ಕನ್ನಡ ಸುದ್ದಿ  /  ಕ್ರೀಡೆ  /  Ipl 2023 Full Captain List: ಕೆಕೆಆರ್ ತಂಡಕ್ಕೆ ನಿತೀಶ್ ರಾಣಾ ಕ್ಯಾಪ್ಟನ್; ಎಲ್ಲಾ ತಂಡಗಳ ನಾಯಕರ ಪಟ್ಟಿ ಇಲ್ಲಿದೆ

IPL 2023 full captain list: ಕೆಕೆಆರ್ ತಂಡಕ್ಕೆ ನಿತೀಶ್ ರಾಣಾ ಕ್ಯಾಪ್ಟನ್; ಎಲ್ಲಾ ತಂಡಗಳ ನಾಯಕರ ಪಟ್ಟಿ ಇಲ್ಲಿದೆ

ಕೋಲ್ಕತ್ತ ತಂಡವು ನಾಯಕನ ಹೆಸರನ್ನು ಘೋಷಿಸುವುದರೊಂದಿಗೆ, ಈ ಬಾರಿಯ ಐಪಿಎಲ್‌ ಆವೃತ್ತಿಗೆ ಎಲ್ಲಾ ಹತ್ತು ತಂಡಗಳ ನಾಯಕರ ಹೆಸರು ಅಧಿಕೃತವಾಗಿ ಘೋಷಣೆಯಾದಂತಾಗಿದೆ. ಆ ಎಲ್ಲ ನಾಯಕರ ಪಟ್ಟಿ ಇಲ್ಲಿದೆ.

ನಿತೀಶ್‌ ರಾಣಾ
ನಿತೀಶ್‌ ರಾಣಾ (IPL)

ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಈ ಬಾರಿಯ ಐಪಿಎಲ್‌ಗೆ ನಿತೀಶ್ ರಾಣಾ ಅವರನ್ನು ನಾಯಕರನ್ನಾಗಿ ನೇಮಿಸಿದೆ. ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್, ಬೆನ್ನು ನೋವಿನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಈ ಬಾರಿಯ ಐಪಿಎಲ್‌ನಲ್ಲಿ ಮೈದಾನಕ್ಕಿಳಿಯುವುದು ಬಹುತೇಕ ಅನುಮಾನ. ಹೀಗಾಗಿ, 2018ರಿಂದಲೂ ಕೆಕೆಆರ್‌ ಪರ ಆಡುತ್ತಿರುವ ರಾಣಾ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಹಿಂದೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 12 ಟಿ20 ಪಂದ್ಯಗಳಲ್ಲಿ ದೆಹಲಿ ತಂಡವನ್ನು ರಾಣಾ ಮುನ್ನಡೆಸಿದ್ದರು. ಅಲ್ಲದೆ ಅದರಲ್ಲಿ ಎಂಟು ಪಂದ್ಯಗಳಲ್ಲಿ ತಮ್ಮ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೆಕೆಆರ್‌ ಪರ 135.61 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ರಾಣಾ, 74 ಪಂದ್ಯಗಳಿಂದ 1744 ರನ್ ಗಳಿಸಿದ್ದಾರೆ.

“ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ತಂಡದ ನಾಯಕತ್ವ ವಹಿಸಲಿದ್ದಾರೆ. ಶ್ರೇಯಸ್ ಬೇಗನೆ ಚೇತರಿಸಿಕೊಂಡು ಈ ಆವೃತ್ತಿಯಲ್ಲಿ ಭಾಗವಹಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ರಾಜ್ಯ ತಂಡವನ್ನು ಮುನ್ನಡೆಸಿದ ಅನುಭವ ಮತ್ತು 2018ರಿಂದಲೂ ಕೆಕೆಆರ್‌ ಜೊತೆಗಿನ ಐಪಿಎಲ್‌ನಲ್ಲಿ ಆಡಿದ ಅನುಭವದೊಂದಿಗೆ ನಾಯಕನಾಗಿ ನಿತೀಶ್ ಉತ್ತಮ ಕೆಲಸ ಮಾಡಲಿದ್ದಾರೆ” ಎಂದು ಕೆಕೆಆರ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಈ ಹಿಂದಿನ ದಿನದಲ್ಲಿ, ಕೆಕೆಆರ್ ನಾಯಕನಾಗಿ ಅಯ್ಯರ್‌ ಬದಲಿಗೆ ಸುನಿಲ್ ನರೈನ್ ಅಥವಾ ಶಾರ್ದೂಲ್ ಠಾಕೂರ್ ಅವರನ್ನು ಘೋಷಿಸಬಹುದು ಎಂದು ಹೇಳಲಾಗಿತ್ತು. ಫ್ರಾಂಚೈಸಿ ಪರ ಸುನಿಲ್‌ ನರೈನ್ ಅವರು 2012ರಿಂದಲೂ ಆಡುತ್ತಿದ್ದಾರೆ. ಅಲ್ಲದೆ ಹಲವು ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮತ್ತೊಂದೆಡೆ ನಾಯಕನನ್ನು ಘೋಷಿಸಲು ಫ್ರಾಂಚೈಸಿಯು ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸುತ್ತದೆ ಎಂದು ಹೇಳಲಾಗಿತ್ತು. ಈ ಎಲ್ಲಾ ಊಹಾಪೋಹಗಳು ಸದ್ಯ ಸುಳ್ಳಾಗಿದೆ. ಟ್ವಿಟರ್ ಮೂಲಕ ಕೆಕೆಆರ್‌ ಈ ಘೋಷಣೆ ಮಾಡಿದೆ.

ಕೋಲ್ಕತ್ತಾ ತಂಡವು ನಾಯಕನ ಹೆಸರನ್ನು ಘೋಷಿಸುವುದರೊಂದಿಗೆ, ಈ ಬಾರಿಯ ಐಪಿಎಲ್‌ ಆವೃತ್ತಿಗೆ ಎಲ್ಲಾ ಹತ್ತು ತಂಡಗಳ ನಾಯಕರ ಹೆಸರು ಅಧಿಕೃತವಾಗಿ ಘೋಷಣೆಯಾದಂತಾಗಿದೆ. ಆ ಎಲ್ಲ ನಾಯಕರ ಪಟ್ಟಿ ಇಲ್ಲಿದೆ.

ತಂಡನಾಯಕರು
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರುಫಾಫ್‌ ಡು‌ ಪ್ಲೆಸಿಸ್
ಚೆನ್ನೈ ಸೂಪರ್‌ ಕಿಂಗ್ಸ್ಮಹೇಂದ್ರ ಸಿಂಗ್‌ ಧೋನಿ
ಕೋಲ್ಕತ್ತಾ ನೈಟ್‌ ರೈಡರ್ಸ್ನಿತೀಶ್‌ ರಾಣಾ
ಡೆಲ್ಲಿ ಕ್ಯಾಪಿಟಲ್ಸ್ಡೇವಿಡ್‌ ವಾರ್ನರ್
ಸನ್‌ರೈಸರ್ಸ್‌ ಹೈದರಾಬಾದ್ಐಡನ್‌ ಮರ್ಕ್ರಾಮ್
ಲಖನೌ ಸೂಪರ್‌ ಜೈಂಟ್ಸ್ಕೆಎಲ್‌ ರಾಹುಲ್
ಗುಜರಾತ್‌ ಟೈಟಾನ್ಸ್ಹಾರ್ದಿಕ್‌ ಪಾಂಡ್ಯಾ
ಪಂಜಾಬ್‌ ಕಿಂಗ್ಸ್ಶಿಖರ್‌ ಧವನ್
ಮುಂಬೈ ಇಂಡಿಯನ್ಸ್ರೋಹಿತ್‌ ಶರ್ಮಾ
ರಾಜಸ್ತಾನ್‌ ರಾಯಲ್ಸ್ಸಂಜು ಸ್ಯಾಮ್ಸನ್

ಐಪಿಎಲ್‌ನ 2023ರ ಋತುವು ಮಾರ್ಚ್ 31ರಂದು ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ನಾಲ್ಕು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸುತ್ತಿದೆ. ಪಂದ್ಯಾವಳಿಯು 2019ರ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯಾ ತಂಡಗಳ ತವರಿನಲ್ಲಿ ನಡೆಯಲಿದೆ.