ಕನ್ನಡ ಸುದ್ದಿ  /  Sports  /  Single Format Players In Team India Suryakumar Yadav For T20i Kl Rahul For Odi Format

Team India: ಇವರು ಸಿಂಗಲ್​​ ಫಾರ್ಮೆಟ್​​ಗಷ್ಟೇ ಸೀಮಿತ.. ಸೂರ್ಯ ಟಿ20ಗೆ ಕಿಂಗ್​.. ಟೆಸ್ಟ್​​, ಏಕದಿನಕ್ಕೆ ಯಾರು?

Team India: ಬಹುತೇಕ ಆಟಗಾರರು ಒಂದೊಂದು ಫಾರ್ಮೆಟ್​ನಲ್ಲೇ ಸೆಟಲ್​ ಆಗಿದ್ದಾರೆ. ಟೆಸ್ಟ್​​​ನಲ್ಲಿ ಪರ್ಫಾಮೆನ್ಸ್​ ನೀಡುವ ಆಟಗಾರ, ಏಕದಿನ, T20ಯಲ್ಲಿ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಅದೇ ಏಕದಿನದಲ್ಲಿ ಅಬ್ಬರಿಸುವ ಆಟಗಾರ ಟೆಸ್ಟ್​, ಟಿ20ಯಲ್ಲಿ ವಿಫಲರಾಗುತ್ತಿದ್ದಾರೆ.

ಸೂರ್ಯಕುಮಾರ್​​​​​​​ ಯಾದವ್​
ಸೂರ್ಯಕುಮಾರ್​​​​​​​ ಯಾದವ್​

ಪ್ರಸ್ತುತ ಕ್ರಿಕೆಟ್​​​ನಲ್ಲಿ ಮೂರು ಫಾರ್ಮೆಟ್​ಗೂ ಮೂರು ತಂಡಗಳು ರಚನೆಯಾಗಿವೆ. T20, ODI ಆಡುವ ಎಲ್ಲಾ ಆಟಗಾರರು ಟೆಸ್ಟ್​​​ನಲ್ಲಿ, ಹಾಗೆಯೇ ಎಲ್ಲಾ ಟೆಸ್ಟ್ ಪ್ಲೇಯರ್ಸ್​​, ವೈಟ್​ಬಾಲ್​ ಕ್ರಿಕೆಟ್​​​​​​ನ ಭಾಗವಾಗುವುದಿಲ್ಲ. ಸದ್ಯ ಟೀಮ್​​​​ ಇಂಡಿಯಾದಲ್ಲಿ ಸಿಂಗಲ್ ಫಾರ್ಮೆಟ್​​​ಗೆ ಸೀಮಿತವಾಗಿರುವ ​ಆಟಗಾರರ ಸಂಖ್ಯೆ ಹೆಚ್ಚಾಗುತ್ತಿದೆ.

ಬಹುತೇಕ ಆಟಗಾರರು ಒಂದೊಂದು ಫಾರ್ಮೆಟ್​ನಲ್ಲೇ ಸೆಟಲ್​ ಆಗುತ್ತಿದ್ದಾರೆ. ಒಂದು ಮಾದರಿ ಕ್ರಿಕೆಟ್​​ನಲ್ಲಷ್ಟೇ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಟೆಸ್ಟ್​​​ನಲ್ಲಿ ಪರ್ಫಾಮೆನ್ಸ್​ ನೀಡುವ ಆಟಗಾರ, ಏಕದಿನ - T20ಯಲ್ಲಿ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಅದೇ ಏಕದಿನದಲ್ಲಿ ಅಬ್ಬರಿಸುವ ಆಟಗಾರ ಟೆಸ್ಟ್​ - ಟಿ20ಯಲ್ಲಿ ವಿಫಲರಾಗುತ್ತಿದ್ದಾರೆ.

1. ಸೂರ್ಯಕುಮಾರ್​​ ಯಾದವ್​​

ಸೂರ್ಯಕುಮಾರ್ (Suryakumar Ydav) ಟಿ20 ಸ್ಪೆಷಲಿಸ್ಟ್​ ಆಟಗಾರ. ಮೋಸ್ಟ್ ಡಿಸ್ಟ್ರಕ್ಟೀವ್ ಬ್ಯಾಟ್ಸ್​ಮನ್. ಕ್ರಿಕೆಟ್​​ ಲೋಕದ ನಯಾ ಸೆನ್ಸೇಷನ್​.! ಸ್ಫೋಟಕ ಬ್ಯಾಟಿಂಗ್​ನಿಂದಲೇ ರೆಕಾರ್ಡ್ಸ್​​ಗಳನ್ನ ಧೂಳಿಪಟ ಮಾಡಿದ್ದಾರೆ. ಕಳೆದ 6 ತಿಂಗಳಲ್ಲಿ ಸ್ಕೈ, 3 ಟಿ20 ಶತಕ ಬಾರಿಸಿದ್ದಾರೆ. ಚುಟುಕು ಕ್ರಿಕೆಟ್​ನಲ್ಲಿ ನಂಬರ್​​ 1​ ಬ್ಯಾಟರ್​ ಕೂಡ ಆಗಿದ್ದಾರೆ. ಆದರೆ ಏಕದಿನದಲ್ಲಿ ಮಾತ್ರ ಸೂರ್ಯ ಸಾಧನೆ ಶೂನ್ಯ.

ಸೂರ್ಯ ಮೊದಲ 6 ಒಡಿಐ ಪಂದ್ಯಗಳಲ್ಲಿ 62.25ರ ಸರಾಸರಿಯಲ್ಲಿ 261 ರನ್ ಗಳಿಸಿದ್ದರು. ಬಳಿಕ ಚುಟಕು ಮಾದರಿಯತ್ತ ಸಂಪೂರ್ಣ ಗಮನ ಹರಿಸಿದ ಸೂರ್ಯ, ಕಳೆದ 15 ಏಕದಿನ ಪಂದ್ಯಗಳಲ್ಲಿ ಕೇವಲ 172 ರನ್ ಗಳಿಸಿದ್ದಾರೆ. ಏಕದಿನದಲ್ಲಿ ಸೂರ್ಯ ಸರಾಸರಿ ಇರುವುದು ಕೇವಲ 27.06. ಇನ್ನೂ ಟೆಸ್ಟ್‌ನಲ್ಲಿ ಸ್ಥಿರವಾದ ಸ್ಥಾನ ಸಿಕ್ಕಿಲ್ಲ. ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದ ನಾಗ್ಪುರ ಟೆಸ್ಟ್‌ನಲ್ಲಿ ಕಣಕ್ಕಿಳಿದಿದ್ದ ಮುಂಬೈಕರ್​ ಸತತ ಅವಕಾಶ ಪಡೆಯುವಲ್ಲಿ ವಿಫಲರಾದರು.

ಶ್ರೇಯಸ್​ ಅಯ್ಯರ್​​​ ಫಿಟ್​ ಆಗಿ ತಂಡಕ್ಕೆ ಕಂಬ್ಯಾಕ್​ ಮಾಡಿದರೆ, ಸೂರ್ಯ ಏಕದಿನ ತಂಡದಲ್ಲೂ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಟಿ20ಯಲ್ಲಿ ಸೂಪರ್​ ಸಕ್ಸಸ್​ ಕಂಡಿರುವ ಸೂರ್ಯ, ಟೆಸ್ಟ್​​​, ಏಕದಿನದಲ್ಲಿ ವಿಫಲರಾಗಿದ್ದಾರೆ. ಶ್ರೇಯಸ್​ ಅಯ್ಯರ್​​​ ಟೆಸ್ಟ್​​​​​​​​, ಏಕದಿನದಲ್ಲಿ ಅತ್ಯಂತ ಯಶಸ್ವಿ ಆಟಗಾರ ಎನಿಸಿದ್ದಾರೆ.

2. KL ರಾಹುಲ್

2022ರ T20 ವಿಶ್ವಕಪ್‌ ಟೂರ್ನಿವರೆಗೆ ಟೀಮ್​​ ಇಂಡಿಯಾ ಪರ 3 ಫಾರ್ಮೆಟ್​​​​​​​ ಕ್ರಿಕೆಟ್​​ ಆಡಿದ ಕೆಲವೇ ಆಟಗಾರರಲ್ಲಿ KL ರಾಹುಲ್ (KL Rahul) ಕೂಡ ಒಬ್ಬರು. ಆದರೆ, ರಾಹುಲ್ ಸತತ ವೈಫಲ್ಯದಿಂದ ಟಿ20 ಮತ್ತು ಟೆಸ್ಟ್​​​​ನಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಶುಭ್‌ಮನ್ ಗಿಲ್​ರ ಸಂವೇದನಾಶೀಲ ಪ್ರದರ್ಶನದ ಕಾರಣ, ಎರಡು ಫಾರ್ಮೆಟ್​ಗಳಲ್ಲಿ ರಾಹುಲ್​ ಸ್ಥಾನಕ್ಕೆ ಕುತ್ತು ತಂದಿದೆ.

ಆದರೆ ಒನ್​ಡೇ ಕ್ರಿಕೆಟ್​ನಲ್ಲಿ KL ರಾಹುಲ್​ ಸ್ಥಾನವನ್ನು ಅಲುಗಾಡಿಸುವವರು ಇಲ್ಲ. ಟೆಸ್ಟ್ - ಟಿ20ಯಲ್ಲಿ ಅಟ್ಟರ್ ಫ್ಲಾಪ್ ಆಗಿದ್ದರೂ ಏಕದಿನದಲ್ಲಿ ಕೆಎಲ್ ರಾಹುಲ್ ಸ್ಥಾನಕ್ಕೆ ಯಾವುದೇ ಅಪಾಯವಿಲ್ಲ. ಏಕೆಂದರೆ ಏಕದಿನದಲ್ಲಿ 5ನೇ ಕ್ರಮಾಂಕದಲ್ಲಿ 17 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ರಾಹುಲ್ 7 ಅರ್ಧಶತಕ ಮತ್ತು ಒಂದು ಶತಕ ಗಳಿಸಿದ್ದಾರೆ. ಇದು ಮಧ್ಯಮ ಕ್ರಮಾಂಕಕ್ಕೆ ಆನೆಬಲ ತುಂಬಿದಂತಾಗಿದೆ.

3. ಚೇತೇಶ್ವರ್​ ಪೂಜಾರ

ಸೂರ್ಯ ಟಿ20ಯಲ್ಲಿ, ರಾಹುಲ್​ ಒನ್​ ಡೇ ಕ್ರಿಕೆಟ್​​​ನಲ್ಲಿ ಧಮಾಕ ಸೃಷ್ಟಿಸಿದ್ದರೆ, ಟೆಸ್ಟ್​ ಕ್ರಿಕೆಟ್​ನಲ್ಲಿ ಚೇತೇಶ್ವರ್​​ ಪೂಜಾರ (Cheteshwar Pujara) ಹವಾ ಮೇಂಟೇನ್​​ ಮಾಡುತ್ತಿದ್ದಾರೆ. ಟೆಸ್ಟ್​​ನಲ್ಲಿ ಅದ್ಭುತ ಟ್ರ್ಯಾಕ್​ ರೆಕಾರ್ಡ್​​ ಹೊಂದಿರುವ ಪೂಜಾರ, ಸಿಂಗಲ್​ ಫಾರ್ಮೆಟ್​​ಗಷ್ಟೇ ಸೀಮಿತವಾಗಿದ್ದಾರೆ. ಇನ್ನು ಹನುಮ ವಿಹಾರಿ ಕೂಡ ಸಿಂಗಲ್​ ಫಾರ್ಮೆಟ್​ನಲ್ಲಷ್ಟೇ ಉಳಿದಿದ್ದಾರೆ. ಇನ್ನು ಟೆಸ್ಟ್​ ಕ್ರಿಕೆಟ್​ ಆಡುತ್ತಿರುವ ಅಶ್ವಿನ್​, ಆಗಾಗ್ಗೆ ಏಕದಿನ ತಂಡಕ್ಕೂ ಬಂದು ಹೋಗುತ್ತಾರೆ.