ಕನ್ನಡ ಸುದ್ದಿ  /  Sports  /  Csk Vs Gt Ms Dhoni Rues Csks Batting Effort Against Gujarat Titans

CSK vs GT: 15 ರಿಂದ 20ಕ್ಕೂ ಹೆಚ್ಚು ರನ್ ​ ಗಳಿಸಿದ್ರೆ, ನಾವೇ ಗೆಲ್ತಿದ್ವಿ ಎಂದ MS ಧೋನಿ!

ಋತುರಾಜ್​ ಅದ್ಬುತ ಆಟದ ನಡುವೆಯೂ ಚೆನ್ನೈ ಸೋಲಿಗೆ ಪ್ರಮುಖ ಕಾರಣ ಏನೆಂಬುದನ್ನು ನಾಯಕ ಎಂಎಸ್​ ಧೋನಿ (MS Dhoni) ತಿಳಿಸಿದ್ದಾರೆ. ನಮ್ಮ 15 ರಿಂದ 20 ರನ್​ಗಳು​ ಕಡಿಮೆಯಾಗಿರುವುದೇ ಅದಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ

MS ಧೋನಿ
MS ಧೋನಿ (IPL)

ಅಹ್ಮದಾಬಾದ್​​ನ ನರೇಂದ್ರ ಮೋದಿ ಮೈದಾನದಲ್ಲಿ ಹಾಜರಿದ್ದ ಲಕ್ಷಕ್ಕೂ ಅಧಿಕ ಪ್ರೇಕ್ಷಕರಿಗೆ 16ನೇ ಆವೃತ್ತಿಯ ಐಪಿಎಲ್ (IPL) ಉದ್ಘಾಟನಾ ಪಂದ್ಯ, ಮನರಂಜನೆಯ ರಸದೌತಣ ಉಣಬಡಿಸಿತು. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್​ ಗುಜರಾತ್​ ಟೈಟಾನ್ಸ್ (Gujarat Titans)​ ಗೆಲ್ಲುವ ಅಭಿಯಾನ ಆರಂಭಿಸಿದರೆ, ಚೆನ್ನೈ ಸೂಪರ್​ ಕಿಂಗ್ಸ್​​ (Chennai Super Kings) ಸೋಲಿನೊಂದಿಗೆ ಟೂರ್ನಿ ಆರಂಭಿಸಿತು.

ಋತುರಾಜ್​ ಅದ್ಬುತ ಆಟದ ನಡುವೆಯೂ ಚೆನ್ನೈ ಸೋಲಿಗೆ ಪ್ರಮುಖ ಕಾರಣ ಏನೆಂಬುದನ್ನು ನಾಯಕ ಎಂಎಸ್​ ಧೋನಿ (MS Dhoni) ತಿಳಿಸಿದ್ದಾರೆ. ನಮ್ಮ 15 ರಿಂದ 20 ರನ್​ಗಳು​ ಕಡಿಮೆಯಾಗಿರುವುದೇ ಅದಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಧೋನಿ, ಆದರೆ ನಮ್ಮ ಬ್ಯಾಟ್ಸ್​ಮನ್​​ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದರೆ, ಸೋಲುವ ಹಂತಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಮೈದಾನದಲ್ಲಿ ಇಬ್ಬನಿ ಇತ್ತು. ಇದು ಎಲ್ಲರಿಗೂ ತಿಳಿದಿತ್ತು. ಪಂದ್ಯ ಆರಂಭದ ಸಮಯದಲ್ಲೇ ಚೆಂಡು ನಿಂತು ನಿಂತು ಬರುತ್ತಿತ್ತು. ಸದ್ಯ ನನಗೆ ಅನಿಸಿದ ಮಟ್ಟಿಗೆ ಇನ್ನೂ 15 ರಿಂದ 20 ರನ್​ ಕಡಿಮೆಯಾಗಿದೆ. ಇನ್ನಷ್ಟು ರನ್​ ಗಳಿಸಿದ್ದರೆ ತಂಡದ ಮೊತ್ತವು ಹೆಚ್ಚಾಗಿ ಎದುರಾಳಿ ಮೇಲೆ ಒತ್ತಡ ಹಾಕಬಹುದಿತ್ತು. ಈ ಕೆಲಸವನ್ನು ನಾವು ಮಧ್ಯಮ ಕ್ರಮಾಂಕದ ಬ್ಯಾಟರ್​​​​​ಗಳು ಅಚ್ಚುಕಟ್ಟಾಗಿ ನಿಭಾಯಿಸಬೇಕಿತ್ತು ಎಂದಿದ್ದಾರೆ.

ಮಿಡಲ್​ ಆರ್ಡರ್​​​ ಬ್ಯಾಟ್ಸ್​ಮನ್​ಗಳು ಬೌಲರ್​​ಗಳ ಹೆಚ್ಚಿನ ಒತ್ತಡ ಹಾಕಿದ್ದರೆ, ಪಂದ್ಯದ ಚಿತ್ರಣವೇ ಬೇರೆ ದಿಕ್ಕಿನಲ್ಲಿ ಸಾಗುತ್ತಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದ ಧೋನಿ, ತಮ್ಮ ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್​ ಉರುಳಿಸಿದ ರಾಜವರ್ಧನ್​ ಹಂಗರ್​​ಗೇಕರ್​​​​ ಅವರನ್ನು ಹಾಡಿ ಹೊಗಳಿದರು. ರಾಜವರ್ಧನ್‌ ಅವರ ವೇಗ ಉತ್ತಮವಾಗಿತ್ತು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಆದರೆ, ಬೌಲರ್‌ಗಳು ಉತ್ತಮ ನಿರ್ವಹಣೆಯನ್ನೇ ಮಾಡಿದರು. ಆದರೆ ನೋ ಬಾಲ್‌ಗಳು ಸೇರಿ ಹೆಚ್ಚುವರಿ ರನ್​​​ ನೀಡಿದ್ದು ಸಹ ನಮಗೆ ಮುಳುವಾಯಿತು. ಋತುರಾಜ್​ ಇನ್ನಿಂಗ್ಸ್​ ಸೊಗಸಾಗಿತ್ತು. ಆತನ ಬ್ಯಾಟಿಂಗ್​ ನೋಡಿ ತುಂಬಾ ಎಂಜಾಯ್​ ಮಾಡಿದೆ. ಮುಂದಿನ ಹಾಗಾಗಿ ಇದರ ಮೇಲೆ ಇನ್ನಷ್ಟು ಕೆಲಸ ಮಾಡಬೇಕಾಗಿದೆ. ಯಾವ ವಿಭಾಗದಲ್ಲಿ ತಪ್ಪುಗಳಾಗುತ್ತಿವೆ ಎಂಬುದರ ಮೇಲೆ ಗಮನ ಹರಿಸುತ್ತೇವೆ. ಮತ್ತು ಸರಿಪಡಿಸಿಕೊಳ್ಳುತ್ತೇವೆ ಎಂದು ಎಂಎಸ್‌ ಧೋನಿ ತಿಳಿಸಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯ ನಡೆಯಿತು. ಟಾಸ್​​​ ಸೋತು ಬ್ಯಾಟಿಂಗ್​ ನಡಸಿದ ಚೆನ್ನೈ ಸೂಪರ್ ಕಿಂಗ್ಸ್​​​ ತಂಡವು, ಮಿಡಲ್​ ಆರ್ಡರ್​​ ವೈಫಲ್ಯದ ನಡುವೆಯೂ ಅಬ್ಬರಿಸಿದ ಋತುರಾಜ್​ ಗಾಯಕ್ವಾಡ್​ (92 ರನ್​​) ಭರ್ಜರಿ ಆಟವಾಡಿದರು. ಪರಿಣಾಮ ಯೆಲ್ಲೋ ಆರ್ಮಿ 20 ಓವರ್​​ಗಳಲ್ಲಿ 178 ರನ್​ಗಳ ಸವಾಲಿನ ಮೊತ್ತ ಕಲೆಹಾಕಿತು.

ಇನ್ನು ಈ ಗುರಿ ಬೆನ್ನಟ್ಟಿದ ಗುಜರಾತ್​​ಗೆ 19.2 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ ಗೆಲುವಿನ ದಡ ಸೇರಿತು. ಶುಭ್ಮನ್ ಗಿಲ್​ ಅರ್ಧಶತಕ ಸಿಡಿಸಿ ಗೆಲುವಿನ ರೂವಾರಿ ಎನಿಸಿದರು. 5 ವಿಕೆಟ್​ ಗೆಲುವು ದಾಖಲಿಸಿದ ಹಾರ್ದಿಕ್​ ಪಡೆ, ಗುರು ಧೋನಿ ತಂಡಕ್ಕೆ ಸೋಲಿನ ರುಚಿ ತೋರಿಸಿದರು. ಕೊನೆಯಲ್ಲಿ ರಶೀದ್​​ ಸಿಕ್ಸರ್​​ ಬೌಂಡರಿ ಸಿಡಿಸಿ ಪಂದ್ಯದ ಚಿತ್ರಣವನ್ನು ಬದಲಿಸಿದರು.