ಕನ್ನಡ ಸುದ್ದಿ  /  ಕ್ರೀಡೆ  /  Ipl 2023: ಶುಭ್​ಮನ್​ ಗಿಲ್​​​ ಗುಜರಾತ್​​ ಟೈಟಾನ್ಸ್​ ಕ್ಯಾಪ್ಟನ್: ತಂಡದ ನಿರ್ದೇಶಕನ ಅಚ್ಚರಿ ಹೇಳಿಕೆ

IPL 2023: ಶುಭ್​ಮನ್​ ಗಿಲ್​​​ ಗುಜರಾತ್​​ ಟೈಟಾನ್ಸ್​ ಕ್ಯಾಪ್ಟನ್: ತಂಡದ ನಿರ್ದೇಶಕನ ಅಚ್ಚರಿ ಹೇಳಿಕೆ

ಐಪಿಎಲ್-16ರ ಆರಂಭಕ್ಕೂ ಮುನ್ನ ನಡೆದ ವರ್ಚುವಲ್ ಮೀಟಿಂಗ್‌ನಲ್ಲಿ ವಿಕ್ರಮ್ ಸೋಲಂಕಿ ಮಾತನಾಡಿದ ಸೋಲಂಕಿ, 'ಶುಭ್​​ಮನ್‌ ಗಿಲ್​ಗೆ ನಾಯಕನಾಗುವ ಎಲ್ಲಾ ಗುಣ ಲಕ್ಷಣಗಳಿವೆ. ಮೊದಲ ಸೀಸನ್‌ನಲ್ಲೇ ಗುಜರಾತ್​ ಪರ ಸಾಕಷ್ಟು ಜವಾಬ್ದಾರಿ ನಿಭಾಯಿಸಿದ್ದರು ಎಂದು ಹಾರ್ದಿಕ್​ ಪಾಂಡ್ಯ ನಂತರ ಗಿಲ್​ ತಂಡದ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ.

ಶುಭ್​ಮನ್​ ಗಿಲ್​
ಶುಭ್​ಮನ್​ ಗಿಲ್​

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇಡೀ ಕ್ರಿಕೆಟ್​ ಜಗತ್ತು ಕಾಯುತ್ತಿರುವ ಐಪಿಎಲ್​ ಹಬ್ಬಕ್ಕೆ, ಮುಂದಿನ ವಾರ ಅಂದರೆ ಮಾರ್ಚ್​​​ 31ರಂದು ಚಾಲನೆ ಸಿಗಲಿದೆ. ಜಿದ್ಧಾಜಿದ್ದಿನ ಕ್ಷಣಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಟೂರ್ನಿ ಸಾಕ್ಷಿಯಾಗಲಿದೆ. ಶ್ರೀಮಂತ ಲೀಗ್​​​​ ಆಯೋಜನೆಗೂ ಬಿಸಿಸಿಐ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ.

ಮಾರ್ಚ್​ 31ರಂದು ಕಲರ್​​ಫುಲ್​ ಲೀಗ್​​​​​​​​​ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​​​​ ಗುಜರಾತ್ ಟೈಟಾನ್ಸ್ (Gujarat Titans)​​​ ಮತ್ತು ಮಾಜಿ ಚಾಂಪಿಯನ್​ ಚೆನ್ನೈ ಸೂಪರ್​​​ ಕಿಂಗ್ಸ್​ (Chennai Super Kings) ಕಾಳಗ ನಡೆಸಲಿವೆ. ಈ ಹೈವೋಲ್ಟೇಜ್​ ಕದನ, ಮೆಗಾ ಫೈಟ್​​​​ನಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಗುರು ಧೋನಿ (MS Dhoni) ಎದುರೇ ಶಿಷ್ಯ ಹಾರ್ದಿಕ್​ ಪಾಂಡ್ಯ (Hardik Panya), ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ.

ಆದರೆ ಈ ಆವೃತ್ತಿಯ ಉದ್ಘಾಟನಾ ಪಂದ್ಯಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ತಂಡದ ನಿರ್ದೇಶಕ ವಿಕ್ರಮ್ ಸೋಲಂಕಿ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಟೀಮ್​ ಇಂಡಿಯಾದ ಆರಂಭಿಕ ಆಟಗಾರ ಶುಭ್​ಮನ್​ ಗಿಲ್ (Shubman Gill)​​​, ಭವಿಷ್ಯದ ಗುಜರಾತ್ ತಂಡದ ನಾಯಕನಾಗಿ ಆಯ್ಕೆಯಾಗುವ ಅವಕಾಶ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಗುಜರಾತ್ ತಂಡದಲ್ಲೂ ಗಿಲ್​ ಓಪನರ್​ ಎಂಬುದು ವಿಶೇಷ.

ಐಪಿಎಲ್-16ರ ಆರಂಭಕ್ಕೂ ಮುನ್ನ ನಡೆದ ವರ್ಚುವಲ್ ಮೀಟಿಂಗ್‌ನಲ್ಲಿ ವಿಕ್ರಮ್ ಸೋಲಂಕಿ ಮಾತನಾಡಿದ ಸೋಲಂಕಿ, 'ಶುಭ್​​ಮನ್‌ ಗಿಲ್​ಗೆ ನಾಯಕನಾಗುವ ಎಲ್ಲಾ ಗುಣ ಲಕ್ಷಣಗಳಿವೆ. ಮೊದಲ ಸೀಸನ್‌ನಲ್ಲೇ ಗುಜರಾತ್​ ಪರ ಸಾಕಷ್ಟು ಜವಾಬ್ದಾರಿ ನಿಭಾಯಿಸಿದ್ದರು. ವೃತ್ತಿಯಲ್ಲಿ ಅವರ ಬದ್ಧತೆ, ಅವರಲ್ಲಿನ ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ ಎಂದು ಹಾರ್ದಿಕ್​ ನಂತರ ಗಿಲ್​ ತಂಡದ ಜವಾಬ್ದಾರಿ ತೆಗೆದುಕೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ.

ಸದ್ಯದಲ್ಲಿಯೇ ಗಿಲ್ ಗುಜರಾತ್ ತಂಡದ ನಾಯಕರಾಗಲಿದ್ದಾರೆಯೇ? ಅಂದರೆ ನಾನು ಹೌದು ಎನ್ನುತ್ತೇನೆ. ಆದರೆ, ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಸದ್ಯ ಹಾರ್ದಿಕ್ ಪಾಂಡ್ಯ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಗಿಲ್ ಒಬ್ಬ ಪ್ರತಿಭಾವಂತ ಕ್ರಿಕೆಟಿಗ. ತಂಡಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಲ್ಲಿ ಅವರ ಅಭಿಪ್ರಾಯಗಳನ್ನು ಗೌರವಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಕಳೆದ ಋತುವಿನಲ್ಲಿ ಪಂಜಾಬ್​ ಪುತ್ತರ್​​​​, ಗುಜರಾತ್ ಪರ 16 ಪಂದ್ಯಗಳನ್ನು ಆಡಿದ್ದರು ಮತ್ತು 132.32 ಸ್ಟ್ರೈಕ್​​​ರೇಟ್​​ನಲ್ಲಿ 432 ರನ್ ಗಳಿಸಿ ತಂಡವನ್ನು ಚಾಂಪಿಯನ್​ ಪಟ್ಟಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹಾರ್ದಿಕ್ ಪಾಂಡ್ಯ ಗುಜರಾತ್ ಪರ ಅತಿ ಹೆಚ್ಚು ರನ್ ಗಳಿಸಿದ ನಂತರದ ಆಟಗಾರರಾಗಿದ್ದಾರೆ. ಈ ವರ್ಷ ಮೂರು ಮಾದರಿಗಳಲ್ಲಿ ಶತಕ ಸಿಡಿಸಿದ ಗಿಲ್ ಮೇಲೆ, ಈಗ ಭಾರಿ ನಿರೀಕ್ಷೆ ಸೃಷ್ಟಿಯಾಗಿದೆ.

ಇದೇ ವೇಳೆ ಗುಜರಾತ್ ಪರ ಆಡುತ್ತಿರುವ ಮೊಹಮ್ಮದ್ ಶಮಿ, ಕೆಲಸದ ಹೊರೆ ನಿರ್ವಹಣೆ ಕುರಿತು ಸೋಲಂ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಶಮಿ ನಮ್ಮ ತಂಡದ ಪ್ರಮುಖ ಆಟಗಾರ. ಕಳೆದ ವರ್ಷ ಅವರು ನಮ್ಮ ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿದರು. ಆದರೆ ಶಮಿ ಎಚ್ಚರಿಕೆಯಿಂದ ಫಿಟ್​ನೆಸ್​ ಕಡೆ ಗಮನ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ಬಾರ್ಡರ್ - ಗವಾಸ್ಕರ್ ಟ್ರೋಫಿ ಬಳಿಕ ನೇರವಾಗಿ ಐಪಿಎಲ್ ಆಡುತ್ತಿರುವ ಶಮಿ, ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಆಡಲಿದ್ದಾರೆ. ಗುಜರಾತ್ ತಂಡದ ಶುಭ್​ಮನ್ ಗಿಲ್ ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸ್ಥಾನ ಪಡೆಯುವುದು ಖಚಿತವಾಗಿದೆ. ಹಾಗಾಗಿ ಇಬ್ಬರ ವರ್ಕ್​​ಲೋಡ್​​ ವಿಚಾರದಲ್ಲಿ ಗುಜರಾತ್ ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.