್ ಧವನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ಅಥರ್ವ ಟೈಡೆ, ಲಿಯಾಮ್ ಲಿವಿಂಗ್‌ಸ್ಟನ್, ಸ್ಯಾಮ್ ಕರನ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಕಗಿಸೊ ರಬಾಡ, ಅರ್ಷದೀಪ್ ಸಿಂಗ್.

ರಾಜಸ್ಥಾನ್ ರಾಯಲ್ಸ್ ಆಡುವ ಬಳಗ

ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆಡಮ್ ಜಂಪಾ, ಟ್ರೆಂಟ್ ಬೌಲ್ಟ್, ನವದೀಪ್ ಸೈನಿ, ಸಂದೀಪ್ ಶರ್ಮಾ, ಯಜುವೇಂದ್ರ ಚಹಾಲ್.