cricket News, cricket News in kannada, cricket ಕನ್ನಡದಲ್ಲಿ ಸುದ್ದಿ, cricket Kannada News – HT Kannada

Latest cricket Photos

ಟಿ20 ವಿಶ್ವಕಪ್ ನಂತರ ಟಿ20ಐ ಕ್ರಿಕೆಟ್​ನಿಂದ ನಿವೃತ್ತರಾಗಿರುವ ರೋಹಿತ್ ಶರ್ಮಾ ಅವರು ಟಾಪ್-5 ನಲ್ಲಿದ್ದಾರೆ. 2024ರಲ್ಲಿ ಭಾರತದ ಮಾಜಿ ನಾಯಕ 11 ಪಂದ್ಯಗಳಲ್ಲಿ 42ರ ಸರಾಸರಿಯಲ್ಲಿ 378 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

Most runs: 2024ರಲ್ಲಿ ಅತಿ ಹೆಚ್ಚು ಟಿ20ಐ ರನ್ ಕಲೆ ಹಾಕಿದ ಟಾಪ್​-5 ಭಾರತದ ಆಟಗಾರರು; ಸೂರ್ಯಕುಮಾರ್​ಗಿಲ್ಲ ಅಗ್ರಸ್ಥಾನ

Friday, December 13, 2024

2023ರ ಐಪಿಎಲ್​ನಲ್ಲಿ 10.7 ಬಿಲಿಯನ್ ಡಾಲರ್ ಬ್ರಾಂಡ್ ಮೌಲ್ಯ ಇತ್ತು. ಅಲ್ಲದೆ, ತಂಡಗಳ ಬ್ರ್ಯಾಂಡ್ ಮೌಲ್ಯವೂ ಏರಿಕೆ ಕಂಡಿದೆ.

IPL Brand Value: ಲಕ್ಷ ಕೋಟಿ ದಾಟಿದ ಐಪಿಎಲ್ ಬ್ರ್ಯಾಂಡ್ ಮೌಲ್ಯ; 4 ತಂಡಗಳ ಮೌಲ್ಯ 100 ಮಿಲಿಯನ್ ಡಾಲರ್‌ಗೂ ಹೆಚ್ಚು

Thursday, December 12, 2024

ಟೀಮ್ ಇಂಡಿಯಾ ಉಪನಾಯಕಿ‌, ಆಸೀಶ್‌ ವಿರುದ್ಧದ ಶತಕದೊಂಧಿಗೆ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಏಕದಿನ ಶತಕಗಳನ್ನು ಬಾರಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇತಿಹಾಸ ನಿರ್ಮಿಸಿದ ಸ್ಮೃತಿ ಮಂಧಾನ; ವನಿತೆಯರ ಕ್ರಿಕೆಟ್‌ನಲ್ಲಿ ಈ ವಿಶ್ವದಾಖಲೆ ನಿರ್ಮಿಸಿದ ಮೊದಲ ಆಟಗಾರ್ತಿ

Thursday, December 12, 2024

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಶತಕ ಗಳಿಸಿದ ನಂತರ ಹ್ಯಾರಿ ಬ್ರೂಕ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದರು. ಆ ಬಳಿಕ ಕಿವೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮತ್ತೊಂದು ಶತಕ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕದೊಂದಿಗೆ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಹ್ಯಾರಿ ಬ್ರೂಕ್ ನಂ.1 ಬ್ಯಾಟರ್ ಆಗಿದ್ದಾರೆ. ಅವರು‌ ತಮ್ಮದೇ ದೇಶದ ಅನುಭವಿ ಆಟಗಾರ ಜೋ ರೂಟ್ ಅವರಿಂದ ಅಗ್ರಸ್ಥಾನವನ್ನು ಕಸಿದುಕೊಂಡಿದ್ದಾರೆ. ವಿಶೇಷವೆಂದರೆ, ಹ್ಯಾರಿ ಬ್ರೂಕ್ 2022ರ ಸೆಪ್ಟೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ಟೆಸ್ಟ್ ಶ್ರೇಯಾಂಕ: ಜೋ ರೂಟ್ ನಂಬರ್ 1 ಸ್ಥಾನ ಕಸಿದುಕೊಂಡ ಮತ್ತೋರ್ವ ಆಂಗ್ಲ ಆಟಗಾರ; ವಿರಾಟ್-ರೋಹಿತ್ ಶ್ರೇಯಾಂಕ ಕುಸಿತ

Wednesday, December 11, 2024

ಭಾರತ ವಿರುದ್ಧದ ಹಲವು ನಿರ್ಣಾಯಕ ಪಂದ್ಯಗಳಲ್ಲಿ ಟ್ರಾವಿಸ್ ಹೆಡ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಅದರಲ್ಲಿ ಆಸೀಸ್‌ ಗೆದ್ದಿದೆ ಕೂಡಾ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ ಫೈನಲ್‌, ಅದಕ್ಕೂ ಮುನ್ನ ನಡೆದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಶಥಕ ಸಿಡಿಸಿ ತಂಡವನ್ನು ಗೆಲ್ಲಿಸಿದ್ದರು. ಜಗತ್ತಿನ ಪ್ರಬಲ ಆಟಗಾರರಲ್ಲಿ ಹೆಡ್‌ ಕೂಡಾ ಒಬ್ಬರು. ಅವರ ಖಾಸಗಿ ಬದುಕಿನ ಬಗ್ಗೆ ತಿಳಿಯೋಣ.

ಇವರು ಭಾರತವನ್ನು ಪ್ರತಿ ಬಾರಿ ಕಾಡುವ ಟ್ರಾವಿಸ್ ಹೆಡ್ ಪತ್ನಿ; ಈ ಮಾಡೆಲ್ ಹಲವು ಹೋಟೆಲ್‌ಗಳ ಮಾಲಕಿ

Wednesday, December 11, 2024

ವರ್ಷದಿಂದ ವರ್ಷಕ್ಕೆ ಐಪಿಎಲ್‌ನಲ್ಲಿ ಮಾತ್ರವೇ ಭಾಗವಹಿಸುತ್ತಿರುವ ಎಂಎಸ್‌ಡಿ, ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡುತ್ತಾರೆ. ಐಪಿಎಲ್ 2025ರ ಆವೃತ್ತಿಗೂ ಮುನ್ನ ಮಾಹಿಯನ್ನು ಸಿಎಸ್‌ಕೆ ಫ್ರಾಂಚೈಸಿ 4 ಕೋಟಿ ರೂ ಕೊಟ್ಟು ಉಳಿಸಿಕೊಂಡಿದೆ.

ನಿವೃತ್ತಿ ನಂತರವೂ ಕುಂದದ ಎಂಎಸ್ ಧೋನಿ ಬ್ರಾಂಡ್ ಮೌಲ್ಯ; ಜಾಹೀರಾತು ಒಪ್ಪಂದದಲ್ಲಿ ಅಮಿತಾಭ್-ಶಾರುಖ್ ಮೀರಿಸಿದ ಮಾಹಿ

Tuesday, December 10, 2024

ದಕ್ಷಿಣ ಆಫ್ರಿಕಾ ತಂಡ ಅಗ್ರಸ್ಥಾನಕ್ಕೆ ಬರುವುದರೊಂದಿಗೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ಒತ್ತಡಕ್ಕೆ ಸಿಲುಕಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಕ್ಲೀನ್‌ ಸ್ವೀಪ್‌ ಸಾಧಿಸಿದ ನಂತರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ, ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಸೋತು ಎರಡನೇ ಸ್ಥಾನಕ್ಕಿಳಿದಿತ್ತು. ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದೆ.

Explainer: ದಕ್ಷಿಣ ಆಫ್ರಿಕಾ ಡಬ್ಲ್ಯುಟಿಸಿ ಫೈನಲ್ ಸ್ಥಾನ ಬಹುತೇಕ ಖಚಿತ; ಭಾರತದ ಸೋಲು-ಗೆಲುವಿನ ಲೆಕ್ಕಾಚಾರವೇನು?

Monday, December 9, 2024

ನಿತೀಶ್ ರೆಡ್ಡಿ ಅವರು ತಮ್ಮ ಎರಡನೇ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರನ್ನು ಸೋಲಿಸಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ತಂಡ 200ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದಾಗ ಭಾರತೀಯರ ಪರ ಹೆಚ್ಚು ಬಾರಿ ಗರಿಷ್ಠ ಸ್ಕೋರ್ ಕಲೆ ಹಾಕಿದ ದಾಖಲೆ ರೆಡ್ಡಿ ನಿರ್ಮಿಸಿದ್ದಾರೆ.

ಆಡಿದ ಎರಡನೇ ಪಂದ್ಯದಲ್ಲೇ ವಿರಾಟ್ ಕೊಹ್ಲಿ ರೆಕಾರ್ಡ್ ಬ್ರೇಕ್, ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ನಿತೀಶ್ ರೆಡ್ಡಿ

Monday, December 9, 2024

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಟ್ರಾವಿಡ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಅದ್ಭುತ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ. ಇದು ಅವರಿಗೆ ಸಿಕ್ಕ ಆರನೇ ಪ್ರಶಸ್ತಿಯಾಗಿದೆ. ಹಾಗಾಗಿ ಈ ವರ್ಷ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

MOM Awards: 2024ರಲ್ಲಿ ಅಧಿಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಜಯಿಸಿದ ಆಟಗಾರರ ಪಟ್ಟಿ ಇಲ್ಲಿದೆ; ಭಾರತದ ಆಟಗಾರನಿಗೂ ಸ್ಥಾನ!

Sunday, December 8, 2024

ನಿಯಮಿತ ನಾಯಕ ರೋಹಿತ್ ಶರ್ಮಾ ಅವರು 2ನೇ ಟೆಸ್ಟ್​ಗೆ ಮರಳಿದರೂ ಆರಂಭಿಕರಾಗಿ ಕಣಕ್ಕಿಳಿಯುವ ಬದಲಿಗೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದರು. ಆದರೆ ಮೊದಲ ಇನ್ನಿಂಗ್ಸ್​​ನಲ್ಲಿ ಆರು ರನ್ ಮತ್ತು 2ನೇ ಇನ್ನಿಂಗ್ಸ್​​​ನಲ್ಲಿ 3 ರನ್ ಗಳಿಸಿದರು. ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಅವರಂತಹ ಆಟಗಾರರ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ನಡೆಸಿದ್ದರೆ, ಪಂದ್ಯದ ಫಲಿತಾಂಶ ಬದಲಾಗುವ ಸಾಧ್ಯತೆ ಇತ್ತು.

ಪರ್ತ್​​ನಲ್ಲಿ ಇತಿಹಾಸ ನಿರ್ಮಿಸಿದ ಭಾರತ ಅಡಿಲೇಡ್​​ನಲ್ಲಿ ಸೋತಿದ್ದೇಕೆ; ಸೋಲಿಗೆ 3 ಪ್ರಮುಖ ಕಾರಣಗಳು

Sunday, December 8, 2024

ಸರಣಿಯ ಮೂರನೇ ಪಂದ್ಯ ಡಿಸೆಂಬರ್ 11 ರಂದು ನಡೆಯಲಿದೆ. ಪರ್ತ್​​ನ ಡಬ್ಲ್ಯುಎಸಿಎ ಗ್ರೌಂಡ್​​ನಲ್ಲಿ ಈ ಪಂದ್ಯ ನಡೆಯಲಿದೆ. ಬೆಳಿಗ್ಗೆ 9.50ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಸತತ ಎರಡು ಪಂದ್ಯ ಸೋತಿರುವ ಭಾರತ ಕೊನೆಯ ಪಂದ್ಯದಲ್ಲಿ ಗೆದ್ದು ವೈಟ್​ವಾಶ್​ ಮುಖಭಂಗದಿಂದ ಪಾರಾಗಲು ಸಜ್ಜಾಗಬೇಕಿದೆ.​​

ಭಾರತದ ವನಿತೆಯರಿಗೆ ಸೋಲುಣಿಸಿ ಸರಣಿ ಗೆದ್ದ ಆಸ್ಟ್ರೇಲಿಯಾ; ಕಳಪೆಯಾಟಕ್ಕೆ ಭಾರೀ ಬೆಲೆತೆತ್ತ ಹರ್ಮನ್​ ಪಡೆ

Sunday, December 8, 2024

ಸಚಿನ್ ತೆಂಡೂಲ್ಕರ್ 200 ಟೆಸ್ಟ್​ಗಳ 329 ಇನ್ನಿಂಗ್ಸ್​​ಗಳಲ್ಲಿ 119 ಬಾರಿ 50 ರನ್​ಗಳ (51 ಶತಕ ಮತ್ತು 68 ಅರ್ಧಶತಕ) ದಾಟಿದ್ದಾರೆ. ಪಾಂಟಿಂಗ್ 168 ಟೆಸ್ಟ್​​ಗಳ 287 ಇನ್ನಿಂಗ್ಸ್​​ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, 103 ಬಾರಿ (41 ಶತಕ ಮತ್ತು 62 ಅರ್ಧಶತಕ) 50 ರನ್​ಗಳ ಗಡಿ ದಾಟಿದ್ದಾರೆ, ಜಾಕ್ ಕಾಲಿಸ್ 166 ಟೆಸ್ಟ್ ಪಂದ್ಯಗಳ 280 ಇನ್ನಿಂಗ್ಸ್​​​ಗಳಲ್ಲಿ 103 ಬಾರಿ (45 ಶತಕ, 58 ಅರ್ಧಶತಕ) 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಜೋ ರೂಟ್ ಇವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ,

ಟೆಸ್ಟ್​​ ಕ್ರಿಕೆಟ್​ನಲ್ಲಿ ಜೋ ರೂಟ್ ಐತಿಹಾಸಿಕ ಸಾಧನೆ; ಸಚಿನ್, ಪಾಂಟಿಂಗ್, ಕಾಲೀಸ್ ಪಟ್ಟಿಗೆ ಸೇರ್ಪಡೆ

Saturday, December 7, 2024

ಫೈನಲ್ ಪಂದ್ಯಕ್ಕೂ ಮುನ್ನ 13ರ ಹರೆಯದ ವೈಭವ್ ಸೂರ್ಯವಂಶಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 4 ಇನ್ನಿಂಗ್ಸ್​​ಗಳಲ್ಲಿ 2 ಅರ್ಧಶತಕ, 55.66 ಸರಾಸರಿಯಲ್ಲಿ 167 ರನ್ ಗಳಿಸಿದ್ದಾರೆ. ಔಟಾಗದೆ 76 ರನ್ ಗಳಿಸಿದ್ದು ಗರಿಷ್ಠ ಸ್ಕೋರ್​​ ಆಗಿದೆ. ಸ್ಟ್ರೈಕ್ ರೇಟ್ 146.49. ವೈಭವ್ ಭಾರತ ಪರ 12 ಸಿಕ್ಸರ್ ಬಾರಿಸಿದ್ದಾರೆ.

ಅಂಡರ್ 19 ಏಷ್ಯಾಕಪ್​ನಲ್ಲಿ ಅಬ್ಬರಿಸಿದ ಭಾರತದ ಟಾಪ್​-5 ಆಟಗಾರರು; ಹರಾಜಿನಲ್ಲಿ 1.10 ಕೋಟಿ ಪಡೆದ ವೈಭವ್​ಗಿಲ್ಲ ಅಗ್ರಸ್ಥಾನ

Saturday, December 7, 2024

ವೈಭವ್ ಸೂರ್ಯವಂಶಿ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 1 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಜಪಾನ್ ವಿರುದ್ಧದ 23 ರನ್ ಗಳಿಸಿದ್ದರು.

Vaibhav Suryavanshi: ಅಂಡರ್-19 ಏಷ್ಯಾಕಪ್​ನಲ್ಲಿ ವೇಗದ ಅರ್ಧಶತಕ; 13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್​ಗೆ ಸಜ್ಜು

Friday, December 6, 2024

ಬುಲವಾಯೋದ ಕ್ವೀನ್ಸ್ ಸ್ಪೋರ್ಟ್ಸ್​ ಕ್ಲಬ್​ನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಅವರ ಉತ್ತಮ ಪ್ರದರ್ಶನ ನೀಡದೇ ಇದ್ದಿದ್ದರೆ ಜಿಂಬಾಬ್ವೆ ಗೆಲುವು ಅಸಾಧ್ಯವಾಗುತ್ತಿತ್ತು. ಪಾಕಿಸ್ತಾನ ತಂಡದ ಬೌಲರ್​​ಗಳು ಜಿಂಬಾಬ್ವೆ ಮೇಲೆ ಒತ್ತಡ ಹೇರುತ್ತಿದ್ದರು. ಬೆನಟ್ ಅವರು 35 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 43 ರನ್​ಗಳ ಕಾಣಿಕೆ ನೀಡಿದರು.

PAK vs ZIM: ಕೊನೆಯ ಟಿ20ಐನಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿದ ಜಿಂಬಾಬ್ವೆ ತಂಡ

Friday, December 6, 2024

ಅಭಿಷೇಕ್ ಶರ್ಮಾ: ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್​ನಲ್ಲಿ ವೇಗದ ಶತಕದ ಜೊತೆಗೆ ಅತ್ಯುತ್ತಮ ಸ್ಟ್ರೈಕ್​​ರೇಟ್​ನೊಂದಿಗೆ ಸೆಂಚುರಿ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದಲ್ಲಿ ಮೇಘಾಲಯ ವಿರುದ್ಧ ಪಂಜಾಬ್ ಬ್ಯಾಟರ್​ ಅಭಿಷೇಕ್ 365.52 ಸ್ಟ್ರೈಕ್​ರೇಟ್​ನಲ್ಲಿ ನೂರು ಪೂರೈಸಿದ್ದಾರೆ. ಇದು ಹೊಸ ವಿಶ್ವದಾಖಲೆಯಾಗಿದೆ. ಮೇಘಾಲಯ ವಿರುದ್ಧ 28 ಎಸೆತಗಳಲ್ಲಿ ಶತಕ ಪೂರೈಸಿದ್ದರು.

ಟಿ20 ಕ್ರಿಕೆಟ್​ನಲ್ಲಿ 300+ ಸ್ಟ್ರೈಕ್​ರೇಟ್​ನೊಂದಿಗೆ ಶತಕ ಬಾರಿಸಿದ ಅಗ್ರ ಐವರು ಬ್ಯಾಟರ್ಸ್ ಇವರೇ!

Thursday, December 5, 2024

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಸೋತಿದ್ದ ಬಾಂಗ್ಲಾದೇಶ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಬಂದಿತ್ತು. ಆದಾಗ್ಯೂ, ಕಿಂಗ್‌ಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲುವ ಮೂಲಕ ಮೆಹೆದಿ ಹಸನ್ ಮಿರಾಜ್ ಬಳಗ ಮತ್ತೆ ಮೇಲೇರಿತು. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಗೆಲುವಿನೊಂದಿಗೆ ಬಾಂಗ್ಲಾದೇಶ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದೆ. ಒಂಬತ್ತರಿಂದ ಎಂಟಕ್ಕೆ ಸ್ಥಾನಕ್ಕೆ ಏರಿದೆ. ಸದ್ಯ ಬಾಂಗ್ಲಾದೇಶ 12 ಪಂದ್ಯಗಳಲ್ಲಿ 31.25ರ ಸರಾಸರಿಯಲ್ಲಿ 45 ಅಂಕಗಳನ್ನು ಗಳಿಸಿದೆ. ತಂಡದ ಬಳಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಹೋಗಲು ಅವಕಾಶ ಇಲ್ಲ.

ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾದೇಶಕ್ಕೆ ಐತಿಹಾಸಿಕ ವಿಜಯ; ಡಬ್ಲ್ಯುಟಿಸಿ ಅಪ್ಡೇಟೆಡ್ ಅಂಕಪಟ್ಟಿ ಹೀಗಿದೆ

Wednesday, December 4, 2024

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುತುಮಕೂರಿನಲ್ಲಿ ಬ್ಯಾಟಿಂಗ್ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಚಾಲನೆ ನೀಡಿದರು. ಸಚಿವರಾಡ ಡಾ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ, ತುಮಕೂರು ಡಿಸಿ ಸುಭಾ ಕಲ್ಯಾಣ್‌ ಮತ್ತಿತರರು ಇದ್ದರು.

Siddaramaiah Batting: ತುಮಕೂರಲ್ಲಿ ಸಿಎಂ ಸಿದ್ದರಾಮಯ್ಯ ಆದರು ಕ್ರಿಕೆಟಿಗ, ಭರ್ಜರಿ ಬ್ಯಾಟಿಂಗ್‌, ಭಾರೀ ಹೊಡೆತ

Monday, December 2, 2024

ಶ್ರೇಯಸ್ ಅಯ್ಯರ್: ಶ್ರೇಯಸ್ ಅಯ್ಯರ್ ಕೂಡ ಬಿಕಾಂ ಪದವಿ ಪಡೆದಿದ್ದಾರೆ. ಅಯ್ಯರ್ ಮುಂಬೈನ ಆರ್ ಎ ಪೊದ್ದಾರ್ ಕಾಲೇಜ್‌ ಆಫ್‌ ಕಾಮರ್ಸ್‌ ಆಂಡ್‌ ಎಕನಾಮಿಕ್ಸ್‌ನಿಂದ B.Com ಪದವಿ ಪಡೆದಿದ್ದಾರೆ.

ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರರ ವಿದ್ಯಾರ್ಹತೆ ಎಷ್ಟು; ರಿಷಭ್ ಪಂತ್-ಶ್ರೇಯಸ್ ಅಯ್ಯರ್ ಎಷ್ಟು ಕಲಿತಿದ್ದಾರೆ?

Monday, December 2, 2024

ಐಪಿಎಲ್‌ ಕಾಂಟ್ರಾಕ್ಟ್‌ ಸಿಕ್ಕ ಬೆನ್ನಲ್ಲೇ, ನವೆಂಬರ್‌ 28ರಂದು ಬೆಥೆಲ್‌ ಟೆಸ್ಟ್‌ ತಂಡಕ್ಕೂ ಪದಾರ್ಪಣೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ 21ರ ಹರೆಯದ ಎಡಗೈ ಬ್ಯಾಟರ್‌, ಮೊದಲ ಇನ್ನಿಂಗ್ಸ್‌ನಲ್ಲಿ 10 ರನ್‌ ಮಾತ್ರ ಗಳಿಸಿದರು.

ಹರಾಜಿನಲ್ಲಿ 2.60 ಕೋಟಿಗೆ RCB ಖರೀದಿಸಿದ ಜಾಕೋಬ್ ಬೆಥೆಲ್ ಯಾರು; ಕಳೆದ 3 ತಿಂಗಳಲ್ಲಿ ಈತ ಮುಟ್ಟಿದ್ದೆಲ್ಲಾ ಚಿನ್ನ

Friday, November 29, 2024