Kannada News  /  Sports  /  Wpl 2023 Here Is How Rcb Qualifies The Playoffs
ಆರ್​​ಸಿಬಿ
ಆರ್​​ಸಿಬಿ (RCB/Twitter)

IPL 2023: RCB ಪ್ಲೇ ಆಫ್​​​​​​ ಲೆಕ್ಕಾಚಾರ ಹೀಗಿದೆ ನೋಡಿ!

19 March 2023, 18:35 ISTHT Kannada Desk
19 March 2023, 18:35 IST

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore), ಗೆಲುವಿನ ಓಟ ಮುಂದುವರೆಸಿದೆ. ವಾರಿಯರ್ಸ್ ತಂಡದ ನಂತರ, ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿದೆ. ಸತತ 5 ಪಂದ್ಯಗಳ ಸೋಲುಗಳ ನಂತರ, ಸತತ 2 ಪಂದ್ಯ ಗೆದ್ದು ಪ್ಲೇ ಆಫ್​ ಗೇರುವ ಕನಸನ್ನು ಜೀವಂತ ಮಾಡಿಕೊಂಡಿದೆ.

ಮಹಿಳಾ ಪ್ರೀಮಿಯರ್ ಲೀಗ್​​​ನಲ್ಲಿ (Womens Premier League) ಹೀನಾಯ ಸೋಲುಗಳ ನಂತರ ಬೌನ್ಸ್​ ಬ್ಯಾಕ್​ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore), ಗೆಲುವಿನ ಓಟ ಮುಂದುವರೆಸಿದೆ. ವಾರಿಯರ್ಸ್ ತಂಡದ ನಂತರ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿದೆ. ಸತತ 5 ಪಂದ್ಯಗಳ ಸೋಲುಗಳ ನಂತರ, ಸತತ 2 ಪಂದ್ಯ ಗೆದ್ದು ಪ್ಲೇ ಆಫ್​ ಗೇರುವ ಕನಸನ್ನು ಜೀವಂತ ಮಾಡಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಮುಂಬೈ ಇಂಡಿಯನ್ಸ್ (Mumbai Indians)​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ (Delhi Capitals) ತಂಡಗಳು ಅಧಿಕೃತವಾಗಿ ಪ್ಲೇ ಆಫ್​​ ಪ್ರವೇಶಿಸಿವೆ. ಇನ್ನು ಒಂದು ತಂಡ ಪ್ಲೇ ಆಫ್​ಗೇರುವ ಅವಕಾಶ ಇದ್ದು, ಮೂರು ತಂಡಗಳ ನಡುವೆ ದೊಡ್ಡ ಪೈಪೋಟಿ ಏರ್ಪಟ್ಟಿದೆ. ಅದಕ್ಕಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಗುಜರಾತ್​ ಜೈಂಟ್ಸ್​ ಮತ್ತು ಯುಪಿ ವಾರಿಯರ್ಸ್​ ತಂಡಗಳ ನಡುವೆ ಸ್ಫರ್ಧೆ ನಡೀತಿದೆ.

ಮುಂಬೈ ಇಂಡಿಯನ್ಸ್ ಈವರೆಗೂ ಆಡಿದ ಆರು ಪಂದ್ಯಗಳಲ್ಲಿ 5ರಲ್ಲಿ ಜಯ ಸಾಧಿಸಿ 10 ಅಂಕಗಳೊಂದಿಗೆ ಪ್ಲೇ ಆಫ್ ಹಂತಕ್ಕೇರಿದರೆ, ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 6 ಮ್ಯಾಚ್​​ಗಳಲ್ಲಿ 4 ಜಯ, 2ರಲ್ಲಿ ಸೋತು 8 ಅಂಕಗಳೊಂದಿಗೆ ಪ್ಲೇ ಆಫ್​ಗೆ ಪ್ರವೇಶ ನೀಡಿದ 2ನೇ ತಂಡ ಎನಿಸಿದೆ. ಪ್ರಸ್ತುತ 3ನೇ ಸ್ಥಾನದಲ್ಲಿರುವ ಯುಪಿ 6 ರಲ್ಲಿ 3ರಲ್ಲಿ ಗೆದ್ದು 6 ಅಂಕ ಹೊಂದಿದೆ. ಆರ್​​ಸಿಬಿ 7 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು 4ನೇ ಸ್ಥಾನದಲ್ಲಿದೆ. ಗುಜರಾತ್ ಸಹ ಏಳರಲ್ಲಿ 2 ಪಂದ್ಯ ಗೆದ್ದು ಕೊನೆಯ ಸ್ಥಾನದಲ್ಲಿದೆ.

ಆರ್​​ಸಿಬಿ ಪ್ಲೇ ಆಫ್​ ಹಾದಿ ಹೀಗಿದೆ!

ಪ್ಲೇ ಆಫ್‌ ಟಿಕೆಟ್​​ ಖಚಿತಪಡಿಸಿಕೊಳ್ಳಲು ಬಯಸಿದರೆ, ಆರ್‌ಸಿಬಿ ತಮ್ಮ ಮುಂದಿನ ಪಂದ್ಯವನ್ನು ಮುಂಬೈ ವಿರುದ್ಧ ಭಾರಿ ಅಂತರದಲ್ಲಿ ಗೆಲ್ಲಬೇಕು. ಯುಪಿ ವಾರಿಯರ್ಸ್ ಉಳಿದೆರಡು ಪಂದ್ಯಗಳಲ್ಲೂ ಸೋಲು ಕಾಣವೇಕು. ಯುಪಿ ಮುಂದಿನ ಪಂದ್ಯಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ವಿರುದ್ಧ ಆಡಲಿದೆ. ಜೊತೆಗೆ ಮುಂದಿನ ಪಂದ್ಯದಲ್ಲಿ ಗುಜರಾತ್​ ಗೆಲ್ಲಬೇಕು. ಆದರೆ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಬೇಕು.

ಯುಪಿ ಎರಡೂ ಪಂದ್ಯಗಳಲ್ಲಿ ಸೋಲಬೇಕು. ಆರ್​ಸಿಬಿ, ಮುಂಬೈ ತಂಡವನ್ನು ಸೋಲಿಸಿದರೆ ಮಂಧಾನ ಪಡೆ 6 ಅಂಕ ಗಳಿಸಲಿದೆ. ಆದರೆ ಇಲ್ಲಿ ರನ್ ​ರೇಟ್​​ ಪ್ರಮುಖವಾಗಲಿದೆ. ಪ್ರಸ್ತುತ ಯುಪಿಯ ರನ್​​ರೇಟ್​ -0.117 ಆಗಿದ್ದರೆ, ಆರ್‌ಸಿಬಿ -1.044 ಆಗಿದೆ. ಹಾಗಾಗಿ ಮುಂಬೈ ವಿರುದ್ಧ ಆರ್​ಸಿಬಿ ದೊಡ್ಡ ಗೆಲುವು ಸಾಧಿಸಬೇಕು. ಮುಂಬೈ 40 ರನ್​ಗಳಿಂದ ಸೋತರೆ ಆರ್‌ಸಿಬಿ, ಯುಪಿಯ ನೆಟ್ ರನ್​​​ರೇಟ್‌ಗಿಂತ ಉತ್ತಮ ರನ್ ರೇಟ್​​​ನೊಂದಿಗೆ 3ನೇ ಸ್ಥಾನಕ್ಕೆ ಜಂಪ್​ ಆಗಲಿದೆ.

ಇದೆಲ್ಲಾ ಆಗುತ್ತಾ?

ಅಂಕಿ - ಅಂಶಗಳ ಪ್ರಕಾರ ಆರ್​​ಸಿಬಿಗೆ ಅವಕಾಶ ಇದೆ. ವಾಸ್ತವವಾಗಿ ಯುಪಿ ಎರಡೂ ಪಂದ್ಯಗಳನ್ನು ಸೋಲುತ್ತಾ..? ಇದು ಸಾಧ್ಯಾನಾ? ಒಂದು ಗೆದ್ದರೂ ಅಥವಾ ಎರಡು ಪಂದ್ಯಗಳಲ್ಲಿ ಸರಳ ಸೋಲನ್ನು ಎದುರಿಸಿದರೂ ಪ್ಲೇ ಆಫ್​​ಗೆ ಎಂಟ್ರಿಕೊಡಲಿದೆ. ಸತತ 5 ಪಂದ್ಯಗಳಲ್ಲಿ ಸೋತಿದ್ದ RCB ತಡವಾಗಿ ಎಚ್ಚೆತ್ತುಕೊಂಡರೂ ಕೊನೆ 2 ಪಂದ್ಯಗಳನ್ನು ಗೆದ್ದು ಫ್ಯಾನ್ಸ್​ಗೆ ಸಮಾಧಾನ ನೀಡುತ್ತಿದೆ.

ಅಗ್ರಸ್ಥಾನ ತಂಡ ಫೈನಲ್​​ಗೆ.!

ವುಮೆನ್ಸ್ ಪ್ರೀಮಿಯರ್ ಲೀಗ್ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡವು ನೇರವಾಗಿ ಫೈನಲ್ ಪ್ರವೇಶಿಸಲಿದೆ. ಹಾಗೆಯೇ 2ನೇ ಮತ್ತು 3ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯವಾಡಲಿದೆ. ಇಲ್ಲಿ ಗೆದ್ದ ತಂಡ ಫೈನಲ್​ಗೆ ಅರ್ಹತೆ ಪಡೆಯಲಿದೆ.