ಕನ್ನಡ ಸುದ್ದಿ  /  ಕ್ರೀಡೆ  /  Hockey: ಉಸಿರುಗಟ್ಟಿದ ವಾತಾವರಣದಿಂದ ಹೊರ ಬಂದ ಕಣಿವೆ ರಾಜ್ಯದಲ್ಲೀಗ ಹಾಕಿ ಕಲರವ; ಬದಲಾಯ್ತು ಜಮ್ಮು-ಕಾಶ್ಮೀರ!

Hockey: ಉಸಿರುಗಟ್ಟಿದ ವಾತಾವರಣದಿಂದ ಹೊರ ಬಂದ ಕಣಿವೆ ರಾಜ್ಯದಲ್ಲೀಗ ಹಾಕಿ ಕಲರವ; ಬದಲಾಯ್ತು ಜಮ್ಮು-ಕಾಶ್ಮೀರ!

Hockey: ಮೊದಲು ಬೆರಳೆಣಿಕೆಯಷ್ಟಿದ್ದ ಕ್ರೀಡಾಪಟುಗಳ ಸಂಖ್ಯೆ ದಿನದಿಂದ ದಿನಕ್ಕೆ ಸಂಖ್ಯೆ ಹೆಚ್ಚಾಗುತ್ತಿದೆ. ಕ್ರೀಡೆಯಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದ ವೃತ್ತಿಪರರ ಸಂಖ್ಯೆ ದುಪ್ಪಾಟ್ಟುತ್ತಿದೆ. ಕಲ್ಲು ತೂರಾಟ ಮಾಡುತ್ತಿದ್ದ ಕಾಲ ಬದಲಾಗಿದೆ. ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯಲು ಸ್ಪರ್ಧೆ ಏರ್ಪಟ್ಟಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಕಿಯಲ್ಲಿ ತೊಡಗಿದ ಯುವಕರು
ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಕಿಯಲ್ಲಿ ತೊಡಗಿದ ಯುವಕರು (AWAZ THE VOICE WEBSITE)

ಭಯೋತ್ಪಾದನೆ, ಉಗ್ರ ಚಟುವಟಿಕೆಗಳಿಗೆ ತಾಣವಾಗಿದ್ದ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಡೆ ಸದ್ಯ ಹೊಸ ಗಾಳಿ ಬೀಸುತ್ತಿದೆ. ಆರ್ಟಿಕಲ್​​ 370 ರದ್ದು ಮಾಡುವುದುಕ್ಕೂ ಮುಂಚೆ, ಅಲ್ಲಿ ಇದದ್ದು ಉಸಿರುಗಟ್ಟಿದ ವಾತಾವರಣ. ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬದುಕೇ ಬರ್ಬಾದ್ ಆಗಿತ್ತು. ಆರ್ಟಿಕಲ್ 370 ರದ್ದು ಮಾಡಿದ ಬಳಿಕ ವಿಷಮ ವಾತಾವರಣ, ಆಹ್ಲಾದಕರವಾಗಿ ಪರಿವರ್ತನೆಗೊಳ್ಳುತ್ತಿದೆ. ಅಲ್ಲದೆ ಸಾಕಷ್ಟು ಬದಲಾಗಿದೆ. ಯುವ ಸಮೂಹ ಕ್ರೀಡೆಯತ್ತ ಒಲವು ತೋರಿಸುತ್ತಿದೆ.

ಮೊದಲು ಬೆರಳೆಣಿಕೆಯಷ್ಟಿದ್ದ ಕ್ರೀಡಾಪಟುಗಳ ಸಂಖ್ಯೆ ದಿನದಿಂದ ದಿನಕ್ಕೆ ಸಂಖ್ಯೆ ಹೆಚ್ಚಾಗುತ್ತಿದೆ. ಕ್ರೀಡೆಯಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದ ವೃತ್ತಿಪರರ ಸಂಖ್ಯೆ ದುಪ್ಪಾಟ್ಟುತ್ತಿದೆ. ಕಲ್ಲು ತೂರಾಟ ಮಾಡುತ್ತಿದ್ದ ಕಾಲ ಬದಲಾಗಿದೆ. ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯಲು ಸ್ಪರ್ಧೆ ಏರ್ಪಟ್ಟಿದೆ. ಕ್ರಿಕೆಟ್​ನಲ್ಲಿ ಉಮ್ರಾನ್​ ಮಲಿಕ್​, ಅಬ್ದುಲ್​ ಸಮದ್​ ಸೇರಿದಂತೆ ಪ್ರಮುಖರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅದರಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಕಿ (Hockey) ಕಲರವ ಹೆಚ್ಚಾಗಿದೆ. ಯುವ ಸಮೂಹ ತಂಡೋಪತಂಡವಾಗಿ ಹಾಕಿಯಲ್ಲಿ ತೊಡಗಿಸಿಕೊಳ್ಳುತ್ತಿದೆ.

ಏನೇ ಮಾಡಿದರೂ ಕ್ರೀಡೆಗಳತ್ತ ಆಸಕ್ತಿ ತೋರದೇ ನಿರ್ಲಕ್ಷ್ಯ ತೋರುತ್ತಿದ್ದ ಯುವಕರು, ಕ್ರೀಡೆಯನ್ನೇ ಪ್ರೋಫೆಷನಲ್​ ಆಗಿ ಸ್ವೀಕರಿಸುತ್ತಿದ್ದಾರೆ. ಅದರಂತೆ ಹಾಕಿ ಕ್ರೀಡೆಯತ್ತ ಯುವಕರ ಓಟ ಹೆಚ್ಚಾಗಿದೆ. ಕಣಿವೆ ರಾಜ್ಯದಲ್ಲಿ ಹಾಕಿ ಕ್ರೀಡಾಂಗಣಗಳಲ್ಲಿ ಅಭ್ಯಾಸಗಳು ಆ್ಯಕ್ಟೀವ್​ ಆಗಿವೆ. ಹಿಂದೆ ಕೆಲವು ಹಾಕಿ ಕ್ರೀಡಾಪಟುಗಳಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿದ್ದರು. ಪ್ರಸ್ತುತ ಅಭ್ಯಾಸಕ್ಕೆ ಜಾಗವೇ ಸಿಗುತ್ತಿಲ್ಲ ಎಂದು ಯುವಕರ ಬದಲಾವಣೆ ಕುರಿತು ಹಾಕಿ ಪಟು ಇನಾಯತ್ ಹೇಳುತ್ತಾ ಖುಷಿಪಟ್ಟರು.

ಇಲ್ಲಿನ ಯುವಕರಿಗೆ ಕ್ರೀಡಾಜ್ಞಾನದ ಹೆಚ್ಚಾಗುತ್ತಿದೆ. ಅವರಲ್ಲಿ ಆತ್ಮವಿಶ್ವಾಸ ದುಪ್ಪಟ್ಟಾಗಿದೆ. ಶ್ರೀನಗರದ ಫೋಟೋ ಟರ್ಫ್​ ಸ್ಟೇಡಿಯಂನಲ್ಲಿ ಯುವ ಹಾಕಿ ಕ್ರೀಡಾಪಟುಗಳಿಂದ ತುಂಬಿ ತುಳುಕುತ್ತಿದೆ. ಎಲ್ಲರ ಬಾಳಿಗೂ ಅಧ್ಯಾಯವೊಂದು ಬಂದ ಹಾಗೇ ಇಲ್ಲಿನ ಯುವ ಸಮೂಹಕ್ಕೂ ಹೊಸ ಅಧ್ಯಾಯ ಸಿಗುತ್ತಿದೆ ಎಂದ 25 ವರ್ಷದ ಇನಾಯತ್​, ಶೀಘ್ರವೇ ರಾಷ್ಟ್ರೀಯ ಹಾಕಿ ತಂಡದಲ್ಲಿ ಕಣಕ್ಕಿಳಿಯುವ ಕನಸನ್ನು ಹೊತ್ತಿದ್ದಾರಂತೆ. ಹಾಕಿ ಸ್ಟಿಕ್​​​​​​ ಇಲ್ಲದಿದ್ದರೆ ಜೀವನವೇ ಖಾಲಿ ಎಂದು ಭಾಸವಾಗುತ್ತದೆ ಎಂದು ‘ಅವಾಝ್ ದ ವಾಯ್ಸ್​’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮೊದಲು ಜಮ್ಮು ಮತ್ತು ಕಾಶ್ಮೀರ ಹಾಕಿ ತಂಡದಲ್ಲಿ ನಮ್ಮವರಿಗಿಂತ ಹೊರಗಿನ ಆಟಗಾರರೇ ಹೆಚ್ಚಿದ್ದರು. ಸದ್ಯ ಜಮಾನ ಬದಲಾಗುತ್ತಿದೆ. ಇಲ್ಲಿ ಎಲ್ಲಾ ಮೂಲ ಸೌಕರ್ಯಗಳು ಸಿಗುತ್ತಿವೆ. ಪ್ರಸ್ತುತ ಇಲ್ಲಿರುವ ಸ್ಪರ್ಧೆ ನೋಡಿದರೆ ತಂಡದಲ್ಲಿ ನಮ್ಮವರೇ ಸ್ಥಾನ ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಇನಾಯತ್,​​ ಈ ಹಿಂದೆ 2016 ಮತ್ತು 2018ರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.

ಶ್ರೀನಗರಲ್ಲಿ ಈ ಹಿಂದೆ ಇದ್ದದ್ದು ಒಂದೆರಡು ಹಾಕಿ ಕ್ಲಬ್. ಆದರೆ ಕಣಿವೆ ರಾಜ್ಯದಲ್ಲೀಗ ಹಾಕಿ ಕ್ಲಬ್​ಗಳ ಸಂಖ್ಯೆ 40ಕ್ಕೆ ಏರಿಕೆ ಕಂಡಿದೆ. ಪ್ರತಿ ಕ್ಲಟ್​ ಕೂಡ ಡಿಸ್ಟ್ರಿಕ್​ ಲೆವೆಲ್​ (ಜಿಲ್ಲಾ ಮಟ್ಟ) ಸ್ಪರ್ಧೆ ಆಯೋಜಿಸುತ್ತಿದೆ. ಇದರಿಂದ ರಾಜ್ಯ ತಂಡದ ಆಯ್ಕೆಗೂ ಪೈಪೋಟಿ ನಡೀತಿದೆ. ಅಷ್ಟೇ ಅಲ್ಲ, ಕಾಶ್ಮೀರದಿಂದ ಹಲವು ಪ್ರತಿಭೆಗಳು ರಾಷ್ಟ್ರ ತಂಡಕ್ಕೂ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಹಾಕಿ ತಂಡವನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಲು ಕಾರಣ ಆಗಿದ್ದ ನುಜಾಹತ್ ಅರಾ, ಈಗ ರಾಷ್ಟ್ರೀಯ ಕೋಚ್ ಆಗಿಯೂ ಆಯ್ಕೆಯಾಗಿದ್ದಾರೆ. ಯುವಕ ಯುವತಿಯರು ಹಾಕಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಾಶ್ಮೀರದಲ್ಲಿ ಕ್ರೀಡೆ ಅಭಿವೃದ್ಧಿಯಾಗಿದೆ ಎಂದು ನುಜಾಹತ್ ಅರಾ ಸಂತಸ ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರದ ಯುವಕರು ಅದ್ಭುತ ಫಿಟ್​ನೆಸ್​ ಹೊಂದಿದ್ದಾರೆ. ಇದರೊಂದಿಗೆ ಕೌಶಲ ಅಳವಡಿಸಿಕೊಂಡರೆ ಸಾಕು ಎಂದು ನಜಾಹತ್ ಅರಾ ತಿಳಿಸಿದ್ದಾರೆ.